ಟಿಎಂಸಿಸಿಗೆ ಬೆಸ್ಟ್ ಫಿನ್‍ಟೆಕ್‍ ಎಂಗೇಜ್‍ಮೆಂಟ್ ಪ್ರಶಸ್ತಿ 

tmcc-jaykumar-fintech-award

ಟಿಎಂಸಿಸಿಗೆ ಬೆಸ್ಟ್ ಫಿನ್‍ಟೆಕ್‍ ಎಂಗೇಜ್‍ಮೆಂಟ್ ಪ್ರಶಸ್ತಿ 

ಟಿಎಂಸಿಸಿಗೆ ಬೆಸ್ಟ್ ಫಿನ್‍ಟೆಕ್‍ ಎಂಗೇಜ್‍ಮೆಂಟ್ ಪ್ರಶಸ್ತಿ 

ಹಣಕಾಸು ವ್ಯವಹಾರದಲ್ಲಿ ತಾಂತ್ರಿಕತೆಯನ್ನುಅಸಾಧಾರಣವಾಗಿ ಬಳಸಿಕೊಂಡಿರುವ ಕಾರಣಕ್ಕಾಗಿ ನೀಡುವ ಬೆಸ್ಟ್ ಫಿನ್‍ಟೆಕ್‍ ಎಂಗೇಜ್‍ಮೆಂಟ್‍ ಪ್ರಶಸ್ತಿಯನ್ನು ತುಮಕೂರಿನ ಮುಂಚೂಣಿ ಸಹಕಾರ ಸಂಘ ಟಿಎಂಸಿಸಿ ಗೆ ನೀಡಲಾಗಿದ್ದು ಸಂಸ್ಥೆಯ ಅಧ್ಯಕ್ಷ ಡಾ.ಎನ್‍.ಎಸ್.ಜಯಕುಮಾರ್‍ ಗೋವಾದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು.


ಟಿಎಂಸಿಸಿಯ ಈ ಸಾಧನೆಯ ರೂವಾರಿ ಜಯಕುಮಾರ್ ಅವರನ್ನು ಸಂಸ್ಥೆಯ ನಿರ‍್ದೇಶಕರು ಶುಕ್ರವಾರ  ನಗರದಲ್ಲಿ ಅಭಿನಂದಿಸಿದರು. ಟಿಎಂಸಿಸಿ ಉಪಾಧ್ಯಕ್ಷ ಟಿ.ಎ.ಶ್ರೀಕರ, ನಿರ‍್ದೇಶಕರಾದ ಕೆ.ಹೆಚ್.ಜಯರಾಂ, ನಾಗರಾಜ್ , ಅನಂತು, ಡಿ.ಎ.ಮೋಹನ್, ಉಮಾಶಂಕರ್, ಶಿವು, ಗಂಗಾಧರ ಶೆಟ್ಟಿ, ರಾಮರತ್ನಂ ಹಾಗೂ ಸಿಇಓ ರಮೇಶ್ ಇದ್ದರು