ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಿ ಶಾಸಕ ವೆಂಕಟರಮಣಪ್ಪ ಕರೆ

ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಿ ಶಾಸಕ ವೆಂಕಟರಮಣಪ್ಪ ಕರೆ

ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಿ
ಶಾಸಕ ವೆಂಕಟರಮಣಪ್ಪ ಕರೆ


ಪಾವಗಡ: ಕನ್ನಡ ಭಾಷೆಗೆ ಮೊದಲನೇ ಆದ್ಯತೆ ನೀಡಿ. ಕನ್ನಡ ನಾಡಿನ ನೆಲ, ಜಲ, ಭಾಷೆ, ಸಂಸ್ಕöÈತಿಯನ್ನು ರಕ್ಷಿಸಿ ನಂತರ ಇತರೆ ಭಾಷೆಗಳನ್ನು ಗೌರವಿಸಿ ಎಂದು ಶಾಸಕರಾದ ವೆಂಕಟರಮಣಪ್ಪ ಅವರು ತಿಳಿಸಿದರು.

ತಾಲೂಕಿನ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಸೋಮವಾರ ಹಮ್ಮಿಕೊಂಡಿದ್ದ 66ನೇ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಶಾಸಕ ವೆಂಕಟರಮಣಪ್ಪ ಭಾಗವಹಿಸಿ ಧ್ವಜಾರೋಹಣ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಗಡಿನಾಡು ಪ್ರದೇಶವಾದ ನಮ್ಮ ತಾಲೂಕಿನಲ್ಲಿ ಕನ್ನಡ ಭಾಷೆಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕನ್ನಡ ನಾಡ ನುಡಿ, ನೆಲ, ಜಲ, ಸಂಸ್ಕöÈತಿಯನ್ನು ರಕ್ಷಿಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ ಹಾಗೂ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಕಲಿಸಬೇಕು ಎಂದರು.

ತಹಸಿಲ್ದಾರ್ ನಾಗರಾಜು ಮಾತನಾಡಿ, ಕರುನಾಡಿನ ಹೆಮ್ಮೆಯ ದಿನ ಕನ್ನಡ ರಾಜ್ಯೋತ್ಸವ. ಮೈಸೂರು ಪ್ರಾಂತ್ಯ ಎಂಬ ಹೆಸರಿನ ಮೂಲಕ ಕರೆಯಲ್ಪಡುತ್ತಿದ್ದ ಹಾಗೂ ವಿಭಾಗಗಳಾಗಿ ಚದುರಿದ್ದ ನಾಡನ್ನು 1956ರ ನವೆಂಬರ್ 1ರಂದು "ಕರ್ನಾಟಕ'' ಎಂದು ಮರುನಾಮಕರಣ ಮಾಡಲಾಯಿತು. ಅಂದಿನಿAದ ಪ್ರತಿ ವರ್ಷ ನವೆಂಬರ್ 1ರಂದು ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಈ ವರ್ಷ ನಾವು 66ನೇ ಕರ್ನಾಟಕ ರಾಜ್ಯೋತ್ಸವದ ಸಂಭ್ರಮದಲ್ಲಿದ್ದೇವೆ. ಹರಿದು ಹೋಗಲಿದ್ದ ಕರ್ನಾಟಕ ರಾಜ್ಯವನ್ನು ಏಕೀಕರಣ ಹೋರಾಟದ ಮೂಲಕ ಒಂದುಗೂಡಿಸುವಲ್ಲಿ ಅನೇಕ ಮಹನೀಯರು ಶ್ರಮಿಸಿದ್ದರು. ಅವರಲ್ಲಿ, ಆಲೂರು ವೆಂಕಟರಾವ್ ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಆಲೂರು ವೆಂಕಟರಾವ್ ಅವರನ್ನು ``ಕನ್ನಡದ ಕುಲ ಪುರೋಹಿತ' ಎಂದೇ ಕರೆಯಲಾಗುತ್ತದೆ ಎಂದು ತಿಳಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಆರ್.ಟಿ. ಖಾನ್, ತಾಲೂಕು ಪಂಚಾಯಿತಿ ಇ.ಓ. ಶಿವರಾಜಯ್ಯ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥ್ ನಾರಾಯಣ, ಇನ್ಸ್ಪೆಕ್ಟರ್ ಲಕ್ಷಿö್ಮÃಕಾಂತ್, ಪುರಸಭೆಯ ಕಾರ್ಯನಿರ್ವಣಾಧಿಕಾರಿ ಅರ್ಚನ, ರಾಜ್ಯ ರೈತ ಸಂಘದ ಅಧ್ಯಕ್ಷ ಪೂಜಾರಪ್ಪ ಇದ್ದರು.