ಶಿವಪ್ಪನವರ ನೇತ್ರ ಹಾಗೂ ದೇಹದಾನ

ಶಿವಪ್ಪನವರ ನೇತ್ರ ಹಾಗೂ ದೇಹದಾನ, bevarahani-shivappa-ns-eye-foundation-eye-donation

ಶಿವಪ್ಪನವರ ನೇತ್ರ ಹಾಗೂ ದೇಹದಾನ

ಶಿವಪ್ಪನವರ ನೇತ್ರ ಹಾಗೂ ದೇಹದಾನ


ತುಮಕೂರು: ನಗರದ ಟಿ.ಎಸ್. ಸೌಮ್ಯರವರ ತಂದೆ ಆರ್.ಟಿ. ಶಿವಪ್ಪನವರು ( 73 ವರ್ಷ) ಮರಣ ಹೊಂದಿದ್ದು,  ಅವರ ಕುಟುಂಬದವರು ನೋವಿನ ಸಂದರ್ಭದಲ್ಲಿಯೂ ನೇತ್ರದಾನ ಹಾಗೂ ದೇಹದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಸರ್ಕಾರಿ ಆಸ್ಪತ್ರೆಯ ನೇತ್ರತಜ್ಞ ಡಾ|| ದಿನೇಶ್‌ಕುಮಾರ್ ಹಾಗೂ ಸಹಾಯಕÀ ರವಿಕುಮಾರ್ ಮೃತರಿಂದ ಎರಡು ನೇತ್ರಗಳನ್ನು ತೆಗೆದರು. ಈ ಎರಡು ನೇತ್ರಗಳನ್ನು ಎನ್.ಎಸ್.ಐ ಫೌಂಡೇಶನ್ ಮುಖ್ಯಸ್ಥರಾದ ಡಾ. ಎನ್.ಎನ್.ಶ್ರೀಧರ್, ನಾಗದೀಶ್ ಎನ್.ಎಸ್. ರವರ ಸಹಕಾರದಿಂದ ಬೆಂಗಳೂರಿನ ಲಯನ್ಸ್ ಇಂಟರ್‌ನ್ಯಾಷನಲ್ ಕಣ್ಣಿನ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಈ ಕಾರ್ಯದಿಂದ ಇಬ್ಬರು ದೃಷ್ಟೊಹೀನರಿಗೆ ದೃಷ್ಟಿ ನೀಡಿದಂತಾಗಿದೆ. ಹಾಗೂ ಅವರ ದೇಹವನ್ನು ಶ್ರೀದೇವಿ ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರಕ್ಕೆ ಕಳುಹಿಸಿಕೊಟ್ಟರು. 


 ಇದೇ ರೀತಿ ನೇತ್ರದಾನ ಹಾಗೂ ದೇಹದಾನ ಮಾಡುವವರು ಡಾ. ಎನ್.ಎನ್. ಶ್ರೀಧರ್, ಮುಖ್ಯಸ್ಥರು, ಎನ್.ಎಸ್. ಐ ಫೌಂಡೇಶನ್, ತುಮಕೂರು ಮೊ :+919590066066 ಅಥವಾ ಸ್ಥಳೀಯ ನೇತ್ರತಜ್ಞರನ್ನಾಗಲಿ ಇವರುಗಳನ್ನು ಸಂಪರ್ಕಿಸಬೇಕೆAದು ಕೋರಲಾಗಿದೆ.