ವನಮಹೋತ್ಸವಕ್ಕೆ ಶ್ರೀಸಿದ್ದಲಿಂಗಸ್ವಾಮೀಜಿ ಚಾಲನೆ

ವನಮಹೋತ್ಸವಕ್ಕೆ ಶ್ರೀಸಿದ್ದಲಿಂಗಸ್ವಾಮೀಜಿ ಚಾಲನೆ

ವನಮಹೋತ್ಸವಕ್ಕೆ ಶ್ರೀಸಿದ್ದಲಿಂಗಸ್ವಾಮೀಜಿ ಚಾಲನೆ


ತುಮಕೂರು:ಕ್ಯಾತ್ಸಂದ್ರದ ಶ್ರೀಆಭಯಾಂಜನೇಯಸ್ವಾಮಿ ಯುವಕ ಸಂಘ ಹಾಗೂ ಕ್ಯಾತ್ಸಂದ್ರ ನಾಗರಿಕರ ಯುವ ವೇದಿಕೆ ವತಿಯಿಂದ,ಅರಣ್ಯ ಇಲಾಖೆಯ ಸಹಕಾರದೊಂದಿಗೆ ಗುಂಡ್ಲಮ್ಮ ದೇವಾಲಯದ ಆವರಣದಲ್ಲಿ ಏರ್ಪಡಿಸಿದ್ದ ಗಿಡ ನೆಡುವ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಸಿದ್ದಗಂಗಾ ಮಠಾಧ್ಯಕ್ಷ  ಶ್ರೀಸಿದ್ದಲಿಂಗಸ್ವಾಮೀಜಿ ಚಾಲನೆ ನೀಡಿದರು.
ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಹವಾಮಾನ ವೈಪರೀತ್ಯ, ಪ್ರಕೃತಿ ವಿಕೋಪಗಳನ್ನು ತಡೆಯಲು ಇರುವ ಏಕೈಕ ಮಾರ್ಗವೆಂದರೆ ಹಸಿರು ಪ್ರದೇಶವನ್ನು ಹೆಚ್ಚಿಸುವುದು.ಈ ನಿಟ್ಟಿನಲ್ಲಿ ಕ್ಯಾತ್ಸಂದ್ರದ ಅಭಯಾಂಜನೇಯಸ್ವಾಮಿ ಯುವಕ ಸಂಘ ಹಾಗೂ ಕ್ಯಾತ್ಸಂದ್ರ ನಾಗರಿಕ ವೇದಿಕೆಯವರು ಧನಿಯಕುಮಾರ್ ನೇತೃತ್ವದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ.ಇದೊಂದು ಘನ ಕಾರ್ಯ, ಪ್ರಕೃತಿ ಉಳಿದರೆ ಮಾತ್ರ ಮನುಷ್ಯ ಉಳಿಯಲು ಸಾಧ್ಯ.ಹಾಗಾಗಿ ಪ್ರಕೃತಿಯನ್ನು ಉಳಿಸುವ ಈ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಿದ್ದಾರೆ. ಅವರೆಲ್ಲರಿಗೂ ಒಳ್ಳೆಯದಾಗಲಿ,ಪ್ರಕೃತಿಯಲ್ಲಿನ ಗಾಳಿ,ಬೆಳಕು,ನೀರು ಇವುಗಳು ಕಲುಷಿತವಾಗದಂತೆ ತಡೆಯಲು ವನಮಹೋತ್ಸವ ಅತ್ಯಂತ ಸೂಕ್ತ ಎಂದರು.
ಹಿರಿಯ ಸಾಹಿತಿ ಡಾ.ಕವಿತಾ ಕೃಷ್ಣ ಮಾತನಾಡಿ,ಅಭಯಾಂಜನೇಯಸ್ವಾಮಿ ಯುವಕರ ಸಂಘ ಹಸಿರು ಪರಿಸರ ಹೆಚ್ಚಿಸುವ ಕೆಲಸಕ್ಕೆ ಮುಂದಾಗಿರುವುದು ಒಳ್ಳೆಯ ಕೆಲಸ.ಕೇವಲ ಗಿಡ ನೆಟ್ಟರೆ ಸಾಲದು, ಅದನ್ನು ಪೋಷಿಸಿ, ಬೆಳೆಸಬೇಕಿದೆ. ಹಸಿರನ್ನು ಉಸಿರಾಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸಬೇಕಿದೆ ಎಂದರು. 
ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಧನಿಯಕುಮಾರ್,ಕ್ಯಾತ್ಸಂದ್ರ ಯುವಕರು ಒಗ್ಗೂಡಿ ಇಡೀ ಊರನ್ನೇ ಹಸಿರಾಗಿಸಲು ಹೊರಟಿದ್ದಾರೆ. ಇದಕ್ಕೆ ನಮ್ಮೆಲ್ಲರ ಸಹಕಾರವಿದೆ ಎಂದರು.
ಭ್ರಷ್ಟಾಚಾರ ನಿಮೂರ್ಲನಾ ವೇದಿಕೆ, ಮಾನವ ಹಕ್ಕು ಸಂರಕ್ಷಣಾ ವೇದಿಕೆ ಸದಸ್ಯರು ಹಾಗೂ ರೈತ ಸಂಘದ ಅಧ್ಯಕ್ಷ  ಪರುಶುರಾಮ್,ಅಭಯಾಂಜನೇಯಸ್ವಾಮಿ ಯುವಕರ ಸಂಘದ ವಿಠಲ್, ಮಲ್ಲಸಂದ್ರ ಶಿವಣ್ಣ,ಅರವಿಂದ್, ಅಶೋಕ್, ಪಟೇಲ್ ಉಮೇಶ್, ಲೋಕೇಶ್, ತಿಲಕ್ ಇದ್ದರು.