ಬಿಜೆಪಿ ಕನಸು ಭಗ್ನ- ಜೆಡಿಎಸ್‌ಗೆ ಮುಖಭಂಗ ವಿಧಾನ ಪರಿಷತ್‌ಗೆ ಆರ್.ರಾಜೇಂದ್ರ ಜಿಲ್ಲೆಯಲ್ಲಿ ಕಾಂಗ್ರೆಸ್ ಭವಿತವ್ಯಕ್ಕೆ ನಾಂದಿ ಹಾಡಿದ ಕೆಎನ್‌ಆರ್ ಪುತ್ರ
mlc-election-tumkur-congress-r-rajendra-won
ಬಿಜೆಪಿ ಕನಸು ಭಗ್ನ- ಜೆಡಿಎಸ್‌ಗೆ ಮುಖಭಂಗ
ವಿಧಾನ ಪರಿಷತ್‌ಗೆ ಆರ್.ರಾಜೇಂದ್ರ
ಜಿಲ್ಲೆಯಲ್ಲಿ ಕಾಂಗ್ರೆಸ್ ಭವಿತವ್ಯಕ್ಕೆ ನಾಂದಿ ಹಾಡಿದ ಕೆಎನ್‌ಆರ್ ಪುತ್ರ
ತುಮಕೂರು: ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಕ್ಷೇತ್ರದಿಂದ ತುಮಕೂರು ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಜೇಂದ್ರ ರಾಜಣ್ಣ ಅತ್ಯಧಿಕ ಮತಗಳಿಂದ ರಾಜ್ಯ ವಿಧಾನ ಪರಿಷತ್‌ಗೆ ಚುನಾಯಿತರಾಗಿದ್ದಾರೆ.
ಮಂಗಳವಾರ ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ನಡೆದ ಮತ ಎಣಿಕೆಯಲ್ಲಿ ರಾಜೇಂದ್ರ 3135 ಮತಗಳನ್ನು ಗಳಿಸಿ ಜಯಶೀಲರಾದರು. ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರೂ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿದ ಬಿಜೆಪಿಯ ಎನ್.ಲೋಕೇಶ್‌ಗೌಡ 2050 ಮತಗಳನ್ನು ಪಡೆದು ಸೋತರು. ಹಾಗೂ ಕಳೆದ ಎರಡು ಅವಧಿಗೆ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡಿದ್ದ ಜೆಡಿಎಸ್‌ನ ಆರ್.ಅನಿಲ್ ಕುಮಾರ್ ಕೇವಲ 1298 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕಿಳಿದರು.
ಮತ ಎಣಿಕೆ ಬೆಳಗಿನ ಎಂಟು ಗಂಟೆಗೇ ಆರಂಭಗೊAಡಿತಾದರೂ ಮತ ಯಂತ್ರಗಳ ಬದಲಿಗೆ ಮತ ಪತ್ರಗಳನ್ನು ಬಳಸಿದ ಹಾಗೂ ಮೊದಲ ಹಾಗೂ ಎರಡನೇ ಪ್ರಾಶಸ್ತö್ಯ ಮತಗಳನ್ನೂ ಎಣಿಕೆ ಮಾಡಬೇಕಾಗಿ ಬಂದದ್ದರಿAದ ವಿಜೇತರ ಹೆಸರನ್ನು ಘೋಷಿಸುವಲ್ಲಿ ಸಂಜೆಯಾಯಿತು.
ಮೊದಲ ಸುತ್ತಿನ ಎಣಿಕೆಯಲ್ಲಿ ಕಾಂಗ್ರೆಸ್ ನ ರಾಜೇಂದ್ರ ರಾಜಣ್ಣ- 2250, ಬಿಜೆಪಿಯ ಎನ್.ಲೋಕೇಶ್ ಗೌಡ 1757 ಹಾಗೂ ಜೆಡಿಎಸ್‌ನ ಆರ್.ಅನಿಲ್‌ಕುಮಾರ್ 1296 ಮತಗಳನ್ನು ಗಳಿಸಿದರು. ಕೆಆರ್‌ಎಸ್ ಎಂಬ ಪಕ್ಷದ ಅಭ್ಯರ್ಥಿ ಗಜೇಂದ್ರ ಕುಮಾರ್ ಗೌಡ ಹಾಗೂ ಪ್ರಕಾಶ್ ಆರ್.ಎ ಎಂಬ ಪಕ್ಷೇತರರು ತಲಾ ಆರು ಹಾಗೂ ಜಯರಾಮಯ್ಯ ಇಂಜಿನಿಯರ್ ಎಂಬ ಪಕ್ಷೇತರರು ಕೇವಲ ಐದು ಓಟುಗಳನ್ನು ಪಡೆದು ಠೇವಣಿ ಕಳೆದುಕೊಂಡರು.
ಲೋಕಸಭಾ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕೆ.ಎನ್.ರಾಜಣ್ಣನವರು ಕಾರಣ ಎಂಬುದನ್ನೇ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಅವರ ಪುತ್ರ ಜೆಡಿಎಸ್ ವರಿಷ್ಟ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರುವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನದಿಂದಲೂ ಸಾರ್ವಜನಿಕ ಪ್ರಚಾರ ಸಭೆಗಳು ಹಾಗೂ ಸುದ್ದಿಗೋಷ್ಟಿಗಳಲ್ಲಿ ಆಪಾದಿಸುತ್ತಾ, ತಮ್ಮನ್ನು ಸೋಲಿಸಿದವರನ್ನು ಸೋಲಿಸಿ ಎಂದು ಕರೆ ನೀಡುತ್ತಲೇ ಬಂದರಾದರೂ, ಅವರು ಅಭ್ಯರ್ಥಿ ಆಯ್ಕೆಯಲ್ಲೇ ಎಡವಿದರು ಎಂಬುದು ಈ ದಿನದ ಫಲಿತಾಂಶ ಪ್ರತಿಫಲಿಸಿತು.
ರಾಜ್ಯ ಮತ್ತು ಕೇಂದ್ರಗಳಲ್ಲೂ ಅಧಿಕಾರದಲ್ಲಿರುವ ಬಿಜೆಪಿಗೆ ಸ್ಥಳೀಯ ರಾಜಕಾರಣದಲ್ಲಿ ಹತ್ತಾರು ವರ್ಷಗಳಿಂದ ಗುರುತಿಸಿಕೊಂಡಿರುವ ಯಾರೂ ಅಭ್ಯರ್ಥಿಗಳಾಗಲು ಮುಂದೆ ಬಾರದ ಕಾರಣದಿಂದ ಕಡೇ ಗಳಿಗೆಯಲ್ಲಿ ಬೆಂಗಳೂರಿನಿAದ ಪುಸಲಾಯಿಸಿ ಕರೆ ತಂದ ಎನ್.ಲೋಕೇಶ್‌ಗೌಡರು ಕೆಲವೇ ದಿನಗಳಲ್ಲಿ ಇಷ್ಟು ದೊಡ್ಡ ಮೊತ್ತದ ಮತಗಳನ್ನು ಗಳಿಸಿ ಎರಡನೇ ಸ್ಥಾನಕ್ಕೇರಿದ್ದೇ ದೊಡ್ಡ ಸಾಧನೆ ಎನ್ನಬೇಕು. ಬಿಜೆಪಿಯ ಐವರು ಶಾಸಕರು, ಇಬ್ಬರು ಸಂಸದರು, ಇಬ್ಬರು ಸಚಿವರು, ಒಬ್ಬರು ಕೇಂದ್ರ ಸಚಿವರು ಹಾಗೂ ಇಬ್ಬರು ವಿಧಾನ ಪರಿಷತ್ ಸದಸ್ಯರ ಪರಿಶ್ರಮ ಇಷ್ಟು ದೊಡ್ಡ ಪ್ರಮಾಣದ ಓಟು ಗಳಿಕೆಗೆ ನೆರವಾಗಿರಬಹುದು.
ಆದರೂ ಬಿಜೆಪಿಯ ಎರಡನೇ ಪ್ರಾಶಸ್ತö್ಯದ ಹೆಚ್ಚು ಮತಗಳು ಕಾಂಗ್ರೆಸ್‌ನ ರಾಜೇಂದ್ರ ಅವರಿಗೆ ಬಿದ್ದಿರುವುದನ್ನು ಗಮನಿಸಿದರೆ, ಲೋಕಸಭಾ ಚುನಾವಣೆಯ ಗೆಲುವಿನ ಋಣ ಪರಿಹಾರ ಹಾಗೂ ಪಕ್ಷದೊಳಗಿನ ಭಿನ್ನಮತ ಕೆಲಸ ಮಾಡಿವೆ ಎಂದೂ ಹೇಳಬಹುದು.
ಯಾವ ಅಭ್ಯರ್ಥಿಗೆ ಎಷ್ಟು ಮತ
ಚಲಾವಣೆಯಾದ ಒಟ್ಟು ಮತ: 5547
ಅನೂರ್ಜಿತಗೊಂಡ ಮತ: 227
ಊರ್ಜಿತಗೊಂಡ ಒಟ್ಟು ಮತ: 5320
ಗೆಲುವಿಗೆ ಅಗತ್ಯವಿದ್ದ ಮತಗಳು: 2661
ಪ್ರಥಮ ಹಾಗೂ ದ್ವಿತೀಯ ಪ್ರಾಶಸ್ತö್ಯದ ಮತಗಳೂ ಸೇರಿ ಮೂರು ಪ್ರಮುಖ ಅಭ್ಯರ್ಥಿಗಳು ಗಳಿಸಿದ ಮತಗಳು
ಆರ್.ರಾಜೇಂದ್ರ (ಕಾಂಗ್ರೆಸ್)- 3135-ಗೆಲುವು
ಎನ್.ಲೋಕೇಶ್‌ಗೌಡ (ಬಿಜೆಪಿ)- 2050
ಆರ್.ಅನಿಲ್‌ಕುಮಾರ್ (ಜೆಡಿಎಸ್)-1298