“ ಸಮವಸ್ತ್ರ ಧರಿಸುವ ಸಿಬ್ಬಂದಿಯ ನಡವಳಿಕೆ ಬಹಳ ಮುಖ್ಯ” ಗೃಹ ರಕ್ಷಕರ ತರಬೇತಿ ಶಿಬಿರದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಟಿ.ಜೆ.ಉದೇಶ್  

“ ಸಮವಸ್ತ್ರ ಧರಿಸುವ ಸಿಬ್ಬಂದಿಯ ನಡವಳಿಕೆ ಬಹಳ ಮುಖ್ಯ” ಗೃಹ ರಕ್ಷಕರ ತರಬೇತಿ ಶಿಬಿರದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಟಿ.ಜೆ.ಉದೇಶ್, bevarahani-udesh-district-igp-tumakuru  

“ ಸಮವಸ್ತ್ರ ಧರಿಸುವ ಸಿಬ್ಬಂದಿಯ ನಡವಳಿಕೆ ಬಹಳ ಮುಖ್ಯ”  ಗೃಹ ರಕ್ಷಕರ ತರಬೇತಿ ಶಿಬಿರದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಟಿ.ಜೆ.ಉದೇಶ್   

 

“ ಸಮವಸ್ತ್ರ ಧರಿಸುವ ಸಿಬ್ಬಂದಿಯ ನಡವಳಿಕೆ ಬಹಳ ಮುಖ್ಯ”

ಗೃಹ ರಕ್ಷಕರ ತರಬೇತಿ ಶಿಬಿರದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಟಿ.ಜೆ.ಉದೇಶ್

 

ತುಮಕೂರು: ಸಮಾಜವು ಸಮವಸ್ತçದಲ್ಲಿರುವ ನಮ್ಮ ನಡವಳಿಕೆಗಳನ್ನು  ಸೂಕ್ಷö್ಮವಾಗಿ ಗಮನಿಸುತ್ತದೆ. ಆದ್ದರಿಂದ ಯಾವುದೇ ಇಲಾಖೆಯ ಸಮವಸ್ತçಧಾರಿ ಸಿಬ್ಬಂದಿಗೆ ನಡವಳಿಕೆ  ಎಂಬುದು ಬಹಳ ಮುಖ್ಯ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಟಿ.ಜೆ.ಉದೇಶ್ ಅಭಿಪ್ರಾಯಪಟ್ಟರು.

       ಜಿಲ್ಲಾ ಗೃಹ ರಕ್ಷಕ ದಳವು ಶನಿವಾರ ಸಿದ್ಧಗಂಗಾಮಠದಲ್ಲಿ ನೂತನ ಗೃಹ ರಕ್ಷಕರಿಗೆ ಆಯೋಜಿಸಿದ್ದ 10 ದಿನಗಳ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

      ಪೊಲೀಸ್, ಅಗ್ನಿಶಾಮಕ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ಒಬ್ಬರಿಗೊಬ್ಬರು ಪೂರಕವಾಗಿ ಸಮನ್ವಯದಿಂದ ಕರ್ತವ್ಯ ನಿರ್ವಹಿಸುತ್ತಾರೆ. ಕರ್ತವ್ಯದ ವೇಳೆ ನಾವೆಲ್ಲ ನಮ್ಮ ಸಮವಸ್ತçದ ಶರ್ಟಿನ ತೋಳನ್ನು ಅರ್ಧಕ್ಕೆ ಮಡಚಿರುತ್ತೇವೆ. ಶರ್ಟಿನ ತೋಳನ್ನು ಪೂರ್ತಿ ಬಿಟ್ಟುಕೊಂಡು ಓಡಾಡಬಹುದು ಆದರೆ ನಾವು ಆ ರೀತಿ ಮಾಡುವುದಿಲ್ಲ, ಶರ್ಟಿನ ಅರ್ಧ ತೋಳನ್ನು ಮಡಚುವುದು ನಾವು ಸದಾ ಕಾಲ ಕರ್ತವ್ಯಕ್ಕೆ ಸಿದ್ಧ ಎಂಬುದನ್ನು ಸಂಕೇತಿಸುತ್ತದೆ ಎಂದು ರ‍್ಥೈಸಿದರು.

 ಮುಂದಿನ ದಿನಗಳಲ್ಲಿ ನಿಮ್ಮನ್ನು ವಿವಿಧ ಇಲಾಖೆಗಳಿಗೆ ನಿಯೋಜನೆ ಮಾಡಲಾಗುತ್ತದೆ ಆಗ ನೀವು ಅಲ್ಲಿ ಸಭ್ಯತೆಯಿಂದ ಕರ್ತವ್ಯ ನಿರ್ವಹಿಸಿದರೆ ಈ ತರಬೇತಿಯ ಶ್ರಮ ಸಾರ್ಥಕ ಎಂದು ನೂತನ ಗೃಹ ರಕ್ಷಕರಿಗೆ ಕಿವಿಮಾತು  ಹೇಳಿದರು.

        ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಹಿಮಾನಂದ್ ಮಾತನಾಡಿ, ರಾಗ-ದ್ವೇಷಗಳಿಗೆ ಒಳಗಾಗದೆ ಕಾನೂನು ಬದ್ಧವಾಗಿ ನಿಮ್ಮ ಅಧಿಕಾರ ಚಲಾಯಿಸಿ ಎಂದರು.

ದಳದ ಜಿಲ್ಲಾ ಕಮಾಂಡೆAಟ್ ಆರ್.ಪಾತಣ್ಣ ಮಾತನಾಡಿ, ಮುಂದೆ ನೀವು ಯಾವುದೇ ಇಲಾಖೆಯಲ್ಲಿದ್ದರೂ ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ಗೃಹ ರಕ್ಷಕ ದಳಕ್ಕೆ ಒಳ್ಳೆಯ ಹೆಸರು ತನ್ನಿ ಎಂದರು.

ಅಗ್ನಿ ಶಾಮಕ ದಳ ಠಾಣೆಯ ಅಧಿಕಾರಿ ಅಡವೀಶಪ್ಪ ಪ್ರಶಿಕ್ಷಾಣಾರ್ಥಿಗಳಿಗೆ ಶುಭಕೋರಿದರು. ಪರಮೇಶ್ ಪ್ರರ‍್ಥಿಸಿ, ಜಿ.ಎಲ್.ರಂಗನಾಥ್ ಸ್ವಾಗತಿಸಿದರು. ಸುರೇಶ್ ನಿರೂಪಿಸಿ, ಕ್ಯಾಂಪ್ ಕಮಾಂಡೆAಟ್ ಮಂಜುನಾಥ ಅರಸ್ ವಂದಿಸಿದರು. ಶಿಬಿರದ ಉಸ್ತುವಾರಿಗಳಾದ ಡಿ.ಸಿ.ಪ್ರಕಾಶ್‌ಮೂರ್ತಿ, ಬಿ.ಎಸ್.ಶಿವಪ್ರಸಾದ್, ಪ್ರಕಾಶ್, ಹನುಂತಯ್ಯ, ಶ್ರೀನಿವಾಸ್, ಯತಿರಾಜು ಇದ್ದರು.