ನಿಮ್ಮ ನೆನಪು ಚಿರಸ್ಥಾಯಿ - ನಾ ದಿವಾಕರ ಮೈಸೂರು

ನಿಮ್ಮ ನೆನಪು ಚಿರಸ್ಥಾಯಿ   - ನಾ ದಿವಾಕರ ಮೈಸೂರುನಿಮ್ಮ ನೆನಪು ಚಿರಸ್ಥಾಯಿ


ಚಲಿಸುವ ಮೋಡಗಳು ಚಿತ್ರದ ಕಾಣದಂತೆ ಮಾಯವಾದನೋ ಹಾಡಿನ ಮೂಲಕ ಗಮನ ಸೆಳೆದ ಬಾಲನಟ ಪುನೀತ್ ನಂತರ ಭಾಗ್ಯವಂತ ಚಿತ್ರದಲ್ಲಿ ತಮ್ಮ ನಟನಾ ಕೌಶಲವನ್ನು ನಿರೂಪಿಸಿದ್ದರು. ವಸಂತಗೀತ ಚಿತ್ರದಲ್ಲಿ ಗಮನಾರ್ಹ ಅಭಿನಯ. ಸಾಧಾರಣ ಚಿತ್ರ ಎನ್ನಬಹುದಾದ ಎರಡು ನಕ್ಷತ್ರಗಳು ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸುವ ಮೂಲಕ ತಮ್ಮ ಪ್ರತಿಭೆಯನ್ನು ಮೆರೆದಿದ್ದ ನಟ. ಯಾರಿವನು ಮರೆತುಬಿಡಬಹುದಾದ ಚಿತ್ರ. ಬೆಟ್ಟದ ಹೂವು ಆತನ ಅಭಿನಯದ ಮೇರು ಚಿತ್ರ ಎನ್ನಬಹುದು. ಇನ್ನು ಭಕ್ತಪ್ರಹ್ಲಾದ ಚಿತ್ರದ ಪ್ರಹ್ಲಾದನ ಪಾತ್ರ ಮೆಚ್ಚುವಂತಹುದು. ರಾಜ್ ಎದುರು ಅಷ್ಟೇ ಪರಿಣಾಮಕಾರಿಯಾಗಿ ನಟಿಸುವುದೇ ಒಂದು ಸಾಧನೆ. ಪವರ್ ಸ್ಟಾರ್ ಪುನೀತನಿಗಿಂತಲೂ ಹೃದಯಕ್ಕೆ ಹತ್ತಿರವಾಗುವುದು ಈ ಬಾಲನಟನ ಅದ್ಭುತ ನಟನೆ.
ನಾಯಕ ನಟನಾಗಿ ರಾಜಕುಮಾರ ಒಂದು ಮನೋಜ್ಞ ಅಭಿನಯದ ಚಿತ್ರ. ಪೃಥ್ವಿ ಸಂದೇಶಾತ್ಮಕ ಚಿತ್ರ. 

ಸಾಯುವ ವಯಸ್ಸಂತೂ ಅಲ್ಲ. ಪುನೀತ್ ನೆನಪಾಗಿ ಉಳಿಯುವುದು ಎಂದಿಗೂ ಬಾಲನಟನಾಗಿಯೇ. ಇನ್ನೂ ಸಾಕಷ್ಟು ಕ್ರಮಿಸಬೇಕಿದ್ದ, ಇನ್ನೂ ಹೆಚ್ಚಿನ ಗಂಭೀರ ಪಾತ್ರಗಳನ್ನು ನಿರ್ವಹಿಸುವ ಅಭಿನಯ ಸಾಮರ್ಥ್ಯ ಉಳ್ಳವನಾಗಿದ್ದ, ತಂದೆಯAತೆಯೇ ಸರಳತೆ, ವಿನಯ, ಸಹೃದಯತೆಯನ್ನು ರೂಢಿಸಿಕೊಂಡಿದ್ದ, ಕನ್ನಡ ಚಿತ್ರರಂಗಕ್ಕೆ ಮತ್ತಷ್ಟು ಉತ್ತಮ ಚಿತ್ರಗಳನ್ನು ನೀಡುವ ಕನಸು ಕಟ್ಟಿದ್ದ ಪುನೀತ್ ಇಷ್ಟು ಬೇಗನೆ ನಿರ್ಗಮಿಸಬಾರದಿತ್ತು. ಇದು ಅಕಾಲಿಕ ದುರಂತ. ಹೋಗಿಬನ್ನಿ ಅಪುö್ಪ ನಿಮ್ಮ ನೆನಪು ಚಿರಸ್ಥಾಯಿ.

ನಾ. ದಿವಾಕರ್, ಮೈಸೂರು