ಹಳ್ಳಿ ಹೈದನ ನೂರೆಂಟು ನೆನಪು ಸಿ.ಚಿಕ್ಕಣ್ಣಐಎಎಸ್(ವಿ) 'ಧರೆಯ ಮೇಲೆ ಎಲ್ಲೇಇರೆ, ಮರೆಯಲಾರೆ ಮಧುಗಿರಿ'

ಹಳ್ಳಿ ಹೈದನ ನೂರೆಂಟು ನೆನಪು ಸಿ.ಚಿಕ್ಕಣ್ಣಐಎಎಸ್(ವಿ) 'ಧರೆಯ ಮೇಲೆ ಎಲ್ಲೇಇರೆ, ಮರೆಯಲಾರೆ ಮಧುಗಿರಿ'

ಹಳ್ಳಿ ಹೈದನ ನೂರೆಂಟು ನೆನಪು   ಸಿ.ಚಿಕ್ಕಣ್ಣಐಎಎಸ್(ವಿ) 'ಧರೆಯ ಮೇಲೆ ಎಲ್ಲೇಇರೆ, ಮರೆಯಲಾರೆ ಮಧುಗಿರಿ'


ಮಧುಗಿರಿ ಪಟ್ಟಣದ ನೈರುತ್ಯ ಭಾಗಕ್ಕೆ ನಮ್ಮಕಣ್ಣಿಗೆ ಢಾಳಾಗಿ ಬೃಹದಾಕಾರವಾಗಿಕಾಣುವುದೇ ಏಕಶಿಲಾ ಬೆಟ್ಟ, ಏಷ್ಯಾಖಂಡದಲ್ಲೇಅತಿಎತ್ತರವಾದ, ಒಂದೇ ಬಂಡೆಯಿAದರಚನೆಯಾದ ಬೆಟ್ಟವೆಂಬ ಖ್ಯಾತಿಇದಕ್ಕಿದ್ದು, ಇದರತಪ್ಪಲಲ್ಲಿ ರಾಜಾಚಿಕ್ಕಪ್ಪಗೌಡರು ಕಟ್ಟಿಸಿದ ಕೋಟೆ ಕೊತ್ತಲಗಳು ಈಗಲೂ ಇವೆ. ಬೆಟ್ಟದ ಮೇಲೆ ತುಪ್ಪದ ಕೊಳ, ಸಣ್ಣ ಪುಟ್ಟ ದೇವಸ್ಥಾನಗಳು ಇದ್ದುಇದನ್ನು ಹತ್ತಲುಕಲ್ಲಿನಲ್ಲಿಕೆತ್ತಿ ವಿಂಗಡಿಸಿದ ಮೆಟ್ಟಿಲುಗಳನ್ನು ನಿರ್ಮಿಸಿದ್ದು, ಬೆಟ್ಟದತುದಿಯಿಂದ ಮಧುಗಿರಿ ಪಟ್ಟಣವನ್ನು ನೋಡಿದರೆಎದೆಜಲ್ ಎನಿಸುತ್ತದೆ.   


ಹಳ್ಳಿ ಹೈದನ
ನೂರೆಂಟು ನೆನಪು


ಸಿ.ಚಿಕ್ಕಣ್ಣಐಎಎಸ್(ವಿ)
'ಧರೆಯ ಮೇಲೆ ಎಲ್ಲೇಇರೆ, ಮರೆಯಲಾರೆ ಮಧುಗಿರಿ'


    'ಧರೆಯ ಮೇಲೆ ಎಲ್ಲೇಇರೆ, ಮರೆಯಲಾರೆ ಮಧುಗಿರಿ' ಎಂಬ ಉಪಮೆಯನ್ನು ಬಹಳ ಜನ ಹೇಳುತ್ತಾರೆ. ಮಧುಗಿರಿಯಖ್ಯಾತಛಾಯಾಗ್ರಾಹಕರೂಚಿತ್ರಕಲಾಕಾರರೂಆದ ಮಧುಗಿರಿರಾಮುಅವರು ಮಧುಗಿರಿಯ ಏಕಶಿಲಾ ಬೆಟ್ಟವನ್ನು ಮೈಸೂರುಅರಮನೆಯಉತ್ತರ ಭಾಗದ ಪ್ರವೇಶದ್ವಾರದಲ್ಲಿಕಣ್ಣಿಗೆಕಟ್ಟುವಂತೆ ಚಿತ್ರಿಸಿದ್ದಾರೆ. ಅರಮನೆಗೆ ಬರುವ ಲಕ್ಷಾಂತರ ಮಂದಿ ಇದನ್ನು ನೋಡಿಕಣ್ತುಂಬಿಕೊಂಡಂತೆ ನಾನೂ ಸಹ ಮೈಸೂರಿನ ಮಾನಸಗಂಗೋತ್ರಿಯಲ್ಲಿ ಎಂಕಾA ವಿದ್ಯಾರ್ಥಿಯಾಗಿ ಈ ಭವ್ಯಚಿತ್ರವನ್ನುಅದರ ಕೆಳಗಡೆ ಬರೆದಿದ್ದಉಪಮೆಯನ್ನು ಓದಿ ಮೈನವಿರೇಳಿಸಿಕೊಂಡದ್ದು ಇಂದಿಗೂ ನನ್ನ ಸ್ಮೃತಿಪಟಲದಲ್ಲಿ ಅಚ್ಚಳಿಯದಂತೆ ನಿಂತಿದೆ.

 
      ಮಧುಗಿರಿಯುಏಷ್ಯಾಖಂಡದ ಏಕೈಕ ಏಕಶಿಲಾ ಬೆಟ್ಟ ಹೊಂದಿದ್ದು, ಅತಿ ಭವ್ಯವಾದ ಸಾಂಸ್ಕೃತಿಕ ಪರಂಪರೆಯುಳ್ಳ ಐತಿಹಾಸಿಕ ಪಟ್ಟಣ. ಇಲ್ಲಿನ ಎರಡು ಕಣ್ಣುಗಳಂತಿರುವ ಮಲ್ಲೇಶ್ವರಸ್ವಾಮಿದೇವಸ್ಥಾನ, ಶ್ರೀ ವೆಂಕಟರಮಣಸ್ವಾಮಿದೇವಸ್ಥಾನ, ಬೆಟ್ಟದ ಮೇಲಿನ ಅರಮನೆ, ಕಲ್ಯಾಣಿ, ದೊಣೆ, ಕೋಟೆ ಕೊತ್ತಲಗಳನ್ನು ನೊಳಂಬ ವಂಶಸ್ಥರಾದರಾಜಾಇಮ್ಮಡಿಚಿಕ್ಕಪ್ಪಗೌಡರು ಕಟ್ಟಿಸಿದರೆಂದು ಪ್ರತೀತಿಇದೆ. ಪುರವರದ ಹತ್ತಿರ ಹರಿಯುವಜಯಮಂಗಲಿ ನದಿಯ ಪಕ್ಕದಲ್ಲಿ ನಿರ್ಮಿತವಾಗಿದ್ದ ಮುಮ್ಮಡಿ ಪಟ್ಟಣವನ್ನುತೊರೆದು ಬಿಜ್ಜವರಕ್ಕೆ ಬಂದುಅಲ್ಲಿಅರಮನೆಯನ್ನು ನಿರ್ಮಿಸಿ ಅದನ್ನೇರಾಜಧಾನಿಯಾಗಿ ಮಾಡಿಕೊಂಡು, ಆಳ್ವಿಕೆ ಮಾಡಿ ಮಧುಗಿರಿಯ ಎರಡು ದೇವಸ್ಥಾನಗಳು, ಬಿಜ್ಜವರದದೊಡ್ಡಕೆರೆ ನಿರ್ಮಿಸಿದರೆಂದು, ಇವರ ಆಳ್ವಿಕೆಯ ಕಾಲ, ವಿಜಯನಗರದಅರಸರ ಕಾಲಕ್ಕೆ ಹೋಲಿಕೆಯಾಗಿದ್ದು, ರಾಜ್ಯಭಾರವುಉಚ್ಛಾçಯ ಸ್ಥಿತಿಯಲ್ಲಿತ್ತು. ಇಮ್ಮಡಿಚಿಕ್ಕಪ್ಪಗೌಡರ ಮರಣಾನಂತರ ಮಧುಗಿರಿ ಸಂಸ್ಥಾನದ ಪಾಳೆಯಗಾರರಾಗಿ ಮುಮ್ಮಡಿಚಿಕ್ಕಪ್ಪಗೌಡರುಅಧಿಕಾರಕ್ಕೆ ಬಂದರು. ಅವರುಆಧ್ಯಾತ್ಮಿಕ ಸಾಧನೆ, ಸಾಮಾಜಿಕಚಿಂತನೆ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಸಂವೇದನೆಗಳಿAದ ಗುರುತಿಸಿಕೊಂಡವರು, ಬಿಜ್ಜವರದಿಂದರಾಜಧಾನಿಯನ್ನು ಮಧುಗಿರಿಯ ಬೆಟ್ಟದ ಮಧ್ಯದಲ್ಲಿ ನಿರ್ಮಿಸಲಾಗಿದ್ದಅರಮನೆಗೆ 1646ರಲ್ಲಿ ಸ್ಥಳಾಂತರಿಸಲಾಯಿತು. ಇವರ ಆಡಳಿತಕ್ಕೆ ಮಧುಗಿರಿ ಪಾಳೆಪಟ್ಟು ಚನ್ನರಾಯನದುರ್ಗ, ಮಿಡಿಗೇಶಿ ಪಾಳೆಯಗಳೂ ಸೇರಿದ್ದವು. 


     ಮುಮ್ಮಡಿಚಿಕ್ಕಪ್ಪಗೌಡರ ಆಳ್ವಿಕೆಯಲ್ಲಿ ಮಧುಗಿರಿ ಬೆಟ್ಟದ ನೆಲಮಟ್ಟದಿಂದಕೋಟೆಯವರೆಗೂಕಲ್ಲು ಮತ್ತು ಗಾರೆಗಳಿಂದ ಭದ್ರವಾದಕೋಟೆ ನಿರ್ಮಿಸಿ, ಅರಮನೆಯವರೆಗೂ ಆನೆ, ಕುದುರೆ, ಸೇನಾ ಪದಾತಿಗಳು ಸುಲಭವಾಗಿ ಹತ್ತಲು ಮೆಟ್ಟಿಲುಗಳನ್ನು ನಿರ್ಮಾಣ ಮಾಡಿದ್ದರಲ್ಲದೆ, ಬೆಟ್ಟದ ಮೇಲೆ ಅದರ ಅಂದಿನ ರಾಜವಂಶದವರು ಕಟ್ಟಿಸಿದ್ದ ದೊಣೆಗಳನ್ನು ಶುಚಿಗೊಳಿಸಿ, ಹೂಳನ್ನು ತೆಗೆಸಿ ಮಳೆಯ ನೀರನ್ನು ಸಂಗ್ರಹಿಸಲು ವ್ಯವಸ್ಥೆ ಮಾಡಿದರು. ನೆಲಕೋಟೆಯಿಂದತುದಿಯವರೆಗೂ ಬಾಗಿಲುಗಳು, ಕೋಟೆ ಗೋಡೆಗಳು ನಿರ್ಮಾಣವಾಗಿ ಅಂದಿನ ಮಧುಗಿರಿಯನ್ನು ಸುತ್ತುವರಿದಿದ್ದವುಎಂದು ದಾಖಲೆಗಳಿಂದ ತಿಳಿದುಬರುತ್ತದೆ. 


ಇಂತಹ ಮಧುಗಿರಿಯು, ತುಮಕೂರುಜಿಲ್ಲಾ ಕೇಂದ್ರದಿಂದ ಉತ್ತರ ಭಾಗಕ್ಕೆ 35 ಕಿಮೀ ಅಂತರದಲ್ಲಿದ್ದುಕAದಾಯಇಲಾಖೆಯ ಆಡಳಿತದ ಉಪ ವಿಭಾಗವಾಗಿ ಬ್ರಿಟಿಷರ ಕಾಲದಿಂದಲೂ ಪ್ರಸಿದ್ಧಿ ಪಡೆದಿದೆ. ಈ ಉಪ ವಿಭಾಗದ ಸಹಾಯಕಆಯುಕ್ತರಾಗಿ ಅನೇಕ ಖ್ಯಾತನಾಮರೂ ಸೇವೆ ಸಲ್ಲಿಸಿದ್ದಾರೆ. ಆಗ ತಾನೇ ಸರ್ಕಾರಿ ಹುದ್ದೆಗೆ ಸೇರಿದ ಪ್ರೊಬೇಷನರಿಐಎಎಸ್ ಅಧಿಕಾರಿಗಳಿಗೂ ತಮ್ಮ ಸೇವಾ ಕಾಲದಎಲ್ಲಾ ಮಜಲುಗಳಲ್ಲಿ ತರಬೇತಿಯನ್ನು ನೀಡಿ, ಅಲ್ಲಿನ ಜನಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮಟ್ಟದಅಧ್ಯಯನಕ್ಕೆ ಹೇಳಿ ಮಾಡಿಸಿದಂತಹ ಜಾಗ, 


ಇಲ್ಲಿ ಕೆಲಸ ಮಾಡಿದ ಅನೇಕ ಐಎಎಸ್ ಅಧಿಕಾರಿಗಳು ಅಂತಿಮವಾಗಿರಾಜ್ಯದ ಮುಖ್ಯ ಕಾರ್ಯದರ್ಶಿಗಳಾಗಿ ನಿವೃತ್ತಿ ಹೊಂದಿದರು ಎಂಬುದು ಅತಿಶಯೋಕ್ತಿಯೇನಲ್ಲ. ಲೇಖಕರಾದ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶ್ರೀ ಮಾಸ್ತಿ ವೆಂಕಟೇಶಐಯ್ಯAಗಾರ್‌ರವರು, ಮಧುಗಿರಿ ಉಪವಿಭಾಗದ ಸಹಾಯಕಆಯುಕ್ತರಾಗಿ ಸುಮಾರು ಮೂರು ವರ್ಷ ಆಡಳಿತ ನಡೆಸಿದರು ಹಾಗೂ ಹಿಂದಿನ ಪಾಳೆಗಾರರು ಕಟ್ಟಿಸಿದ್ದ ಕಲ್ಯಾಣಿಗಳು ಕಾಲಕ್ರಮೇಣ ಹೂತುಹೋಗಿದ್ದು, ಅವುಗಳನ್ನು ಸ್ವಚ್ಛಗೊಳಿಸಿ ಜನರಉಪಯೋಗಕ್ಕಾಗಿ ಸಜ್ಜುಗೊಳಿಸಿದರೆಂದು ನಾನು ಕೇಳಿದ್ದೇನೆ. ಅಲ್ಲದೆ, 'ಮದ್ಭಗಿರಿ' ಎಂದು ಹೆಸರನ್ನು ಹೊಂದಿದ್ದ ಈ ಊರಿಗೆ 'ಮಧುಗಿರಿ' ಎಂದು ನಾಮಕರಣ ಮಾಡಿ ಸರ್ಕಾರದಗೆಜೆಟ್ಟಿನಲ್ಲಿ ಪ್ರಕಟಿಸಲುಇವರೇ ಮೂಲಕಾರಣಎಂದೂ ನಾನು ತಿಳಿದಿದ್ದೇನೆ. 
ಇಂತಹ ಮಧುಗಿರಿ ಉಪವಿಭಾಗಕ್ಕೆ ಮಧುಗಿರಿ, ಶಿರಾ, ಕೊರಟಗೆರೆ ಮತ್ತು ಪಾವಗಡ ತಾಲ್ಲೂಕುಗಳು ಸೇರಿದ್ದು, ಬ್ರಿಟಿಷರ ಕಾಲದಿಂದಲೂ ಈ ನಾಲ್ಕೂ ತಾಲ್ಲೂಕುಗಳಿಗೆ ಇದ್ದದ್ದುಒಂದೇಒAದು ಪ್ರೌಢಶಾಲೆಎಂದರೆ ನಾನು ಓದಿದ ಸರ್ಕಾರಿ ಪ್ರೌಢಶಾಲೆ, ಅಲ್ಲದೆ ನಾಲ್ಕು ತಾಲ್ಲೂಕುಗಳಿಗೂ ಮಧುಗಿರಿಯಲ್ಲಿ ಮುನ್ಸೀಫ್ ಮತ್ತು ಮ್ಯಾಜಿಸ್ಟೆçÃಟ್ ನ್ಯಾಯಾಲಯಗಳು ಇದ್ದು, ಶೈಕ್ಷಣಿಕಕಾರಣಕ್ಕೆ, ನ್ಯಾಯದಾನಕ್ಕೆಜನ ಬರುತ್ತಿದ್ದರು. ವ್ಯಾಪಾರೋದ್ಯಮದಕೇಂದ್ರ ಬಿಂದುವಾಗಿ ಸಹ ಮಧುಗಿರಿ ಪ್ರಖ್ಯಾತವಾಗಿತ್ತು, ನಾಡಿನೆಲ್ಲೆಡೆ ಹೆಸರು ಮಾಡಿತ್ತು. 

    ಮಧುಗಿರಿ ಪಟ್ಟಣದ ನೈರುತ್ಯ ಭಾಗಕ್ಕೆ ನಮ್ಮಕಣ್ಣಿಗೆ ಢಾಳಾಗಿ ಬೃಹದಾಕಾರವಾಗಿಕಾಣುವುದೇ ಏಕಶಿಲಾ ಬೆಟ್ಟ, ಏಷ್ಯಾಖಂಡದಲ್ಲೇಅತಿಎತ್ತರವಾದ, ಒಂದೇ ಬಂಡೆಯಿAದರಚನೆಯಾದ ಬೆಟ್ಟವೆಂಬ ಖ್ಯಾತಿಇದಕ್ಕಿದ್ದು, ಇದರತಪ್ಪಲಲ್ಲಿ ರಾಜಾಚಿಕ್ಕಪ್ಪಗೌಡರು ಕಟ್ಟಿಸಿದ ಕೋಟೆ ಕೊತ್ತಲಗಳು ಈಗಲೂ ಇವೆ. ಬೆಟ್ಟದ ಮೇಲೆ ತುಪ್ಪದ ಕೊಳ, ಸಣ್ಣ ಪುಟ್ಟ ದೇವಸ್ಥಾನಗಳು ಇದ್ದುಇದನ್ನು ಹತ್ತಲುಕಲ್ಲಿನಲ್ಲಿಕೆತ್ತಿ ವಿಂಗಡಿಸಿದ ಮೆಟ್ಟಿಲುಗಳನ್ನು ನಿರ್ಮಿಸಿದ್ದು, ಬೆಟ್ಟದತುದಿಯಿಂದ ಮಧುಗಿರಿ ಪಟ್ಟಣವನ್ನು ನೋಡಿದರೆಎದೆಜಲ್ ಎನಿಸುತ್ತದೆ. ನಾನು ಓದಿದ ಸರ್ಕಾರಿ ಪ್ರೌಢಶಾಲೆಯುಕಲ್ಲಿನಿಂದ ನಿರ್ಮಾಣ ಮಾಡಿದ್ದು, ಅದಕ್ಕೆ ಕೆಂಪು ಹೆಂಚುಗಳ ಹೊದಿಕೆಯಿಂದಒAದು ಕೆಂಪು ಕಲ್ಯಾಣಿಯಂತೆಕಾಣುತ್ತದೆ. ಸರ್ಕಾರವು ಮನಸ್ಸು ಮಾಡಿದರೆಇದನ್ನುಒಂದು ಸುಂದರ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿ ಈ ಭಾಗದಆರ್ಥಿಕತೆಯ ಬೆಳವಣಿಗೆಗೆ ಸಹಕಾರಿಯಾಗಬಹುದು. 


  ಮಧುಗಿರಿ– ಶಿರಾ ರಸ್ತೆಯನ್ನುರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಿ. ಇಲ್ಲಿಂದಗೌರಿಬಿದನೂರು, ಚಿಕ್ಕಬಳ್ಳಾಪುರ, ಚಿಂತಾಮಣಿ, ಮುಳಬಾಗಿಲು ಮಾರ್ಗವಾಗಿಚೆನ್ನೈಗೆ ಸುಲಭವಾಗಿತಲುಪಲು ವ್ಯವಸ್ಥೆ ಮಾಡಲಾಗುತ್ತಿದ್ದು, ಅದರ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಮಧುಗಿರಿಯ ಪಶ್ಚಿಮಕ್ಕೆ ಸಿರಾ ಮಾರ್ಗದಲ್ಲಿ ಸಿದ್ದಾಪುರ, ದಬ್ಬೆಗಟ್ಟ, ನಂತರದೊಡೇರಿತಲುಪಬೇಕು, ದೊಡ್ಡೇರಿ ಮಧುಗಿರಿತಾಲ್ಲೂಕಿನಆರು ಹೋಬಳಿ ಕೇಂದ್ರಗಳಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಹೋಬಳಿ, ದೊಡ್ಡೇರಿ ಹೋಬಳಿ ಕೇಂದ್ರವಾದರೂಅದಕ್ಕೆತಕ್ಕAತೆಅಲ್ಲಿ ಮೂಲ ಸೌಕರ್ಯಗಳು ಅಭಿವೃದ್ಧಿಯಾಗದೆ ಕೇವಲ ಒಂದುದೊಡ್ಡಊರಿನAತೆ ಭಾಸವಾಗುತ್ತಿದೆ. ಇದರ ನೆರಳಿನಲ್ಲಿಯೇ ಇರುವ ಬಡವನಹಳ್ಳಿ ಒಂದು ಬೆಳವಣಿಗೆಯ ಕೇಂದ್ರ(ಉಡಿoತಿಣh ಅeಟಿಣಡಿe)ವಾಗಿ, ಅಭಿವೃದ್ಧಿಯಾಗಿ, ಹೋಬಳಿಯ ವ್ಯಾಪಾರಕೇಂದ್ರವಾಗಿ ಬೆಳೆಯುತ್ತಿದೆ. ದೊಡ್ಡೇರಿಯನ್ನು ಬಿಟ್ಟು ಮುಂದೆ ಹೋದರೆದಂಡಿನದಿಬ್ಬ ಎಂಬ ಕ್ಯಾಂಪ್  ಮಾದರಿಕಾಣುವಒಂದುಊರು. ಇದಕ್ಕೆದಂಡಿನದಿಬ್ಬ ಎಂದು ಹೆಸರು ಬರಲುಕಾರಣ ಪ್ರತಿ ಬಾರಿ ಹೈದರಾಲಿಯು ಮಧುಗಿರಿಯಿಂದತನ್ನದAಡನ್ನು ಶಿರಾ ಪಟ್ಟಣಕ್ಕೆ ಸಾಗಿಸುವ ಮಧ್ಯದಲ್ಲಿ ಆನೆ, ಕುದುರೆ, ಪದಾತಿ ದಳದವರು, ಸೈನಿಕರು ದಣಿವಾರಿಸಿಕೊಳ್ಳಲು ಒಂದೊAದು ದಿನ ಇಲ್ಲಿತಂಗುತ್ತಿದ್ದು, ವಿಶ್ರಮಿಸಿದ ನಂತರ ಶಿರಾ ಕಡೆಗೆ ಹೊರಡುತ್ತಿದ್ದರೆಂಬುದನ್ನು ನಾನು ಕೇಳಿದ್ದೇನೆ. 'ದಂಡು' ಸರಿ, ಆದರೆ "ದಿಬ್ಬ' ಇದಕ್ಕೆ ಹೇಗೆ ಸೇರಿತುಎನ್ನುವುದಕ್ಕೆ ಪುರಾವೆಇಲ್ಲ. ಏಕೆಂದರೆ, ದೊಡ್ಡೇರಿ (ದೊಡ್ಡ + ಏರಿ) ಯೇದೊಡ್ಡದಿಬ್ಬವಾಗಿದ್ದು, ದಿಬ್ಬ ಇಳಿದ ನಂತರ ಸಮತಟ್ಟಾದಜಾಗದಲ್ಲಿದಂಡಿನ ದಿಬ್ಬ ಇದೆ. ಇಲ್ಲಿ ನಮ್ಮ ಹಿರಿಯರು ಈ ಹಿಂದೆಗುರುದೇವಗ್ರಾಮಾAತರ ಪ್ರೌಢಶಾಲೆಯನ್ನು (1959-60ನೇ ಇಸವಿಯಲ್ಲಿ) ಸ್ಥಾಪಿಸಿ ಈ ಪ್ರದೇಶದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದ್ದರು. ಎಂಕಾA ಪದವಿ ನಂತರಒAದು ವರ್ಷಕಾಲ (1965ರಲ್ಲಿ) ನಾನು ಇದೇ ಶಾಲೆಯಲ್ಲಿಕನ್ನಡ ಮತ್ತುಇಂಗ್ಲಿಷ್ ಭಾಷಾಉಪಾಧ್ಯಾಯನಾಗಿ ಕೆಲಸ ಮಾಡಿಜೀವನದಲ್ಲಿ ಮೊದಲನೇ ಬಾರಿ 'ಸಂಬಳ ತೆಗೆದುಕೊಂಡೆ. ಹೀಗಾಗಿ ಈ ಶಾಲೆಯನ್ನೂ, ದಂಡಿನದಿಬ್ಬ ಊರನ್ನು ನಾನು ಎಂದಿಗೂ ಮರೆಯಲಾಗಿಲ್ಲ. 


ದಂಡಿನದಿಬ್ಬ ಬಿಟ್ಟು ಸ್ವಲ್ಪದೂರ ಬಂದರೆ ನಮಗೆ ಸಿಗುವುದೇ ದೊಡ್ಡಹಳ್ಳ ಇದನ್ನು ಸುವರ್ಣಮುಖಿ ಹಳ್ಳವೆಂದೂ ಕರೆಯುವುದುಂಟು. ಈ ಹಳ್ಳ ಕೊರಟಗೆರೆತಾಲ್ಲೂಕಿನ ಸಿದ್ಧರಬೆಟ್ಟದಲ್ಲಿ ಹುಟ್ಟಿ, ಗೂಬಲಗುಟ್ಟೆ, ಸಿಡದರಗಲ್, ಬಡವನಹಳ್ಳಿ, ತಿಪ್ಪನಹಳ್ಳಿ, ನಾಗೇನಹಳ್ಳಿ, ಬಳೆಹಳ್ಳಿ, ಚಂದ್ರಗಿರಿ, ಜಕ್ಕೇನಹಳ್ಳಿ, ಸಜ್ಜೆ ಹೊಸಹಳ್ಳಿ, ಕಿತ್ತಗಳಿ (ಆಂಧ್ರ ಪ್ರದೇಶದಗಡಿ) ಮೂಲಕ ಆಂಧ್ರದ ಮದೂಡಿಕೆರೆಗೆತಲುಪಿ, ಅಂದಾಜು 40 ರಿಂದ 50 ಕಿಮೀ ಹರಿದು ಕೊನೆಗೊಳ್ಳುತ್ತದೆ. ಈ ಹಳ್ಳ ವರ್ಷದಲ್ಲಿಒಂದು ಬಾರಿತುಂಬಿ ಹರಿದರೆ ವರ್ಷ ಪೂರ್ತಿಇದರಆಜುಬಾಜುಇರುವ ಸುಮಾರು 100 ಹಳ್ಳಿಗಳ ತೆರೆದ ಬಾವಿಗಳಲ್ಲಿ 20 ರಿಂದ 30 ಅಡಿಗೆ ನೀರು ಬಂದುಏತ, ಕಪಿಲೆ ಮುಂತಾದ ಸಾಧನಗಳಿಂದ ನೀರುಣಿಸಿ ರೈತರುಯಾವುದೇಆತಂಕವಿಲ್ಲದೆರಾಗಿ, ಭತ್ತ, ಶೇಂಗಾ ಬೆಳೆಗಳನ್ನೇ ಅಲ್ಲದೆಅಡಿಕೆ, ತೆಂಗು, ವೀಳ್ಯದೆಲೆ ಮುಂತಾದ ವಾಣಿಜ್ಯ ಬೆಳೆಗಳನ್ನು ತೆಗೆದು ಮಾರಿಕೃಷಿಯಲ್ಲಿಅದ್ವಿತೀಯ ಸಾಧನೆಯನ್ನು ಮಾಡಿದ್ದನ್ನು ನನ್ನ ಬಾಲ್ಯದ ದಿನಗಳಲ್ಲಿ ಕಣ್ಣಾರೆಕಂಡಿದ್ದೇನೆ. ಹೀಗಾಗಿ ಈ ಪ್ರದೇಶವನ್ನುಆಗ್ರ (ಆಗರ) ಎಂದುಕರೆಯುತ್ತಿದ್ದುದುರೂಢಿ. ಇದಕ್ಕೆಕಾರಣ ಸೂರ್ಯನ ಕಿರಣಗಳು ನೆಲಕ್ಕೆ ಸೋಕದ ಹಾಗೆ ಬೆಳೆದು ನಿಂತಿದ್ದತೆAಗು, ಅಡಿಕೆ, ಬಾಳೆ, ಮಾವು, ಕಿತ್ತಳೆ, ಚಕ್ಕೋತ ತೋಟಗಳು. ಕಾಲಕಾಲಕ್ಕೆ ಮಳೆ ಬರುತ್ತಿತ್ತು. ದೊಡ್ಡ ಹಳ್ಳ ತುಂಬಿ ಹರೀತ್ತಿತ್ತು. ಬಾವಿಗಳಲ್ಲಿ ಯಥೇಚ್ಛವಾಗಿ ನೀರು ಸಿಗುತ್ತಿತ್ತು. ರೈತಾಪಿ ಜನ ಸ್ವತಃಅಥವಾ ಅಳುಕಾಳುಗಳ ಮೂಲಕ, ಎತ್ತು ದನಗಳ ಸಹಕಾರದಿಂದ, ಕಾಲಕ್ಕೆ ಅನುಗುಣವಾಗಿ ಬೆಳೆ ತೆಗೆದುತಾವೂಉಂಡು, ತಮ್ಮನ್ನು ನಂಬಿದ ಕುಲವಂದಿಗಳಾದ ನಾಯಕರು, ಮಾದಿಗರು, ಮಡಿವಾಳರು, ಕ್ಷೌರಿಕರು, ಆಗಸರು ಮೊದಲಾದವರಿಗೆಕಣದಲ್ಲಿಯೇ ಕಾಳುಕಡಿ ನೀಡಿ, ನೀವು ಬದುಕಿರಿಎಂದು ಹೇಳುತ್ತಿದ್ದ ಸಮೃದ್ಧ ಕಾಲವನ್ನು ನಾನು ನೋಡಿದ್ದೇನೆ; ಸ್ವತಃ ಅನುಭವಿಸಿದ್ದೇನೆ. 


ಇಲ್ಲಿ ಮತ್ತೊಂದು ವಿಶೇಷತೆಯನ್ನು ನಾನು ಹೇಳಲೇಬೇಕು. ನನ್ನಊರು ತಿಪ್ಪನಹಳ್ಳಿಯು ದೊಡ್ಡ ಹಳ್ಳದ ಪಶ್ಚಿಮ ದಂಡೆಯ ಮೇಲಿದೆ. ಇದರ ಪೂರ್ವದಂಡೆಯಲ್ಲಿ ಸುಮಾರು 5 ಕಿಮೀ ದೂರದಒಂದುದೊಡ್ಡತೋಡುಗಾಲುವೆಇದ್ದು, ಇದನ್ನುಯಾರು ಮಾಡಿದರು. ಏಕೆ ಮಾಡಿದರುಎಂದು ನನ್ನತಂದೆಯನ್ನುಒAದು ದಿನ ಕೇಳಿದಾಗ ಇದು 'ಉಬ್ಬುಗಾಲುವೆÀ' (Sಠಿಡಿiಟಿg) ಎಂದು ಹೇಳಿದ್ದರು. ಈ ಉಬ್ಬುಗಾಲುವೆಯಲ್ಲಿ ವರ್ಷದಲ್ಲಿ ಸುಮಾರು 4 ತಿಂಗಳಕಾಲ ಅಂದರೆ ಮಳೆಗಾಲದಲ್ಲಿ ನೀರು ಉಕ್ಕಿ ಹರಿದು, ಗುಟ್ಟೆ, ಪಿಟ್ಟೇನಹಳ್ಳಿಯ ಜನರ ವ್ಯವಸಾಯಕ್ಕೆ ನೀರು ಹರಿಯುವುದನ್ನು ನಾನು ನೋಡಿದ್ದೇನೆ. ಅದರಲ್ಲಿಆಟವನ್ನು ಆಡಿದ್ದೇನೆ. ವಿಷಾದವೇನೆಂದರೆ ನಾನು ದೊಡ್ಡವನಾದ ಮೇಲೆ ಈ ಉಬ್ಬುಗಾಲುವೆಯಲ್ಲಿ ನೀರು ಹರಿದಿದ್ದನ್ನು ನೋಡಿಯೇಇಲ್ಲ!


     ಈ ದೊಡ್ಡಹಳ್ಳದ ಪಶ್ಚಿಮ ದಂಡೆಗೆ ಹೊಂದಿಕೊಂಡಂತಿರುವುದೇ ಬಡವನಹಳ್ಳಿ, ಇಲ್ಲಿ ಈ ಹಿಂದೆ ಹೆಚ್ಚಾಗಿ ಒಕ್ಕಲಿಗರಾದಕುಂಚಿಟಿಗ ಕುಲಸ್ತರ 48 ಬೆಡಗುಗಳಲ್ಲಿ ಬಡವನವರು (ನಮ್ಮದುಅದೇ ಬೆಡಗು) ಹೆಚ್ಚು ವಾಸಿಸುತ್ತಿದ್ದರೆಂಬ ಕಾರಣಕ್ಕೆ ಬಡವನಹಳ್ಳಿ ಎಂಬ ಹೆಸರು ಬಂದಿದೆಎAದುಜನಜನಿತವಾದರೂ, ಈಗಿನ ಕಾಲಕ್ಕೆ ಅಲ್ಲಿ ಬಡವನವರ ಸಂತತಿ ವಿರಳವಾಗಿರುವುದು ಸೋಜಿಗದ ಸಂಗತಿಯಾಗಿದೆ. ಅದೇನಾದರೂಇರಲಿ, ನಾನು ಓದಿದ ಮಾಧ್ಯಮಿಕ ಶಾಲೆ, ಸರ್ಕಾರಿಆಸ್ಪತ್ರೆ, ಪಶು ಆಸ್ಪತ್ರೆ, ದೂರವಾಣಿಕೇಂದ್ರ ಪೊಲೀಸ್‌ಠಾಣೆ ಮುಂತಾದಆಧುನಿಕ ಸೇವೆಗಳನ್ನೊಳಗೊಂಡು, ಬೆಳವಣಿಗೆಯ ಕೇಂದ್ರವಾಗಿ ಈ ಊರು ಬೆಳೆದಿದೆ. ಸುತ್ತಮುತ್ತಲ 100 ಹಳ್ಳಿಗಳವರೆಗೆ ಆವಶ್ಯಕವಾಗಿ ಬೇಕಾದ ಕಚ್ಚಾವಸ್ತುಗಳು, ದಿನಸಿಗಳು, ಔಷಧಿಗಳು, ಮೆಷಿನರಿಗಳು, ಪೈಪು, ಪಂಪ, ಎಲೆಕ್ಟಿಕಲ್ ಸಾಮಾನುಗಳು, ಪೆಟ್ರೋಲ್, ಡೀಸೆಲ್ ಮುಂತಾದ ಪ್ರತಿಯೊಂದು ವಸ್ತುಗಳಿಗೂ ಕೇಂದ್ರ ಸ್ಥಾನವಾಗಿ ಬೆಳೆದಿದೆ.
(ಮುಂದಿನ ‘ಕಿನ್ನರಿ’ಗೆ)

------------------------------------------------------------------------------------------------------

ಹೆಸರು ಮಾತ್ರಚಿಕ್ಕಣ್ಣ-ಗುಣದಲ್ಲಿದೊಡ್ಡಣ್ಣ !
ವಿಶ್ರಾಂತಐ.ಎ.ಎಸ್‌ಅಧಿಕಾರಿ

ಸಿ.ಚಿಕ್ಕಣ್ಣನವರು ನಮ್ಮತುಮಕೂರುಜಿಲ್ಲೆಯವರುಅದರಲ್ಲೂ ಮಧುಗಿರಿಯವರುಎಂಬ ಸಂಗತಿಯೇಒಂದು ವಿಶಿಷ್ಟ ಸಂತಸವನ್ನೀಯುತ್ತದೆ. ‘ ಅಗ್ನಿ ಹಂಸ’ ಶ್ರೀಯುತ ಚಿಕ್ಕಣ್ಣನವರಆತ್ಮಕತೆ. ಹಳ್ಳಿಗಳನ್ನು ಇಂಡಿಯಾದಆತ್ಮಎನ್ನುತ್ತಾರೆ. ಇಂಥ ಹಳ್ಳಿಯಲ್ಲಿ ಬೆಳೆದು, ಪತ್ರಾಂಕಿತಅಧಿಕಾರಿಯಾಗಿ ಸರ್ಕಾರಿ ಸೇವೆ ಪ್ರಾರಂಭಿಸಿ ಭಾರತೀಯ ಆಡಳಿತ ಸೇವೆಯಂಥಉನ್ನತ ಪದವಿ ತಲುಪಿ, ಅತ್ಯಂತದಕ್ಷಎನಿಸಿಕೊAಡರು.


ಅಧಿಕಾರಿಯಾಗಿ ಪರಂಪರಾಗತಚಮ್ಮಾರಿಕೆ ಮಾಡುತ್ತ ಬೀದಿ ಬದಿಯ ಬಿಸಿಲಲ್ಲಿ ಕೂರುತ್ತಿದ್ದಜನಾಂಗಕ್ಕೆ‘ ಲಿಡ್ಕರ್’ ಎಂಬ ಬ್ರಾಂಡ್ ಸೃಷ್ಟಿಸಿ ಸ್ವಾಭಿಮಾನದ ಹಾದಿ ತೋರಿದವರುಇದೇಚಿಕ್ಕಣ್ಣನವರುಎಂದರೆಅಚ್ಚರಿ ಎನಿಸುವುದಿಲ್ಲವೇ.


ವಿಶ್ರಾಂತಜೀವನದಲ್ಲೂ ಮುಂದಿನ ಪೀಳಿಗೆಗೆ ದಾರಿ ದೀಪವಾಗಿರುವಚಿಕ್ಕಣ್ಣನವರುಎಂಬತ್ತರಗಡಿದಾಟಿದ ಸಂದರ್ಭದಲ್ಲಿ ಬಾಲ್ಯದ ನೆನಪುಗಳೆಲ್ಲವನ್ನೂ ಹೃದಯಂಗಮ ಭಾಷೆಯಲ್ಲಿ ಬರೆದು ಸಹೃದಯರ ಮುಂದಿರಿಸಿದ್ದಾರೆ. 


ಆತ್ಮಚರಿತ್ರೆಯ ಮುಖಾಂತರಅತ್ಯAತ ಸೃಜನಶೀಲ ಲೇಖಕರೂ ಎನಿಸಿರುವ ಸಿ. ಚಿಕ್ಕಣ್ಣನವರ‘ ಅಗ್ನಿ ಹಂಸ’ವು ನಿಮ್ಮಅಚ್ಚುಮೆಚ್ಚಿನ ‘ಕಿನ್ನರಿ’ಯಲ್ಲಿಇನ್ನು ಮುಂದೆ ಪ್ರತಿ ವಾರ ನಿಮ್ಮ ಮನಸೂರೆಗೊಳ್ಳಲಿದೆ