ಸಂತ ಇಬ್ರಾಹಿಂ ಸುತಾರ ಇನ್ನು ನೆನಪು

ibrahim-sutara-sanath-kumar-belagali

ಸಂತ ಇಬ್ರಾಹಿಂ ಸುತಾರ ಇನ್ನು ನೆನಪು

ಸಂತ ಇಬ್ರಾಹಿಂ ಸುತಾರ ಇನ್ನು ನೆನಪು

ಕರ್ನಾಟಕದ ಕಬೀರ ಎಂದು ಹೆಸರಾಗಿದ್ದ ಸೂಫಿ ಸಂತ ಇಬ್ರಾಹಿಂ ಸುತಾರ ಶನಿವಾರ ಬೆಳಗಿನ ಜಾವ ಕೊನೆಯುಸಿರೆಳೆದರು. ಆರೂಢ ಪರಂಪರೆಯ  ಸಿದ್ಧಾರೂಢರ ತತ್ವ ವಿಚಾರಗಳ ಒಲವು ಹೊಂದಿದ್ದ  ಇಬ್ರಾಹಿಂ ಸುತಾರರು ಕುರಾನ್ ಬಗೆಗೂ ಸಾಕಷ್ಟು ಅಧ್ಯಯನ ಮಾಡಿದ್ದರು.ಉತ್ತರ ಕರ್ನಾಟಕ ಮಾತ್ರವಲ್ಲ ರಾಜ್ಯದ ಬಹುತೇಕ ಕಡೆ ಸಿದ್ದೇಶ್ವರ ಸ್ವಾಮಿಗಳ ನಂತರ ಅತ್ಯಂತ ಜನಪ್ರಿಯ, ಜನಪರ ಪ್ರವಚನಕಾರರಾಗಿದ್ದ ಸುತಾರ ಅವಿಭಜಿತ ಬಿಜಾಪುರ ಜಿಲ್ಲೆಯ ಮಹಾಲಿಂಗಪುರದವರು.ತಮ್ಮ ಪ್ರವಚನಗಳ ಮೂಲಕ  ಸರ್ವಧರ್ಮಗಳ ನೈತಿಕ ಮೌಲ್ಯಗಳನ್ನು, ಸೌಹಾರ್ದ ಸಂದೇಶವನ್ನುಐದಾರು ದಶಕಗಳ ಕಾಲ  ನಾಡಿನುದ್ದಕ್ಜೂ  ನೀಡುತ್ತಿದ್ದ ಇಬ್ರಾಹಿಂ ಸುತಾರ ಮಾತು ಕೇಳಲು ಸಾವಿರ ಸಾವಿರ ಜನ ಸೇರುತ್ತಿದ್ದರು. ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.ಇಬ್ರಾಹಿಂ ಸುತಾರ ಅಗಲಿಕೆಯಿಂದ ನಮ್ಮ ಕಾಲದ ನಮ್ಮ ನಡುವಿನ ಇನ್ನೊಬ್ಬ ಶರೀಫಸಾಹೆಬರನ್ನು ಕಳೆದುಕೊಂಡಂತಾಗಿದೆ.ಅಗಲಿದ ಮಹಾಚೇತನಕ್ಕೆ ನಮನಗಳು.                      

-ಸನತ್ ಕುಮಾರ ಬೆಳಗಲಿ