ಜ್ಯೂ. ಪಿಬಿಎಸ್ ಕಲ್ಲೇಶ್ ಅವರಿಗೆ ನಾದನಮನ ಶ್ರದ್ಧಾಂಜಲಿ
ಜ್ಯೂ. ಪಿಬಿಎಸ್ ಕಲ್ಲೇಶ್ ಅವರಿಗೆ ನಾದನಮನ ಶ್ರದ್ಧಾಂಜಲಿ
ಜ್ಯೂ. ಪಿಬಿಎಸ್ ಕಲ್ಲೇಶ್ ಅವರಿಗೆ ನಾದನಮನ ಶ್ರದ್ಧಾಂಜಲಿ
ಚಿಕ್ಕನಾಯಕನಹಳ್ಳಿ: ಜ್ಯೂನಿಯರ್ ಪಿ.ಬಿ. ಶ್ರೀನಿವಾಸ್ ಖ್ಯಾತಿಯ ಎಂ.ಸಿ. ಕಲ್ಲೇಶ್‌ರವರು ಕಲೆ, ಸಂಗೀತ ಹಾಸ್ಯಗಳ ಕಲಾವಿದರನ್ನು ಹುಟ್ಟುಹಾಕಿದ ಮಹನೀಯರಾಗಿದ್ದವರು ಹಾಗೂ ಕಲಾವಿದರೊಟ್ಟಿಗೆ ಕಲೆ ಅಂತ್ಯವಾಗಬಾರದು. ಕಲಾವಿದರನ್ನ ಆ ಕಲೆಯೊಳಗೆ ಜೀವಂತವಾಗಿಟ್ಟುಕೊಳ್ಳಬೇಕು ಎಂದು ತಾಲೂಕು ಕಸಾಪ ಅಧ್ಯಕ್ಷ ಎಂ.ಎಸ್. ರವಿಕುಮಾರ್ ಕಟ್ಟೇಮನೆ ತಿಳಿಸಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ, ಜೂನಿಯರ್ ಪಿ.ಬಿ. ಶ್ರೀನಿವಾಸ್ ಖ್ಯಾತಿಯ ಗಾಯಕ ಎಂ.ಸಿ. ಕಲ್ಲೇಶ್‌ರವರ ನಿಧನದ ಹಿನ್ನೆಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಪಟ್ಟಣದ ಎಲ್ಲಾ ಕಲಾ ಮತ್ತು ಸಾಂಸ್ಕೃತಿಕ, ಕನ್ನಡ ಸಂಘಟನೆಗಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಗಾನ ನಮನ ಹಾಗೂ ನುಡಿನಮನ ಕಾರ್ಯಕ್ರಮದ ಮೂಲಕ ಶ್ರದ್ಧಾಂಜಲಿ ಆರ್ಪಿಸಲಾಯಿತು.
ಅತ್ಯಂತ ಸರಳ, ಸಜ್ಜನಿಕೆ ವ್ಯಕ್ತಿತ್ವದ ಎಂ.ಸಿ.ಕೆ. ನಿಜವಾಗಿಯೂ ಕಲೆಯನ್ನು ಆರಾಧಿಸುತ್ತಾ ಎಲ್ಲಾ ಕಡೆಗಳಲ್ಲೂ ಕಲೆಗಳನ್ನು ಪಸರಿಸುತ್ತಾ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡಕಲಾವಿದರೊಂದಿಗೆ ಯಾವುದೇ ಹಮ್ಮುಬಿಮ್ಮು ಇಲ್ಲದೆ ಯಾವುದೇ ಈ ಸಂದರ್ಭದಲ್ಲಿ ಸ್ಥಳವಾದರೂ ಸಹ ಸಂಗೀತ ರಸದೌತಣ ಉಣಬಡಿಸುತ್ತಿದ್ದರು ಎಂದರು.
ಕೇAದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾಶ್ರೀ ಡಾ. ಲಕ್ಷö್ಮಣ್ ದಾಸ್ ಮಾತನಾಡಿ, ಕಲಾವಿದರಿಗೆ ನಿಜವಾಗಿಯೂ ಸಂಗೀತ ಕಲೆಗಳ ಬಗ್ಗೆ ಅಪಾರ ಅಭಿಮಾನ, ಆದರ, ಆಶಯಗಳನ್ನು ಜೀವಂತವಾಗಿ ಕೊಂಡ್ಯೋಯುತ್ತೇವೋ ಎಂಬ ಭರವಸೆಯನ್ನು ಈ ಎಲ್ಲಾ ಅಭಿಮಾನಿಗಳು, ಸಂಘ ಸಂಸ್ಥೆಗಳು ನುಡಿನಮನ-ಗಾನನಮನ ಕಾರ್ಯಕ್ರಮ ಆಯೋಜಿಸಿರುವುದು ನಿಜವಾಗಿಯೂ ಕಲೆಯ ಆರಾಧಕರಿಗೆ ನೀಡಿದ ಗೌರವ ಎಂದರು.
ಶ್ರೀ ಬನಶಂಕರಿ ಮಹಿಳಾ ತಂಡದ ಪದ್ಮವರದರಾಜು, ಪುಷ್ಪ ತಂಡ, ಹಾಗೂ ಅಂಗನವಾಡಿ ನೌಕರರು, ಚಲನಚಿತ್ರ ಗೀತೆ, ಸುಗಮ ಸಂಗೀತ ಹಾಡಿದರು. ಎಂ.ಸಿ. ಕಲ್ಲೇಶ್ ಕುಟುಂಬ, ದೇಶೀಯ ವಿದ್ಯಾಪೀಠ ಮತ್ತು ಅಂಬೇಡ್ಕರ್ ಪ್ರೌಢಶಾಲಾ ಮಕ್ಕಳು ಶಿಕ್ಷಕವೃಂದ ಹಾಗೂ ಅಭಿಮಾನಿ ಬಳಗದವರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಈ ಸಂಧರ್ಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಂಘ, ಹರ‍್ಮೋನಿಯಂ ಗಂಗಾಧರ್, ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘ, ಪ್ರೊ. ಸಿ. ರವಿಕುಮಾರ್, ನಿರೂಪ್ ರಾವತ್, ನಂದೀಶ ಬಟ್ಲೇರಿ, ಚಂದ್ರಶೇಖರ್ ಚಿಕ್ಕಾರಂಪುರ, ಕುಂಚಾAಕುರ ಕಲಾಸಂಘ, ಗಂಗಾಧರ್ ಮಗ್ಗದಮನೆ, ಕಿರಣ್ ನಿಶಾನಿ, ಸುಭಾಷ್ ಚಂದ್ರಬೋಸ್ ಆಟೋ ಚಾಲಕರ ಮತ್ತು ಮಾಲೀಕರ ಸಂಘ, ತಾಲ್ಲೂಕು ಪತ್ರಕರ್ತರ ಮಂಜುನಾಥ್ ರಾಜ ಅರಸ್, ರಾಜೀವ್ ಲೋಚನ, ಮೇರುನಾಥ್, ಧನಂಜಯ್, ದಲಿತ ಸಂಘಟನೆಗಳು, ಸಿ.ಎಸ್. ಲಿಂಗದೇವರು, ಚನ್ನಬಸವಯ್ಯ, ಗೋ.ನಿ. ವಸಂತ ಕುಮಾರ್, ಗೋವಿಂದಯ್ಯ, ಅರಸರಳ್ಳಿ ಮೂರ್ತಿ, ಅನ್ನಪೂರ್ಣೇಶ್ವರಿ ಕಲಾಸಂಘ, ತಾಲ್ಲೂಕು ರಂಗಭೂಮಿ ಕಲಾವಿದರ ಸಂಘ, ಹಾಗೂ ಕಲಾವಿದರು ಸಾಹಿತಿಗಳು ಭಾಗವಹಿಸಿದ್ದರು.