ಪಾದಯಾತ್ರೆ ಕಾಂಗ್ರೆಸ್‌ ಗೆ ಸೀಮಿತವಾಗಿಲ್ಲ ಮಧುಗಿರಿ ಸದಸ್ಯತ್ವ ನೊಂದಣಿ ಅಭಿಯಾನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಪಾದಯಾತ್ರೆ ಕಾಂಗ್ರೆಸ್‌ ಗೆ ಸೀಮಿತವಾಗಿಲ್ಲ ಮಧುಗಿರಿ ಸದಸ್ಯತ್ವ ನೊಂದಣಿ ಅಭಿಯಾನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಪಾದಯಾತ್ರೆ ಕಾಂಗ್ರೆಸ್‌ ಗೆ ಸೀಮಿತವಾಗಿಲ್ಲ ಮಧುಗಿರಿ ಸದಸ್ಯತ್ವ ನೊಂದಣಿ ಅಭಿಯಾನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್


ಪಾದಯಾತ್ರೆ ಕಾಂಗ್ರೆಸ್‌ ಗೆ ಸೀಮಿತವಾಗಿಲ್ಲ ಮಧುಗಿರಿ ಸದಸ್ಯತ್ವ ನೊಂದಣಿ ಅಭಿಯಾನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್


ಮಧುಗಿರಿ: ಮೇಕೆದಾಟು ಯೋಜನೆಯ ಪಾದಯಾತ್ರೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಕಾರ್ಯಕರ್ತನೂ ಇತಿಹಾಸದ ಪುಟ ಸೇರಲಿದ್ದಾನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನುಡಿದರು.


ಪಟ್ಟಣದ ಎಂ.ಎನ್.ಕೆ. ಸಮುಧಾಯ ಭವನದಲ್ಲಿ ಬುಧವಾರ ಮಧುಗಿರಿ ಉಪವಿಭಾಗ ಮಟ್ಟದ ಮೇಕೆದಾಟು ಪಾದಯಾತ್ರೆ, ಪಕ್ಷ ಸಂಘಟನೆ ಹಾಗೂ ಕಾಂಗ್ರೆಸ್ ಸದಸ್ಯತ್ವ ನೊಂದಣಿ ಅಭಿಯಾನದ ಪ್ರಗತಿ ಪರಿಶೀಲನಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯಿಂದ ಕನಿಷ್ಟ 20 ಸಾವಿರ ಜನ ಕಾರ್ಯಕರ್ತರು ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಬೇಕು ಎಂದರು. 


ಸದಸ್ಯತ್ವ ನೊಂದಣಿ ಪಕ್ಷದ ಆಧಾರ ಸ್ಥಂಭವಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಅಡಿಪಾಯ ಹಾಕಲು ಸಹಕಾರಿಯಾಗಿದೆ. ಮಧುಗಿರಿ ಉಪವಿಭಾಗದ ಪ್ರತೀ ತಾಲೂಕಿನಿಂದ ತಲಾ 70 ಸಾವಿರ ಸದಸ್ಯತ್ವ ನೊಂದಣಿ ಮಾಡಿಸಿದಲ್ಲಿ 4 ತಾಲೂಕುಗಳಲ್ಲಿ ಕಾಂಗ್ರೆಸ್ ಬಾವುಟ ಹಾರಿಸಬಹುದು ಎಂದರು.


ಮೇಕೆದಾಟು ಕೇವಲ ಪಕ್ಷಕ್ಕೆ ಸೀಮಿತವಾಗಿಲ್ಲ. ಇದರಿಂದ ರಾಜ್ಯದ ಬೆಂಗಳೂರಿನ ಜನತೆಗೆ ಕುಡಿಯುವ ನೀರಿಗೆ ಅನುಕೂಲವಾಗಲಿದ್ದು, 400 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಸಹಕಾರಿಯಾಗಲಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಾನು ಇಂಧನ ಸಚಿವನಾಗಿದ್ದಾಗ ಮಧುಗಿರಿ ಉಪವಿಭಾಗದ ಪಾವಗಡ ತಾಲೂಕಿನಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆಗೆ ಕ್ರಮ ಕೈಗೊಂಡಿದ್ದು ಇಡೀ ದೇಶದ ಗಮನ ಸೆಳೆದಿತ್ತು. ಇದರಿಂದ ರೈತರಿಗೆ ಅಂದಿನ ಕಾಲಕ್ಕೆ ವರ್ಷಕ್ಕೆ 25 ಸಾವಿರ ಆದಾಯ ಬರುವಂತೆ ಮಾಡಿದ್ದು,  ಇದರಿಂದ ಈ ಭಾಗದ ಜನತೆ ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ ಎಂದರು. 


ಬೆಂಗಳೂರು ನಮ್ಮದು: ಮಾಜಿ ಡಿಸಿಎಂ, ಶಾಸಕ ಡಾ. ಜಿ. ಪರಮೇಶ್ವರ್ ಮಾತನಾಡಿ, ಬೆಂಗಳೂರಿನಲ್ಲಿ ರಾಜ್ಯದ ಎಲ್ಲಾ ಜನರು ನೆಲೆಸಿದ್ದು, ಬೆಂಗಳೂರು ನಮ್ಮದು. ಇಂತಹ ಜನತೆಗೆ ನೀರು ನೀಡುವುದು ನಮ್ಮೆಲ್ಲರ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆ ಅನಿವಾರ್ಯ ಎಂದರು.


ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದು, ಕಾಂಗ್ರೆಸ್ ಪಕ್ಷದ ವತಿಯಿಂದ ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಈ ಪಾದಯಾತ್ರೆ ಇಡೀ ದೇಶದ ಗಮನ ಸೆಳೆದಿತ್ತು. ಆದರೆ ಬಿಜೆಪಿ ಸರ್ಕಾರ ಕರೋನಾ ನೆಪವೊಡ್ಡಿ ಪಾದಯಾತ್ರೆಗೆ ತಡೆಯೊಡ್ಡಲು ಪ್ರಯತ್ನಿಸಿತ್ತು. ಆದರೆ ಜನತೆಯ ಹಿತದೃಷ್ಟಿಯಿಂದ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ತಾತ್ಕಾಲಿಕವಾಗಿ ತಡೆ ನೀಡಿದ್ದು, ಫೆ. 28 ರಂದು ಮತ್ತೆ ಪಾದಯಾತ್ರೆಗೆ ಚಾಲನೆ ನೀಡುತ್ತಿದ್ದು, ಜಿಲ್ಲೆಯಿಂದ 10 ಸಾವಿರ ಜನ ಪಾದಯಾತ್ರೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.


ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಬಿ.ಬಿ. ಜಯಚಂದ್ರ, ಶಾಸಕ ವೆಂಕಟರವಣಪ್ಪ, ಮಾಜಿ ಸಂಸದ ಚಂದ್ರಪ್ಪ, ಕೆಪಿಸಿಸಿ ಕಾರ್ಯಧ್ಯಕ್ಷ ಸಲಿಂ ಅಹಮದ್, ಜಿ.ಪಂ. ಮಾಜಿ ಸದಸ್ಯರಾದ ಕೆಂಚಮಾರಯ್ಯ, ಜಿ.ಜೆ. ರಾಜಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು, ಜಿ.ಎನ್. ಮೂರ್ತಿ, ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್, ರಾಜ್ಯ ಸಹಕಾರ ಮಹಾ ಮಂಡಲ ಮಾಜಿ ಅಧ್ಯಕ್ಷ ಎನ್. ಗಂಗಣ್ಣ, ಪುರಸಭೆ ಮಾಜಿ ಅಧ್ಯಕ್ಷರುಗಳಾದ ಎಂ.ಕೆ. ನಂಜುAಡಯ್ಯ, ಕೆ. ಪ್ರಕಾಶ್, ಎಂ.ವಿ. ಗೋವಿಂದರಾಜು, ಮಹಮ್ಮದ್ ಅಯುಬ್, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಜಿ. ಶ್ರೀನಿವಾಸಮೂರ್ತಿ, ತಾ.ಪಂ. ಮಾಜಿ ಅಧ್ಯಕ್ಷೆ ಇಂದಿರ ದೇನಾನಾಯ್ಕ, ರಾಜ್ಯ ಕಾಂಗ್ರೆಸ್ ಮಹಿಳಾ ಕಾರ್ಯದರ್ಶಿ ಸುವರ್ಣಮ್ಮ, ಪುರಸಭೆ ಸದಸ್ಯರಾದ ಲಾಲಾಪೇಟೆ ಮಂಜುನಾಥ್ ಎಂ.ಎಸ್. ಚಂದ್ರಶೇಖರ್, ಮಂಜುನಾಥ್ ಆಚಾರ್, ಪಿ.ಸಿ. ಕೃಷ್ಣಾ ರೆಡ್ಡಿ, ಮಧುಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್. ಮಲ್ಲಿ ಕಾರ್ಜುನಯ್ಯ, ಎಸ್.ಆರ್. ರಾಜಗೋಪಾಲ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲೀಕುಂಟೆ, ತಾಲೂಕು ಅಧ್ಯಕ್ಷ ಎಸ್.ಡಿ. ವೆಂಕಟೇಶ್ ಮತ್ತು ಪಾವಗಡ, ಸಿರಾ, ಕೊರಟಗೆರೆ ತಾಲೂಕುಗಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಇದ್ದರು.


ಮಧುಗಿರಿಯಲ್ಲಿ ರಾಜಣ್ಣ ಭದ್ರಕೋಟೆ ನಿರ್ಮಿಸಿಕೊಂಡಿದ್ದು, ಅವರಿಗೆ ಸಮಸ್ಯೆಯೇ ಇಲ್ಲ. ಮುಂಬರುವ ಚುನಾವಣೆಯಲ್ಲಿ ಮಧುಗಿರಿಯಿಂದ ನಿಲ್ಲುವುದೂ ಅವರೇ ಗೆಲ್ಲುವುದೂ ಅವರೇ.
- ಡಾ.ಜಿ ಪರಮೇಶ್ವರ್, ಶಾಸಕ. ವಿಷದ ಚೇಳುಗಳು ಬರದಂತೆ ನೋಡಿಕೊಳ್ಳಿ-ಕೆ.ಎನ್.ಆರ್.
2023 ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 11 ರಲ್ಲಿ 9 ಸ್ಥಾನಗಳನ್ನು ಗೆಲ್ಲಲು ಪಣತೊಟ್ಟಿದ್ದು, ಕಾಂಗ್ರೆಸ್ ಸರ್ಕಾರ ಪ್ರತಿಷ್ಟಾಪನೆ ಮಾಡುವುದು ನಮ್ಮ ಗುರಿ. ಆದರೆ ಚುನಾವಣೆ ಸಂದರ್ಭದಲ್ಲಿ ನಾನು ಮುಖಂಡ ಎಂದು ಹೇಳಿಕೊಂಡು ಕೆಲ ಢೋಂಗಿಗಳು ಬರುತ್ತಾರೆ. ಅಂತಹ ವಿಷದ ಚೇಳುಗಳನ್ನು ದೂರವಿಡಿ ಎಂದು ಕೆಪಿಸಿಸಿ ಅಧ್ಯಕ್ಷರಿಗೆ ಕೆ.ಎನ್. ರಾಜಣ್ಣ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಶಿರಾ ಎಂದು ಕೂಗಿದಾಗ ಶಿರಾ ಕ್ಷೇತ್ರದ ಬಗ್ಗೆ ಈಗಾಗಲೇ ಅಧ್ಯಕ್ಷರು ಮತ್ತು ಸಿದ್ದರಾಮಯ್ಯನವರು ಸಭೆ ಸೇರಿ ಸಮರ್ಪಕ ತೀರ್ಮಾನಕ್ಕೆ ಬಂದಿದ್ದು, ಟಿ.ಬಿ. ಜಯಚಂದ್ರರವರಿಗೆ 4 ಜನ ನಾಯಕರಿಗೆ ಟಿಕೆಟ್ ಕೊಡಿಸುವ ಶಕ್ತಿಯಿದ್ದು, ಅವರ ಹಿತಕಾಯಲು ಜಿಲ್ಲೆಯ ಎಲ್ಲಾ ಮುಖಂಡರು ಬದ್ಧ ಎಂದು ಭರವಸೆ ನೀಡಿದರು.