ತುರುವೇಕೆರೆಯ ಜನೌಷಧಿ ಕೇಂದ್ರ  ಮುಚ್ಚೇ ಮೂರ‍್ನಾಲ್ಕು ತಿಂಗಳಾಯ್ತು!

ಜನೌಷಧಿ ಕೇಂದ್ರ ಮುಚ್ಚೇ ಮೂರ‍್ನಾಲ್ಕು ತಿಂಗಳಾಯ್ತು!

ತುರುವೇಕೆರೆಯ ಜನೌಷಧಿ ಕೇಂದ್ರ  ಮುಚ್ಚೇ  ಮೂರ‍್ನಾಲ್ಕು ತಿಂಗಳಾಯ್ತು!

ತುರುವೇಕೆರೆಯ ಜನೌಷಧಿ ಕೇಂದ್ರ 
ಮುಚ್ಚೇ ಮರ‍್ನಾಲ್ಕು ತಿಂಗಳಾಯ್ತು!
          ಎಸ್.ನಾಗಭೂಷಣ
ತುರುವೇಕೆರೆ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜನ ಸಾಮಾನ್ಯರಿಗೆ ಅಗ್ಗದ ದರದಲ್ಲಿ ಔಷಧಗಳು ಸಿಗಬೇಕೆಂಬ ದೃಷ್ಟಿಯಿಂದ ಪ್ರಾರಂಭಿಸಿರುವ ಜನೌಷಧ ಕೇಂದ್ರ ಬಡವರು ಮತ್ತು ಜನಸಾಮಾನ್ಯರಿಗೆ ಅನುಕೂಲವಾಗಿದೆ ಎಂಬುದAತೂ ಸತ್ಯ.
 ಆದರೆ ಇಲ್ಲಿಯ ಸರ್ಕಾರಿ ಆಸ್ಪತ್ರೆಯ ಬಳಿ ಪ್ರಾರಂಭಿಸಿರುವ ಜನೌಷಧ ಕೇಂದ್ರ ಮುಚ್ಚೇ ಸುಮಾರು ಮರ‍್ನಾಲ್ಕು ತಿಂಗಳಾಗುತ್ತಿದೆ. ಎಂಎಸ್‌ಐಎಲ್ ಸಂಸ್ಥೆಯ ಜವಾಬ್ದಾರಿಯಲ್ಲಿ ನಡೆಯುತ್ತಿರುವ ಈ ಜನೌಷಧ ಕೇಂದ್ರವನ್ನು ತೆರಸುವ ಮನಸ್ಸು ಆ ಸಂಸ್ಥೆಗೆ ಇಲ್ಲವಾಗಿದೆ. 
ಕಳೆದ ಒಂದೆರೆಡು ವರ್ಷಗಳ ಹಿಂದೆ ಪ್ರಾರಂಭಿಸಿರುವ ಈ ಕೇಂದ್ರದಲ್ಲಿ ಪ್ರತಿದಿನ ನೂರಾರು ಮಂದಿ ತಮಗೆ ಅಗತ್ಯವಿದ್ದ ಔಷಧಗಳನ್ನು ಕೊಂಡು ಸಂತೃಪ್ತಿ ಹೊಂದಿದ್ದರು. ಹಲವಾರು ಬಡ ರೋಗಿಗಳಿಗಂತೂ ಈ ಜನೌಷಧ ಕೇಂದ್ರ ಬಹಳ ಉಪಯುಕ್ತವಾಗಿತ್ತು. ಕಡಿಮೆ ಹಣಕ್ಕೆ ಔಷಧ ಪಡೆದುಕೊಳ್ಳುತ್ತಿದ್ದರು. ಬಹುಮಂದಿ ಈ ಕೇಂದ್ರದಿAದಲೇ ಸಕ್ಕರೆ ಖಾಯಿಲೆ, ಬಿಪಿ ಮೊದಲಾದ ರೋಗಗಳಿಗೆ ಔಷಧಗಳನ್ನು ಕೊಳ್ಳುತ್ತಿದ್ದರು. ಅಲ್ಲದೇ ಇಲ್ಲಿ ಸಿಗುವ ಔಷಧಕ್ಕೆ ಹೊಂದಿಕೊAಡಿದ್ದರು. ವಿವಿಧ ಖಾಯಿಲೆಗಳಿಗೂ ಇಲ್ಲಿ ಔಷಧಗಳು ಕಡಿಮೆ ಮೊತ್ತಕ್ಕೆ ದೊರೆಯುತ್ತಿತ್ತು. ಆದರೆ ಈಗ ಕಳೆದ ಮರ‍್ನಾಲ್ಕು ತಿಂಗಳಿAದ ಈ ಜನೌಷಧ ಕೇಂದ್ರ ಮುಚ್ಚಿರುವ ಫಲವಾಗಿ ಸಾಮಾನ್ಯ ಜನರು ಪರದಾಡುವಂತಾಗಿದೆ.