ಒಕ್ಕಲಿಗ ಸಮಾವೇಶ

ಒಕ್ಕಲಿಗ ಸಮಾವೇಶ



‘ಕೇಂದ್ರ ಓಬಿಸಿ ಆಯೋಗದೊಡನೆ ಚರ್ಚಿಸುವೆ’


-ಎ.ನಾರಾಯಣಸ್ವಾಮಿ , ಭಾರತದ ಸಾಮಾಜಿಕ ನ್ಯಾಯ, ಸಬಲೀಕರಣ ಸಚಿವರು 

75 ವರ್ಷಗಳ ಆಡಳಿತದಲ್ಲಿ ಮೀಸಲಾತಿ ಗೊಂದಲಗಳು ಇವೆ. ಆರ್ಥಿಕ, ಸಾಮಾಜಿಕ, ರಾಜಕೀಯ ಮೀಸಲಾತಿಯಿಂದ ಅನೇಕ ಸಮುದಾಯಗಳು ವಂಚಿತವಾಗಿವೆ, ಸ್ಪಷ್ಟ ಆದೇಶವನ್ನು ಹೊರಡಿಸಿಲ್ಲ, ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರಕಾರ ಇದ್ದರು, ಬದಲಾಗಲಿಲ್ಲ, ರಾಜ್ಯದಲ್ಲಿ ಕುಂಚಿಟಿಗ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗಿದೆ. ವಿಧಾನಸಭೆ, ಪಾರ್ಲಿಮೆಂಟಿನಲ್ಲಿ ಏನು ಮಾತನಾಡದ ಜನಪ್ರತಿನಿಧಿಗಳಿಂದ ಯಾವುದೇ ಸಮುದಾಯದ ಸಮಸ್ಯೆ ಬಗೆಹರಿಯುವುದಿಲ್ಲ, ಕುಲಶಾಸ್ತ್ರೀಯ ಅಧ್ಯಯನ ಮಂಡನೆಯಾಗದ ಬಗ್ಗೆ ಯಾವ ಮುಖಂಡರು ಮಾತನಾಡಲಿಲ್ಲ, ಕೇಂದ್ರದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರೊಂದಿಗೆ ಚರ್ಚಿಸಿ, ಕುಂಚಿಟಿಗ ಸಮುದಾಯವನ್ನು ಒಬಿಸಿಗೆ ಸೇರಿಸಲು ಚರ್ಚಿಸುತ್ತೇನೆ, ಕುಂಚಿಟಿಗರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಶ್ರಮಿಸುತ್ತೇನೆ.


ಕೇಂದ್ರದ ಓಬಿಸಿ ಪಟ್ಟಿಗೆ ಸೇರ್ಪಡೆಗೆ ಪ್ರಯತ್ನಿಸುವೆ
-ಡಿ.ವಿ.ಸದಾನಂದಗೌಡರು, ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವರು

ದೇಶದ ಅಭಿವೃದ್ದಿಯಲ್ಲಿ ಒಕ್ಕಲಿಗ ಸಮುದಾಯದ ಪಾತ್ರ ಮಹತ್ವದ್ದಾಗಿದೆ. ಐದು ನೂರು ವರ್ಷಗಳ ಹಿಂದೆಯೇ ಸ್ಮಾರ್ಟ್ಸಿಟಿಯ ಪರಿಕಲ್ಪನೆ ಕೊಟ್ಟವರು ನಾಡುಪ್ರಭು ಕೆಂಪೇಗೌಡರು. ಹಾಗಾಗಿ ನಾವು ಒಕ್ಕಲಿಗರು ಎಂದು ಹೇಳಿಕೊಳ್ಳಲು ಹಿಂಜರಿಕೆ ಬೇಡ,ಎಲ್ಲರೂ ಒಗ್ಗೂಡಿ ನಮ್ಮ ಶಕ್ತಿ ಏನು ಎಂದು ದೇಶಕ್ಕೆ ಪರಿಚಯಿಸಬೇಕಿದೆ. ವಿಶ್ವದೆಲ್ಲೆಡೆ ಇಂದು ಕುಂಚಿಟಿಗ ಸಮುದಾಯದ ಜನರನ್ನು ಕಾಣಬಹುದಾಗಿದೆ. ಇದು ಹೆಮ್ಮೆ ಪಡುವಂತಹ ವಿಚಾರ. ಈ  ಸಮುದಾಯವನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಲು ಶಕ್ತಿ ಮೀರಿ ಪ್ರಯತ್ನಿಸುವೆ.


ಸ್ವಾಮಿಗಳು, ಮುಖಂಡರು ಒತ್ತಡ ಹಾಕಬೇಕು
- ಟಿ.ಬಿ.ಜಯಚಂದ್ರ , ಮಾಜಿ ಸಚಿವರು ಹಾಗೂ ಕುಂಚಿಟಿಗರ ಮುಖಂಡರು

ಕುಂಚಿಟಿಗ ಒಕ್ಕಲಿಗ ಸಮುದಾಯ ಕೇಂದ್ರ ಒಬಿಸಿ ಜಾತಿಪಟ್ಟಿಯಲ್ಲಿ ಇಲ್ಲದ ಕಾರಣ. ಇಂದು ನಮ್ಮ ಮಕ್ಕಳು ಕೇಂದ್ರ ಸರಕಾರಿ ಹುದ್ದೆಗಳಲ್ಲಿ ಮೀಸಲಾತಿಯಿಂದ ವಂಚಿತರಾಗುತ್ತಿದ್ದಾರೆ. ಒಕ್ಕಲಿಗ ಸಮುದಾಯದ ಆರು ಉಪ ಜಾತಿಗಳಲ್ಲಿ ಐದು ಓಬಿಸಿ ಪಟ್ಟಿಯಲ್ಲಿದ್ದು, ಕುಂಚಿಟಿಗ ಉಪ ಜಾತಿಯನ್ನು ಹೊರಗಿಡ ಲಾಗಿದೆ. ಸಮಾಜದ ಸ್ವಾಮೀಜಿಗಳು, ರಾಜಕೀಯ ಮುಖಂಡರುಗಳು ಈಗಾಗಲೇ ಕೇಂದ್ರದಲ್ಲಿರುವ ರಾಜ್ಯದ ಶಿಫಾರಸ್ಸನ್ನು ಅಂಗೀಕರಿಸಲು ಒತ್ತಡ ಹಾಕಬೇಕು.

ಬಿ.ರಂಗಣ್ಣನವರ ದೂರದೃಷ್ಟಿಯ ಫಲ 
-ಬಿ.ಸಿ.ನಾಗೇಶ್, ಶಾಲಾ ಮತ್ತು ಸಾಕ್ಷರತಾ ಸಚಿವ 

ಯಾವುದೇ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಲು ಶೈಕ್ಷಣಿಕ ಜಾಗೃತಿ ಅಗತ್ಯ. ಈ ನಿಟ್ಟಿನಲ್ಲಿ ಐವತ್ತು ವರ್ಷಗಳ ಹಿಂದೆಯೇ ಬಿ.ರಂಗಣ್ಣನವರAತಹ ಹಿರಿಯರ ದೂರದೃಷ್ಟಿಯಿಂದ ವಿದ್ಯಾರ್ಥಿ ನಿಲಯಗಳು ಪ್ರಾರಂಭಗೊAಡು, ಶೈಕ್ಷಣಿಕ ಪ್ರಗತಿಗೆ ಮುನ್ನುಡಿ ಬರೆದಿದೆ. ಇಡೀ ಪ್ರಪಂಚವೇ ಭಾರತವನ್ನು ವಿಶ್ವಗುರು ಎಂದು ಪರಿಗಣಿಸಿರುವ ಸಂದರ್ಭದಲ್ಲಿ ಯುವಜನತೆ ವಿದ್ಯಾವಂತರಾಗಿ ರಾಷ್ಟçದ ಪ್ರಗತಿಯಲ್ಲಿ ಪಾಲ್ಗೊಳ್ಳಬೇಕು.

(ತುಮಕೂರು ಜಿಲ್ಲಾ ಕುಂಚಟಿಗ ಒಕ್ಕಲಿಗ ವಿದ್ಯಾಭಿವೃದ್ದಿ ಸಂಘದ ಸುವರ್ಣ ಮಹೋತ್ಸವ ಹಾಗೂ  ಕುಂಚಿಟಿಗರ ಬೃಹತ್ ಜಾಗೃತಿ ಸಮಾವೇಶದಲ್ಲಿ )



‘ಇ.ಡಿ ಮೇಲೆ ಗೂಬೆ ಕೂರಿಸಬೇಡಿ’
ಮಾಜಿ ಡಿಸಿಎಂ ಸದಾನಂದಗೌಡ ಪ್ರತಿಕ್ರಿಯೆ


ತುಮಕೂರು:  ಜಾರಿ ನಿರ್ದೇಶನಾಲಯ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೇರಿದ್ದಲ್ಲ. ವಿನಾ ಕಾರಣ ಇ.ಡಿ. ಮೇಲೆ ಗೂಬೆ ಕೂರಿಸುವ ಕೆಲಸ ಮಾಡುವುದು ಸರಿಯಲ್ಲ. ಕಾಂಗ್ರೆಸ್‌ನವರಿಗೆ ಬೇರೆ ಯಾವ ವಿಚಾರಗಳು ಸಿಗದೇ ಇದ್ದಾಗ ಈಗ ಇ.ಡಿ. ವಿಚಾರವನ್ನು ಮುಂದಿಟ್ಟುಕೊಂಡು ದೊಡ್ಡದು ಮಾಡುತ್ತಿದ್ದಾರೆ ಎಂದಿದ್ದಾರೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಡಿ.ವಿ. ಸದಾನಂದ ಗೌಡ 


ಕಾಂಗ್ರೆಸ್ ನಾಯಕಿ ಸೋನಿಯಾ ಹಾಗೂ ರಾಹುಲ್ ವಿರುದ್ಧ ಇಡಿ ವಿಚಾರಣೆ ಖಂಡಿಸಿ ಆ ಪಕ್ಷ ನಡೆಸುತ್ತಿರುವ ಪ್ರತಿಭಟನೆ ಹಾಗೂ ಹೇಳಿಕೆಗಳಿಗೆ ಗೌಡರು ಪ್ರತಿಕ್ರಿಯಿಸಿದ್ದು ಹೀಗೆ.


ದೇಶದಲ್ಲಿ ಉದ್ಯೋಗ ಸಿಗದೆ ಸಾಕಷ್ಟು ಜನ ಪರದಾಡುತ್ತಿದ್ದಾರೆ. ಅಗ್ನಿಪಥ್ ಯೋಜನೆ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಪೂರಕವಾಗಿದೆ.


ಕುವೆಂಪುಗೆ ಅಪಮಾನ ಮಾಡಿಲ್ಲ : ಪಠ್ಯ ಪರಿಷ್ಕರಣೆಯಲ್ಲಿ ಕುವೆಂಪು ಅವರಿಗೆ ಅಪಮಾನ ಮಾಡಿಲ್ಲ. ಅವರ  ಹೆಚ್ಚು ಪಠ್ಯಗಳನ್ನು ಕೊಟ್ಟಿದ್ದು ನಮ್ಮ ಬಿಜೆಪಿ ಪಕ್ಷ. ಹೀಗಿರುವಾಗ ನಾವು ಅವರಿಗೆ ಅಪಮಾನ ಮಾಡುತ್ತೇವಾ ಎಂದು ಪ್ರಶ್ನಿಸಿದ ಅವರು, ಈಗಾಗಲೇ ಸರ್ಕಾರ ಪಠ್ಯದಲ್ಲಿ ಕೆಲ ಬದಲಾವಣೆ ಮಾಡಲು ಒಪ್ಪಿಕೊಂಡಿದೆ.ದೇಶದ ಸಂಸ್ಕöÈತಿ, ಸಂಸ್ಕಾರಗಳು ಉಳಿಯಬೇಕು ಎಂಬುದು ನಮ್ಮ ಮೂಲ ಉದ್ದೇಶ ಎಂದರು.

-------------------------------------------------------------------------------------------------------------ಎಂ


ಕುಂಚಶ್ರೀ  ಪ್ಯಾಲೇಸ್ ಉದ್ಘಾಟಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ,ಕುಂಚಟಿಗ ಒಕ್ಕಲಿಗರನ್ನು ಒಬಿಸಿ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಿದ್ದನ್ನು ಕೇಂದ್ರ ಒಪ್ಪಿಲ್ಲ.ಆದರೆ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ, ರಾಜ್ಯ ಸರಕಾರಗಳಿಗೆ ಓಬಿಸಿ ಪಟ್ಟಿಗೆ ಸೇರಿಸುವ ಎಲ್ಲ ಅಧಿಕಾರ ಇದೆ.ಹಾಗಾಗಿ ರಾಜ್ಯದಲ್ಲಿಯೇ ಕುಂಚಟಿಗರನ್ನು ಒಕ್ಕಲಿಗ ಸಮುದಾಯಕ್ಕೆ ಸೇರಿಸಲು ಎಲ್ಲಾ ರೀತಿಯ ಕ್ರಮ ವಹಿಸಬಹುದಾಗಿದೆ. ಮಳೆ ನೀರನ್ನು ನಂಬಿ ಬದುಕುತ್ತಿರುವ ರೈತರ ಬದುಕು ಕಂಡಿದ್ದೇನೆ, ಭದ್ರ ಮೇಲ್ದಂಡೆ ಯೋಜನೆ ನೆನೆಗುಂದಿಗೆ ಬಿದ್ದಿತ್ತು, ಅದಕ್ಕೆ ಮತ್ತೆ ನಾನು ಚಾಲನೆ ನೀಡಿದೆ, ಇದರಿಂದ ಚಿತ್ರದುರ್ಗ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗೆ ಅನುಕೂಲವಾಗಲಿದೆ ಎಂದರು.


ರೈತರು ಸಂದರ್ಭಕ್ಕೆ ತಕ್ಕಂತೆ ಬೆಳೆಯಬೇಕು,ಇಸ್ರೇಲ್‌ಗೆ ಹೋಗಿ ಕಲಿಯಬೇಕಾಗಿರುವುದು ಏನು ಇಲ್ಲ.ಈ ಬಾರಿ ನಾನು ಬೆಳೆದಿರುವ ಬಾಳೆಯಿಂದ ಎಂಭತ್ತರಿAದ ಒಂದು ಲಕ್ಷರೂ  ಆದಾಯ ಬರುತ್ತದೆ.ಯಾವ ರೀತಿ ಮುಖ್ಯಮಂತ್ರಿಯಾಗುತ್ತೇನೋ ಗೊತ್ತಿಲ್ಲ,ಮುಂದಿನ ಬಾರಿ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬ ವಿಶ್ವಾಸವಿದೆ, ಮೂರನೇ ಬಾರಿ ಜನರು ಆರ್ಶೀವಾದವಿದ್ದರೆ, ಪರಮ ಪೂಜ್ಯರ ಕೃಪೆ ಇದ್ದರೆ ಹಾಗೆ ಆಗುತ್ತೀನಿ ಎಂಬ ವಿಶ್ವಾಸವಿದೆ, ಕುಂಚಿಟಿಗ ಸಮುದಾಯವನ್ನು ಒಬಿಸಿ ಪಟ್ಟಿಗೆ ನಾನೇ ಸೇರಿಸುತ್ತೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.


ಜಿಲ್ಲೆಯ ನೀರಾವರಿ ಯೋಜನೆ ದೇವೇಗೌಡರ ಕೊಡುಗೆ, ದೇವೇಗೌಡರ ಆರೋಗ್ಯ ಕೆಡುತ್ತಿದೆ, ಅವರು ಇಂದು ನೋವಿನಲ್ಲಿದ್ದರೆ ಅದು ಇಲ್ಲಿನ ಕುತಂತ್ರದ ರಾಜಕೀಯವೇ ಕಾರಣ.ವಿರೋಧ ಪಕ್ಷದಲ್ಲಿದ್ದುಕೊಂಡೆ ದೇವೇಗೌಡರು ಅನೇಕ ಕೊಡುಗೆ ನೀಡಿದ್ದಾರೆ, ಅವರ ಹೆಸರು ಉಳಿಸುವ ಕೆಲಸವನ್ನು ಮಾಡುತ್ತೇನೆ, ಕುಂಚಿಟಿಗ ಒಕ್ಕಲಿಗರ ವಿದ್ಯಾಸಂಸ್ಥೆ ಗೆ ಅಗತ್ಯ ಸಹಕಾರ ನೀಡುವುದಾಗಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.


ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿಯ ಶ್ರೀನಿರ್ಮಲಾನಂದ ನಾಥಸ್ವಾಮೀಜಿ ಮಾತನಾಡಿ,ಕೇಂದ್ರದ ಓಬಿಸಿ ಪಟ್ಟಿಗೆ ಕುಂಚಟಿಗ ಸಮುದಾಯವನ್ನು ಸೇರಿಸಬೇಕೆಂಬುದು ನಮ್ಮ ಬಹುದಿನಗಳ ಬೇಡಿಕೆಯಾಗಿದೆ.ಒಕ್ಕಲಿಗರಿಗೆ ಸಿಗುತ್ತಿರುವ ಈ ಸವಲತ್ತು ಕುಂಚಿಟಿಗರಿಗೆ ಮುಂದಿನ ದಿನಗಳಲ್ಲಿ ಸಿಗಲಿದೆ ಎಂಬ ವಿಶ್ವಾಸವಿದೆ. ಮೊದಲು ಒಕ್ಕಲಿಗ ಎಂಬ ಪದವನ್ನು ತಮ್ಮ ಜಾತಿ ಪಟ್ಟಿಯಲ್ಲಿ ನಮೂದಿಸಬೇಕು.ಒಕ್ಕಲಿಗ ಎಂಬುದು ಒಂದು ಹಣ್ಣಾದರೆ, ಅದರ ಮೇಲ್ಪದರವೇ ಉಪಪಂಗಡಗಳು, ಹಾಗಾಗಿ ವಿಂಗಡಿಸುವ ಪ್ರಯತ್ನ ಸಲ್ಲದು ಎಂದರು.


ಒಕ್ಕಲಿಗ ಸಮುದಾಯ ಒಂದು ಸಾಮ್ರಾಜ್ಯ ಕಟ್ಟಿ ಆಡಳಿತ ನಡೆಸಿದ ಸಮುದಾಯ. ಆಡಳಿತ ಅವರಿಗೆ ಕರಗತ.ನಾವು ಸಮುದಾಯಗಳನ್ನು ಒಡೆಯುವ ಕೆಲಸ ಮಾಡುತ್ತಿಲ್ಲ. ಒಗ್ಗೂಡಿಸುವ ಕೆಲಸ ಮಾಡಲು ಬಂದವರು.ಒಬಿಸಿ ಪಟ್ಟಿಗೆ ಸೇರಬೇಕಾದರೆ ನಮ್ಮ ಶಕ್ತಿ ಪ್ರದರ್ಶನ ಅನಿವಾಯ.ಅದು ವಿಧಾನಸಭೆಯ ಒಳಗೆ ಮತ್ತು ಹೊರಗೆ ಆಗಬೇಕಿದೆ. ಹೆಚ್.ಡಿ.ಕುಮಾರಸ್ವಾಮಿ ಇನ್ನಾರು ತಿಂಗಳು ಮುಖ್ಯಮಂತ್ರಿಯಾಗಿ ಮುಂದುವರೆದಿದ್ದರೆ ಆ ಕೆಲಸ ಅಂದೆ ಪೂರ್ಣಗೊಳ್ಳತ್ತಿತ್ತು. ಮುಂದೆ ಮಾಡಿಯೇ ತೀರುತ್ತೇವೆ ಎಂಬ ಅಚಲ ನಂಬಿಕೆ ನಮ್ಮದು ಎಂದು ಶ್ರೀಶ್ರೀನಿರ್ಮಲಾನಂದನಾಥಸ್ವಾಮೀಜಿ ನುಡಿದರು.


ಈ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವವರಲ್ಲಿ ನಮ್ಮ ಸಮುದಾಯದ ನಾಲ್ಕು ಜನರಲ್ಲಿ ಶಿರಾ ತಾಲೂಕಿನ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇದು ಸಂತೋಷದ ವಿಚಾರ. ನಮ್ಮಲ್ಲಿಯೂ ಸಾಕಷ್ಟು ದೋಷಗಳಿದ್ದು, ಅವುಗಳನ್ನು ಸರಿಪಡಿಸಿಕೊಂಡು ಒಗ್ಗೂಡಿ, ಸಮುದಾಯದ ಬೆಳವಣಿಗೆಗೆ ಹೋರಾಟ ನಡೆಸೋಣ ಎಂದು ಆದಿಚುಂಚನಗಿರಿ ಸ್ವಾಮೀಜಿ ಸಲಹೆ ನೀಡಿದರು.


ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಪಟ್ಟನಾಯಕನಹಳ್ಳಿ ಡಾ.ಶ್ರೀಶ್ರೀನಂಜಾವಧೂತ ಸ್ವಾಮೀಜಿ ಮಾತನಾಡಿ,ಕುಂಚಿಟಿಗ ಒಕ್ಕಲಿಗ ಸಮುದಾಯ ಕೇಂದ್ರ ಓಬಿಸಿ ಜಾತಿ ಪಟ್ಟಿಯಲ್ಲಿ ಇಲ್ಲದಿರುವುದು ನಮ್ಮ ಸ್ವಯಂ ಕೃತ ಅಪರಾಧ.ನಾವೆಲ್ಲರೂ ಹಿಂದು ಕುಂಚಟಿಗ ಎಂದು ನಮ್ಮ ಶಾಲಾ ದಾಖಲಾತಿಗಳಲ್ಲಿ ಬರೆಸದೆ ಒಕ್ಕಲಿಗ ಎಂದು ಬರೆಸಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಸಮುದಾಯದಲ್ಲಿ ಒಂದೆರಡು ಐಎಎಸ್,ಜನಪ್ರತಿನಿಧಿಗಳನ್ನೇ ನೋಡಿ, ಇದು ಮುಂದುವರೆದ ಜಾತಿ ಎಂಬ ತೀರ್ಮಾನಕ್ಕೆ ಆಯೋಗ ಬಂದAತಿದೆ. ಹಾಗಾಗಿ ನಮ್ಮ ಉಪಪಂಗಡಗಳು ಎಷ್ಟೇ ಇರಲಿ, ನಾವೆಲ್ಲರೂ ಒಕ್ಕಲಿಗ ಎಂಬ ವಿಶಾಲ ತಳಹದಿಯ ಮೇಲೆ ಮುಂದುವರೆದರೆ ಮೀಸಲಾತಿ ಪಡೆಯಲು ಸಾಧ್ಯವಾಗುತ್ತದೆ.ನಾನು ಯಾವುದೇ ಮಠದ ಉತ್ತರಾಧಿಕಾರಿಯಾಗಬೇಕೆಂಬ ಕನಸು ಕಂಡಿಲ್ಲ.ಸಮುದಾಯದ ಒಳಿತಿಗಾಗಿ ದುಡಿಯಲು ಸಿದ್ದ.ರಾಜಕೀಯವಾಗಿಯೂ ಸಮುದಾಯವನ್ನು ಮುಂದೆ ತರಲು ಪ್ರಯತ್ನಿಸೊಣ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕುಂಚಟಿಗ ಒಕ್ಕಲಿಗರ ವಿದ್ಯಾಭಿವೃದ್ದಿ ಸಂಘದ ಕಾರ್ಯಾಧ್ಯಕ್ಷ ಆರ್.ಕಾಮರಾಜು,50ವರ್ಷಗಳಿಂದ ಬಿ.ರಂಗಣ್ಣನವರ ದೂರದೃಷ್ಟಿಯ ಫಲವಾಗಿ ಹುಟ್ಟಿಕೊಂಡು ಈ ಸಂಘದ ಇಂದು ಬೃಹದಾಕಾರವಾಗಿ ಬೆಳೆದಿದೆ.ಶಾಲೆಯ ಜೊತೆಗೆ,ಬಾಲಕರ,ಬಾಲಕಿಯರ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ.211ರಲ್ಲಿ ಮಾಜಿ ಸಿ.ಎಂ.ಸದಾನAದಗೌಡರು ನೀಡಿದ ಒಂದು ಕೋಟಿರೂ ಹಾಗೂ ಸಿದ್ದರಾಮಯ್ಯನವರು ನೀಡಿದ ಒಂದು ಕೋಟಿ ರೂ ಸೇರಿದಂತೆ 6.50 ಕೋಟಿ ರೂಗಳಲ್ಲಿ ಕುಂಚಟಿಗ ಭವನ ನಿರ್ಮಾಣ ಮಾಡಲಾಗಿದೆ. ಇದರ ಜೊತೆಗೆ 1.50 ಕೋಟಿ ರೂಗಳಲ್ಲಿ ಕುಂಚಶ್ರೀ ಪ್ಯಾಲೇಸ್ ಸಹ ಇಂದು ಉದ್ಘಾಟನೆಗೊಂಡಿದೆ.ಅಲ್ಲದೆ ತಲಾ 2.30 ಕೋಟಿ ರೂಗಳಲ್ಲಿ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳ ಹೆಚ್ಚುವರಿ ಕೊಠಡಿಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ.ಈ ಎಲ್ಲಾ ಕಾರ್ಯಕ್ರಮಗಳಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.


ಕಾರ್ಯಕ್ರಮದಲ್ಲಿ ಶಾಸಕರಾದ ಎಂ.ವಿ.ವೀರಭದ್ರಯ್ಯ,ಸಿ.ಎA.ರಾಜೇಶಗೌಡ,ಚಿದಾನAದ ಎಂ ಗೌಡ ಅವರುಗಳು ಸಮುದಾಯದ ಬೆಳವಣಿಗೆ ಹಾಗೂ ಕೇಂದ್ರದ ಓಬಿಸಿ ಪಟ್ಟಿಯಲ್ಲಿ ಆಗಿರುವ ತಾರತಮ್ಯ ಸರಿಪಡಿಸುವ ನಿಟ್ಟಿನಲ್ಲಿ ಪ್ರಾಸ್ತಾಪಿಸಿದರು.


ಕಾರ್ಯಕ್ರಮಕ್ಕೂ ಮುನ್ನ ಜಿ.ಪಂ ಬಳಿ ಇರುವ ಕುಂಚಟಿಗ ಭವನ, ಕುಂಚಶ್ರೀ ಪಾಲ್ಯೇಸ್‌ನ ಉದ್ಘಾಟನೆ ನಂತರ, ಸಂಘ ಸಂಸ್ಥಾಪಕರಾದ ಬಿ.ರಂಗಣ್ಣ ಅವರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿಟ್ಟು, ವಿವಿದ ಕಲಾ ತಂಡಗಳ ಪ್ರದರ್ಶನದೊಂದಿಗೆ ಗಾಜಿನಮನೆಯವರೆಗೆ ಮೆರವಣಿಗೆಯಲ್ಲಿ ತರಲಾಯಿತು.


ವೇದಿಕೆಯಲ್ಲಿ ಶಾಸಕರಾದ ಜಿ.ಬಿ.ಜೋತಿಗಣೇಶ್,ರೇಷ್ಮೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಎಸ್.ಆರ್.ಗೌಡ,ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್,ಮಾಜಿ ಸಚಿವ ಎಸ್.ಶಿವಣ್ಣ,ಸಿ.ಚಿಕ್ಕಣ್ಣ,ಪ್ರೊ.ಕೆ.ಸಿ.ವೀರಣ್ಣ,ಕೆ.ವಿ.ನಾಗಪ್ಪ,ಕುಂಚಟಿಗ ಒಕ್ಕಲಿಗರ ವಿದ್ಯಾಭಿವೃದ್ದಿ ಸಂಘದ ಕಾರ್ಯಾಧ್ಯಕ್ಷ ಆರ್.ಕಾಮರಾಜು, ಉಪಾಧ್ಯಕ್ಷ ವೈ.ಆರ್.ವೇಣುಗೋಪಾಲ್,ಕಾರ್ಯದರ್ಶಿ ಎಂ.ರಾಜಕುಮಾರ್,ಮಾಜಿ ಅಧ್ಯಕ್ಷ ದೊಡ್ಡಲಿಂಗಪ್ಪ,  ಮುರುಳೀಧರ ಹಾಲಪ್ಪ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.


ಇದೇ ವೇಳೆ ಪ್ರಸಕ್ತ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಶಿರಾ ತಾಲೂಕಿನ ಕಲ್ಪಶ್ರೀ ಮತ್ತು ಅರುಣ ಅವರುಗಳನ್ನು ಅಭಿನಂದಿಸಲಾಯಿತು.