ಬೆಳ್ಳಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಘೋಷಣೆ

ಬೆಳ್ಳಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಘೋಷಣೆ ಅಭಿವೃದ್ಧಿಗಾಗಿ ಬಿಜೆಪಿ ತೆಕ್ಕೆಗೆ ಜಿ.ಪಂ ಕೊಡಿ

ಬೆಳ್ಳಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ  ಘೋಷಣೆ

ಬೆಳ್ಳಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಘೋಷಣೆ
‘ಅಭಿವೃದ್ಧಿಗಾಗಿ ಬಿಜೆಪಿ ತೆಕ್ಕೆಗೆ ಜಿ.ಪಂ. ಕೊಡಿ’
ಹುಳಿಯಾರು: ಬರುವ ಚುನಾವಣೆಯಲ್ಲಿ ಜಿಲ್ಲಾ ಪಂಚಾಯ್ತಿಯನ್ನು ಅತಂತ್ರ ಮಾಡದೆ ಭಾರೀ ಬಹುಮತದೊಂದಿಗೆ ಬಿಜೆಪಿ ತೆಕ್ಕೆಗೆ ಕೊಟ್ಟರೆ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ನಿಶ್ಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಘೋಷಿಸಿದರು.
          ಹುಳಿಯಾರು ಹೋಬಳಿಯ ಬೆಳ್ಳಾರ ಗ್ರಾಮದಲ್ಲಿ ಶನಿವಾರ ವಿವಿಧ ಪಕ್ಷದ ಕಾರ್ಯಕರ್ತರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಕಳೆದ ಬಾರಿ ತುಮಕೂರು ಜಿಲ್ಲಾ ಪಂಚಾಯ್ತಿಗೆ ಅತಂತ್ರ ಫಲಿತಾಂಶ ನೀಡಿದ ಪರಿಣಾಮ ಮೈತ್ರಿ ಆಡಳಿತ ನಡೆಸಲಾಯಿತು. ಇದರಿಂದಾಗಿ ಅಭಿವೃದ್ಧಿ ಬಗ್ಗೆ ಯೋಚನೆ ಮಾಡದೆ ಕೇವಲ ಅಧಿಕಾರಕ್ಕೆ ಕಿತ್ತಾಡಿದರು. ಜಿಪಂನಲ್ಲಿ ೬೦೦ ಕೋಟಿ ರೂ. ಇದ್ದರೂ ಸರಿಯಾಗಿ ಸಭೆ ನಡೆಸದೆ ಜಿಲ್ಲೆಯಲ್ಲಿ ಕೆಲಸ ಕಾರ್ಯಗಳು ಕುಂಟಿತವಾದವು. ಪಶು ಔಷಧಿ ಕೊಳ್ಳಲು ಸಹ ಅನುಮೋದನೆ ಕೊಟ್ಟಿರಲಿಲ್ಲ. ಇದರಿಂದ ಬೇಸತ್ತು ಖುದ್ದು ನಾನೇ ಜಿಪಂ ಸದಸ್ಯರಿಗೆ ಕರೆ ಮಾಡಿ ಸಭೆ ನಡೆಸಿ ಅನುಮೋದನೆ ಕೊಡಿ ಎಂದು ಕೇಳಿಕೊಂಡಿದ್ದೇನೆ. ಇದು ಅತಂತ್ರ ಫಲಿತಾಂಶದ ಫಲದ ನಿದರ್ಶನ. ಹಾಗಾಗಿ ಬಿಜೆಪಿಗೆ ಬಹುಮತ ಕೊಟ್ಟರೆ ಜಿಲ್ಲೆಯ ಅಭಿವೃದ್ಧಿ ಮಂತ್ರ ಪಠಿಸುವಂತೆ ಸದಸ್ಯರನ್ನು ತಯಾರಿ ಮಾಡುವುದಾಗಿ ಭರವಸೆ ನೀಡಿದರು. 
          ತಾಲೂಕಿನ ಎಲ್ಲಾ ಕೆರೆಗಳನ್ನೂ ತುಂಬಿಸಿ ಅದರಿಂದ ಕ್ಷೇತ್ರದ ಅಂತರ್ಜಲ ಹೆಚ್ಚು ಮಾಡಿ ಇಲ್ಲಿನ ಜನ ಮನೆ ಮುಂದೆ ಕೃಷಿ ಜೊತೆ ಉಪಕಸುಬು ಮಾಡಿ ನೆಮ್ಮದಿಯ ಜೀವನ ನಡೆಸುವಂತೆ ಮಾಡುವುದು ನನ್ನ ಉದ್ದೇಶವಾಗಿತ್ತು. ಹಾಗಾಗಿಯೇ ಸಣ್ಣ ನೀರಾವರಿ ಇಲಾಖೆಗೆ ಪಟ್ಟು ಹಿಡಿದು ಪಡೆದು ಕೆರೆಗಳನ್ನು ತುಂಬಿಸುವ ಕೆಲಸಕ್ಕೆ ಹಣ ಮೀಸಲಿಟ್ಟು ಟೆಂಡರ್ ಸಹ ಕರೆಯಲಾಗಿದೆ. ಈ ಮೂಲಕ ಮತ ನೀಡಿದ ಕ್ಷೇತ್ರದ ಜನರ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು. 
ಜಿಪಂ ಮಾಜಿ ಸದಸ್ಯೆ ಮಂಜುಳಾ, ತಾಪಂ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್, ಮಾಜಿ ಉಪಾಧ್ಯಕ್ಷ ವಸಂತಯ್ಯ, ಮಾಜಿ ಸದಸ್ಯ ಕೇಶವಮೂರ್ತಿ, ಮುಂಖಡರಾದ ಬರಕನಹಾಲ್ ವಿಶ್ವನಾಥ್, ನಿರಂಜನಮೂರ್ತಿ, ಶಂಕರಲಿAಗಯ್ಯ, ಗ್ರಾಪಂ ಉಪಾಧ್ಯಕ್ಷೆ ಕಮಲಮ್ಮ, ಸದಸ್ಯರಾದ ರಘುವೀರ್, ರಾಧಮ್ಮ, ರೇಣುಕಮ್ಮ ಇದ್ದರು.