ಈ ಸರ್ಕಾರಿ ನೌಕರನ ಬಳಿ ಇದ್ದ ಕ್ಯಾಶ್‌ ಕೇವಲ ರೂ.1.70 ಕೋಟಿ!?

ಸಮಾಜ ಕಲ್ಯಾಣ ಸಚಿವ ಮಹದೇವಪ್ಪನವರ ಮಾಜಿ ವಿಶೇಷ ಕರ್ತವ್ಯಾಧಿಕಾರಿ, ಹಾಲಿ ಅವರದೇ ಇಲಾಖೆಯಲ್ಲಿ ಸೂಪರಿಂಟೆಂಡಿಂಗ್ ಇಂಜಿನಿಯರ್‌ ಆಗಿರುವ ಹೆಚ್.ಎಂ. ಜನಾರ್ಧನ ಮನೆಯಲ್ಲಿ ಲೋಕಾಯುಕ್ತರ ಕರೆನ್ಸಿ ಕೌಂಟಿಂಗ್ ಮೆಶಿನ್ ಬಾಯಿಗೆ ಸಿಕ್ಕಿದ್ದು ಕೇವಲ ಒಂದೂ ಮುಕ್ಕಾಲು ಕೋಟಿ ರೂಪಾಯಿ.

ಈ ಸರ್ಕಾರಿ ನೌಕರನ ಬಳಿ ಇದ್ದ ಕ್ಯಾಶ್‌ ಕೇವಲ ರೂ.1.70 ಕೋಟಿ!?

ಹೆಚ್‌.ಎಂ.ಜನಾರ್ಧನ್‌

    ಬೆಂಗಳೂರು:   “ಬಲೆಗಳಿರುವುದು ಮೀನುಗಳನ್ನು ಹಿಡಿಯಲು ಮಾತ್ರ ತಿಮಿಂಗಲಗಳನ್ನಲ್ಲ ಎಂಬ ಮಾತಿದೆ.” ಇವತ್ತು ಕರ್ನಾಟಕ ಲೋಕಾಯುಕ್ತ ಬೀಸಿದ ಬಲೆಗೆ ನಾಲ್ಕು ದೊಡ್ಡ ಮಿಕಗಳೇ ಬಿದ್ದಿವೆ.
    ಲೋಕೋಪಯೋಗಿ ಇಲಾಖೆಯ ಸೂಪರಿಂಟೆಂಡೆಂಟ್ ಇಂಜಿನಿಯರ್ ಹಾಲಿ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್)ದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್.ಎಂ.ಜನಾರ್ಧನ ಮನೆಯಲ್ಲಿ ಹಾಗೂ ಆಪ್ತರ ಮನೆಗಳಲ್ಲಿ ಒಟ್ಟು 6 ಸ್ಥಳಗಳಲ್ಲಿ ಸರ್ಚ್ ನಡೆದಿದ್ದು, ಅಕ್ರಮವಾಗಿ ಬಚ್ಚಿಟ್ಟುಕೊಂಡಿದ್ದ ಒಂದೂ ಮುಕ್ಕಾಲು ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತದ ನಗದು ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಸಿಬ್ಬಂದಿಯ ಕೌಂಟಿಂಗ್ ಮೆಶಿನ್ನಲ್ಲಿ ಎಣಿಕೆಯಾಗಿ ಲೋಕಾಯುಕ್ತರ ಟ್ರಂಕು ಸೇರಿದೆ.
    ಈ ಜನಾರ್ಧನ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪನವರು 2013-18ರಲ್ಲಿ ಲೋಕೋಪಯೋಗಿ ಮಂತ್ರಿಯಾಗಿದ್ದಾಗ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ಎಂಬುದು ನಿಮ್ಮ ಗಮನದಲ್ಲಿರಲಿ. ಈತ ಅವರ ಕುಲಬಾಂಧವ ಕೂಡಾ. ಈತನ ಬಳಿ 3.20 ಕೋಟಿ ಮೊತ್ತ ಸ್ಥಿರಾಸ್ತಿ ಹಾಗೂ 2.57 ಕೋಟಿ ಮೊತ್ತದ ಚರಾಸ್ತಿ ಲೋಕಾಯುಕ್ತರ ಮೇಲ್ನೋಟದ ಲೆಕ್ಕಕ್ಕೆ ಸಿಕ್ಕಿದೆ. ಒಂದು ಸೈಟು, ಮೂರು ವಾಸದ ಮನೆಗಳು, 34 ಎಕರೆ ಕೃಷಿ ಜಮೀನು, ರೂ. 1.70,00,000/- ನಗದು, ರೂ 7,08,262/- ಬೆಲೆ ಬಾಳುವ ಚಿನ್ನಾಭರಣಗಳು, ರೂ 20,00.000/- ಬೆಲೆ ಬಾಳುವ ವಾಹನಗಳು, ರೂ. 60,00,000/- ಬೆಲೆಬಾಳುವ ಇತರೆ ವಸ್ತುಗಳು, ಈತ ಘೋಷಿಸಿಕೊಂಡಿದ್ದಕ್ಕಿಂತ 4.42 ಕೋಟಿ ರೂಪಾಯಿ ಮೊತ್ತದ ಹೆಚ್ಚಿನ ಆಸ್ತಿ ಹೊಂದಿದ್ದಾನೆ. ಈತ ಸರ್ಕಾರಿ ನೌಕರಿಗೆ ಸೇರಿದಾಗಿನಿಂದ ಈವರೆಗೆ ಪಡೆದಿರುವ ಒಟ್ಟು ಸಂಬಳ ಮತ್ತು ಭತ್ಯೆಗಳ ಮೊತ್ತ ರೂ. 1.35 ಕೋಟಿ ಮಾತ್ರ. ಉಳಿದದ್ದೆಲ್ಲ ಅಕ್ರಮ ಸಂಪಾದನೆ.
*
ಸಿಇ ಪುರುಷೋತ್ತಮ್ ದಾಸ್ ಹೆಗ್ಗಡೆ ಅಕ್ರಮ ಆಸ್ತಿ ರೂ 11 ಕೋಟಿ ಮಾತ್ರ !
    ಲೋಕಾಯುಕ್ತ ದಾಳಿಗೆ ಒಳಗಾದ ಮತ್ತೊಬ್ಬ ಅಧಿಕಾರಿ ಕೆಶಿಪ್ ಮುಖ್ಯ ಇಂಜಿನಿಯರ್ ಪುರುಷೋತ್ತಮ ದಾಸ್ ಹೆಗಡೆ, ಇವರ ಬಳಿ ಜನಾರ್ಧನಗಿಂತ ಹೆಚ್ಚಿನ ಮೊತ್ತ ಅಂದರೆ 12.84 ಕೋಟಿ ರೂ. ಅಕ್ರಮ ಆಸ್ತಿ ಪಾಸ್ತಿ ದೊರಕಿದೆ. ಇವರಿಗೆ ಸೇರಿದ 14 ಕಡೆ ಶೋಧನೆ ನಡೆದು, ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 1 ನಿವೇಶನ, 2 ವಾಸದ ಮನೆಗಳು, 2 ಶಿಕ್ಷಣ ಸಂಸ್ಥೆಗಳು, 11 ಎಕರೆ 30 ಗುಂಟೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 11,52,31,255/-, ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 44.23,000/- ನಗದು, ರೂ 60,79,630/- ಬೆಲೆ ಬಾಳುವ ಚಿನ್ನಾಭರಣಗಳು, ರೂ27,00,000/- ನಿಶ್ಚಿತ ಠೇವಣಿ, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 1.32.02.630/- ಲೆಕ್ಕ ಸಿಕ್ಕಿದೆ.
    ನಿವೃತ್ತಿ ಅಂಚಿನಲ್ಲಿರುವ ಹೆಗ್ಗಡೆ ಅವರು ಇಡೀ ಸರ್ಕಾರಿ ನೌಕರಿಯಲ್ಲಿ ಗಳಿಸಿದ ಸಂಬಳ ರೂ.1.55 ಕೋಟಿ ಮಾತ್ರ ಹಾಗಾಗಿ ಇವರ ಅಕ್ರಮ ಸಂಪಾದನೆ ರೂ.11.29 ಕೋಟಿ ಮಾತ್ರ .
*
     ಅರ್ಜುನ್, ಆರ್. ಹೆಚ್. ಎ.ಇ.ಇ (ಸಿವಿಲ್), ಬೆಸ್ಕಾಂ, ದಾವಣಗೆರೆ ಇವರ ಬಳಿ ರೂ.2.49 ಕೋಟಿ ಆಸ್ತಿ ಪತ್ತೆಯಾಗಿದೆ. – ಇದರಲ್ಲಿ 2 ನಿವೇಶನಗಳು, 3 ವಾಸದ ಮನೆಗಳು, 2 ಎಕರೆ 20 ಗುಂಟೆ ಕೃಷಿ ಜಮೀನು. ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 2,17,71,500/- ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 800/- ನಗದು. ರೂ 2,49,100/-ಬೆಲೆ ಬಾಳುವ ಚಿನ್ನಾಭರಣಗಳು, ರೂ 16.20.000/- ಬೆಲೆ ಬಾಳುವ ವಾಹನಗಳು, ರೂ 13,00,000/- ಬೆಲೆ ಬಾಳುವ ಇತರೆ ವಸ್ತುಗಳು-ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 31.69.900/- ಇವರು ಪಡೆದ ಸಂಬಳ ಕೇವಲ 31 ಲಕ್ಷ ಮಾತ್ರ , ಉಳಿದ 2.18 ಕೋಟಿ ರೂ ಕಮಾಯಿ .
*
     ಧಾರವಾಡದ ಸರ್ವೇ ಸೂಪರ್ವೈಸರ್ ಸೋಮಲಿಂಗಪ್ಪ ಫಕೀರಪ್ಪ ಸಿದ್ದನಗೌಡರ್ ಬಳಿ - 3 ನಿವೇಶನಗಳು, 1 ವಾಸದ ಮನೆ. 3 ಎಕರೆ ಕೃಷಿ ಜಮೀನು. ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 2,08,69,000/-ಹಾಗೂ ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 82.840/- ನಗದು, ರೂ 35,41,000/- ໖໖ , 14,90,000/- ໖໖ ವಾಹನಗಳು, ರೂ. 50.00.000/- ಬೆಲೆ ಬಾಳುವ ಇತರೆ ವಸ್ತುಗಳು-ಎಲ್ಲಾ ಸೇರಿ ಒಟ್ಟು 56.13.840/- ಲೆಕ್ಕ ಸಿಕ್ಕಿದೆ. ಈತ ಸೇವಾವಧಿಯಲ್ಲಿ ಪಡೆದಿರುವ ಸಂಬಳ 82 ಲಕ್ಷ ಮಾತ್ರ , ಅಂದರೆ ಈತನ ಬಳಿ ಇರುವ ಹೆಚ್ಚುವರಿ 1.82 ಕೋಟಿ ಭೂಮಿತಾಯಿಯನ್ನು ಅಳೆದು ಸಂಪಾದಿಸಿದ್ದು.