ಓಟುದಾರರ ಮರ್ಜಿಯಲ್ಲಿ ಮೂರೂ ಪಕ್ಷಗಳು! ಇಂದು ವಿಧಾನಪರಿಷತ್‌ಗೆ ಚುನಾವಣೆ
mlc election today
ಓಟುದಾರರ ಮರ್ಜಿಯಲ್ಲಿ ಮೂರೂ ಪಕ್ಷಗಳು!
ಇಂದು ವಿಧಾನಪರಿಷತ್‌ಗೆ ಚುನಾವಣೆ
ತುಮಕೂರು: ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಓಟು ಹಾಕಿ ವಿಧಾನ ಪರಿಷತ್‌ಗೆ ಒಬ್ಬ ಸದಸ್ಯರನ್ನು ಚುನಾಯಿಸುವ ದಿನವಿದು. ಕಾಂಗ್ರೆಸ್‌ನಿAದ ರಾಜೇಂದ್ರ ರಾಜಣ್ಣ, ಜೆಡಿಎಸ್‌ನಿಂದ ಆರ್. ಅನಿಲ್‌ಕುಮಾರ್ ಹಾಗೂ ಬಿಜೆಪಿಯಿಂದ ಎನ್.ಲೋಕೇಶ್ ಗೌಡ ಪ್ರಮುಖ ಅಭ್ಯರ್ಥಿಗಳಾಗಿ ಹೊರಹೊಮ್ಮಿದ್ದಾರೆ. ಉಳಿದಂತೆ ಕರ್ನಾಟಕ ರಾಷ್ಟç ಸಮಿತಿಯಿಂದ ಕೆ.ಎಸ್.ಗಜೇಂದ್ರಕುಮಾರ್ ತಕ್ಕಮಟ್ಟಿಗೆ ಪ್ರಚಾರ ನಡೆಸಿದ್ದರೆ, ಪಕ್ಷೇತರರಾಗಿ ಆರ್.ಜಯರಾಮಯ್ಯ, ಪ್ರಕಾಶ್ ಆರ್.ಎ, ಎಂ.ಎಸ್.ವಿಜಯಪ್ರಕಾಶ್ ಕಣದಲ್ಲಿದ್ದರೂ ಬ್ಯಾಲೆಟ್ ಪೇಪರ್‌ನಲ್ಲಿ ಹೆಸರು ದಾಖಲಾಗಲಿ ಎಂದು ನಾಮಪತ್ರ ಸಲ್ಲಿಸಿದವರಂತೆ ಕಾಣುತ್ತಾರೆ.
ಜಿಲ್ಲೆಯ ಹನ್ನೊಂದು ವಿಧಾನ ಸಭಾ ಕ್ಷೇತ್ರದ ಉದ್ದಗಲಕ್ಕೂ ಹರಡಿಕೊಂಡಿರುವ ಗ್ರಾಮಪಂಚಾಯಿತಿ ಸದಸ್ಯರು, ಪುರಸಭೆ, ನಗರಸಭೆ ಹಾಗೂ ತುಮಕೂರು ಮಹಾನಗರಪಾಲಿಕೆಗಳ ಸದಸ್ಯರು ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕಿದೆ.
ಪ್ರಾಶಸ್ತö್ಯದ ಓಟುಗಳನ್ನು ಚಲಾಯಿಸಲು ಅವಕಾಶವಿರುವ ವಿಶಿಷ್ಟ ಚುನಾವಣೆ ಇದಾಗಿರುವುದರಿಂದ ಓಟುದಾರರು ಯಾವ ಅಭ್ಯರ್ಥಿಗೂ ಬೇಸರ ಮಾಡದೇ ಒಂದು, ಎರಡು ಮೂರು, ನಾಲ್ಕು ಎಂಬ ಪ್ರಾಶಸ್ತö್ಯವನ್ನು ಅವರ ಹೆಸರಿನ ಮುಂದೆ ಬರೆದು ಆಯ್ಕೆ ಮಾಡಬಹುದಾಗಿದೆ. ಹೀಗಾಗಿ ಕೆಲ ಅಭ್ಯರ್ಥಿಗಳು ತಮಗೆ ಎರಡನೇ ಪ್ರಾಶಸ್ತö್ಯ ಮತವನ್ನಾದರೂ ನೀಡಿ ಎಂದು ಕೇಳಲು ಆರಂಭಿಸಿದ್ದಾರೆ.
ಮತದಾರರಿಗೆ ಉಡುಗೊರೆಗಳನ್ನು ಹಾಗೂ ನಗದನ್ನು ನೀಡಿ ಒಲಿಸಿಕೊಳ್ಳಲಾಗುತ್ತಿದೆ ಎಂಬ ಸಂಗತಿ ಬಹಿರಂಗ ಗುಟ್ಟಾಗಿದೆ. ಯಾರು ಎಷ್ಟು ಕೊಡುತ್ತಿದ್ದಾರೆ ಎಂಬುದನ್ನು ಗುಟ್ಟಾಗಿ ಅರಿತು ಅವರಿಗಿಂತ ತಾವು ಹೆಚ್ಚು ಕೊಟ್ಟರೆ ಗೆಲ್ಲಬಹುದೇ ಎಂಬ ಲೆಕ್ಕಾಚಾರವೂ ನಡೆಯುತ್ತಿದೆ. ಈ ‘ವ್ಯವಹಾರ’ ಎಲ್ಲರ ಅರಿವಿಗೆ ಬಂದಿದ್ದರೂ ಅರಿವಾಗದಂತೆ ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ.
ಸ್ವತಂತ್ರ ಭಾರತದಲ್ಲಿ ಚುನಾವಣೆಗಳಲ್ಲಿ ಓಟುದಾರರಿಗೆ ಉಡುಗೊರೆ ಹಾಗೂ ನಗದು ನೀಡುವ ಪದ್ದತಿಯನ್ನು ಯಾರು ಯಾವಾಗ ಆರಂಭಿಸಿದರೋ ಎಂಬುದAತೂ ನಿಖರವಾಗಿ ತಿಳಿದಿಲ್ಲವಾದರೂ ಯಾರಾದರೂ ಅಂತ್ಯಗೊಳಿಸಿದಲ್ಲಿ ಜನಪ್ರತಿನಿಧಿ ಕಾಯ್ದೆ ಮತ್ತು ಪ್ರಜಾಪ್ರಭುತ್ವ ಉಳಿದೀತು ಎನ್ನಬಹುದು.
ಈ ಕ್ಷೇತ್ರದಲ್ಲಿ ಎರಡು ಅವಧಿಯಿಂದ ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದರು, 1998ರಲ್ಲಿ ಹಾಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಅವರ ತಂದೆ ಮಾಜಿ ಶಾಸಕರೂ ಆಗಿರುವ ಕೆ.ಎನ್.ರಾಜಣ್ಣ ಗೆದ್ದಿದ್ದರು. 1998ರಿಂದ 2004ರವರೆಗೆ ಅವರು ತುಮಕೂರು ಜಿಲ್ಲೆಯನ್ನು ವಿಧಾನ ಪರಿಷತ್‌ನಲ್ಲಿ ಪ್ರತಿನಿಧಿಸಿದ್ದರು. ರಾಜೇಂದ್ರ ರಾಜಣ್ಣ ಕಳೆದ ಆರು ವರ್ಷದ ಹಿಂದೆ ಇದೇ ಕ್ಷೇತ್ರದಿಂದ ಆಯ್ಕೆ ಬಯಸಿದ್ದರು. ಆಗ ಜೆಡಿಎಸ್‌ನ ಬೆಮೆಲ್ ಕಾಂತರಾಜು ಚುನಾಯಿತರಾಗಿದ್ದರು. ಕಳೆದ ಸೋಲಿನ ಅನುಕಂಪ ಹಾಗೂ ಈ ಆರು ವರ್ಷಗಳಿಂದ ಜಿಲ್ಲೆಯಲ್ಲಿ ಮಾಡಿದ ಜನಪರ ಕಾರ್ಯಗಳನ್ನು ಮುಂದಿಟ್ಟುಕೊAಡು ರಾಜೇಂದ್ರ ಆಯ್ಕೆ ಬಯಸಿದ್ದಾರೆ.
ಜೆಡಿಎಸ್‌ನ ಆರ್.ಅನಿಲ್‌ಕುಮಾರ್ ನಾಮ ಪತ್ರ ಸಲ್ಲಿಸುವ ಹಿಂದಿನ ದಿನವಷ್ಟೇ ಸರ್ಕಾರಿ ನೌಕರಿಯಲ್ಲಿದ್ದವರು. ಈ ಜಿಲ್ಲೆಯವರೇ ಆದರೂ ಅವರಿಗೆ ಕ್ಷೇತ್ರವೂ ಹೊಸದು, ರಾಜಕೀಯವೂ ಹೊಸದು. ಕೆಎಎಸ್ ಅಧಿಕಾರಿಯಾಗಿ ಭ್ರಷ್ಟಾಚಾರ,ಫೋರ್ಜರಿ ಹಾಗೂ ವಂಚನೆಯ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ಅವರು, ಅವರ ಬಳಿ ಸಂಗ್ರಹವಾಗಿರುವ ಅಕ್ರಮ ಹಣದ ಬಲ ನಂಬಿ ಕಣದಲ್ಲಿದ್ದಾರೆ ಹಾಗೂ ದೇವೇಗೌಡರಿಗೆ ರಾಜಣ್ಣನವರ ವಿರುದ್ಧ ಸೋಲಿನ ಮುಯ್ಯಿ ತೀರಿಸುವ ಸಾಧನವಾಗಿ ಬಳಕೆಯಾಗುತ್ತಿದ್ದಾರೆಂಬುದು ಈ ಗೌಡರು ಮತ್ತು ಅವರ ಮಗ ಕುಮಾರಣ್ಣನವರ ಚುನಾವಣಾ ಭಾಷಣಗಳಿಂದಲೇ ಜಿಲ್ಲೆಯ ಜನತೆಗೆ ಅರಿವಾಗಿದೆ. ಆದರೆ ಇಂಡಿಯಾದ ಚುನಾವಣೆಗಳಲ್ಲಿ ಭ್ರಷ್ಟಾಚಾರ ಮಹತ್ವದ ವಿಷಯವಾಗಿ ಉಳಿದಿಲ್ಲದೇ ಇರುವುದರಿಂದ ಓಟುದಾರರು ಯಾರನ್ನು ಬೇಕಿದ್ದರೂ ಆಯ್ಕೆ ಮಾಡುವುದನ್ನು ತಳ್ಳಿಹಾಕಲು ಬರುವುದಿಲ್ಲ.
ಬಿಜೆಪಿ ಅಭ್ಯರ್ಥಿ ಎನ್.ಲೋಕೇಶ್ ಕೂಡಾ ಅಷ್ಟೇ ತುಮಕೂರು ಜಿಲ್ಲೆಯವರೇ ಆದರೂ, ಬೆಂಗಳೂರಿನ ಹೊರವಲಯದಲ್ಲಿ ರಾಜಕೀಯ ನೆಲೆ ಕಂಡುಕೊAಡಿರುವವರು. ಅವರನ್ನು ಅರಂಭದಲ್ಲಿ ಬಲಿಪೀಠಕ್ಕೆ ಕಟ್ಟಿದ ಹರಕೆಯ ಪ್ರಾಣಿಯಾಗಿಬಿಟ್ಟರೇ ಎಂದು ಭಾವಿಸುತ್ತಿದ್ದವರೂ ಸಹ ನಾಮಪತ್ರ ಸಲ್ಲಿಸಿದ ದಿನದಿಂದ ಮತದಾನದವರೆಗಿನ ಅವಧಿಯಲ್ಲಿ ಬೆಳೆದ ಪರಿಯನ್ನು ನೋಡಿ ಅಚ್ಚರಿ ಪಟ್ಟಿದ್ದಾರೆ.
ಯಾರು ಯಾರಿಗೆ ಬೇಕಾದರೂ ಓಟು ಮಾಡಬಹುದಾದ ಚುನಾವಣೆ ಇದಾಗಿರುವುದರಿಂದ ಯಾರು ಗೆದ್ದರೂ ಅಚ್ಚರಿಪಡುವಂತಿಲ್ಲ. ಚುನಾವಣೆ ಎಂದರೆ ಹಾಗೇ ಅಲ್ಲವಾ.