ಜನತೆಯ ಬದುಕು ಉಳಿಸಲು ಮಾ. 28-29 ರಾಷ್ಟಾçದ್ಯಂತ ಮುಷ್ಕರ

ಜನತೆಯ ಬದುಕು ಉಳಿಸಲು ಮಾ. 28-29 ರಾಷ್ಟಾçದ್ಯಂತ ಮುಷ್ಕರ

ಜನತೆಯ ಬದುಕು ಉಳಿಸಲು ಮಾ. 28-29 ರಾಷ್ಟಾçದ್ಯಂತ ಮುಷ್ಕರ

ಜನತೆಯ ಬದುಕು ಉಳಿಸಲು ಮಾ. 28-29 ರಾಷ್ಟಾçದ್ಯಂತ ಮುಷ್ಕರ


ತುಮಕೂರು: ದೇಶದ ಜನತೆಯ ಸ್ಥಿತಿ ದಿನೇ ದಿನೇ ಸಂಕಟಮಯವಾಗುತ್ತಿದೆ.  ಜನತೆಯನ್ನು ರಕ್ಷಿಸಬೇಕಾದ ಸರ್ಕಾರಗಳು ದೇವರು- ಧರ್ಮಗಳನ್ನು ಮುಂದು ಮಾಡಿ ಅದು ಅಪಾಯದಲ್ಲಿ ಇದೆ ಎಂದು ಹೇಳಿ ಮುಗ್ದ ಜನತೆ ತಲೆ ಕೆಡಿಸಿ ಹಸಿವು, ಬಡತನ, ನಿರುದ್ಯೋಗ, ಬಗ್ಗೆ  ಚಿಂತಿಸದAತೆ ಮಾಡಿ ಜನರ ಬದುಕನ್ನು ಮಣ್ಣು ಪಾಲ ಮಾಡುತ್ತಿದ್ದಾರೆ.


ಈ ಹಿನ್ನೆಲೆಯಲಿ ಜನತೆ – ದೇಶವನ್ನು ಉಳಿಸಿಲು ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು ಮಾರ್ಚ್ 28 ಮತ್ತು 29 ರಂದು ದೇಶವಾಪ್ತಿ ಅಖಿಲ ಭಾರತ ಸಾರ್ವತ್ರೀಕ ಮುಷ್ಕರವನ್ನು ನಡೆಸುತ್ತಿವೆ. ಜನತೆ ಬೆಂಬಲ ನೀಡಬೇಕೆಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷೀ ಸುಂದರA ಕರೆ ನೀಡುದರು. 


ಶನಿವಾರ  ಬೆಳಗ್ಗೆ ನಗರದ  ಡಾ. ಅಂಬೇಡ್ಕರ್ ಭವನದಲ್ಲಿ ಕಾರ್ಮಿಕರ ಸಂಘಟನೆಗಳ ಜಂಟಿ ಸಮಿತಿ ಏರ್ಪಡಿಸಿದ್ದ  ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜೆಸಿಟಿಯು ಜಿಲ್ಲಾ ಸಮಾವೇಶದಲ್ಲಿ ಮಾತನಾಡುತ್ತಿದ್ದರು. ಜನತೆ ಸಂಕಷ್ಟದಲ್ಲಿ ಇರುವಾಗ ಬೇರಳೆಣಿಕೆಯಷ್ಟು  ಜನತೆ ಸಾವಿರಾರು ಕೋಟಿ ಲಾಭ ಮಾಡುತ್ತಿರುವುದು ಹೇಗೆ ಎಂದು ಪ್ರಶ್ನಿಸಿದ ಅವರು  ಜನತೆಯ ಲೂಟಿಗೆ ಸರ್ಕಾರವೇ ಅವರಿಗೆ ಅವಕಾಶ ಮಾಡಿ ಕೊಟ್ಟಿದೆ. ಹಾಗಾಗಿ ಜನತೆ ಒಂದಾಗಿ ಹೋರಾಟ ನಡೆಸ ಬೇಕಾಗಿದೆ ಎಂದರು.


ಎಐಟಿಯುಸಿನ ರಾಜ್ಯ ಉಪಾಧ್ಯಕ್ಷ ಗುಣಶೇಖರ್ ಮಾತನಾಡಿ, ಅಗತ್ಯ ವಸ್ತುಗಳಾದ ಅಡಿಗೆ ಅನಿಲ, ದಿನಸಿ ವಸ್ತುಗಳು, ರಸ ಗೊಬ್ಬರ, ಕೃಷಿ ಅಗತ್ಯ ವಸ್ತುಗಳು, ಪೆಟ್ರೋಲ್-ಡೀಸಲ್, ಅಡುಗೆ ಎಣ್ಣೆ, ಔಷಧಿಗಳು, ವಿದ್ಯುತ್ ದರ, ಎಲ್ಲವುಗಳ  ಧಾರಣೆಯನ್ನು ಸರ್ಕಾರ ಹೆಚ್ಚಿಸುತ್ತಲೇ ಬಂದಿದೆ. ರೈತರಿಗೆ ಬೆಂಬಲ ಬೆಲೆ ನೀಡಲು ಸರ್ಕಾರ ಸಿದ್ಧವಿಲ್ಲ ಹಾಗಾಗಿ ರೈತರು, ಕಾರ್ಮಿಕರು ಒಂದಾಗಿ ಹೋರಾಟ ನಡೆಸುವುದು ಅನಿವಾರ್ಯ ಎಂದರು.


ಐಎನಟಿಯುಸಿಯ ರಾಜ್ಯ ಮುಂದಾಳು ಶಾಮಣ್ಣ ರೆಡ್ಡಿ ಅವರು ಮಾತನಾಡಿ, ನಿರಂತರ ಜನ ವಿರೋಧಿ ನೀತಿಗಳನ್ನು ಜಾರಿ ಮಾಡುತ್ತಿರುವ ಸರ್ಕಾರಗಳನ್ನು ಬದಲಿಸಬೇಕು ಎಂದರು. ಜನತೆ ನೀತಿಗೂ ಮತ್ತು ರಾಜಕೀಯಕ್ಕೆ ಸಂಬAಧಗಳಿವೆ ಜನತೆ ಇದನ್ನು ಅರಿತು ಸರ್ಕಾರಗಳನ್ನು ಅಯ್ಕೆ ಮಾಡುವಂತೆ ಕೋರಿದರು.


ಎಐಯುಟಿಯುಸಿ  ರಾಜ್ಯ ಮುಖಂಡರಾದ ಉಮಾದೆವಿ ಅವರು ನಿರಂತರವಾದ ರೈತ ಚಳುವಳಿ ಪಡೆದ ಗೆಲುವು ನಮಗೆ ದಾರಿ ತೊರಬೇಕು ಎಂದುರು. ಕಾರ್ಮಿರು - ರೈತರು ಐಕ್ಯ ಚಳುವಳಿ ಇಂದಿನ ಅಗತ್ಯವಾಗಿದೆ ಎಂದರಲ್ಲದೆ, ಮುಷ್ಕರಕ್ಕೆ  ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.


ಅಧ್ಯಕ್ಷ ಮಂಡಲಿ ಸಿಐಟಯು ಜಿಲ್ಲಾಧ್ಯಕ್ಷ ಮಾತನಾಡಿ ಅಸಂಘಟಿತ ಕಾರ್ಮಿರು ಸಾಮಾಜಿಕ ಭದ್ರತ ನೀಡದೆ, ದೇಶದ ಆಸ್ತಿಗಳೆಲ್ಲವನ್ನೂ ಬಂಡವಾಳಶಾಹಿಗಳಿಗೆ ಮಾರುತ್ತಿದೆ. ಇದರಿಂದಾಗಿ ದೇಶದಲ್ಲಿ ಅಸಮಾನತೆ ಹೆಚ್ಚುತ್ತಿದೆ, ಬಡತನ ಹೆಚ್ಚುತ್ತಿದೆ. ಹಾಗಾಗಿ ನಾವು ಒಂದಾಗಿ ಧ್ವನಿ ಎತ್ತಲೇ ಬೇಕಾಗಿದೆ ಎಂದರು.


ಎಐಟಿಯುಸಿ ಗಿರೀಶ್ ಮಾತನಾಡಿ, ಬೆಲೆ ಏರಿಕೆ ಜನತೆಯನ್ನು ಕಂಗಾಲಾಗಿಸಿದೆ. ಜನತೆ ಅಂತಹ ನೀತಿಗಳನ್ನು ಗೆಲ್ಲಿಸುವುದಿಲ್ಲ  ಏನು ನಡೆಯುತ್ತಿದೆ ಎಂಬದನ್ನು ಅರಿಯದೆ ಕೋಮು ವಿಭಜನೆಯ ಹಿನ್ನೆಲೆಯಲ್ಲಿ ಸರ್ಕಾರ ಹಿಡಿಯುತ್ತಿದೆ ಎಂದು ಅಪಾದಿಸಿದರು.


ಎಐಯುಟಿಯುಸಿ ಮಂಜುಳ ಮಾತನಾಡಿ, ಈ ನೀತಿಗಳಿಂದ ಬಾಧಿತರು ಜನಾಂದೋಲನಗಳಿಗೆ ಮುಂದಾಗಬೇಕೆAದರು. ಕಮಲ ಸ್ವಾಗತಿಸಿ, ಕಂಭೆಗೌಡ ವಂದಿಸಿದರು.