ಮಹಿಳೆಯರಿಗೆ ಉದ್ಯೋಗಾಧಾರಿತ ತರಬೇತಿ: ಸಿಇಓ

ಮಹಿಳೆಯರಿಗೆ ಉದ್ಯೋಗಾಧಾರಿತ ತರಬೇತಿ: ಸಿಇಓ


ಮಹಿಳೆಯರಿಗೆ ಉದ್ಯೋಗಾಧಾರಿತ ತರಬೇತಿ: ಸಿಇಓ


ತುಮಕೂರು: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿ 100 ದಿನಗಳ ಉದ್ಯೋಗ ಪಡೆದ ಮಹಿಳೆಯರಿಗೆ ಎಸ್.ಬಿ.ಐ. ಸಂಯೋಜಿತ ಸಂಸ್ಥೆಯಲ್ಲಿ ಉದ್ಯೋಗಾಧಾರಿತ ತರಬೇತಿ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ ತಿಳಿಸಿದರು.


ಜಿಲ್ಲಾ ಪಂಚಾಯತಿಯಲ್ಲಿ ಶುಕ್ರವಾರ ಸ್ಥಳೀಯ ಸಲಹಾ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 2018-19ರಲ್ಲಿ ನರೇಗಾ ಯೋಜನೆಯಡಿ ಕನಿಷ್ಠ 100 ದಿನ ಉದ್ಯೋಗ ಪಡೆದ ಮಹಿಳೆಯರನ್ನು ಜಿಲ್ಲಾ ಪಂಚಾಯತಿ ವತಿಯಿಂದ ಆಯ್ಕೆ ಮಾಡಿ ಅವರ ಆಸಕ್ತಿಗೆ ಅನುಗುಣವಾಗಿ  ತರಬೇತಿ ಪಡೆಯಲು ಖSಇಖಿI ಸಂಸ್ಥೆಗೆ ಕಳುಹಿಸಲಾಗುವುದು ಎಂದು ತಿಳಿಸಿದರು.


ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗಾಗಿ ಖರೀದಿಸುವ ವಾಹನಗಳ ಚಾಲನೆಗೆ ಮಹಿಳೆಯರನ್ನೇ ನೇಮಿಸಲಾಗುತ್ತಿದೆ. ಅವರಿಗೆ ಲಘು ವಾಹನ ಚಾಲನಾ ತರಬೇತಿಯನ್ನು ನೀಡಲಾಗುವುದು ಎಂದು ತಿಳಿಸಿದರು.


ಖSಇಖಿI ಸಂಸ್ಥೆಯ ನಿರ್ದೇಶಕ ಪಿ. ರಾಮಚಂದ್ರ ಮಾತನಾಡಿ, ಜಿಲ್ಲಾ ಪಂಚಾಯತ್ ವತಿಯಿಂದ ಸೂಚಿಸಿರುವ ಮಹಿಳಾ ಮತ್ತು ಪುರುಷ ತಂಡಗಳಿಗೆ ಉದ್ಯೋಗಿನಿ ಹೆಸರಿನಲ್ಲಿ 6 ದಿನಗಳ ಕಾಲ ತರಬೇತಿ ನೀಡಲಾಗಿದೆಯಲ್ಲದೇ ಅಣಬೆ ಕೃಷಿ, ಬ್ಯಾಂಕ್ ಮಿತ್ರ, ಆಭರಣ ವಿನ್ಯಾಸ ಸೇರಿದಂತೆ ಹಲವು ತರಬೇತಿಗಳನ್ನು ನೀಡಲಾಗಿದೆ ಎಂದರು.


ಸಭೆಯಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಬಿ.ಡಿ. ಯೆಲ್ಲೂರ್ಕರ್, ಎಸ್.ಬಿ.ಐ.ನ ರಂಗನಾಥ್ ಭಂಡಾರಿ, ನಬಾರ್ಡ್ನ ಕೀರ್ತಿಪ್ರಭ ಸೇರಿದಂತೆ ಇನ್ನಿತರರು ಹಾಜರಿದ್ದರು.