ಜಾತಿವಾದ ಎನ್ನುವುದು ಒಪ್ಪಿತ ರಾಜಕೀಯ ಸಂಸ್ಕೃತಿ

ಜಾತಿವಾದ ಎನ್ನುವುದು ಒಪ್ಪಿತ ರಾಜಕೀಯ ಸಂಸ್ಕೃತಿ

ಜಾತಿವಾದ ಎನ್ನುವುದು ಒಪ್ಪಿತ ರಾಜಕೀಯ ಸಂಸ್ಕೃತಿ
                                ನಾ ದಿವಾಕರ
ರ‍್ನಾಟಕದ ಅಧಿಕಾರ ರಾಜಕಾರಣದ ವಲಯದಲ್ಲಿ ನಡೆದ ಹಸ್ತಾಂತರದ ಪ್ರಹಸನ ಇಡೀ ರಾಜ್ಯದ ಗಮನ ಸೆಳೆಯಲು ಕಾರಣವಾಗಿದ್ದು, ರಾಜ್ಯದ ಸಾಮಾಜಿಕರ‍್ಥಿಕ ಸ್ಥಿತ್ಯಂತರಗಳಲ್ಲ. ಬದಲಾಗಿ ಜಾತಿ ರಾಜಕಾರಣದ ಏಳುಬೀಳುಗಳು. ರಾಜ್ಯದಲ್ಲಿ ಇಂದು ಜಾತಿವಾದ ಎನ್ನುವುದು ಒಪ್ಪಿತ ರಾಜಕೀಯ ಸಂಸ್ಕೃತಿಯಾಗಿದ್ದು, ಜಾತಿ ಸಮೀಕರಣದಿಂದಾಚೆಗಿನ ಯಾವುದೇ ಸಂಕಥನಗಳು ನಗಣ್ಯ ಎನಿಸುತ್ತದೆ. ಯಡಿಯೂರಪ್ಪ ರ‍್ಕಾರದ ಪತನ ಈ ನಿಟ್ಟಿನಲ್ಲಿ ಸ್ಪಷ್ಟ ಉದಾಹರಣೆಯಾಗಿ ಕಾಣುತ್ತದೆ. ಲಿಂಗಾಯತ ಸಮುದಾಯದ ರಾಜಕೀಯ ಪ್ರಾಬಲ್ಯ ಮತ್ತು ಈ ಸಮುದಾಯವನ್ನು ಪ್ರತಿನಿಧಿಸುವ        ‘ ಜನಪ್ರತಿನಿಧಿಗಳ ’ ಅಧಿಕಾರ ದಾಹ ಈ ರಾಜ್ಯದ ರಾಜಕೀಯ ವಿದ್ಯಮಾನಗಳನ್ನು ನಿಯಂತ್ರಿಸುತ್ತದೆ. ಬಸವರಾಜ ಬೊಮ್ಮಾಯಿ ಅವರ ಆಯ್ಕೆಯಲ್ಲಿ ಇದು ಸ್ಪಷ್ಟವಾಗಿ ಕಾಣುತ್ತದೆ. 

ರಾಜ್ಯ ರಾಜಕಾರಣವನ್ನು ದೆಹಲಿಯಿಂದ ನಿಯಂತ್ರಿಸುವ ಪರಂಪರೆ ಹೊಸತೇನೂ ಅಲ್ಲ. ಇದನ್ನು ರಾಜಕೀಯ ಪರಿಭಾಷೆಯಲ್ಲಿ ಹೈಕಮಾಂಡ್ ಸಂಸ್ಕೃತಿ ಎಂದು ಕರೆಯಲಾಗುತ್ತದೆ. ಒಂದು ರಾಜ್ಯದ ಪ್ರಾದೇಶಿಕ ಅಸ್ಮಿತೆಗಳು ಮತ್ತು ಹಿತಾಸಕ್ತಿಗಳನ್ನು, ನರ‍್ದಿಷ್ಟ ರಾಜಕೀಯ ಸಿದ್ಧಾಂತಕ್ಕೆ ಅನುಗುಣವಾಗಿ ಬಳಸಿಕೊಳ್ಳುವ ನಿರಂಕುಶ ಪ್ರಭುತ್ವದ ಧೋರಣೆಯನ್ನು ಈ ಹೈಕಮಾಂಡ್ ಸಂಸ್ಕೃತಿಯಲ್ಲಿ ಗುರುತಿಸಬಹುದು. ಇದು ಕಾಂಗ್ರೆಸ್ ಪಕ್ಷ ದೇಶಕ್ಕೆ ನೀಡಿರುವ ಒಂದು ಕೊಡುಗೆ ಎಂದರೂ ತಪ್ಪಾಗಲಾರದು. ಇಂದು ಬಿಜೆಪಿ ಕಾಂಗ್ರೆಸ್ ಪಕ್ಷವನ್ನೂ ಮೀರಿ ಈ ಸಂಸ್ಕೃತಿಗೆ ವ್ಯಕ್ತಿಕೇಂದ್ರಿತ ಸ್ವರೂಪವನ್ನು ನೀಡಿದೆ. ರಾಜ್ಯ ರಾಜಕಾರಣದ ಹಿತಾಸಕ್ತಿಗಳನ್ನು ಕೇವಲ ಇಬ್ಬರು ರಾಷ್ಟ್ರೀಯ(?) ನಾಯಕರು ನರ‍್ಧರಿಸುತ್ತಾರೆ. ಇದು ಜಾತಿ ರಾಜಕಾರಣಕ್ಕಿಂತಲೂ ಅಪಾಯಕಾರಿಯಾದುದು ಎನ್ನುವುದನ್ನು ಗಮನಿಸಬೇಕಿದೆ. 

ಈ ಪ್ರಕ್ರಿಯೆಯಲ್ಲಿ ಭಾರತದ ಒಕ್ಕೂಟ ವ್ಯವಸ್ಥೆಯ ಬುನಾದಿಯೇ ಶಿಥಿಲವಾಗುತ್ತಿರುವುದನ್ನು ಗಮನಿಸದೆ ಹೋದರೆ, ಬಹುಶಃ ಹಿಂದುತ್ವ ರಾಜಕಾರಣ, ಅಖಂಡ ರಾಷ್ಟ್ರದ ಕನಸನ್ನು ಸಾಕಾರಗೊಳಿಸುವ ನೆಪದಲ್ಲಿ ರಾಜ್ಯಗಳನ್ನು ಕೇಂದ್ರದ ಬಾಲಂಗೋಚಿಗಳನ್ನಾಗಿ ಮಾಡಿಬಿಡುತ್ತದೆ. ಕಾಂಗ್ರೆಸ್ ಮುಕ್ತ ಭಾರತ ಅಥವಾ ವಿರೋಧ ಪಕ್ಷ ಮುಕ್ತ ಭಾರತವನ್ನು ತನ್ನ ಅಂತಿಮ ಗುರಿಯಾಗಿರಿಸಿಕೊಂಡಿರುವ ಬಿಜೆಪಿ ಮತ್ತು ಸಂಘಪರಿವಾರಕ್ಕೆ ಈ ಹಾದಿಯಲ್ಲಿ ಪ್ರಬಲ ಅಸ್ತ್ರಗಳಾಗಿ ನೆರವಾಗುವುದು ರಾಜ್ಯಗಳಲ್ಲಿ ಬೇರೂರಿರುವ ಒಬಿಸಿ ರಾಜಕಾರಣ ಮತ್ತು ಮೂಲತಃ ಜಾತಿ ರಾಜಕಾರಣದ ಸಮೀಕರಣಗಳು. ನವ ಉದಾರವಾದದ ಮಾರುಕಟ್ಟೆ ರ‍್ಥಿಕ ನೀತಿ ಮತ್ತು ಕರ‍್ಪೋರೇಟ್ ಕೆಂದ್ರಿತ ಅಭಿವೃದ್ಧಿ ಪಥದಲ್ಲಿ, ಹಣಕಾಸು ಬಂಡವಾಳದ ಮೇಲೆ ಮತ್ತು ಬಂಡವಾಳ ಹೂಡಿಕೆಯ ಮೂಲ ಆಕರಗಳ ಮೇಲೆ ಪ್ರಾಬಲ್ಯ ಸಾಧಿಸಿರುವ ಎಲ್ಲ ಜಾತಿ ಸಮುದಾಯಗಳೂ ಈ ಹೊಸ ಸಮೀಕರಣಕ್ಕೆ ಸುಲಭವಾಗಿ ಬಲಿಯಾಗುತ್ತವೆ. ಒಂದೆಡೆ ಜಾತಿ ಅಸ್ಮಿತೆಯನ್ನು ಕಾಪಾಡಿಕೊಂಡೇ, ಸಾಮಾಜಿಕವಾಗಿ ಮತ್ತು ರ‍್ಥಿಕವಾಗಿ ಸುಭದ್ರ ಬುನಾದಿಯನ್ನು ನರ‍್ಮಿಸಿಕೊಂಡಿರುವ ಒಬಿಸಿ ಸಮುದಾಯಗಳು ಈ ಮಾರುಕಟ್ಟೆ ರ‍್ಥಿಕತೆಗೆ ರಾಯಭಾರಿಗಳಾಗಿಬಿಡುತ್ತವೆ. ಇದರ ಒಂದು ಆಯಾಮವನ್ನು ರ‍್ನಾಟಕದ ಲಿಂಗಾಯತ ರಾಜಕಾರಣದಲ್ಲಿ ನೋಡುತ್ತಿದ್ದೇವೆ.

ಲಿಂಗಾಯತ ಮತಬ್ಯಾಂಕುಗಳನ್ನು ಸುರಕ್ಷಿತವಾಗಿರಿಸಿಕೊಂಡೇ ರಾಜ್ಯದ ಪ್ರಬಲ ಲಿಂಗಾಯತ ನಾಯಕರಾದ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡುವಲ್ಲಿ ಸಂಘಪರಿವಾರ ನಿಯಂತ್ರಿತ ಬಿಜೆಪಿ ಹೈಕಮಾಂಡ್ ಯಶಸ್ವಿಯಾಗಿದೆ. ಬಸವರಾಜ ಬೊಮ್ಮಾಯಿ ಅವರ ಆಯ್ಕೆಯ ಹಿಂದೆ ಜಾತಿ ಸಮೀಕರಣವನ್ನು ಹೊರತುಪಡಿಸಿ ಮತ್ತಾವುದೇ ಬಲವಾದ ಕಾರಣಗಳು ಇಲ್ಲ ಎನ್ನುವುದೂ ನೂತನ ರ‍್ಕಾರದ ಕರ‍್ಯವೈಖರಿಯಿಂದಲೇ ಸ್ಪಷ್ಟವಾಗುತ್ತಿದೆ. ಹಿಂದುತ್ವ ರಾಜಕಾರಣದ ಸಂಘ ಪ್ರೇರಿತ ಕರ‍್ಯಸೂಚಿಯನ್ನು ತೆರೆಮರೆಯಲ್ಲಿ ಜಾರಿಗೊಳಿಸುತ್ತಿದ್ದ ಯಡಿಯೂರಪ್ಪ ರ‍್ಕಾರಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಬೊಮ್ಮಾಯಿ ರ‍್ಕಾರ ನೇರವಾಗಿಯೇ ಈ ಹೆಜ್ಜೆ ಇಟ್ಟಿದೆ. ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡಿರುವುದು ಲಿಂಗಾಯತ ಸಮುದಾಯಕ್ಕೆ ಆತಂಕಕಾರಿಯಾಗಿ ಕಂಡರೂ, ಈ ಸಮುದಾಯದ ಆಂರ‍್ಯದಲ್ಲಿರುವ ಬಂಡವಾಳದ ಆಧಿಪತ್ಯ ಮತ್ತು ಔದ್ಯಮಿಕ ಹಿತಾಸಕ್ತಿಗಳು ಬೊಮ್ಮಾಯಿಯವರಿಗೆ ಶ್ರೀರಕ್ಷೆಯಾಗುತ್ತವೆ.

ಏಕೆಂದರೆ ಬೊಮ್ಮಾಯಿಯವರ ಮುಂದಿನ ಹಾದಿಯ ನೀಲನಕ್ಷೆ ದೆಹಲಿಯಲ್ಲಿ ಮತ್ತು ನಾಗಪುರದಲ್ಲಿ ಈಗಾಗಲೇ ಸಿದ್ಧವಾಗಿದೆ. ೨೦೨೪ರ ಒಳಗೆ ಭಾರತದ ರ‍್ಥವ್ಯವಸ್ಥೆಯನ್ನು ಸಂಪರ‍್ಣವಾಗಿ ಕರ‍್ಪೋರೇಟ್ ಮಾರುಕಟ್ಟೆಗೆ ಒಪ್ಪಿಸಿ, ಹಣಕಾಸು ಬಂಡವಾಳದ ನವಉದಾರವಾದದ ಕರ‍್ಯಸೂಚಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ರ‍್ಕಾರಕ್ಕೆ ರ‍್ನಾಟಕ ಕೇಂದ್ರ ಬಿಂದುವಾಗಿದೆ. ಅತಿ ಹೆಚ್ಚಿನ ಸರ‍್ವಜನಿಕ ಉದ್ದಿಮೆಗಳು ರಾಜ್ಯದಲ್ಲಿವೆ, ಅತಿ ದರ‍್ಘ ರೈಲು ಮರ‍್ಗಗಳು ರ‍್ನಾಟಕದ ಮೂಲಕ ಹಾದು ಹೋಗುತ್ತವೆ, ರ‍್ಕಾರಿ ಸ್ವಾಮ್ಯದಲ್ಲಿರುವ ಉತ್ಪಾದನಾ ಘಟಕಗಳ ಸಂಖ್ಯೆಯೂ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ. ಶೈಕ್ಷಣಿಕ ವಲಯದಲ್ಲಿ ರಾಜ್ಯದ ಐಐಎಸ್‍ಸಿ ಮತ್ತಿತರ ವಿದ್ಯಾ ಸಂಸ್ಥೆಗಳು ಜಾಗತಿಕ ಮನ್ನಣೆ ಗಳಿಸಿವೆ. ಈ ಶೈಕ್ಷಣಿಕ ಸಂಸ್ಥೆಗಳ ಖಾಸಗೀಕರಣ ಮತ್ತು ಕರ‍್ಪೋರೇಟೀಕರಣಕ್ಕೆ ಪೂರಕವಾದ ಹೊಸ ಶಿಕ್ಷಣ ನೀತಿಯನ್ನು ರ‍್ನಾಟಕ ರ‍್ಕಾರ ಅವಸರದಿಂದಲೇ ಜಾರಿಗೊಳಿಸಿರುವುದನ್ನೂ ಗಮನಿಸಬೇಕು.

ಭಾರತದ ಸಾಮಾಜಿಕ ಸನ್ನಿವೇಶದಲ್ಲಿ ಈ ದೇಶದ ಶೋಷಿತ, ಅವಕಾಶವಂಚಿತ, ಅಂಚಿಗೆ ತಳ್ಳಲ್ಪಟ್ಟ, ತುಳಿತಕ್ಕೊಳಪಟ್ಟ ಜನಸಮುದಾಯಗಳು ಭೂಮಿಗಾಗಿ ಹೋರಾಡಬೇಕಿತ್ತು. ಮನುಷ್ಯ ಮತ್ತು ಭೂಮಿಯ ನಡುವಿನ ಸಂಬಂಧಗಳನ್ನು ಭಾವನಾತ್ಮಕವಾಗಿ ಮಾತ್ರವೇ ನೋಡಲಾಗುವುದಿಲ್ಲ. ತಮ್ಮ ಜೀವನೋಪಾಯದ ಮರ‍್ಗಗಳನ್ನು ಕಂಡುಕೊಳ್ಳಲು ಜನಸಾಮಾನ್ಯರಿಗೆ ಭೂಮಿ ಮತ್ತು ಅದರೊಡಗಿನ ಉತ್ಪಾದನಾ ಸಂಬಂಧಗಳು ಹೆಚ್ಚು ಅಪ್ಯಾಯಮಾನವಾಗಿರಬೇಕು. ಹಾಗಾಗಿಯೇ ಶತಮಾನಗಳಿಂದಲೂ, ಎಲ್ಲ ದೇಶಗಳಲ್ಲೂ ಭೂಮಿಗಾಗಿ ನಡೆದ ಹೋರಾಟಗಳೇ ಆ ದೇಶಗಳ ಇತಿಹಾಸವನ್ನೇ ಬದಲಿಸಿರುವುದನ್ನು ನೋಡಿದ್ದೇವೆ. ಭಾರತದಲ್ಲೂ ಸಹ ಭೂಮಿಯೊಡಗಿನ ದುಡಿಯುವ ರ‍್ಗಗಳ, ಶ್ರಮಜೀವಿಗಳ ಒಡನಾಟವನ್ನು ಮನಗಂಡಿದ್ದರಿಂದಲೇ ಡಾ ಬಿ ಆರ್ ಅಂಬೇಡ್ಕರ್ ಸಹ ಭೂಮಿಯ ರಾಷ್ಟ್ರೀಕರಣಕ್ಕಾಗಿ ಒತ್ತಾಯಿಸಿದ್ದರು. 

ಆದರೆ ಸ್ವತಂತ್ರ ಭಾರತದಲ್ಲಿ ಭೂ ಹೋರಾಟಗಳು ಮೂಲತಃ ಎಡಪಂಥೀಯ ಹೋರಾಟಗಳೊಡನೆಯೇ ಬೆಳೆದುಬಂದಿವೆ. ಒಂದು ಹಂತದಲ್ಲಿ ದಲಿತ ಚಳುವಳಿ ದೇಶಾದ್ಯಂತ ಪ್ರಬಲವಾದ ಸಂರ‍್ಭದಲ್ಲಿ ದಲಿತ ಸಮುದಾಯಗಳನ್ನೂ ಭೂಹೋರಾಟಗಳಲ್ಲಿ ತೊಡಗಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿತ್ತು. ದಲಿತರಿಗೆ ಇಂದಿಗೂ ಸಹ ಭೂಮಿಯ ಪ್ರಶ್ನೆಯೇ ಪ್ರಧಾನವಾಗಬೇಕಿದೆ. ಏಕೆಂದರೆ ದೇಶದ ಬಹುಸಂಖ್ಯಾತ ದಲಿತರು ಗ್ರಾಮೀಣವಾಸಿಗಳಾಗಿದ್ದಾರೆ ಮತ್ತು ಗ್ರಾಮೀಣ ರ‍್ಥಿಕತೆಯನ್ನೇ ನಂಬಿ ಬದುಕುತ್ತಿದ್ದಾರೆ. ಭೂರಹಿತ ಕೃಷಿ ಕರ‍್ಮಿಕರ ಕ್ರಾಂತಿಕಾರಿ ಚಳುವಳಿಗಳು ಬಿಹಾರ, ಒರಿಸ್ಸಾ, ಆಂಧ್ರಪ್ರದೇಶ, ಜರ‍್ಖಂಡ್, ಛತ್ತಿಸ್‍ಘಡ ಮುಂತಾದ ರಾಜ್ಯಗಳಲ್ಲಿ ಇಂದಿಗೂ ಚಾಲ್ತಿಯಲ್ಲಿವೆ. ಆದರೆ ಮುಖ್ಯವಾಹಿನಿಯ ದಲಿತ ಚಳುವಳಿಗಳು ಭೂಹೋರಾಟದಿಂದ ವಿಮುಖವಾದ ಪರಿಣಾಮ, ಇಂದು ದಲಿತ ಸಮುದಾಯಗಳು ಸಾಂವಿಧಾನಿಕ ಸವಲತ್ತುಗಳನ್ನೇ ಆಧರಿಸಿ ತಮ್ಮ ಬದುಕು ರೂಪಿಸಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿವೆ. 

ರ‍್ನಾಟಕದಲ್ಲಿನ ಭೂ ಸಂಬಂಧಗಳನ್ನು ತುಲನಾತ್ಮಕವಾಗಿ ನೋಡುವಾಗ ಈ ಅಂಶಗಳನ್ನು ನೆನಪಿಟ್ಟುಕೊಳ್ಳಬೇಕಾಗುತ್ತದೆ. ಇಂದು ದೇಶಾದ್ಯಂತ ಮತ್ತು ರ‍್ನಾಟಕದಲ್ಲೂ ಸಹ ಭೂಮಿಗಾಗಿ ಹೋರಾಡುತ್ತಿರುವುದು ಕರ‍್ಪೋರೇಟ್ ಉದ್ಯಮಿಗಳು, ರಿಯಲ್ ಎಸ್ಟೇಟ್ ಮಾಫಿಯಾಗಳು ಮತ್ತು ರಾಜಕೀಯವಾಗಿ ಪ್ರಬಲವಾಗಿರುವ ಈ ಎರಡು ರ‍್ಗಗಳಿಗೆ ಆಶ್ರಯ, ಶ್ರೀರಕ್ಷೆ ನೀಡುವ ಬಂಡವಳಿಗ ರ‍್ಗದ ರಾಜಕೀಯ ನಾಯಕರು. ಕಳೆದ ಮೂರು ದಶಕಗಳ ನಗರೀಕರಣ ಮತ್ತು ರಸ್ತೆ, ಮೇಲ್ಸೇತುವೆ, ಕಾರಿಡಾರ್ ಮತ್ತು ಚತುಷ್ಪಥದಿಂದ ದಶಪಥದವರೆಗಿನ ಹೆದ್ದಾರಿಯ ವಿಸ್ತರಣೆಯಲ್ಲಿ ಭೂಮಿಯನ್ನು ಕಳೆದುಕೊಂಡ ಲಕ್ಷಾಂತರ ರೈತರು ಇಂದು ಕೃಷಿ ಕರ‍್ಮಿಕರಾಗಿ, ಗ್ರಾಮೀಣ ಶ್ರಮಜೀವಿಗಳಾಗಿ, ನಗರಗಳಲ್ಲಿ ದಿನಗೂಲಿಗಳಾಗಿ ಬದುಕು ಸವೆಸುತ್ತಿದ್ದಾರೆ. 

ಈ ಅವಕಾಶವಂಚಿತ ನವ  ಶ್ರಮಜೀವಿಗಳ ಗುಂಪಿಗೆ ಮತ್ತಷ್ಟು ರೈತಾಪಿಯನ್ನು, ಗ್ರಾಮೀಣ ಬಡಜನತೆಯನ್ನು ತಳ್ಳುವ ನಿಟ್ಟಿನಲ್ಲಿ ಯಡಿಯೂರಪ್ಪ ರ‍್ಕಾರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಿದೆ. ಇನ್ನು ರ‍್ನಾಟಕದಲ್ಲಿ ಕೃಷಿ ಭೂಮಿಯನ್ನು ಕೊಳ್ಳಲು ಮತ್ತು ಕ್ರೋಢೀಕರಿಸಲು ಯಾವುದೇ ಅಡ್ಡಿ ಆತಂಕಗಳಿಲ್ಲದೆ, ಕೆಲವು ಸೂಕ್ಷ್ಮ ನರ‍್ಬಂಧಗಳಿರುವ ನೂತನ ಭೂ ಸ್ವಾಧೀನ ಕಾಯ್ದೆ ರಾಜ್ಯದಲ್ಲಿ ಜಾರಿಯಲ್ಲಿದೆ. ಇದರೊಂದಿಗೆ ಕೇಂದ್ರ ರ‍್ಕಾರ ಜಾರಿಗೊಳಿಸಿರುವ ಮೂರು ಕರಾಳ ಕೃಷಿ ಕಾಯ್ದೆಗಳು ಕೃಷಿ ಕ್ಷೇತ್ರದ ಖಾಸಗೀಕರಣ ಮತ್ತು ಔದ್ಯಮೀಕರಣಕ್ಕೆ ಪ್ರಶಸ್ತ ಭೂಮಿಕೆಯನ್ನು ಒದಗಿಸಿದೆ. ನೈರ‍್ಗಿಕ ಸಂಪತ್ತು, ಸಂಪನ್ಮೂಲ ಮತ್ತು ಉತ್ಪಾದನೆಯ ಮೂಲಗಳನ್ನು ಕರ‍್ಪೋರೇಟ್ ಮಾರುಕಟ್ಟೆಗೆ ಒಪ್ಪಿಸುವ #ಆತ್ಮನರ‍್ಭರ ಭಾರತದ ಯೋಜನೆಗಳಿಗೆ ರ‍್ನಾಟಕ ಪ್ರಸ್ತಭೂಮಿಯಾಗಿ ಪರಿಣಮಿಸಲಿದೆ.

ಹಾಗಾಗಿ ಶಿಕ್ಷಣ, ಉದ್ಯಮ, ಉತ್ಪಾದನೆ, ವಿಜ್ಞಾನ, ತಂತ್ರಜ್ಞಾನ, ಡಿಜಿಟಲ್ ವೇದಿಕೆ, ರಸ್ತೆ ಮತ್ತು ರೈಲು ಸಾರಿಗೆ, ವಿಮಾನಯಾನ ಹೀಗೆ ನವ ಉದಾರವಾದ ಕರ‍್ಪೋರೇಟ್ ಜಗತ್ತಿಗೆ ಅತ್ಯಮೂಲ್ಯ ತಳಹದಿಯನ್ನು ಒದಗಿಸಬಹುದಾದ ಎಲ್ಲ ವಲಯಗಳಲ್ಲೂ ಕೇಂದ್ರ ರ‍್ಕಾರದ ರ‍್ಥಿಕ ನೀತಿಗಳನ್ನು ಪ್ರತಿರೋಧವಿಲ್ಲದೆ ಅನುಷ್ಟಾನಗೊಳಿಸಲು ರ‍್ನಾಟಕದ ನೂತನ ಬೊಮ್ಮಾಯಿ ರ‍್ಕಾರ ನೆರವಾಗಲಿದೆ. ಈ ಕರ‍್ಪೋರೇಟ್ ಪ್ರಕ್ರಿಯೆಗೆ ಲಿಂಗಾಯತ ರ‍್ಮ ಅಥವಾ ಲಿಂಗಾಯತ ಮತಬ್ಯಾಂಕುಗಳು ಅಡ್ಡಿಯಾಗುವುದೂ ಇಲ್ಲ. ಏಕೆಂದರೆ ಇಲ್ಲಿ ಲಿಂಗಾಯತ ಸಮುದಾಯದ ಔದ್ಯಮಿಕ ಹಿತಾಸಕ್ತಿಗಳ ರಕ್ಷಣೆಯಾಗಿರುತ್ತದೆ. ಹಾಗಾಗಿಯೇ ಮೂಲೆಗುಂಪಾಗಿರುವ ಯಡಿಯೂರಪ್ಪ ಒಂದು ಪ್ರಾದೇಶಿಕ ಶಕ್ತಿಯಾಗಿಯೂ ರೂಪುಗೊಳ್ಳಲಾಗದಂತೆ ಬಿಜೆಪಿ ನಾಯಕತ್ವ ತನ್ನ ರಾಜಕೀಯ ಹೆಜ್ಜೆಗಳನ್ನಿಟ್ಟಿದೆ. 

ನವ ಉದಾರವಾದದ ಸಾಮ್ರಾಜ್ಯ ವಿಸ್ತರಣೆಗೆ ನೆರವಾಗುವುದರೊಂದಿಗೇ , ಬಿಜೆಪಿಯ ಹಿಂದುತ್ವ ರಾಜಕಾರಣವೂ ರ‍್ಜಿತವಾಗಬೇಕಾದರೆ ರಾಜ್ಯಗಳಲ್ಲಿ ಹಿಂದುತ್ವ ಕರ‍್ಯಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತಹ ರ‍್ಕಾರಗಳು, ಮುಖ್ಯಮಂತ್ರಿಗಳು ಅತ್ಯವಶ್ಯವಾಗಿ ಬೇಕಾಗುತ್ತಾರೆ. ಬಸವರಾಜ ಬೊಮ್ಮಾಯಿ ಅಂತಹ ಒಂದು ಮೃದು ಹಿಂದುತ್ವ ಮುಖವಾಡದ ನಾಯಕರಾಗಿ ಹೊರಹೊಮ್ಮಿದ್ದಾರೆ. ೧೯೯೮ರ ವಾಜಪೇಯಿಯವರಂತೆ ವಿರೋಧಿಗಳಿಂದಲೂ ಸ್ವೀಕರಿಸಲ್ಪಡುವ ಬೊಮ್ಮಾಯಿ ತಮ್ಮ ಪರ‍್ವಾಶ್ರಮದ ಅಥವಾ ಪರ‍್ವಿಕರ ಸಮಾಜವಾದಿ ತತ್ವಗಳಿಂದ ಬಹುದೂರ ಸಾಗಿ ಬಂದಿರುವುದು ಮುಂಬರುವ ದಿನಗಳಲ್ಲಿ ಸ್ಪಷ್ಟವಾಗಲಿದೆ. ಈಗಾಗಲೇ ಇತಿಹಾಸ ಪಠ್ಯಗಳಿಂದ ಹೊಸ ರ‍್ಮಗಳ ಉದಯದ ಬಗ್ಗೆ ಇರುವ ಪಾಠಗಳನ್ನು ಪರಿಷ್ಕರಿಸಲು ರ‍್ಕಾರ ಸಮಿತಿಯೊಂದನ್ನು ನೇಮಿಸಿದ್ದು, ಶಿಕ್ಷಣದ ಕೇಸರೀಕರಣ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ರಾಜ್ಯದ ನೂತನ ಗೃಹ ಸಚಿವರೂ ತಮ್ಮ ಬಾಲವಾಡಿಯ ಪಾಠಗಳನ್ನು ಇನ್ನೂ ಮರೆತಿಲ್ಲ ಎನ್ನುವುದನ್ನು ಮೈಸೂರು ಸಾಮೂಹಿಕ ಅತ್ಯಾಚಾರದ ಪ್ರಕರಣದಲ್ಲಿ ಸಾಬೀತುಪಡಿಸಿದ್ದಾರೆ.

ರಾಜ್ಯದ ಜನಸಾಮಾನ್ಯರ ಹಿತಾಸಕ್ತಿಗಳು, ಪ್ರಾದೇಶಿಕ ಸಮಸ್ಯೆಗಳು, ಭಾಷಾ ಸಮಸ್ಯೆ ಮತ್ತು ರ‍್ನಾಟಕದ ಆಂತರಿಕ ಸಾಮಾಜಿಕರ‍್ಥಿಕ ವಲಯದಲ್ಲಿನ ಜಟಿಲ ಸಮಸ್ಯೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳನ್ನು ಅಥವಾ ಸಚಿವ ಸಂಪುಟವನ್ನು ಬದಲಾಯಿಸುವ ಒಂದು ಪರಂಪರೆಗೆ ಬಿಜೆಪಿ ತಿಲಾಂಜಲಿ ನೀಡಿದೆ. ಇಂದು ಎಂತಹುದೇ ಕಡು ಭ್ರಷ್ಟಾಚಾರದ ಆರೋಪ ಹೊತ್ತಿದ್ದರೂ, ಎಂತಹುದೇ ಸುಡು ವಾಸ್ತವಗಳು ರಾಜ್ಯವನ್ನು ಬಾಧಿಸುತ್ತಿದ್ದರೂ ಅದು ಮುಖ್ಯಮಂತ್ರಿಗಳ ಮತ್ತು ಸ್ಥಾಪಿತ ಅಧಿಕಾರಪೀಠಗಳನ್ನು ಅಲುಗಾಡಿಸುವುದಿಲ್ಲ. ರಾಜ್ಯ ಮಟ್ಟದ ಪ್ರಾದೇಶಿಕ ಹಿತಾಸಕ್ತಿಗಳನ್ನೂ ಮೀರಿದ ಅಖಂಡ ರಾಷ್ಟ್ರದ ಹಿತಾಸಕ್ತಿ, ನರೇಂದ್ರ ಮೋದಿ ರ‍್ಕಾರಕ್ಕೆ ಹೆಚ್ಚು ಮುಖ್ಯವಾಗಿ ಕಾಣುತ್ತದೆ. ಹಾಗಾಗಿ ಪಾರರ‍್ಶಕ ಆಡಳಿತ, ಪ್ರಾಮಾಣಿಕ ಆಡಳಿತ ನೀತಿಗಳಿಗಿಂತಲೂ ಹೆಚ್ಚಾಗಿ ನವ ಉದಾರವಾದದ ಕರ‍್ಪೋರೇಟ್ ರ‍್ಥಿಕ ನೀತಿ ಮತ್ತು ಹಿಂದುತ್ವ ಯೋಜನೆಯ ಕರ‍್ಯಸೂಚಿಗಳನ್ನು ಶ್ರದ್ಧಾಭಕ್ತಿಗಳಿಂದ ಅನುಷ್ಟಾನಗೊಳಿಸುವುದು ನೂತನ ಬೊಮ್ಮಾಯಿ ರ‍್ಕಾರದ ಆದ್ಯತೆಯಾಗಿ , ಪ್ರಥಮ ಆಯ್ಕೆಯಾಗಿ, ಉಳಿಯುತ್ತದೆ.

ಇದನ್ನೂ ಮೀರಿ ನಡೆಯುವ ಧೀಶಕ್ತಿಯನ್ನೂ ರಾಜ್ಯ ಬಿಜೆಪಿ ನಾಯಕರು ಕಳೆದುಕೊಂಡಿದ್ದಾರೆ ಎನ್ನುವುದು ಮುಖ್ಯಮಂತ್ರಿಯ ಬದಲಾವಣೆಯ ಸಂರ‍್ಭದಲ್ಲೇ ಸ್ಪಷ್ಟವಾಗಿದೆ. ಒಂದೆಡೆ ಜಾತಿ ಸಮುದಾಯದ ರಾಜಕೀಯ ಪ್ರಾಬಲ್ಯ ಮತ್ತೊಂದೆಡೆ ಕರ‍್ಪೋರೇಟ್ ವಲಯದ ಪ್ರಭಾವ ರ‍್ನಾಟಕದ ಆಡಳಿತ ನೀತಿಗಳನ್ನು ನಿಯಂತ್ರಿಸುತ್ತವೆ. ಈ ಪ್ರವೃತ್ತಿಯನ್ನು ಪ್ರಬಲವಾಗಿ ವಿರೋಧಿಸಬಹುದಾದ ಏಕೈಕ ಪ್ರಾದೇಶಿಕ ಪಕ್ಷ ಜಾತ್ಯತೀತ ಜನತಾ ದಳ (ಜೆಡಿಎಸ್) ಅಧಿಕಾರ ಪೀಠಕ್ಕಾಗಿ ಯಾವುದೇ ತನ್ನೆಲ್ಲಾ ತತ್ವ ಸಿದ್ಧಾಂತಗಳನ್ನೂ (?) ಬಲಿಕೊಟ್ಟು ಅಧಿಕಾರ ಅನುಭವಿಸಲು ಸಜ್ಜಾಗಿದೆ. ಮೈಸೂರು ಮತ್ತು ಕಲಬರ‍್ಗಿಯ ಮೇಯರ್ ಚುನಾವಣೆಗಳು ನಿರ‍್ಶನವಷ್ಟೇ. ತನ್ನ ರಾಜಕೀಯ ಅಸ್ತಿತ್ವವೊಂದನ್ನೇ ಪ್ರಧಾನವಾಗಿ ಪರಿಗಣಿಸುವ ಜೆಡಿಎಸ್ ತನ್ನ ಪ್ರಾದೇಶಿಕ ಸೊಗಡನ್ನೂ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಹೆಚ್ಚಿನ ನಿರೀಕ್ಷೆಗಳೂ ವ್ರ‍್ಥವಾದೀತು.

ಈ ಅಪಾಯಕಾರಿ ಸನ್ನಿವೇಶದಲ್ಲಿ ಕೇಂದ್ರ ರ‍್ಕಾರದ ಕರ‍್ಪೋರೇಟ್ ರ‍್ಥಿಕ ನೀತಿಗಳ ವಿರುದ್ಧ, ಕರಾಳ ಕೃಷಿ ಕಾಯ್ದೆಗಳ ವಿರುದ್ಧ, ದಮನಕಾರಿ ಕರಾಳ ಶಾಸನಗಳ ವಿರುದ್ಧ, ರಾಜ್ಯ ರ‍್ಕಾರದ ಕರಾಳ ಭೂಸ್ವಾಧೀನ ಕಾಯ್ದೆಯ  ವಿರುದ್ಧ ಮತ್ತು ಕ್ಷಿಪ್ರಗತಿಯಲ್ಲಿ ಸಾಗುತ್ತಿರುವ ಶಿಕ್ಷಣದ ಕೇಸರೀಕರಣದ ವಿರುದ್ಧ ಹಾಗೂ ಸರ‍್ವಜನಿಕ ಉದ್ದಿಮೆಗಳ ಖಾಸಗೀಕರಣದ ವಿರುದ್ಧ ಜನಾಂದೋಲನಕ್ಕೆ ಪ್ರೇರಕವಾಗುವಂತಹ ಒಂದು ಕರ‍್ಯ ಯೋಜನೆಯನ್ನು, ಹೋರಾಟದ ನೀಲನಕ್ಷೆಯನ್ನು ಸಿದ್ಧಪಡಿಸುವಲ್ಲಿ ಕಾಂಗ್ರೆಸ್ ಪಕ್ಷ ಸಂಪರ‍್ಣವಾಗಿ ಸೋತಿದೆ. ಬಹುಶಃ ತನ್ನದೇ ರ‍್ಥಿಕ ನೀತಿಗಳನ್ನು ಬಿಜೆಪಿ ಜಾರಿಗೊಳಿಸುತ್ತಿದೆ ಎಂಬ ೧೯೯೯ರ ಕಾಂಗ್ರೆಸ್ ಪಕ್ಷದ ಆತ್ಮರತಿಯ ಧ್ವನಿ ಇಂದಿಗೂ ಸಹ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ ಎನಿಸುತ್ತದೆ. ಹಾಗಾಗಿಯೇ ಕೇಂದ್ರ ರ‍್ಕಾರದ ರ‍್ಥಿಕ ನೀತಿಗಳನ್ನು ವಿರೋಧಿಸುವ ಒಂದು ಪ್ರಖರ ದನಿ ಕಾಂಗ್ರೆಸ್ ಪಕ್ಷದಿಂದ ಮೂಡುತ್ತಿಲ್ಲ.

ಈ ಸಂದಿಗ್ಧತೆಯ ನಡುವೆಯೇ ರ‍್ನಾಟಕದ ಜನತೆ, ನವ ಉದಾರವಾದದ ವಿರುದ್ಧ, ಬಲಪಂಥೀಯ ರಾಜಕಾರಣದ ವಿರುದ್ಧ, ಜಾತಿ ರಾಜಕಾರಣದ ವಿರುದ್ಧ, ಕೋಮುವಾದಿ ಫ್ಯಾಸಿಸಂನ ಧಾಳಿಯ ವಿರುದ್ಧ, ಕೇಂದ್ರ ಮತ್ತು ರಾಜ್ಯ ರ‍್ಕಾರಗಳ ಜನವಿರೋಧಿ ಕರಾಳ ಶಾಸನಗಳ ವಿರುದ್ಧ ಒಂದು ಪ್ರಬಲ ಪ್ರಾದೇಶಿಕ ಅಸ್ಮಿತೆಯ ಹೊರಾಟದ ಕನಸು ಕಟ್ಟಬೇಕಿದೆ.  ಉಡುಪಿಯಲ್ಲಿ ಕ್ರೈಸ್ತ ದೇವಾಲಯದ ಮೇಲೆ ನಡೆದಿರುವ ಧಾಳಿ ೨೦೨೪ರ #ಆತ್ಮನರ‍್ಭರ ಭಾರತದ ನರ‍್ಮಾಣಕ್ಕೆ ನೆರವಾಗುವ ಒಂದು ಇಟ್ಟಿಗೆಯಾದರೂ ಹೆಚ್ಚೇನಿಲ್ಲ. ಈ ಗಂಭೀರತೆಯನ್ನು ಗ್ರಹಿಸುವ ಬೌದ್ಧಿಕ ಸಾಮಥ್ರ‍್ಯವನ್ನು ರಾಜ್ಯ ಕಾಂಗ್ರೆಸ್ ನಾಯಕರೂ ಕಳೆದುಕೊಂಡಿರುವುದರಿಂದ, ಇಂದು ಎಡಪಂಥೀಯ ಪಕ್ಷಗಳ ಮತ್ತು ಸಂಘಟನೆಗಳ, ದಲಿತ ಚಳುವಳಿಗಳ ಮತ್ತು ಇತರ ಜನಪರ ಚಳುವಳಿಗಳ ಮುಂದಿನ ಸವಾಲುಗಳು ಮತ್ತಷ್ಟು ಜಟಿಲವಾಗಿವೆ. ಈ ಸವಾಲುಗಳನ್ನು ಎದುರಿಸಲು ಬೇಕಾದ ಪ್ರೋತ್ಸಾಹಕರ ಬೌದ್ಧಿಕ ಚಿಂತನ ಮಂಥನಗಳು ಇಂದು ಅನಿವರ‍್ಯವಾಗಿದೆ.

ಪ್ರಸ್ತುತ ಸಂರ‍್ಭದಲ್ಲಿ ರ‍್ನಾಟಕದ ಮಟ್ಟಿಗಾದರೂ, ನವ ಉದಾರವಾದ ಮತ್ತು ಕರ‍್ಪೋರೇಟ್ ಮಾರುಕಟ್ಟೆ ನೀತಿಗಳನ್ನು ತಿರಸ್ಕರಿಸುವ, ಜಾತಿ ರಾಜಕಾರಣವನ್ನು ಮೀರಿದ, ಮತೀಯ ರಾಜಕಾರಣ ಮತ್ತು ಮತಾಂಧತೆಯನ್ನು ಹಿಮ್ಮೆಟ್ಟಿಸುವ, ಕೋಮುವಾದಿ ಫ್ಯಾಸಿಸ್ಟರ ಧಾಳಿಯನ್ನು ಸರ‍್ಥವಾಗಿ ಎದುರಿಸುವ ಹಾಗೂ ರಾಜ್ಯದ ಜನತೆ ಎದುರಿಸುತ್ತಿರುವ  ನಿತ್ಯ ಬದುಕಿನ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ಒಂದು ರ‍್ಯಾಯ ರಾಜಕೀಯ ವೇದಿಕೆ ಇಂದು ಅತ್ಯವಶ್ಯವಾಗಿದೆ. ಈ ರಾಜಕೀಯ ರ‍್ಯಾಯಕ್ಕೆ ಒಂದು ಸೈದ್ಧಾಂತಿಕ ತಳಹದಿಯೂ ಮುಖ್ಯವಾಗುತ್ತದೆ. ಈ ರ‍್ಯಾಯದ ಪ್ರಯತ್ನಗಳಿಗೆ ನಾಯಕತ್ವ ಒದಗಿಸಲು ಅಸರ‍್ಥವಾಗಿರುವ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳು, ಕನಿಷ್ಟ ಪಕ್ಷ ಇದಕ್ಕೆ ಪೂರಕವಾದ ಕರ‍್ಯಸೂಚಿಗಳನ್ನು ಹೊಂದಿದ್ದರೆ, ಹಿಂದುತ್ವ ಕರ‍್ಯಸೂಚಿಯನ್ನು ಮತ್ತು ಕರ‍್ಪೋರೇಟ್ ರ‍್ಥಿಕತೆಯನ್ನು ಹಿಮ್ಮೆಟ್ಟಿಸಲು ಸಾಧ್ಯ. ಈ ನಿಟ್ಟಿನಲ್ಲಿ ಕೊಂಚ ಪ್ರಬುದ್ಧತೆಯಿಂದ ಯೋಚಿಸೋಣವೇ ?
-೦-೦-೦-೦-