ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತನ್ನಿ-ಮುರಳೀಧರ ಹಾಲಪ್ಪ
ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತನ್ನಿ-ಮುರಳೀಧರ ಹಾಲಪ್ಪ
ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತನ್ನಿ-ಮುರಳೀಧರ ಹಾಲಪ್ಪ
ತುಮಕೂರು: ಉನ್ನತ ಶಿಕ್ಷಣಕ್ಕಾಗಿ ತುಮಕೂರು ಜಿಲ್ಲೆಯಿಂದ ಉಕ್ರೇನ್ ದೇಶಕ್ಕೆ ಹೋಗಿರುವ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಸತಿ, ನೀರು ಮತ್ತು ಆಹಾರ ದೊರೆಯದೆ ಸಂಕಷ್ಟಕ್ಕೆ ಸಿಲುಕಿದ್ದು, ಅವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಕರೆತರಬೇಕೆಂದು ಜಿಲ್ಲಾಧಿಕಾರಿಗಳೊಂದಿಗೆ ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಮುರಳೀಧರ ಹಾಲಪ್ಪ ಅವರು ವಿದ್ಯಾರ್ಥಿಗಳ ಪೋಷಕರೊಂದಿಗೆ ತೆರಳಿ ಚರ್ಚೆ ನಡೆಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಸಂಜೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅವರೊಂದಿಗೆ ಮುರಳೀಧರ ಹಾಲಪ್ಪ ಚರ್ಚೆ ನಡೆಸಿ, ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ಜಿಲ್ಲೆಯಿಂದ ಉಕ್ರೇನ್‌ಗೆ ತೆರಳಿದ್ದಾರೆ. ರಷ್ಯಾ ಮತ್ತು ಉಕ್ರೇನ್ ದೇಶಗಳ ಮಧ್ಯೆ ನಡೆಯುತ್ತಿರುವ ಯುದ್ಧದಿಂದ ವಿದ್ಯಾರ್ಥಿಗಳು ಆತಂಕದಲ್ಲಿದ್ದು, ತಾಯ್ನಾಡಿಗೆ ವಾಪಸ್ಸಾಗಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಜಿಲ್ಲಾಡಳಿತ ವಿದ್ಯಾರ್ಥಿಗಳ ಪೋಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅವರಿಗೆ ಆತ್ಮಸ್ಥೆöÊರ್ಯ, ದೈರ್ಯ ತುಂಬುವ ಕೆಲಸ ಮಾಡಬೇಕು, ಉಕ್ರೇನಿನ ನೆರೆರಾಷ್ಟçಗಳಾದ ರೊಮೇನಿಯಾ, ಸ್ಲೋವಾಕಿಯಾ, ಹಂಗೇರಿ, ಪೋಲ್ಯಾಂಡ್ ರಾಷ್ಟçಗಳ ರಾಯಭಾರಿ ಕಚೇರಿಗಳೊಂದಿಗೆ ಸಂಪರ್ಕ ಸಾಧಿಸುವುದರ ಜೊತೆಗೆ, ಭಾರತೀಯರಿರುವ ಧೂತವಾಸ ಕಚೇರಿಗಳೊಂದಿಗೆ ಸಂಪರ್ಕದಲ್ಲಿದ್ದು ಅತ್ಯಂತ ಸಂಕಷ್ಟ ಮತ್ತು ಗಾಬರಿಯಲ್ಲಿರುವ ವಿದ್ಯಾರ್ಥಿಗಳನ್ನು ರೈಲು, ವಿಮಾನಗಳ ಮೂಲಕ ಸ್ಥಳಾಂತರ ಮಾಡಲು ಹೆಚ್ಚು ಆದ್ಯತೆ ನೀಡಬೇಕು ಎಂದರು.
ಜಿಲ್ಲೆಯ ವತಿಯಿಂದ ನೋಡಲ್ ಅಧಿಕಾರಿಯನ್ನು ನೇಮಿಸಿ ವಿದ್ಯಾರ್ಥಿಗಳ ಪೋಷಕರೊಂದಿಗೆ ಹಾಗೂ ಕೇಂದ್ರ ಸರ್ಕಾರದ ವಿದೇಶಾಂಗ ಸಚಿವಾಲಯದ ಜೊತೆಗೆ ಸಂಪರ್ಕದಲ್ಲಿರಲು ವ್ಯವಸ್ಥೆ ಕಲ್ಪಿಸಿಕೊಡಬೇಕು. ಬಹುತೇಕ ಮಂದಿ ಪೋಷಕರು ಸಾಲ ಮಾಡಿ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಕಳುಹಿಸಿದ್ದು, ವಿದ್ಯಾರ್ಥಿಗಳು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ಸಾಗಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಿಗೆ ಮುಂದಿನ ವಿಧ್ಯಾಭ್ಯಾಸದ ಭವಿಷ್ಯಕ್ಕಾಗಿ ಸರ್ಕಾರವು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು ಎಂದು ಹೇಳಿದರು.
ಈ ವೇಳೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಮಾತನಾಡಿ, ಉಕ್ರೇನ್‌ನಲ್ಲಿರುವ ತುಮಕೂರು ಜಿಲ್ಲೆಯ ಸುಮಾರು 27ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಜಿಲ್ಲಾಡಳಿತ ಸರ್ಕಾರದೊಂದಿಗೆ ನಿರಂತರ ಸಂಪರ್ಕಿದಲ್ಲಿದ್ದು, ಪೋಷಕರು ಯಾವುದೇ ರೀತಿ ಆತಂಕಕ್ಕೊಳಗಾಗಬೇಡಿ ಎಂದು ಆತ್ಮಸ್ಥೆöÊರ್ಯ ತುಂಬಿದರು.
ಯುದ್ಧದ ಕಷ್ಟಕಾಲದಲ್ಲಿ ಜಿಲ್ಲಾಡಳಿತ ನಿಮ್ಮ ಜೊತೆ ಸದಾ ಇರುತ್ತದೆ. ನಾವೂ ಸಹ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಲೇ ಇದ್ದೇವೆ, ಮಾನಸಿಕವಾಗಿ ನಿಮ್ಮ ಜೊತೆ ನಾವಿದ್ದೇವೆ. ಸರ್ಕಾರದ ಕೊಂಡಿಯಾಗಿ ದಿನದ 24 ಗಂಟೆಗಳ ಕಾಲವೂ ಮಾಹಿತಿ ಪಡೆಯುತ್ತಿದ್ದು, ನೋಡಲ್ ಅಧಿಕಾರಿಯನ್ನೂ ಸಹ ನೇಮಿಸಿದ್ದು, ಜೊತೆಗೆ ಉಪವಿಬಾಗಾಧಿಕಾರಿಗಳೂ ಸಹ ಸಂಪರ್ಕದಲ್ಲಿರುತ್ತಾರೆ ಎಂದು ತಿಳಿಸಿದರು.
ಉಕ್ರೇನ್‌ನಲ್ಲಿ ಎಂಬಿಬಿಎಸ್ ಓದುತ್ತಿರುವ ಪಾವಗಡ ತಾಲ್ಲೂಕು ಕೆಂಚಗಾನಹಳ್ಳಿಯ ವಿದ್ಯಾರ್ಥಿನಿ ಪವಿತ್ರ ಅವರ ತಂದೆ ನರಸಿಂಹ ಮಾತನಾಡಿ, ನನ್ನ ಮಗಳು ಉಕ್ರೇನ್‌ನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ಓದುತ್ತಿದ್ದು, ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದಿಂದ ಊಟ, ವಸತಿ, ನೀರು ಸಹ ಇಲ್ಲದೆ ಪರದಾಡುತ್ತಿದ್ದು, ಆತಂಕದಲ್ಲಿದ್ದಾರೆ, ತ್ವರಿತವಾಗಿ ಜಿಲ್ಲೆಗೆ ವಾಪಸ್ ಕರೆತರುವಂತೆ ಮನವಿ ಮಾಡಿದರು.
ಇದೇ ರೀತಿ ಪಾವಗಡ ತಾಲ್ಲೂಕು ಅಚ್ಚಮ್ಮನಹಳ್ಳಿಯ ಕೊಂಡನ್ನ ಅವರ ಮಗಳು ಅಮೃತ, ಮಧುಗಿರಿಯ ಪ್ರದೀಪ್‌ಕುಮಾರ್ ಅವರ ಮಗ ರವಿತೇಜ, ಗುಬ್ಬಿ ತಾಲ್ಲೂಕು ಕಾಳೇನಹಳ್ಳಿಯ ಗಿರೀಶ್ ಅವರ ಮಗ ಸಂಪತ್ ಕುಮಾರ್, ಶಿರಾ ತಾಲ್ಲೂಕು ಬರಗೂರಿನ ಲತೀಫ್ ಸಾಬ್ ಅವರ ಮಗ ಹರ್ಷದ್, ತುಮಕೂರಿನ ತಿಪ್ಪೇಸ್ವಾಮಿ ಅವರ ಮಗ ರುದ್ರೇಶ್, ರಾಮಲಿಂಗಾರೆಡ್ಡಿ ಅವರ ಮಗ ಗಣೇಶ್, ಸುರೇಶ್‌ಕುಲಕರ್ಣಿ ಅವರ ಮಗ ಸಂಜಯ್ ಕುಲಕರ್ಣಿ, ಸಿದ್ಧಗಂಗಯ್ಯ ಅವರ ಮಗ ಸಿದ್ಧರಾಮೇಶ್ವರ ಅವರೂ ಸಹ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ತಮ್ಮ ಮಕ್ಕಳನ್ನು ಉಕ್ರೇನ್‌ನಿಂದ ವಾಪಸ್ ಕರೆತರಬೇಕೆಂದು ಮನವಿ ಮಾಡಿದರು.
ಮುಖಂಡರಾದ ಮಂಜುನಾಥ್, ರೋಟರಿ ತುಮಕೂರು ಅಧ್ಯಕ್ಷ ಬಸವರಾಜ್ ಹಿರೇಮಠ್, ನಿವೃತ್ತ ಪ್ರಾಂಶುಪಾಲ ಎಂ.ಕೆ.ವೀರಯ್ಯ, ರೇವಣಸಿದ್ಧಯ್ಯ, ವೇಣುಗೋಪಾಲ್, ಬಿ.ವಿ.ದೇವರಾಜ್, ನಟರಾಜ್, ಕೃಷ್ಣಮೂರ್ತಿ ಸೇರಿದಂತೆ ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.
ಪೋಷಕರಾದ
(ಪವಿತ್ರ ತಂದೆ ಕೆಂಚಗಾನಹಳ್ಳಿ ನರಸಿಂಹ ಮೊ. 9480784044)
(ಅಮೃತ ತಂದೆ ಕೊಂಡನ್ನ ಮೊ.9900751321)
(ರವಿತೇಜ ತಂದೆ ಪ್ರದೀಪ್ ಕುಮಾರ್ ಮೊ. 9986689001)
(ಸಂಪತ್‌ಕುಮಾರ್ ತಂದೆ ತಿಮ್ಮೇಗೌಡ ಮೊ.8660746197) ಇವರನ್ನು ಸಂಪರ್ಕಿಸಬಹುದು.