ಪ್ರತೀತ್ಯ . . . ನಾನೆಂಬುದ ಕರಗಿಸಬಲ್ಲ ಕಲಾಕೃತಿಗಳು

ಪ್ರತೀತ್ಯ . . . ನಾನೆಂಬುದ ಕರಗಿಸಬಲ್ಲ ಕಲಾಕೃತಿಗಳು

ಹೆಸರಾಂತ ಚಿತ್ರ ಕಲಾವಿದ ಮನು ಚಕ್ರವರ್ತಿ ಅವರ ಕಲಾಕೃತಿಗಳ ಸಮೂಹ ಪ್ರದರ್ಶನ ಮುಂಬೈನ ಪ್ರಖ್ಯಾತ ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಇದೇ ಏಪ್ರಿಲ್ 25ರಿಂದ ಆರಂಭಗೊಳ್ಳಲಿದೆ. ಮುಂಬೈಗೆ ಕಳಿಸುವ ಮೊದಲು ತಮ್ಮ ವಿಶಿಷ್ಟ ಕಲಾಕೃತಿಗಳನ್ನು ಮನು ಚಕ್ರವರ್ತಿ ಅವರು ಕೆಲಕಾಲ ತಮ್ಮ ಖಾಸಗಿ ಗ್ಯಾಲರಿಯಲ್ಲಿ ಸಹೃದಯರ ಕಣ್ಣ ಮುಂದಿರಿಸಿದ್ದರು. ಈ ಕಲಾಕೃತಿಗಳನ್ನು ಕುರಿತ ಆಪ್ತ ಬರಹ ಇಲ್ಲಿದೆ -ಸಂಪಾದಕ

ಎಸ್.ನಟರಾಜ ಬೂದಾಳು

ಪ್ರತೀತ್ಯ . . . ನಾನೆಂಬುದ ಕರಗಿಸಬಲ್ಲ ಕಲಾಕೃತಿಗಳು


ಬೇಯಿಸುತ್ತಿರುವ ಬಿಸಿಲು, ಬೆಂದು ಕರುಕಲಾಗುತ್ತಿರುವ ಪ್ರಜಾಸತ್ತೆ, ಗುರುತು ಹಿಡಿಯಲು ಪರದಾಡುತ್ತಿರುವ ಸ್ನೇಹ-ವಿಶ್ವಾಸಗಳು,ಗುಂಡ ತೇಲಿಸಿ ಬೆಂಡು ಮುಳುಗಿಸುವ ದುರ್ಬರದ ನಡೆ-ನುಡಿಗಳ ಜಾತ್ರೆಗಳು – ಇವೆಲ್ಲವುಗಳಿಗೆ ತಾನು ಸಾಕ್ಷಿ ಎಂಬAತೆ ನಮ್ಮನ್ನು ನೋಡುತ್ತಿರುವ ರಾಮದೇವರ ಬೆಟ್ಟ! ಬೆಟ್ಟದ ತಪ್ಪಲಿನ ಹೊಂಗೆ ಮರಗಳ ನಡುವೆ ಒಳಬರುವವರೆಲ್ಲರನ್ನು ಪ್ರೀತಿಯಿಂದ ಕರೆಯುವ ಕಲಾವಿದ ಮನು ಚಕ್ರವರ್ತಿಯವರ ಚಿತ್ರ ಕಲಾ ಸ್ಟುಡಿಯೋ ಒಂದೆರಡು ದಿನಗಳ ಮಟ್ಟಿಗೆ ಕಲಾ ಗ್ಯಾಲರಿಯಾಗಿ ತನ್ನನ್ನು ತಾನೇ ರೂಪಾಂತರಿಸಿಕೊಂಡು ನಿಂತಿತ್ತು! 

ಮೈದಾಳ ರಸ್ತೆಯಲ್ಲಿರುವ ಕಲಾಗ್ಯಾಲರಿಯಲ್ಲಿ ದಿನಾಂಕ 9ನೇ ಏಪ್ರಿಲ್ ಭಾನುವಾರ ಆರಂಭಗೊAಡ ಕಲಾವಿದ ಕೆ ಎನ್ ಮನುಚಕ್ರವರ್ತಿಯವರ ಚಿತ್ರ ಕಲಾಕೃತಿಗಳ ಪ್ರದರ್ಶನ ಅನೇಕ ಕಲಾಪ್ರೇಮಿಗಳನ್ನು ಆಹ್ವಾನಿಸುವುದರ ಜೊತೆಗೆ ಒಂದು ವಿಶಿಷ್ಟವಾದ ಸಂಪ್ರದಾಯಕ್ಕೆ ನಾಂದಿ ಹಾಡಿತು. ಏಪ್ರಿಲ್ 25ರಿಂದ ಮುಂಬಯಿಯ ಜಹಾಂಗೀರ್ ಆರ್ಟ್ಗ್ಯಾಲರಿಯಲ್ಲಿ ನಡೆಯುತ್ತಿರುವ ‘ಪ್ರತೀತ್ಯ’ ಎಂಬ ಹೆಸರಿನ ಸಮೂಹ ಕಲಾ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಸಿದ್ಧತೆ ನಡೆಸಿರುವ ಕೆ. ಎನ್. ಮನುಚಕ್ರವರ್ತಿ ತಮ್ಮ ಇತ್ತೀಚಿನ ಆರು ಚಿತ್ರ ಕಲಾಕೃತಿಗಳ ಒಂದು ಮುನ್ನೋಟ ಪ್ರದರ್ಶನವನ್ನು ತಮ್ಮದೇ ಸ್ಟುಡಿಯೋದಲ್ಲಿ ಏರ್ಪಡಿಸಿದ್ದುದು ಒಂದು ನೆಪ ಮಾತ್ರವಾಗಿ ಅದು ಕಲಾವಿದರ, ಸಹೃದಯರ, ಸಾಹಿತಿಗಳ, ಚಿಂತಕರ, ಶಿಕ್ಷಣ ತಜ್ಞರ, ಮತ್ತು ಮಕ್ಕಳ ಕಲಾ ಪ್ರಶಂಸೆಯ ಶಿಬಿರವಾಗಿ ಮಾರ್ಪಟ್ಟಿತು. 

ಎಲ್ಲವೂ ದೊಡ್ಡ ಕ್ಯಾನ್ವಾಸುಗಳಲ್ಲಿ ವಿಸ್ತಾರವಾದ ನಿರೂಪಣೆಯನ್ನು ಕೈಗೆತ್ತಿಕೊಂಡ ಕಲಾಕೃತಿಗಳು. ಅತ್ಯಂತ ಸೂಕ್ಷö್ಮವಾದ ವಸ್ತು ವಿನ್ಯಾಸಗಳ ಜೊತೆಗೆ ಮನಸ್ಸನ್ನು ತುಂಬಿ ಆವರಿಸುವ ನಮ್ಮದೇ ಸುತ್ತಲಿನ ಆವರಣಗಳ ವಿಶಿಷ್ಟ ಸಂಯೋಜನೆಯ ಕೃತಿಗಳು.


ಪ್ರದರ್ಶನವನ್ನು ವೀಕ್ಷಿಸಿದ ಕಲಾವಿದರು, ಸಾಹಿತಿಗಳು, ಮಕ್ಕಳು, ಶಿಕ್ಷಕರು, ಮತ್ತು ಕಲಾಪ್ರೇಮಿಗಳ ಅನುಭವಗಳು ಮತ್ತೆ ಅನೇಕ ಕಲಾಕೃತಿಗಳನ್ನು ಸೃಷ್ಟಿಸಿದವು. ದಿನದ ಬೇಗೆ ಕಳೆದು ಕತ್ತಲಾವರಿಸಿ ತಂಪು ಹರಡಿದಂತೆ ಬೆಚ್ಚನೆಯ ಅನುಭವಕ್ಕೆ ಸಾಕ್ಷಿಯಾದವು. ಆಧುನಿಕ ಚಿತ್ರಕಲೆಯ ಹೊಸ ಹೊಸ ಆಯಾಮಗಳನ್ನೂ, ಕಾವ್ಯ ಕಲಾ ಮೀಮಾಂಸೆಯ ದೇಸಿ ಪರಿಕಲ್ಪನೆಗಳನ್ನು ತನ್ನ ಚಿತ್ರಗಳಿಗೆ ಬೆಸೆಯಬಲ್ಲ ಕಲಾವಿದ ಕೆ. ಎನ್. ಮನುಚಕ್ರವರ್ತಿಯವರ ಈ ಕಲಾಕೃತಿಗಳನ್ನು ನೋಡಿದ ಸಹೃದಯರ ಅನೇಕ ಅಭಿಪ್ರಾಯಗಳು ಇವು: ‘ಅತ್ಯಂತ ಸೂಕ್ಷö್ಮಸ್ತರದ ಕಲೆಗಾರಿಕೆ ಈ ಕಲಾವಿದನ ಅಂತಃಸತ್ವ. ಲೋಕದ ಸಹಜ ನಡೆಯನ್ನು ಕ್ಯಾನ್‌ವಾಸಿನ ಕಣಕಣವೂ ಅನುಭವರೂಪಕ್ಕೆ ತರುವ ಶಕ್ತಿ ತುಂಬಬಲ್ಲ ಕಲಾವಿದ. ತಾನು ಮತ್ತು ಇದಿರು ಎರಡನ್ನೂ ಕರಗಿಸಿ, ಒಂದೊಂದೇ ತಡೆಗಳನ್ನು ದಾಟಿಸಿ ಬಯಲೊಡನೆ ಒಂದು ಮಾಡುವ ಕಲಾಕೃತಿಗಳು ಇದೀಗ ನಮ್ಮೆದುರಿಗೆ ಇವೆ. ಎಲ್ಲರೊಡನೆ ಮಾತುಕತೆಗೆ ಕಾದಿವೆ.


ಪ್ರತೀತ್ಯ ನಿಸರ್ಗದ ನಡೆಯನ್ನು ಸೂಚಿಸುವ ಪರಿಕಲ್ಪನೆ. ಎಲ್ಲವೂ ಹಲವು ಅವಸ್ಥೆಗಳಿಂದಾದ (ಪ್ರತ್ಯಯಗಳಿಂದಾದ) ಮತ್ತೊಂದು ಅವಸ್ಥೆಯೇ ಹೊರತು ಮತ್ತೇನಲ್ಲ. ಇಲ್ಲಿಯ ಕಲಾಕೃತಿಗಳು ಕೂಡ. ಲೋಕವನ್ನು ಬಂಧಿಸುವ ಸಂರಚನೆಗಳೆಲ್ಲ ಮಾನವನಿರ್ಮಿತ. ಬಿಡುಗಡೆಯ ದಾರಿಗಳು ನಿಸರ್ಗ ನಿರ್ಮಿತ. ಬಂಧನ - ಬಿಡುಗಡೆ ಎರಡೂ ಆಯ್ಕೆಗಳು ನಮ್ಮ ಎದುರಿಗೆ ಇವೆ. ಮನುಚಕ್ರವರ್ತಿಯವರ ಕಲಾಕೃತಿಗಳು ಈ ಸತ್ಯವನ್ನು ಮೆಲುದನಿಯಲ್ಲಿ ಮೃದುದನಿಯಲ್ಲಿ ನುಡಿಯುತ್ತಿವೆ. ಹತ್ತಿರ ಬಂದು ಮಾತನಾಡಿಸುವವರನ್ನು ಇದಿರು ನೋಡುತ್ತಿವೆ. ತೀರಾ ಹತ್ತಿರ ಹೋಗಿ ನೋಡಿದರೆ ನೋಡುತ್ತಿರುವವರೂ ಅನೇಕ ಅವಸ್ಥೆಗಳಿಂದಾದ ಮತ್ತೊಂದು ಅವಸ್ಥೆಯೆಂಬ ಪ್ರತಿಬಿಂಬ ಮೂಡುತ್ತದೆ! ಈ ಕಲಾಕೃತಿಗಳು ಎದುರಿಗೂ ಇವೆ ನಮ್ಮೊಳಗೂ ಇವೆ! ‘


 *****

 “ತುಮಕೂರು ಚಿತ್ರಕಲಾವಿದರ, ಜನಪದಕಲಾವಿದರ, ತತ್ವಪದಕಾರರ ನಾಡು. ಇಲ್ಲಿನ ರವೀಂದ್ರ ಕಲಾಕಾಲೇಜಿನಿಂದ ಹೊರಬಂದ ಅನೇಕ ಕಲಾವಿದರು ಈಗ ರಾಷ್ಟçಮಟ್ಟದ ಖ್ಯಾತಿ ಗಳಿಸಿದವರಾಗಿದ್ದಾರೆ. ಸುಮಾರು ಐವತ್ತು ಕಲಾವಿದರು ಈ ನೆಲದಿಂದ ಬಂದಿದ್ದು ದೇಶದ ತುಂಬ ಈ ನೆಲದ ಅಸ್ಮಿತೆಯನ್ನು ಹರಡುತ್ತಿದ್ದಾರೆ. ಅದರ ಕೇಂದ್ರದAತಿರುವ ಕಲಾವಿದ ಮನುಚಕ್ರವರ್ತಿ ತಮ್ಮ ಕಲಾನೈಪುಣ್ಯವನ್ನು ನಿರಂತರ ವರ್ತಮಾನಕ್ಕೆ ಮುಖಾಮುಖಿಯಾಗಿಸುವ ಅಪರೂಪದ ಕಲಾವಿದ” 

 ಪ್ರಭು ಹರಸೂರು, 
ಕಲಾವಿದ ಮತ್ತು ಕಲಾಶಿಕ್ಷಕ


ಚಿತ್ರಕಲೆ ಆಯಾ ನೆಲದ ಜೀವಸೆಲೆಯನ್ನು ಮುಂದಕ್ಕೆ ಒಯ್ಯುವ ಮಾಧ್ಯಮ. ಮನುಚಕ್ರವರ್ತಿಯವರ ಈ ಕೃತಿಗಳು ನೋಡುಗರ ಅಂತರAಗದ ಜೊತೆಗೆ ಪಿಸುನುಡಿಯುವ ಮೂಲಕ ಮನಸ್ಸನ್ನು ಮುಟ್ಟುತ್ತವೆ” 


 ಜಿ. ವಿ. ಆನಂದಮೂರ್ತಿ, 
 ಲೇಖಕ ಮತ್ತು ಚಿಂತಕ

ಶಿಕ್ಷಣ ತಜ್ಞರೂ, ಮಾರುತಿ ಇಂಟರ್‌ನ್ಯಾಷನಲ್ ಶಾಲೆಯ ಮುಖ್ಯಸ್ಥರೂ ಆದÀ ಶ್ರೀನಿವಾಸರಾವ್ ಕಲಾಪ್ರದರ್ಶನವನ್ನು ವೀಕ್ಷಿಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊAಡರು. ಕತೆಗಾರರಾದ ಮಿರ್ಜಾ ಬಷೀರ್, ಶಿಕ್ಷಕಿ ಹಸೀನಾ, ಕಲಾವಿದರಾದ ಮಂಜುನಾಥ ಹೊನ್ನಾಪುರ, ರವೀಶ, ಆನಂದ್, ಜಗದೀಶ್, ಮತ್ತು ಅನೇಕ ಕಲಾ ಅಭಿಮಾನಿಗಳು ಪ್ರದರ್ಶನದಲ್ಲಿ ಪಾಲ್ಗೊಂಡರು. ಹಲವಾರು ಕಲಾವಿದ್ಯಾರ್ಥಿಗಳು, ಕಲಾಶಿಕ್ಷರು, ಕಲಾಪ್ರೇಮಿಗಳು ಚಿತ್ರಕೃತಿಗಳನ್ನು ವೀಕ್ಷಿಸಿದರು. ಕೆಲವು ಕಲಾಕೃತಿಗಳ ಮುದ್ರಿತ ಆವೃತ್ತಿಯನ್ನು ಇಲ್ಲಿ ನೀಡಲಾಗಿದೆ. 
 --------------

“ಬೆಳಕನರಸುವ ಪರಿವ್ರಾಜಕ”


 
“ ನಾನು ಕವಿದ ಅಂಧಕಾರದಲ್ಲಿ ಬೆಳಕನರಸುವ ಪರಿವ್ರಾಜಕ ಎನ್ನುವ ಕಲಾವಿದ ಮನು ಚಕ್ರವರ‍್ತಿ, ಜೀವನ ಮತ್ತು ಕಲಾಭಿವ್ಯಕ್ತಿಗಳೆರಡರಲ್ಲೂ ಇದಿರಾಗುವ ಎಲ್ಲ ದ್ವಂದ್ವ-ವಿರೋಧಾಭಾಸಗಳನ್ನು ಮೀರುವುದರಲ್ಲಿ ನಂಬಿಕೆಯುಳ್ಳವನು, ನಾನು ಗಾಢ ರ‍್ಣಗಳಲ್ಲಿ ಅಮರ‍್ತವನ್ನು ಚಿತ್ರಿಸುವ ಮೂಲಕ ಅಂಧಕಾರವು ಬೆಳಕಿನೆಡೆಗೆ ಸಾಗಲು ನನಗೆ ನೆರವಾಗುತ್ತದೆ ಎಂದು ಬಿಂಬಿಸಲು ಪ್ರಯತ್ನಿಸುತ್ತೇನೆ, ಹಾಗಾಗಿ ಸಹಜವಾಗಿಯೇ ನನ್ನ ಕಲಾಕೃತಿಗಳಲ್ಲಿ ಕಡು ಛಾಯೆ ಮೇಲುಗೈ ಸಾಧಿಸುತ್ತದೆ” 


ತುಮಕೂರು ನಗರದ ಕ್ಯಾತ್ಸಂದ್ರದಲ್ಲಿ ಹುಟ್ಟಿ ಬೆಳೆದ ಹೆಸರಾಂತ ಕಲಾವಿದ ಕೆ.ಎನ್. ಚಕ್ರವರ್ತಿ  ತಮ್ಮ ಕಲೆ ಹಾಗೂ ಅಭಿವ್ಯಕ್ತಿ ಕುರಿತು ವಿವರಿಸುವುದು ಹೀಗೆ.
ಇವರು ತುಮಕೂರು ನಗರದ ರವೀಂದ್ರ ಕಲಾನಿಕೇತನ ಕಲಾ ಶಾಲೆಯಲ್ಲಿ ಫೈನ್ ಆರ‍್ಟ್ ಡಿಪ್ಲೊಮಾ ಅಧ್ಯಯನ ಮಾಡಿದ್ದಾರೆ. 1996, 2002ರಲ್ಲಿ ದಸರಾ ಪ್ರಶಸ್ತಿ, 1996,97ರಲ್ಲಿ ಕರ‍್ನಾಟಕ ಲಲಿತ ಕಲಾ ಅಕಾಡೆಮಿ ಸ್ಟೂಡೆಂಟ್ ಸ್ಕಾಲರ್ ಶಿಪ್ ಹಾಗೂ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ.


2000ದಿಂದ ಆರಂಭಿಸಿ ಮಂಗಳೂರು,ಚೆನ್ನೈ, ಸಿಂಗಾಪೂರ್, ಗೋವಾ, ಕೇರಳ,ಬೆಂಗಳೂರು ಹಾಗೂ ಹೈದರಾಬಾದ್ ಗಳಲ್ಲಿ ಮನು ಚಕ್ರರ‍್ತಿಯವರು ಕಲಾಕೃತಿಗಳ ಏಕ ವ್ಯಕ್ತಿ ಪ್ರರ‍್ಶನ ನಡೆದಿದೆ.


2009ರಲ್ಲಿ ಮುಂಬೈನ ಜಹಾಂಗೀರ್ ಆರ‍್ಟ್ ಗ್ಯಾಲರಿ ಹಾಗೂ ಸಿಂಗಾಪೂರ್ ಗಳಲ್ಲಿ , ಜಪಾನ್, ದಿಲ್ಲಿ,ಮೈಸೂರು ಹಾಗೂ ಬೆಂಗಳೂರಿನ ವಿವಿಧ ಕಲಾ ಗ್ಯಾಲರಿಗಳಲ್ಲಿ ಸಮೂಹ ಪ್ರದರ್ಶಶನಗಳಲ್ಲಿ ಪಾಲ್ಗೊಂಡಿದ್ದಾರೆ.