ಎಂಟು ಕುಟುಂಬದವರಿAದ 16 ಜನಕ್ಕೆ ದೃಷ್ಟಿದಾನ

eye donation

ಎಂಟು ಕುಟುಂಬದವರಿAದ 16 ಜನಕ್ಕೆ ದೃಷ್ಟಿದಾನ


ಎಂಟು ಕುಟುಂಬದವರಿAದ 16 ಜನಕ್ಕೆ ದೃಷ್ಟಿದಾನ


ತುಮಕೂರು: ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಹೆಸರಾಂತ ನೇತ್ರತಜ್ಞರಾದ ಡಾ|| ಮಂಜುನಾಥ್ ಮತ್ತು ಡಾ|| ದಿನೇಶ್‌ಕುಮಾರ್ ಹಾಗೂ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ರವಿಕುಮಾರ್‌ರವರ ನೇತೃತ್ವದಲ್ಲಿ ಇತ್ತೀಚೆಗೆ ಮೃತರಾದ ಎಂಟು ಜನರಿಂದ 16 ನೇತ್ರಗಳನು ದಾನವಾಗಿ ಸ್ವೀಕರಿಸಲಾಗಿದೆ ಎಂದು ಎನ್.ಎಸ್. ಐ ಫೌಂಡೇಶನ್‌ನ ಮುಖ್ಯಸ್ಥ ಡಾ. ಎನ್.ಎಸ್. ಶ್ರೀಧರ್ ಮತ್ತು ಎನ್.ಎಸ್. ನಾಗದೀಶ್ ತಿಳಿಸಿದ್ದಾರೆ


ನಗರದ ಎನ್.ಎಸ್. ಐ ಫೌಂಡೇಶನ್ ಸಹಕಾರದಿಂದ ಸ್ವೀಕರಿಸಿರುವ ಕಣ್ಣುಗಳನ್ನು ಬೆಂಗಳೂರಿನ ಲಯನ್ಸ್ ಇಂಟರ್‌ನ್ಯಾಷನಲ್ ಕಣ್ಣಿನ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಕಾರ್ಯದಿಂದ ಹದಿನಾರು ದೃಷ್ಟಿಹೀನರಿಗೆ ದೃಷ್ಟಿ ಕೊಟ್ಟಂತಾಗಿ ಪಡೆದ ಭಾಗ್ಯವಂತರು ಟ್ರಸ್ಟ್ನ ಸದಸ್ಯರುಗಳು ಮೃತರಿಗೆ ಶಾಂತಿ ಸಿಗಲೆಂದು ಹಾಗೂ ಅವರ ಕುಟುಂಬದವರಿಗೆ ದುಃಖ ಸಹಿಸುವಂತಹ ಶಕ್ತಿ ದೇವರು ಕರುಣಿಸಲೆಂದು ಪ್ರಾರ್ಥಿಸಿದ್ದಾರೆ.


ನಗರದÀ ಉಪ್ಪಾರಹಳ್ಳಿಯಲ್ಲಿಯ ಭರತ್ (ವಯಸ್ಸು 30 ವರ್ಷ), ಚಿಕ್ಕನಾಯಕನಹಳ್ಳಿ, ದಸೂಡಿಯ ಬಿ.ವಿ. ರಾಜಗೋಪಾಲಶೆಟ್ಟಿ (ವಯಸ್ಸು 74 ವರ್ಷ), ನಗರದ ಕ್ಯಾತ್ಸಂದ್ರದ ಬಸವರಾಜು (ವಯಸ್ಸು 77 ವರ್ಷ), ಗುರು ಲೇಔಟ್‌ನ ದೀಪಕ್ ಟಿ.ವಿ. (ವಯಸ್ಸು 48 ವರ್ಷ), ವಿನೋಬನಗರದ ಅನೂಪ್‌ಕುಮಾರ್ ಟಿ.ಎಂ. (ವಯಸ್ಸು 44 ವರ್ಷ), ಶಾಂತಿನಗರದ ಕುಮಾರ್ ಟಿ. (ವಯಸ್ಸು 49 ವರ್ಷ), ಹನುಮಂತಪುರದ ನರೇಂದ್ರಕುಮಾರ್ ಹೆಚ್.ಎನ್. (ವಯಸ್ಸು 20 ವರ್ಷ) ಹಾಗೂ ಚಿತ್ರದುರ್ಗದ ನೇಮಿರಾಜಯ್ಯ (ವಯಸ್ಸು 45 ವರ್ಷ) ಇವರುಗಳ ನಿಧನದ ನಂತರ ಅವರ ಕುಟುಂಬದವರು ನೇತ್ರಗಳನ್ನು ದಾನ ಮಾಡಿದ್ದಾರೆ ಎಂದು ತಿಳಿಸಿರುವ ಎನ್.ಎಸ್. ಶ್ರೀಧರ್ ಮೃತರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.


ಇದೇ ರೀತಿ ಹೆಸರಾಂತ ನಟ ಪುನೀತ್‌ರಾಜಕುಮಾರ್‌ರವರ ನೇತ್ರದಾನದಿಂದ ಪ್ರೇರೇಪಿತರಾಗಿ ತುಮಕೂರಿನ ಅಸಂಖ್ಯಾತ ಜನರು, ತುಮಕೂರಿನ ಭಜರಂಗಬಲಿ ಮುಖ್ಯಸ್ಥ ಮಂಜುನಾಥ್ ಭಾರ್ಗವ್ ಅವರ ಸಂಗಡಿಗರು ಹಾಗೂ ಬನಶಂಕರಿ ಬಡಾವಣೆಯ ಕಾರ್ಪೋರೇಟರ್ ಮಂಜುನಾಥ್ ಅವರ ಸಂಗಡಿಗರು ಸಹ ನೇತ್ರದಾನ ಮಾಡಲು ವಾಗ್ದಾನ ಮಾಡಿರುತ್ತಾರೆ ಎಂದು ತಿಳಿಸಿದ್ದಾರೆ.


ಇದೇ ರೀತಿ ನೇತ್ರದಾನ ಹಾಗೂ ದೇಹದಾನ ಮಾಡುವವರು ಸ್ಥಳೀಯ ನೇತ್ರ ತಜ್ಞರನ್ನಾಗಲಿ ಅಥವಾ ಡಾ. ಎನ್.ಎನ್. ಶ್ರೀಧರ್, ಮುಖ್ಯಸ್ಥರು, ಎನ್.ಎಸ್. ಐ ಫೌಂಡೇಶನ್, ತುಮಕೂರು ಮೊಬೈಲ್ ಸಂಖ್ಯೆ : 9590066066 ಇವರನ್ನು ಸಂಪರ್ಕಿಸಬೇಕೆAದು ಕೋರಲಾಗಿದೆ.