ಕೇಂದ್ರದ ಹಿಂದಿ ಭಾಷೆಯ ಹೇರಿಕೆ ವಿರೋಧಿಸಿ ಜೆಡಿಎಸ್ ಪ್ರತಿಭಟನೆ

ಕೇಂದ್ರದ ಹಿಂದಿ ಭಾಷೆಯ ಹೇರಿಕೆ ವಿರೋಧಿಸಿ ಜೆಡಿಎಸ್ ಪ್ರತಿಭಟನೆ

ಕೇಂದ್ರದ ಹಿಂದಿ ಭಾಷೆಯ ಹೇರಿಕೆ ವಿರೋಧಿಸಿ ಜೆಡಿಎಸ್ ಪ್ರತಿಭಟನೆ

ತಿಪಟೂರು : ಕೇಂದ್ರ ಸರ್ಕಾರದಿಂದ ಹಿಂದಿ ದಿವಸ್ ಆಸಚರಣೆಗೆ ಮುಂದಾಗಿರುವುದನ್ನು ಖಂಡಿಸಿ ತಾಲ್ಲೂಕು ಜೆಡಿಎಸ್ ಪಕ್ಷದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ಮಿನಿ ವಿಧಾನಸೌಧದ ಬಳಿಯಲ್ಲಿ ಗುರುವಾರ ತಾಲ್ಲೂಕು ಜೆಡಿಎಸ್ ಘಟಕದ ವತಿಯಿಂದ ಕೇಂದ್ರ ಸರ್ಕಾರದ ವಿರುದ್ಧ ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿ ಪ್ರತಿಭಟನೆ ಮಾಡಿದರು.
ಜೆಡಿಎಸ್ ಕಾರ್ಯಾಧ್ಯಕ್ಷ ಶಿವಸ್ವಾಮಿ ಮಾತನಾಡಿ ಆಯಾ ರಾಜ್ಯಗಳಲ್ಲಿ ಮಾತೃ ಭಾಷೆಗೆ ಮೊದಲಿನ ಪ್ರಾಶಸ್ತ÷್ಯವನ್ನು ನೀಡಬೇಕು. ಆದರೆ ಕೇಂದ್ರವು ಹಿಂದಿಯನ್ನು ಇಡೀ ದೇಶದ ಜನತೆಯ ಮೇಲೆ ಹೇರಲು ಹೊರಟಿರುವ ನಡೆ ಖಂಡನೀಯ. ನಾಡು, ನುಡಿ, ಜಲ, ಭಾಷೆಗೆ ಬಗ್ಗೆ ಆಯಾ ರಾಜ್ಯದ ಜನರ ಸ್ವಾಭಿಮಾನವಾಗಿರುತ್ತದೆ. ಅಂತಹ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ತಿಳಿದಾಗ ಸ್ಥಳೀಯ ಜನರ ಮನಸ್ಸಿನ ಮೇಲೆ ನೋವು ಉಂಟಾಗುತ್ತದೆ. ತಮ್ಮ ರಾಜ್ಯ ಉಗಮಕ್ಕೆ, ಮಾತೃ ಭಾಷೆಯ ಪ್ರಾಶಸ್ತ÷್ಯಕ್ಕಾಗಿ ಸಾವಿರಾರು ಜನರು ಪ್ರಾಣ ಕೊಟ್ಟಿದ್ದಾರೆ. ಇಂತಹ ವಿಚಾರದಲ್ಲಿ ಕೇಂದ್ರ ಸರ್ಕಾರ ಸೆಪ್ಟೆಂಬರ್ ೧೪ ನ್ನು ಹಿಂದಿ ದಿವಸ್ ಆಗಿ ಆಚರಣೆ ಮಾಡಲು ಮುಂದಾಗಿರುವುದು ಹಲವರಿಗೆ ನೋವುಂಟು ಮಾಡಿದೆ ಎಂದರು.
 ಜಿಲ್ಲಾ ಜೆಡಿಎಸ್ ಕಾರ್ಯದರ್ಶಿ ಜಕ್ಕನಹಳ್ಳಿ ಲಿಂಗರಾಜು ಮಾತನಾಡಿ ಮಾತೃಭಾಷೆ ಎಲ್ಲರಿಗೂ ಮುಖ್ಯವಾಗಿರುತ್ತದೆ. ಮಾತೃಭಾಷೆ ಎಂದರೆ ತಾಯಿ ಭಾಷೆ ಇದ್ದಂತೆ ಬಲವಂತವಾಗಿ ಬೇರೆ ಭಾಷೆ ಬಳಕೆ ಮಾಡುವಂತೆ ಒತ್ತಾಯ ಮಾಡುವುದು ಸರಿಯಲ್ಲ. ಕನ್ನಡ ನಾಡು ಶ್ರೀಗಂಧದ ನಾಡು ನಮ್ಮ ಸಂಸ್ಕöÈತಿ ಸುಮಾರು ೨ ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ಇಂಗ್ಲಿಷ್, ಹಿಂದಿ ಪೂರ್ಣ ಪ್ರಮಾಣ ಭಾಷೆ ಅಲ್ಲ. ಭಾರತೀಯ ಭೂಪ್ರದೇಶದ ಮೂಲನಿವಾಸಿಗಳು ಕನ್ನಡಿಗರು, ಕನ್ನಡ ಭಾಷೆ ಎಲ್ಲಾ ಭಾಷೆಗೂ ಮೂಲ ಭಾಷೆಯಾಗಿದೆ. ರಾಷ್ಟಿçÃಕೃತ ಬ್ಯಾಂಕು ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಮಾತನಾಡಲು, ಬರೆಯಲು,  ಬಳಕೆ ಮಾಡುವಂತೆ ಆಗಬೇಕು.  ಅಮ್ಮ ಎನ್ನುವ ಶಬ್ದವನ್ನು ಕಲಿಸಿಕೊಟ್ಟಿದ್ದು ಕನ್ನಡ ಭಾಷೆ ಯಾವುದೇ ರಾಜ್ಯ ಗಳಾಗಲಿ ಆ ರಾಜ್ಯಗಳಲ್ಲಿ ಅಲ್ಲಿನ ಭಾಷೆ ಪ್ರಥಮ ಭಾಷೆಯಾಗಬೇಕು ಎಲ್ಲಾ ಭಾಷೆಯನ್ನು ಪ್ರೀತಿಸೋಣ ಹಿಂದಿ ಭಾಷೆ ಹೇರಿಕೆ ನಿರ್ಧಾರ ಕೇಂದ್ರ ಸರ್ಕಾರ ವಾಪಸ್ ಪಡೆಯಲಿ ಎಂದು ಒತ್ತಾಯಿಸಿದರು .

ಜಿಲ್ಲಾ ಜೆಡಿಎಸ್ ಮುಖಂಡ ಅಂಚೆಕೊಪ್ಪಲು ರಾಮಕೃಷ್ಣ ಮಾತನಾಡಿ ಸಮೃದ್ಧಿಯಾಗಿರುವ ಕನ್ನಡ ಭಾಷೆಯನ್ನು ತುಳಿಯುವ ಸಂಸ್ಕöÈತಿ ಒಳ್ಳೆಯದಲ್ಲ. ನಮ್ಮ ಸಂವಿಧಾನವು ವಿವಿಧತೆಯ ಏಕತೆಯಲ್ಲಿ ರಚನೆಯಾಗಿದೆ ಪರಭಾಷೆ ಹೇರುವ ಕೆಲಸ ಮಾಡಬಾರದು. ಮಾತೃ ಭಾಷೆಗೆ ತನ್ನದೇ ಆದ ಶಕ್ತಿ ಇದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು ಈ ಕೂಡಲೇ ಹಿಂದಿ ಹೇರಿಕೆ ನಿರ್ಧಾರ ವಾಪಸ್ ಪಡೆಯಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಜೆಡಿಎಸ್ ಪಕ್ಷದಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ಪ್ರತಿಭಟನೆಯ ನಂತರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹಿಂದಿ ಭಾಷೆ ಹೇರಿಕೆ ವಾಪಸ್ಸು ಪಡೆಯುವಂತೆ ತಾಲ್ಲೂಕು ಜೆಡಿಎಸ್ ವತಿಯಿಂದ ಮನವಿಯನ್ನು ಶಿರಸ್ತೇದಾರ್ ರವಿಕುಮಾರ್ ಮುಖಾಂತರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ತಾಲ್ಲೂಕು ಜೆಡಿಎಸ್ ಮುಖಂಡ ಹಿಂಡಿಸ್ಕೆರೆ ಶಿವಶಂಕರ್ , ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ರಾಧಮ್ಮ ನಾರಾಯಣಗೌಡ,  ತಾಪಂ ಮಾಜಿ ಸದಸ್ಯ ನಾಗರಾಜು,  ಎಪಿಎಂಸಿ ಮಾಜಿ ಉಪಾಧ್ಯಕ್ಷ ರಮೇಶ್,  ದಸರಿಘಟ್ಟ ಜಯಣ್ಣ, ಯುವ ಮುಖಂಡರಾದ ಚೇತನ್, ರೋಹಿತ್, ಗುರು ಪ್ರಸನ್ನ, ತಿಮ್ಮೇಗೌಡ, ಹಾಲ್ಕುರಿಕೆ ಉಮಾಮಹೇಶ್ ಮತ್ತಿತರರು ಇದ್ದರು.