ಟೆಂಡರಿನಲ್ಲಿ ಜನಪ್ರತಿನಿಧಿಗಳು, ರಾಜಕಾರಣಿಗಳ ಶಾಮೀಲು: ಗುತ್ತಿಗೆದಾರರಿಗೆ ಸಮಸ್ಯೆ: ಗುತ್ತಿಗೆದಾರರ ಸಂಘ ಆರೋಪ

contactors-problems-politics-in-tender

ಟೆಂಡರಿನಲ್ಲಿ ಜನಪ್ರತಿನಿಧಿಗಳು, ರಾಜಕಾರಣಿಗಳ ಶಾಮೀಲು: ಗುತ್ತಿಗೆದಾರರಿಗೆ ಸಮಸ್ಯೆ: ಗುತ್ತಿಗೆದಾರರ ಸಂಘ ಆರೋಪ


ಟೆಂಡರಿನಲ್ಲಿ ಜನಪ್ರತಿನಿಧಿಗಳು, ರಾಜಕಾರಣಿಗಳ ಶಾಮೀಲು:
ಗುತ್ತಿಗೆದಾರರಿಗೆ ಸಮಸ್ಯೆ: ಗುತ್ತಿಗೆದಾರರ ಸಂಘ ಆರೋಪ


ತುಮಕೂರು: ಜನಪ್ರತಿನಿಧಿಗಳು, ರಾಜಕಾರಣಿಗಳು, ಟೆಂಡರ್ ಕಾಮಗಾರಿಗಳಲ್ಲಿ ಶಾಮೀಲಾಗುತ್ತಿರುವುದರಿಂದ ಗುತ್ತಿದಾರರು ಸಮಸ್ಯೆಗೆ ಸಿಲುಕಿದ್ದಾರೆ ಎಂದು ತುಮಕೂರು ತಾಲ್ಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ವೈ.ಆರ್. ವೇಣುಗೋಪಾಲ್ ಅಸಮಾಧಾನ ವ್ಯಕ್ತಪಡಿಸಿದರು.


ತುಮಕೂರು ಜಿಲ್ಲಾ ಗುತ್ತಿಗೆದಾರರ ವಿವಿಧೋದ್ದೇಶ ಸೌಹಾರ್ಧ ಸಹಕಾರಿ ಮಂಡಳಿಯಲ್ಲಿ ನಡೆದ ಗುತ್ತಿಗೆದಾರರ ಸಭೆಯಲ್ಲಿ ಮಾತನಾಡಿದ ಅವರು, ರಾಜಕಾರಣಿ ಮತ್ತು ಜನಪ್ರತಿನಿಧಿಗಳು ಇಂತವರಿಗೆ ಟೆಂಡರ್ ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡುತ್ತಿದ್ದು, ಅಧಿಕಾರಿಗಳು ರಾಜಕಾರಣಿಗಳ ಮಾತಿಗೆ ಮನ್ನಣೆ ನೀಡಿ ನಿಯಮಗಳನ್ನು ಉಲ್ಲಂಘಿಸಿ ಟೆಂಡರ್ ನೀಡುತ್ತಿದ್ದಾರೆ ಎಂದು ದೂರಿದರು.


ಲೋಕೋಪಯೋಗಿ ಇಲಾಖೆ ತುಮಕೂರು ವಿಭಾಗದಲ್ಲಿ ನಡೆದಿರುವ ಕಾಮಗಾರಿಗಳು ಮತ್ತು ಟೆಂಡರ್‌ಗಳ ಬಗ್ಗೆ ಲೋಕಾಯುಕ್ತ ತನಿಖೆ ನಡೆಸುತ್ತಿದ್ದು, ರಾಜಕಾರಣಿಗಳು ತಪ್ಪಿಗೆ ಸಿಕ್ಕಿಕೊಳ್ಳುವುದಿಲ್ಲ, ಅವರ ಮಾತಿಗೆ ಮನ್ನಣೆ ನೀಡಿ ಅಧಿಕಾರಿಗಳು ಜೈಲಿಗೆ ಹೋಗುತ್ತಿದ್ದಾರೆ, ಭ್ರಷ್ಟಾಚಾರಕ್ಕೆ ಜನಪ್ರತಿನಿಧಿಗಳೇ ಕುಮ್ಮಕ್ಕು ನೀಡುತ್ತಿರುವುದರಿಂದ ಶೇ. 40ಕ್ಕೆ ಹೋಗಿದೆ ಎಂದರು.


ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲು ಸ್ಥಳೀಯರಿಗೆ ಅವಕಾಶ ನೀಡಲಿಲ್ಲ, ಜನಪ್ರತಿನಿಧಿಗಳನ್ನು ಕೇಳಿದರೆ ನಮ್ಮ ನೆರವಿಗೆ ಬರಲಿಲ್ಲ, ಬೇರೆಯವರ ಅಡಿಯಲ್ಲಿ ನೋಂದಾಯಿತ ಗುತ್ತಿಗೆದಾರರು ಉಪಗುತ್ತಿಗೆ ಪಡೆದು ಕೆಲಸ ಮಾಡಿಕೊಂಡು ಜೀವನ ನಡೆಸಬೇಕಿದೆ, ಉತ್ತಮ ಕೆಲಸಕ್ಕೆ ಅವಕಾಶ ನೀಡಲಿಲ್ಲ, ಗುತ್ತಿಗೆದಾರರು ಒಗ್ಗಟ್ಟಾದರೆ ಮಾತ್ರ ಕೆಲಸ ಮಾಡಲು ಸಾಧ್ಯ ಎಂದರು.


ಅಧಿಕಾರಿಗಳ ಮೇಲೆ ರಾಜಕಾರಣಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ, ಹೋರಾಟ ಮತ್ತು ಸಂಘಟನೆ ಮಾಡದೇ ಹೋದರೆ ಗುತ್ತಿಗೆದಾರರ ವೃತ್ತಿ ನಿರ್ವಹಿಸಲು ಸಾಧ್ಯವಿಲ್ಲ, ಶೇ. 40ರಷ್ಟು ಕಮೀಷನ್‌ಗೆ ಪರಿಹಾರ ಸಿಗದೇ ಇದ್ದರೆ ಕುಟುಂಬದೊAದಿಗೆ ಪ್ರತಿಭಟನೆಗೆ ನಡೆಸಬೇಕಿರುವುದು ಅನಿವಾರ್ಯವಾಗಿದ್ದು, ಜಿಲ್ಲೆಯಿಂದ 10 ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಬೇಕು ಎಂದು ಹೇಳಿದರು.


ಟೆಂಡರ್‌ಗಳಲ್ಲಿ ಶಾಸಕರು, ಸಂಸದರ ಮಧ್ಯ ಪ್ರವೇಶ ನಿಲ್ಲಬೇಕು, ದೌರ್ಜನ್ಯಯುತವಾಗಿ ಟೆಂಡರ್ ಅಂತಿಮ ಪದ್ಧತಿ ಕೊನೆಗಾಣಿಸಬೇಕು, ಶ್ರೇಣಿಕೃತವಾಗಿ ಅನುದಾನ ನೀಡಬೇಕು ಹಾಗೂ ಸಾವನ್ನಪ್ಪಿದ ಗುತ್ತಿಗೆದಾರರಿಗೆ ನೀಡುತ್ತಿದ್ದ ಸಿಬಿಎಫ್ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.


ಕಾಮಗಾರಿಗಳಲ್ಲಿ ಶೇ. 40ರಷ್ಟು ಮೀರಿ ಭ್ರಷ್ಟಾಚಾರ ನಡೆಯುತ್ತಿರುವುದು ಸತ್ಯ, ಹೀಗೆ ಮುಂದುವರೆದರೆ ಗುತ್ತಿಗೆದಾರರು ಜೀವನ ನಡೆಸುವುದು ಕಷ್ಟ, ಗುತ್ತಿಗೆದಾರರ ಮೇಲೆ ವಿಧಿಸಿರುವ ಶೇ. 17ರಷ್ಟು ಜಿಎಸ್‌ಟಿ ಕಟ್ಟುವುದನ್ನು ಹಿಂಪಡೆಯಬೇಕು, ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ಸ್ಥಳೀಯ ಗುತ್ತಿಗೆದಾರರಿಗೆ ಆದ್ಯತೆ ನೀಡಬೇಕು, ಸರ್ಕಾರವೇ ಕಾಮಗಾರಿಗೆ ಕನಿಷ್ಠ ಮೊತ್ತ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.


ಕೆಆರ್ ಐಡಿಎಲ್, ನಿರ್ಮಿತಿ ಸೇರಿದಂತೆ ಸರ್ಕಾರಿ ಸಂಸ್ಥೆಗಳಲ್ಲಿ ಪ್ಯಾಕೇಜ್ ನೀಡುವ ಮೂಲಕ ಭ್ರಷ್ಟಾಚಾರಕ್ಕೆ ಅವಕಾಶ ನೀಡುತ್ತಿದ್ದು, ಇಪಿಎಫ್ ಗುತ್ತಿಗೆದಾರರಿಗೆ ಅನ್ವಯಿಸದೇ ಇದ್ದರೂ ಭದ್ರಾ ಮೇಲ್ದಂಡೆಯಲ್ಲಿ ಇಪಿಎಫ್ ಕೇಳುತ್ತಿರುವುದು ಸರಿಯಲ್ಲ ಇಂತಹ ಪದ್ಧತಿಯನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.


ಸಭೆಯಲ್ಲಿ ಗುತ್ತಿಗೆದಾರರಾದ ಟಿ.ಎಲ್. ಅಶೋಕ್, ರಘುನಂದನ್. ಆರ್.ಸಿ., ನಾರಾಯಣಪ್ಪ, ನಿರಂಜನ, ರವೀಶಯ್ಯ, ಪ್ರಸಾದ್, ಕೋದಂಡರಾಮು, ಬಸವರಾಜು ಸೇರಿದಂತೆ ಇತರರಿದ್ದರು.


``ನಿವೃತ್ತ ಎಂಜನಿಯರ್, ಸೂಪರಿಡೆಂಟ್ ಎಂಜನಿಯರ್ ಮಕ್ಕಳು ನೊಂದಾಯಿಸಿಕೊAಡು ಕಪ್ಪುಹಣವನ್ನು ವೈಟ್ ಮನಿ ಮಾಡಿಕೊಳ್ಳುವುದಕ್ಕೆ ಶೇ. 35ರಷ್ಟು ಕಡಿಮೆ ಹಣಕ್ಕೆ ಕಾಮಗಾರಿ ಮಾಡುತ್ತಿದ್ದಾರೆ, ಜನಪ್ರತಿನಿಧಿಗಳು ಸಹ ಇಂತಹವರಿಗೆ ನೆರವಾಗಿದ್ದಾರೆ, ಲೋಕಾಯುಕ್ತ, ಎಸಿಬಿ ಸಂಸ್ಥೆಗಳು ನಿವೃತ್ತ ಅಧಿಕಾರಿಗಳ ಮೇಲೆಯೂ ನಿಗಾವಹಿಸಬೇಕು, ಅಂತಹ ಗುತ್ತಿಗೆದಾರರನ್ನು ಕಚೇರಿಗೆ ಬಿಟ್ಟುಕೊಳ್ಳಬಾರದು’’
- ಗುತ್ತಿಗೆದಾರರು

ಬೇಕಾದೋರಿಗೆ ಟೆಂಡರ್ ನೀಡೋಕೆ ನಿಯಮ!
ಬೇಕಾದವರಿಗೆ ಟೆಂಡರ್ ನೀಡಲು ಬೇಕಾಬಿಟ್ಟಿ ನಿಯಮಗಳನ್ನು ರೂಪಿಸಲಾಗುತ್ತಿದೆ, ಲೈನ್ ಆಫ್ ಕ್ರೆಡಿಟ್ ತೆಗೆಯಬೇಕು, ಸಿಮಿಲರ್ ನೇಚರ್ ಆಫ್ ವರ್ಕ್ ಎನ್ನುವುದು ಮೂರ್ಖತನ, ಒಂದು ಬಾರಿ ಕಾಮಗಾರಿ ನಿರ್ವಹಿಸಿದ ಅನುಭವವನ್ನು ಮುಂದಿನ ವರ್ಷಕ್ಕೆ ನೆರವಿಗೆ ಬರುವುದಿಲ್ಲ ಎನ್ನುವಂತಹ ಅವೈಜ್ಞಾನಿಕ ನಿಯಮಗಳನ್ನು ಜಾರಿಗೆ ತಂದಿದ್ದು, ಇಂತಹ ನಿಯಮಗಳನ್ನು ನಿಲ್ಲಿಸಬೇಕು ಎಂದು ಗುತ್ತಿಗೆದಾರ ವೆಂಕಟಗಿರಿಯಪ್ಪ ಆಗ್ರಹಿಸಿದರು.