‘ಮೊಟ್ಟೆ ತಿನ್ನುವಂತೆ ಒತ್ತಡ ಹೇರಿಲ್ಲ’ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ

egg--not-forced-children-to-eat-b-c-nagesh

‘ಮೊಟ್ಟೆ ತಿನ್ನುವಂತೆ ಒತ್ತಡ ಹೇರಿಲ್ಲ’  ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ


 

‘ಮೊಟ್ಟೆ ತಿನ್ನುವಂತೆ ಒತ್ತಡ ಹೇರಿಲ್ಲ’

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ

ಮಂಡ್ಯ: ತಜ್ಞರ ಸಲಹೆ ಮೇರೆಗೆ ಮಕ್ಕಳನ್ನು ಕಾಡುತ್ತಿರುವ ಅಪೌಷ್ಟಿಕತೆ ಹೋಗಲಾಡಿಸಲು ಮೊಟ್ಟೆ ವಿತರಣೆ ಮಾಡಲಾಗುತ್ತಿದೆ ಆದರೆ ಶಾಲೆಗಳಲ್ಲಿ ಮೊಟ್ಟೆ ತಿನ್ನುವಂತೆ ಮಕ್ಕಳ ಮೇಲೆ ಒತ್ತಡ ಹೇರಿಲ್ಲ,’ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಶನಿವಾರ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಮೊಟ್ಟೆ ಜೊತೆಗೆ ಬಾಳೆಹಣ್ಣು ಕೂಡ ವಿತರಣೆ ಮಾಡಲಾಗುತ್ತಿದೆ, ಯಾವುದೇ ಪದರ‍್ಥ ಸೇವನೆಗೆ ಒತ್ತಡ ಇಲ್ಲ. ರಾಜ್ಯದ ವಿವಿಧೆಡೆ ಮಕ್ಕಳು ಅಪೌಷ್ಟಕತೆಯಿಂದ ಬಳಲುತ್ತಿದ್ದಾರೆ ಎಂಬ ವರದಿ ಕೇಂದ್ರ ರ‍್ಕಾರದಿಂದ ಬಂದಿದೆ. ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಳ ಮಾಡುವ ಅವಶ್ಯಕತೆ ಇದೆ’ ಎಂದರು.

‘ಮೊಟ್ಟೆ, ಬಾಳೆಹಣ್ಣಿನ ಜೊತೆಗೆ ಇತರ ಪೌಷ್ಟಿಕಾಂಶವುಳ್ಳ ಪದರ‍್ಥಗಳನ್ನು ಆಯ್ಕೆ ಮಾಡಲಾಗಿದೆ. ಅವುಗಳಿಗೆ ತಜ್ಞರು ಒಪ್ಪಿಗೆ ನೀಡಿದರೆ ಮುಂದಿನ ದಿನಗಳಲ್ಲಿ ಅದನ್ನೂ ಜಾರಿಗೊಳಿಸಲಾಗುವುದು. ಎಂದರು.