ಬಿಜೆಪಿ ಅಪಪ್ರಚಾರದ ವಿರುದ್ಧ ಕಾಂಗ್ರೆಸ್ ರ‍್ಯಾಲಿ ರಾಜ್ಯವ್ಯಾಪಿ ಆಂದೋಲನಕ್ಕೆ ನ.21ರಂದು ನಗರದಲ್ಲಿ ಚಾಲನೆ

ಬಿಜೆಪಿ ಅಪಪ್ರಚಾರದ ವಿರುದ್ಧ ಕಾಂಗ್ರೆಸ್ ರ‍್ಯಾಲಿ   ರಾಜ್ಯವ್ಯಾಪಿ ಆಂದೋಲನಕ್ಕೆ ನ.21ರಂದು ನಗರದಲ್ಲಿ ಚಾಲನೆ


ಬಿಜೆಪಿ ಅಪಪ್ರಚಾರದ ವಿರುದ್ಧ ಕಾಂಗ್ರೆಸ್ ರ‍್ಯಾಲಿ


ರಾಜ್ಯವ್ಯಾಪಿ ಆಂದೋಲನಕ್ಕೆ ನ.21ರಂದು ನಗರದಲ್ಲಿ ಚಾಲನೆ
 
ತುಮಕೂರು: ಸ್ವಾತಂತ್ರಾö್ಯನಂತರದಿಂದ ಈವರೆಗಿನ 75 ವರ್ಷಗಳ ಸುದೀರ್ಘ ಅವಧಿಗೆ ಆಳ್ವಿಕೆ ನಡೆಸಿದ ಕಾಂಗ್ರೆಸ್ ದೇಶವನ್ನು ಅಭಿವೃದ್ಧಿಪಡಿಸಿಲ್ಲವೆಂದು ಆಡಳಿತಾರೂಢ ಬಿಜೆಪಿ ರಾಜ್ಯ ಮತ್ತು ದೇಶದಾದ್ಯಂತ ಮಾಡುತ್ತಿರುವ ಅಪಪ್ರಚಾರವನ್ನು ಖಂಡಿಸಿ, ಜನತೆಗೆ ಸತ್ಯಾಂಶವನ್ನು ತಿಳಿಸಲು ಪ್ರದೇಶ ಕಾಂಗ್ರೆಸ್ ಇಡೀ ರಾಜ್ಯದಲ್ಲಿ ಪ್ರಚಾರೋಂದಲನ ಹಮ್ಮಿಕೊಂಡಿದೆ. ಉದ್ದೇಶಿತ ಪ್ರಚಾರೋಂದಲನದ ಮೊದಲ ಕಾರ್ಯಕ್ರಮಕ್ಕೆ ಇದೇ ನವೆಂಬರ್ 21ರ ಭಾನುವಾರ ತುಮಕೂರು ನಗರದಲ್ಲಿ ಬೃಹತ್ ಕಾಲ್ನಡಿಗೆ ಜಾಥಾ ಹಾಗೂ ಬಹಿರಂಗ ಸಮಾವೇಶದ ಮೂಲಕ ಚಾಲನೆ ನೀಡಲಾಗುವುದು ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ ಪ್ರಕಟಿಸಿದ್ದಾರೆ.


ನಗರದ ಎಸ್‌ಎಸ್‌ಐಟಿ ಕಾಲೇಜಿನ ಅವರ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಮುಖಂಡರ ಉಪಸ್ಥಿತಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನ.21ರಂದು ಬೆಳಿಗ್ಗೆ 11.00ಗಂಟೆಗೆ ಪುರಭವನ(ಬಿಜಿಎಸ್) ವೃತ್ತದಿಂದ ಆರಂಭವಾಗುವ ಕಾಲ್ನಡಿಗೆ ಜಾಥಾ, ಅಮಾನಿಕೆರೆ ಅಂಗಳದಲ್ಲಿರುವ ಗಾಜಿನ ಮನೆಯಲ್ಲಿ ಸಮಾವೇಶಗೊಳ್ಳಲಿದೆ ಎಂದರು.


ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಯಮ್ಮ, ಪಕ್ಷದ ಹಿರಿಯ ನಾಯಕರಾದ ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ, ಕೆ.ಹೆಚ್.ಮುನಿಯಪ್ಪ ಸೇರಿ ಹಲವಾರು ಹಿರಿಯ ನಾಯಕರು ಭಾಗವಹಿಸುವರು ಎಂದು ಪರಮೇಶ್ವರ ತಿಳಿಸಿದರು.


ವಿಧಾನ ಪರಿಷತ್ ಚುನಾವಣಾ ನೀತಿ ಸಂಹಿತೆ ಈ ರಾಜಕೀಯ ಸಮಾರಂಭಕ್ಕೆ ಅನ್ವಯಿಸುವುದಿಲ್ಲ ಎಂದ ಅವರು ಆದಾಗ್ಯೂ ಜಿಲ್ಲಾಧಿಕಾರಿಗಳ ಅನುಮತಿ ಪಡೆಯಲಾಗುವುದು, ಸುಮಾರು 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸಮಾವೇಶಗೊಳ್ಳಲಿದ್ದಾರೆ ಎಂದರು.


ಬೆAಗಳೂರಿನಲ್ಲಿ ಇತ್ತೀಚೆಗೆ ನಡೆದ ವಿಭಾಗೀಯ ಸಭೆಯಲ್ಲಿ ಚರ್ಚಿಸಿದಂತೆ ಪಕ್ಷದ ಸದಸ್ಯತ್ವ ಅಭಿಯಾನ ಹಾಗೂ ಬಿಜೆಪಿಯ ಅಪಪ್ರಚಾರದ ವಿರುದ್ಧ ಆಂದೋಲನ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ, ಕಾಂಗ್ರೆಸ್‌ನ ಧ್ಯೇಯಗಳನ್ನು ಒಪ್ಪಿ ಬರುವ ಯಾರೇ ಆದರೂ ಐದು ರೂಪಾಯಿ ಸದಸ್ಯತ್ವ ಶುಲ್ಕ ಪಾವತಿಸಿ ಸದಸ್ಯತ್ವ ಪಡೆಯಬಹುದು ಎಂದು ತಿಳಿಸಿದರು.


ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾಗೂ ಪಕ್ಷದ ತುಮಕೂರು ಜಿಲ್ಲಾ ಉಸ್ತುವಾರಿ ಸಲೀಂ ಅಹಮದ್ ಹಾಗೂ ಮಾಜಿ ಶಾಸಕರಾದ ಕೆ.ಎನ್.ರಾಜಣ್ಣನವರು ಸುದ್ದಿಗೋಷ್ಟಿ ಅಂತ್ಯಗೊಳ್ಳುವ ಸಮಯಕ್ಕೆ ಆಗಮಿಸಿ,ನಂತರದ ಎಲ್ಲ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡರು.


ಹಾಜರಿದ್ದ ಪ್ರಮುಖರು


ಮಾಜಿ ಸಚಿವ ಟಿ.ಬಿ.ಜಯಚಂದ್ರ, ತಿಪಟೂರು ಮಾಜಿ ಶಾಸಕ ಷಡಕ್ಷರಿ, ಗುಬ್ಬಿಯ ಮುಖಂಡ ಹೊನ್ನಗಿರಿಗೌಡರು, ಮಾಜಿ ಶಾಸಕರಾದ ಷಫಿ ಅಹ್ಮದ್, ಡಾ.ಎಸ್.ರಫೀಕ್ ಅಹ್ಮದ್, ಪಾವಗಡ ಜಿಲ್ಲಾ ಪಂಚಾಯಿತಿ ಸದಸ್ಯ ವೆಂಕಟೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ಕಾರ್ಯಾಧ್ಯಕ್ಷ ಸಾಸಲು ಸತೀಶ್, ಮುಖಂಡರಾದ ಮುರಳೀಧರ ಹಾಲಪ್ಪ,  ಸಿ.ಬಿ.ಶಶಿಧರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆಮಠ್. 

ಪರಿಷತ್ ಅಭ್ಯರ್ಥಿ: ಹೈಕಮಾಂಡ್ ನಿರ್ಧಾರಕ್ಕೆ


ಸ್ಥಳೀಯ ಸಂಸ್ಥೆಗಳಿAದ ವಿಧಾನ ಪರಿಷತ್‌ಗೆ ಘೋಷಣೆಯಾಗಿರುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯನ್ನು ಹೈಕಮಾಂಡ್ ನಿರ್ಧರಿಸಲಿದ್ದು, ಪಕ್ಷ ಘೋಷಿಸುವ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು  ಮಾಜಿ ಉಪ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಡಾ.ಜಿ.ಪರಮೇಶ್ವರ ಸ್ಪಷ್ಟಪಡಿಸಿದರು.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಜಿಲ್ಲೆಯಿಂದ 1) ಯಲಚವಾಡಿ ನಾಗರಾಜು, 2) ಇಮ್ತಿಯಾಜ್ ಅಹಮದ್, 3) ಕೆಂಚಮಾರಯ್ಯ, 4) ಆರ್.ರಾಜೇಂದ್ರ ಹಾಗೂ 5) ಆರ್.ನಾರಾಯಣ್ ಈ ಐವರು ವಿಧಾನಪರಿಷತ್‌ಗೆ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಹೈಕಮಾಂಡ್ ಯಾರನ್ನು ಆಯ್ಕೆ ಮಾಡಿದರೂ ಅವರ ಗೆಲುವಿಗಾಗಿ ಪಕ್ಷದ ಪರವಾಗಿ ಶ್ರಮಿಸುತ್ತೇವೆ ಎಂದರು.


ಜಿಲ್ಲೆಯಲ್ಲಿ ಪಕ್ಷಕ್ಕೆ ಗೆಲ್ಲುವ ಅವಕಾಶವಿದೆ, ಹೆಚ್ಚು ಜನರ ಪ್ರೀತಿ, ವಿಶ್ವಾಸ ಗಳಿಸುವ ಹಾಗೂ ಇತರ ಪಕ್ಷದ ಓಟುಗಳನ್ನೂ ಗಳಿಸುವ ಸಾಧ್ಯತೆ ಇರುವವರನ್ನು ಸಾಮಾನ್ಯವಾಗಿ ಪಕ್ಷ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಿದೆ ಎಂದು ಅವರು ವಿವರಿಸಿದರು.


ಸೆ.2022ರಲ್ಲಿ ಎಐಸಿಸಿ ಅಧ್ಯಕ್ಷರ ಆಯ್ಕೆ:


ಸದಸ್ಯತ್ವ ಆಂದೋಲನ: ಡಾ. ಜಿ.ಪರಮೇಶ್ವರ
 
ತುಮಕೂರು: ಮುಂದಿನ ಸೆಪ್ಟೆಂಬರ್ 2022ರಲ್ಲಿ ಕಾಂಗ್ರೆಸ್ ರಾಷ್ಟಿçÃಯ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದ್ದು ಅದಕ್ಕಾಗಿ ಗ್ರಾಮ, ಹೋಬಳಿ, ತಾಲೂಕು, ಜಿಲ್ಲಾ ಹಾಗೂ ರಾಜ್ಯ ಸಮಿತಿಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕಾಗಿದೆ, ಅದರ ಸಲುವಾಗಿ ಸದಸ್ಯತ್ವ ಆಂದೋಲನ ಪ್ರಾರಂಭಿಸಲಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ತಿಳಿಸಿದರು.
ಎಂಟು ವರ್ಷಗಳ ಸುದೀರ್ಘ ಅವಧಿಗೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಖ್ಯಾತಿ ಹೊಂದಿರುವ ಪರಮೇಶ್ವರ ಅವರು, ಮಂಗಳವಾರ ಅವರ ಶ್ರೀ ಸಿದ್ದಾರ್ಥ ಇಂಜಿನಿಯರಿAಗ್ ಕಾಲೇಜಿನಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಉಪಸ್ಥಿತಿಯಲ್ಲಿ ಪಕ್ಷ ಸಂಘಟನೆ ಕುರಿತು ವಿವರಿಸಿದರು.


ದೇಶದಾದ್ಯಂತ ಅಸಂಖ್ಯಾತ ಕಾರ್ಯಕರ್ತರನ್ನು ಹೊಂದಿರುವ ಪಕ್ಷವು ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸದಸ್ಯತ್ವ ಆಂದೋಲನ ಹಾಗೂ ಬಿಜೆಪಿಯ ಅಪಪ್ರಚಾರದ ವಿರುದ್ಧ ಕಾರ್ಯಕ್ರಮ ರೂಪಿಸಿದೆ ಎಂದರು.