‘ರಸ್ತೆ ಅಭಿವೃದ್ಧಿಯಲ್ಲಿ ಅಕ್ರಮವಿಲ್ಲ’ 26ನೇ ವಾರ್ಡ್ ಸದಸ್ಯ ಮಲ್ಲಿಕ್ ಸ್ಪಷ್ಟನೆ 

26-ward-tumkur-mallik

‘ರಸ್ತೆ ಅಭಿವೃದ್ಧಿಯಲ್ಲಿ ಅಕ್ರಮವಿಲ್ಲ’ 26ನೇ ವಾರ್ಡ್ ಸದಸ್ಯ ಮಲ್ಲಿಕ್ ಸ್ಪಷ್ಟನೆ 

 

‘ರಸ್ತೆ ಅಭಿವೃದ್ಧಿಯಲ್ಲಿ ಅಕ್ರಮವಿಲ್ಲ’
26ನೇ ವಾರ್ಡ್ ಸದಸ್ಯ ಮಲ್ಲಿಕ್ ಸ್ಪಷ್ಟನೆ 


ತುಮಕೂರು: ಸೋಮೇಶ್ವರ ಬಡಾವಣೆಯ ಗೋಕುಲ ರಸ್ತೆ (ದೋಬಿ ಘಾಟ್)ಯನ್ನು ಅಭಿವೃದ್ಧಿಪಡಿಸುವ ವಿಚಾರದಲ್ಲಿ ನಿಯಮ ಮೀರಿ ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ಸಂಬAಧಿಸಿದ 26ನೇ ವಾರ್ಡ್ನ ಮಹಾನಗರಪಾಲಿಕೆ ಚುನಾಯಿತ ಸದಸ್ಯ ಮಲ್ಲಿಕಾರ್ಜುನ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ದಿನಾಂಕ 02.01.2022ರ ಸಂಚಿಕೆಯಲ್ಲಿ ಪ್ರಕಟವಾಗಿದ್ದ ವರದಿಗೆ ಸ್ಪಷ್ಟೀಕರಣ ನೀಡಿರುವ ಅವರು ಸದರಿ ರಸ್ತೆಯ 30 ಮೀಟರ್‌ಗಳಲ್ಲಿ ಪಾಲಿಕೆ ಅನುದಾನದಿಂದ ಹೊಸದಾಗಿ ಟಾರ್ ಹಾಕಲು ಕಾಮಗಾರಿ ಕೈಗೊಳ್ಳಲಾಗಿದ್ದು, ಲಭ್ಯವಿದ್ದ ಅನುದಾನದಲ್ಲಿ ವಾರ್ಡಿನ ಎಲ್ಲ ರಸ್ತೆಗಳಿಗೂ ಟಾರ್ ಹಾಕಿಸುವ ಉದ್ದೇಶದಿಂದ ಆ ರಸ್ತೆಯಲ್ಲಿದ್ದ ಹಳೆಯ ಟಾರ್ ರಸ್ತೆಯನ್ನು ಕೆರೆದು ತೆಗೆಯುವುದು ಮೂಲ ಅಂದಾಜು ವೆಚ್ಚದಲ್ಲಿ ನಮೂದಿಸಿರಲೇ ಇಲ್ಲ ಎಂದಿರುವ ಅವರು, ಆದಾಗ್ಯೂ ಡಿಸೆಂಬರ್ 21ರಂದು ರಾತ್ರಿ 12-01ಗಂಟೆವರೆಗೂ ತಾವೇ ಮುಂದೆ ನಿಂತು ಹಳೆಯ ಟಾರ್‌ನ್ನು ಜೆಸಿಬಿಯಿಂದ ತೆಗಿಸಿ(ಸ್ಕಾರಿಫೈ ಮಾಡಿಸಿ) ವೆಟ್ ಮಿಕ್ಸ್ ಹಾಗೂ ಜಲ್ಲಿ ಹಾಕಿಸುವ ಕಾಮಗಾರಿ ಮುಂದುವರೆಸಲಾಗಿದೆ ಎಂದಿದ್ದಾರೆ.


ಇದೇ ರಸ್ತೆಯಲ್ಲಿರುವ ಪಾಲಿಕೆ ಮಾಜಿ ಸದಸ್ಯರು ಈ ಕುರಿತಂತೆ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ನಗರದ ಇತರ ವಾರ್ಡುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಕಾಮಗಾರಿಗಳು ತಮ್ಮ ವಾರ್ಡಿನಲ್ಲಿ ನಡೆಯುತ್ತಿರುವುದನ್ನು ನಾಗರಿಕರು ಗಮನಿಸಿ, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು ತಮ್ಮ ಜನಪ್ರಿಯತೆ ಸಹಿಸದೆ ಹೀಗೆ ಆರೋಪ ಮಾಡುತ್ತಿದ್ದಾರೆಂದು ತಿಳಿಸಿದ್ದಾರೆ.


ಸ್ಮಶಾನದ ಪಕ್ಕದಲ್ಲಿದ್ದ ಖಾಲಿ ನಿವೇಶನದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಬೀದಿ ಬದಿಮಾರಾಟಗಾರರಿಗೆ 38 ಮಳಿಗೆಗಳನ್ನು ನರ‍್ಮಿಸಿಕೊಡಲಾಗುತ್ತಿದೆ. ಸೋಮೇಶ್ವರಪುರ ಹಾಗೂ ಬಿ.ಹೆಚ್.ರಸ್ತೆಯಲ್ಲಿ ಅಶೋಕ ನಗರದ ಉದ್ದಕ್ಕೂ ವ್ಯಾಪಾರ ಮಾಡುತ್ತಿರುವ ಬೀದಿ ಬದಿ ವ್ಯಾಪಾರಿಗಳಿಗೆ ಇಲ್ಲಿ ಮಳಿಗೆಗಳನ್ನು ನೀಡುವ ಉದ್ದೇಶವಿದ್ದು, ತದನಂತರ ಯಾರೂ ಬೀದಿಗಳಲ್ಲಿ ವ್ಯಾಪಾರ ಮಾಡಬಾರದು ಆ ಮೂಲಕ ಸಂಚಾರಕ್ಕೆ ಅಡ್ಡಿ ಉಂಟು ಮಾಡಬಾರದೆಂದು ಈ ಮಳಿಗೆಗಳನ್ನು ನರ‍್ಮಿಸಲಾಗುತ್ತಿದೆ ಎಂದು ತಿಳಿಸಿದರು.