ಕ್ಷಯರೋಗ ನಿರ್ಮೂಲನಗೆ  ಪಣತೊಡಿ – ಡಾ|| ಜಗದೀಶ್

ಕ್ಷಯರೋಗ ನಿರ್ಮೂಲನಗೆ  ಪಣತೊಡಿ – ಡಾ|| ಜಗದೀಶ್

ಕ್ಷಯರೋಗ ನಿರ್ಮೂಲನಗೆ  ಪಣತೊಡಿ – ಡಾ|| ಜಗದೀಶ್

ಕ್ಷಯರೋಗ ನಿರ್ಮೂಲನಗೆ  ಪಣತೊಡಿ – ಡಾ|| ಜಗದೀಶ್


ಕೋಲಾರ : ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರವು  2025 ಕ್ಕೆ  ಕ್ಷಯರೋಗ ನಿರ್ಮೂಲನ ಭಾರತ ಮಾಡಲು ಗುರಿಯನ್ನು ಹೊಂದಿದ್ದು, ಕ್ಷಯ ರೋಗ ನಿರ್ಮೂಲನೆಗೆ ಪಣತೊಡಿ ಎಂದು ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣಾಧಿಕಾರಿಗಳಾದ ಡಾ|| ಜಗದೀಶ್  ಅವರು ತಿಳಿಸಿದರು. 


 ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕ್ಷಯ ರೋಗ ನಿರ್ಮೂಲನ ವಿಭಾಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿಶ್ವ ಆರೋಗ್ಯ ಸಂಸ್ಥೆಯು ಇಡೀ ವಿಶ್ವದಲ್ಲಿ 2035 ಕ್ಕೆ ಕ್ಷಯರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿ ಹೊಂದಿದ್ದು, ಕರ್ನಾಟಕ ಸರ್ಕಾರ “ ಕ್ಷಯ ಮುಕ್ತ ಕರ್ನಾಟಕ” ಎಂಬ ಯೋಜನೆಯೊಂದಿಗೆ ಗ್ರಾಮ ಪಂಚಾಯಿತಿಗಳಲ್ಲಿ ಕ್ಷಯರೋಗ ನಿರ್ಮೂಲನೆ ಮಾಡಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.


ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಈ ಕ್ಷಯರೋಗ ಬರುವ ಸಾಧ್ಯತೇ ಹೆಚ್ಚಿದೆ. ಜಿಲ್ಲೆಯಲ್ಲಿ ಕಳೆದ 5 ವರ್ಷದಲ್ಲಿ ಶೇ. 20 ರಷ್ಟು ಕ್ಷಯರೋಗವನ್ನು ನಿರ್ಮೂಲನೆ ಮಾಡಿದ್ದು, ರಾಷ್ಟಿçÃಯ ಮಟ್ಟದಲ್ಲಿ ನಿರ್ಮೂಲನೆ ಮಾಡಿರುವುದಕ್ಕೆ ಬೆಳ್ಳಿ ಪದಕ ಲಭಿಸಿದೆ ಎಂದು ಅವರು ತಿಳಿಸಿದರು.


ಜಿಲ್ಲಾ ಕಾರ್ಯಕ್ರಮ ಅನುಷ್ಠಾಣಾಧಿಕಾರಿ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳಾದ  ಡಾ|| ಕಮಲ ಅವರು ಮಾತನಾಡಿ, ಕ್ಷಯರೋಗ ಕಾಯಿಲೆಯು ಪುರಾತನ ಕಾಯಿಲೆ. 1982ರ ಮಾರ್ಚ್ 24 ರಂದು ರಾರ್ಬಟ್ ಹುಕ್ ಅವರು ಇದಕ್ಕೆ ಲಸಿಕೆ ಕಂಡಿಹಿಡಿದಿರುವುದರಿAದ ಕ್ಷಯರೋಗ ದಿನ ಎಂದು ಇಡೀ ವಿಶ್ವದಾದ್ಯಾಂತ ಆಚರಿಸಲಾಗುವುದು. 2-3 ವಾರಗಳಲ್ಲಿ ಜ್ವರ, ಕೆಮ್ಮು, ಬೆವರುವುದು, ಕಫ, ಎದೆ ನೋವು, ಹಸಿವಾಗದಿರುವುದು, ತೂಕ ಇಳಿಕೆಯಾಗುವುದು ಈ ರೋಗದ ಲಕ್ಷಣಗಳು. ಈ ಲಕ್ಷಣಗಳು ಕಂಡುಬAದಲ್ಲಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಉಚಿತ ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿದರು.


ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ|| ಚಾರಿಣಿ ಅವರು ಮಾತನಾಡಿ, ಆಶಾ ಕಾರ್ಯಕರ್ತೆಯರು, ಸಮುದಾಯ ಆರೋಗ್ಯ ಕಾರ್ಯಕರ್ತರು ಪ್ರತಿ ಮನೆ ಮನೆಗೂ ಭೇಟಿ ನೀಡಿ ಕ್ಷಯರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಯಾರಾದರೂ ರೋಗಿ ಪತ್ತೆಯಾದಲ್ಲಿ ಅವರಿಗೆ ಚಿಕಿತ್ಸೆ ಪಡೆಯುವುದಕ್ಕೆ ಮುಂದಾಗುವAತೆ ಅವರಿಗೆ ಜಾಗೃತಿ ಮೂಡಿಸಿ ಎಂದು ತಿಳಿಸಿದರು.


ಜಿಲ್ಲೆಯಲ್ಲಿ ಕ್ಷಯರೋಗ ನಿರ್ಮೂಲನೆ ಮಾಡುವುದಕ್ಕೆ ಉತ್ತಮ ಸೇವೆ ಸಲ್ಲಿಸಿದ ವೈದ್ಯಾಧಿಕಾರಿಗಳಿಗೆ ಮತ್ತು ಕಾರ್ಯಕರ್ತರಿಗೆ ಸನ್ಮಾನ ಮಾಡಲಾಯಿತು.


ಈ ಸಂದರ್ಭದಲ್ಲಿ ತಾಲ್ಲೂಕು ವೈದ್ಯಾಧಿಕಾರಿಗಳಾದ ರಮ್ಯ ದೀಪಿಕಾ, ವೈದ್ಯಾಧಿಕಾರಿಗಳಾದ ಡಾ|| ಸತೀಶ್, ಡಾ|| ಮಂಜುನಾಥ್, ಡಾ|| ಮಹಮ್ಮದ್ ಉಮ್ಮರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಪ್ರೇಮ,  ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಸತ್ಯನಾರಾಯಣಗೌಡ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಿ – ವೆಂಕಟ್ ರಾಜಾ


ಕೋಲಾರ   : ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಿರಬಹುದು ಆದ್ದರಿಂದ ವಿದ್ಯಾರ್ಥಿಗಳು ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ ಅವರು ತಿಳಿಸಿದರು.


ಇಂದು ತೋಟಗಾರಿಕೆ ಮಹಾವಿದ್ಯಾಲಯ ಕ್ರೀಡಾಂಗಣ, ಟಮಕ, ಕೋಲಾರ ಇಲ್ಲಿ ಹಮ್ಮಿಕೊಂಡಿದ್ದ, 12ನೇ ಅಂತರ ಮಹಾವಿದ್ಯಾಲಯಗಳ ಕ್ರೀಡಾಕೂಟ : 2021-22 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಜೀವನದಲ್ಲಿ ಗುರುವಿನ ಮಾರ್ಗದರ್ಶನಗಳು ಮುಖ್ಯವಾಗಿರುತ್ತದೆ. ನಿಯಮಗಳನ್ನು ಅನುಸರಿಸಿ ಕ್ರೀಡೆಗಳು ಆಡಬೇಕು. ಈ ನಿಯಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ನಿರಂತರವಾಗಿ ಕ್ರೀಡೆಗಳನ್ನು ಅಭ್ಯಾಸ ಮಾಡಬೇಕು. ಕ್ರೀಡೆಗಳಲ್ಲಿ ಶಿಸ್ತು ಮುಖ್ಯವಾಗಿರುತ್ತದೆ. ಕ್ರೀಡೆಗಳಲ್ಲಿ ಸೋಲು ಗೆಲುವು ಸಹಜ, ಇದರಿಂದ ಕಲಿತ ಪಾಠ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.


ಶ್ರೀ ದೇವರಾಜ್ ಅರಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಕುಲಪತಿಗಳಾದ ಡಾ|| ಜಿ.ಪ್ರದೀಪ್ ಕುಮಾರ್ ಅವರು ಮಾತನಾಡಿ, ಕ್ರೀಡೆಗಳಿಗೆ ದೈಹಿಕ ಸಾಮರ್ಥ್ಯ ಮುಖ್ಯವಾಗಿರುತ್ತದೆ. ನೀವು ಸಮಾಜಕ್ಕೆ ಕೊಡುಗೆಯನ್ನು ನೀಡಬೇಕು. ನೀವು ಕಾಲೇಜಿನಲ್ಲಿ ಕಲಿತದ್ದನ್ನು ರೈತರಿಗೆ ಮಾಹಿತಿ ನೀಡಬೇಕು. ಸಂಶೋಧನೆಗಳನ್ನು ಮಾಡಿ ಸಮಾಜಕ್ಕೆ ನೀಡಬೇಕು. ಕೋಲಾರದ ಕೆರೆಗಳು ಕಲುಷಿತವಾಗುತ್ತಿದ್ದು, ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.


ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು (ದೈಹಿಕ ಶಿಕ್ಷಣ) ಹಾಗೂ ಮೌಲ್ಯಮಾಪನ ಕುಲಸಚಿವರಾದ ಸುಂದರ ರಾಜ್ ಅರಸ್ ಅವರು ಮಾತನಾಡಿ, ಕ್ರೀಡೆಗಳು ಕನಸಾಗದೆ ನನಸಾಗಿರಬೇಕು. ದೈಹಿಕ ಸಾಮರ್ಥ್ಯದ ಜೊತೆಗೆ ಮಾನಸಿಕ ಸಾಮರ್ಥ್ಯವೂ ಮುಖ್ಯವಾಗಿರುತ್ತದೆ. ದೈಹಿಕ ಶ್ರಮತೆ ಇದ್ದರೆ ಆರೋಗ್ಯದಲ್ಲಿ ಆತಂಕವಿರುವುದಿಲ್ಲ. ರೈತರಂತೆ ಕ್ರೀಡಾಪಟುಗಳು ಸದೃಢರಾಗಿರಬೇಕು. ಮನಸ್ಸಿನ ಭಾವನೆಗಳನ್ನು ಹೊರಹಾಕಲು ಇರುವ ಉತ್ತಮ ಸ್ಥಳ ಕ್ರೀಡಾಂಗಣವಾಗಿರುತ್ತದೆ. ಕ್ರೀಡೆಗಳು ಇಡೀ ವಿಶ್ವವನ್ನೇ ಒಂದು ಗೂಡಿಸುವ ಕ್ರಿಯೆಯಾಗಿರುತ್ತದೆ. ಕ್ರೀಡೆಗಳಲ್ಲಿ ಅನುಭವ ಮುಖ್ಯವಾಗಿರುತ್ತದೆ. ಕ್ರೀಡೆ ಮತ್ತು ಯೋಗ, ನಡಿಗೆ ಇಂತವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಗಳು ಮತ್ತು ಶಿಕ್ಷಣ ನಿರ್ದೇಶಕರಾದ ಡಾ|| ಎಂ.ಎಸ್.ಕುಲಕರ್ಣಿ, ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ|| ಎಸ್.ಐ.ಅಥಣಿ, ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸ್ನಾತ್ತಕೋತ್ತರ ಡೀನ್‌ರಾದ ಡಾ|| ರವೀಂದ್ರ ಮುಲಗೆ, ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಹಣಕಾಸು ನಿಯಂತ್ರಣಾಧಿಕಾರಿಗಳಾದ ಡಿ.ಎಲ್.ಸುತಗಟ್ಟಿ, ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕ್ರೀಡಾಕೂಟ ಸಂಘಟನಾ ಅಧ್ಯಕ್ಷರು, ವಿದ್ಯಾರ್ಥಿ ಕಲ್ಯಾಣ, ಡೀನ್ ರಾದ ಡಾ|| ರಾಮಚಂದ್ರ ನಾಯಕ್.ಕೆ, ಕೋಲಾರ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕ್ರೀಡಾಕೂಟ ಸಂಘಟನಾ ನಿರ್ದೇಶಕರು, ಡೀನ್‌ರಾದ ಡಾ|| ಶಿವರಾಮು ಹೆಚ್.ಎಸ್. ಬೀದರ್ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಡೀನ್‌ರಾದ ಡಾ|| ಎಸ್.ವಿ.ಪಾಟೀಲ್, ತೋಟಗಾರಿಕೆ ಮಹವಿದ್ಯಾಲಯ ಕೋಲಾರದ ಹಿರಿಯ ವಿಜ್ನಾನಿಗಳಾದ ಡಾ.ತುಳಸಿರಾಮ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮುಟ್ಟುಗೊಲು ಹಾಕಿಕೊಂಡ ಧಾನ್ಯಗಳ ಬಹಿರಂಗ ಹರಾಜು


ಕೋಲಾರ : ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಮೇ|| ಪಿ.ಆರ್.ಎಸ್.ಆಗ್ರೋಟೆಕ್ ರೈಸ್ ಮಿಲ್‌ನಲ್ಲಿ ವಶಪಡಿಸಿಕೊಂಡಿರುವ ಅಕ್ಕಿ ಮತ್ತು ಅಕ್ಕಿ ನುಚ್ಚು ಹಾಗೂ ವಾಹನಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು. ಈ ರೀತಿ ಮುಟ್ಟುಗೋಲು ಹಾಕಿಕೊಂಡಿರುವ ವಸ್ತುಗಳನ್ನು ಬಹಿರಂಗ ಹರಾಜು ಮಾಡಲು ಜಿಲ್ಲಾಧಿಕಾರಿಗಳ ನ್ಯಾಯಾಲಯವು ಆದೇಶಿಸಿದೆ. ವಿವಿಧ ಬಗೆಯ ಅಕ್ಕಿ ಮತ್ತು ನುಚ್ಚಕ್ಕಿ ಹಾಗೂ ವಾಹನಗಳನ್ನು ಪಿ.ಆರ್.ಎಸ್ ಆಗ್ರೋಟೆಕ್ ರೈಸ್ ಮಿಲ್, ಬಂಗಾರಪೇಟೆ ಯಲ್ಲಿ ಮಾರ್ಚ್ 28 ರಂದು ಮಧ್ಯಾಹ್ನ 12.00 ಗಂಟೆಗೆ ಬಹಿರಂಗ ಹರಾಜು ಮಾಡಲಾಗುವುದು.
ಮುಟ್ಟುಗೋಲು ಹಾಕಿರುವ ವಸ್ತುಗಳಾದ ಅಕ್ಕಿ 8497 ಕ್ವಿಂಟಾಲ್ (ಅಂದಾಜು ಪ್ರತಿ ಕ್ವಿಂಟಾಲ್‌ಗೆ 2500 ರೂ.), ಅಕ್ಕಿ ನುಚ್ಚು 1213.70 ಕ್ವಿಂಟಾಲ್ (ಅಂದಾಜು ಪ್ರತಿ ಕ್ವಿಂಟಾಲ್‌ಗೆ 1600 ರೂ.), ವಾಹನಗಳಾದ ಟಾಟಾ ಈಚರ್ ಲಾರಿ (ಮಿನಿ) 1109 ಎವೈ, ಲಾರಿ, ಮಿನಿ ಲಾರಿ ಈಚರ್, ಟಾಟಾ ಈಚರ್ ಲಾರಿ, ಟ್ರಾಕ್ಟರ್, 2 ಈಚರ್ ವಾಹನಗಳನ್ನು ಬಹಿರಂಗ ಹರಾಜು ಮಾಡಲಾಗುವುದು.


ಅಕ್ಕಿ/ಅಕ್ಕಿನುಚ್ಚು ಹರಾಜಿನಲ್ಲಿ ಭಾಗವಹಿಸುವವರು ರೂ. 350000 ಹಾಗೂ ವಾಹನಗಳ ಹರಾಜಿನಲ್ಲಿ ಭಾಗವಹಿಸುವವರು 125000 ಮೌಲ್ಯದ ಡಿ.ಡಿ.ಯನ್ನು ರಾಷ್ಟಿçÃಕೃತ ಬ್ಯಾಂಕುಗಳಿAದ ಜಿಲ್ಲಾಧಿಕಾರಿಗಳು ಕೋಲಾರ ಜಿಲ್ಲೆ ಹೆಸರಿಗೆ ಪಡೆದು ಹರಾಜಿಗೆ ಮುನ್ನ ಠೇವಣಿಯಾಗಿ ಸಲ್ಲಿಸಬೇಕು. ಹರಾಜಿನಲ್ಲಿ ಭಾಗವಹಿಸಲು ಬಯಸುವವರು ಮಾರ್ಚ್ 28 ರಂದು ಬೆಳಿಗ್ಗೆ 10.00 ಗಂಟೆಗೆ ಪಿ.ಆರ್.ಎಸ್ ಆಗ್ರೋಟೆಕ್ ರೈಸ್ ಮಿಲ್, ಬಂಗಾರಪೇಟೆಯಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು. 


ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು (ಐಟಿ) ರವರ ದೂರವಾಣಿ ಸಂಖ್ಯೆ 9611165367 ಅಥವಾ ಉಪ ನಿರ್ದೇಶಕರು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಕೋಲಾರ ದೂರವಾಣಿ ಸಂಖ್ಯೆ 9449559926 ಗೆ ಸಂಪರ್ಕಿಸಬಹುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು (ಐಟಿ) ಮತ್ತು ತನಿಖಾಧಿಕಾರಿಗಳು ತಿಳಿಸಿದ್ದಾರೆ.


ಬಾಲಗೌರವ ಪ್ರಶಸ್ತಿ ಮತ್ತು ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

ಕೋಲಾರ :  ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿಯಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿಶೇಷ ಸಾಧನೆಗೈದ 18 ವರ್ಷದ ಒಳಗಿನ ಮಕ್ಕಳಿಗೆ “ ಬಾಲಗೌರವ ಪ್ರಶಸ್ತಿ ” ಹಾಗೂ ಮಕ್ಕಳ ಕ್ಷೇತ್ರದಲ್ಲಿ ರಚಿಸಲ್ಪಟ್ಟಿರುವ ಉತ್ತಮ ಪುಸ್ತಕಗಳಿಗೆ “ ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿ "ಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಮಾರ್ಚ್ 31 ರೊಳಗಾಗಿ ಯೋಜನಾಧಿಕಾರಿಗಳು ಕರ್ನಾಟಕ ಬಾಲವಿಕಾಸ ಅಕಾಡೆಮಿ ಲೇಔಟ್  ಹಿಂಭಾಗ  ಕೆ.ಎಚ್.  ಬಿ ಕಾಲೋನಿ  ಲಕಮನಹಳ್ಳಿ ಧಾರವಾಡ-580004 ಇಲ್ಲಿ ಕಳುಹಿಸಬಹುದು.


    ಹೆಚ್ಚಿನ ಮಾಹಿತಿಗಾಗಿ  ಮಾನ್ಯ ಯೋಜನಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ: 0836-2461666 ಇ ಮೇಲ್ ವಿಳಾಸ bಚಿಟಚಿviಞಚಿsಚಿಚಿಛಿಚಿಜemಥಿ@gmಚಿiಟ.ಛಿom ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೋಲಾರ:   ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ದೀನ್‌ದಯಾಳ್ ಅಂತ್ಯೋದಯ ಯೋಜನೆ ಮತ್ತು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ( ಡೇ - ನಲ್ ) ಯೋಜನೆಯಲ್ಲಿ ಕಾರ್ಯ ನಿರ್ವಹಿಸಲು ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳ ಸಂಖ್ಯೆ 3 ಸೃಜಿಸಿ ಗೌರವಧನ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಅರ್ಹ ಸ್ವ - ಸಹಾಯ ಸಂಘ ( ಗುಂಪು ) ಗಳ ಸದಸ್ಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 


 ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಗಳನ್ನು ಮಾರ್ಚ್ 30 ರೊಳಗೆ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ  ಕೆಜಿಎಫ್  ನಗರಸಭೆಯ  ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.