ಫುಟ್‌ಪಾತ್ ನಾಗರಿಕರ ಸಂಚಾರಕ್ಕಿರಲಿ ಒತ್ತುವರಿ ತೆರವಿಗೆ ಪಾಲಿಕೆ ಸದಸ್ಯ ಸಿ.ಎನ್. ರಮೇಶ್ ಆಗ್ರಹ

ಫುಟ್‌ಪಾತ್ ನಾಗರಿಕರ ಸಂಚಾರಕ್ಕಿರಲಿ ಒತ್ತುವರಿ ತೆರವಿಗೆ ಪಾಲಿಕೆ ಸದಸ್ಯ ಸಿ.ಎನ್. ರಮೇಶ್ ಆಗ್ರಹ

ಫುಟ್‌ಪಾತ್ ನಾಗರಿಕರ ಸಂಚಾರಕ್ಕಿರಲಿ
ಒತ್ತುವರಿ ತೆರವಿಗೆ ಪಾಲಿಕೆ ಸದಸ್ಯ ಸಿ.ಎನ್. ರಮೇಶ್ ಆಗ್ರಹ


ತುಮಕೂರು: ನಗರದ 31 ನೇ ವಾರ್ಡ್ (ಶೆಟ್ಟಿಹಳ್ಳಿ) ವ್ಯಾಪ್ತಿಯಲ್ಲಿ, ಅದರಲ್ಲೂ ಮುಖ್ಯವಾಗಿ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿ ಪಾದಚಾರಿ ಮಾರ್ಗದಲ್ಲಿ ಕೆಲವರು ಅಕ್ರಮವಾಗಿ ಮಾಡಿಕೊಂಡಿರುವ ಒತ್ತುವರಿಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಮಾಡಿ, ಪಾದಚಾರಿಗಳ ಸುರಕ್ಷತೆಗೆ ಗಮನ ನೀಡಬೇಕು ಎಂದು ಮಹಾನಗರ ಪಾಲಿಕೆ ಸದಸ್ಯ ಬಿಜೆಪಿಯ ಸಿ.ಎನ್. ರಮೇಶ್ ತುಮಕೂರು ನಗರಾಡಳಿತವನ್ನು ಆಗಹಿಸಿದ್ದಾರೆ.
‘ಬೆವರಹನಿ’ ಪತ್ರಿಕೆ ಜೊತೆ ಮಾತನಾಡುತ್ತ ಈ ವಿಷಯ ತಿಳಿಸಿದ ಅವರು, ಈ ಬಗ್ಗೆ ತಾವು ಕಳೆದ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡಿಸಿ ತುಮಕೂರು ಮಹಾನಗರ ಪಾಲಿಕೆಯ ಗಮನ ಸೆಳೆದಿದ್ದು, ರಸ್ತೆ ಮತ್ತು ಪಾದಚಾರಿ ಮಾರ್ಗಗಳಲ್ಲಿ ಶಾಶ್ವತ ರಚನೆ ಮಾಡಿಕೊಂಡು ವ್ಯಾಪಾರ ಮಾಡುವುದನ್ನು ತೆರವುಗೊಳಿಸಲು ನಿರ್ಣಯ ಕೈಗೊಳ್ಳÀಲಾಗಿದೆ. ಆದರೂ ಸಹ ಈವರೆಗೆ ತುಮಕೂರು ಮಹಾನಗರ ಪಾಲಿಕೆಯ ಆರೋಗ್ಯ ಶಾಖೆಯು ಈ ನಿರ್ಣಯದ ಅನುಷ್ಠಾನಕ್ಕೆ ಸಂಬAಧಿಸಿದAತೆ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 
ಸದ್ಯದಲ್ಲೇ ಈ ಬಗ್ಗೆ ಪಾಲಿಕೆಯ ಆಯುಕ್ತರಿಗೆ ಪತ್ರ ಬರೆದು ಗಮನ ಸೆಳೆಯುವುದಾಗಿ ಸಿ.ಎನ್.ರಮೇಶ್ ಹೇಳಿದರು.
ಫುಟ್‌ಪಾತ್‌ಗಾಗಿ ಕೋಟ್ಯಂತರ ರೂ. ವೆಚ್ಚ:
ವಾರ್ಡ್ನಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಕೋಟ್ಯಂತರ ರೂ. ಗಳನ್ನು ಪಾಲಿಕೆಯು ವಿನಿಯೋಗಿಸಿ ಫುಟ್‌ಪಾತ್ ನಿರ್ಮಿಸಿದೆ. ಆದರೆ ಈ ಫುಟ್‌ಪಾತ್ ಜಾಗವನ್ನು ಅಲ್ಲಿನ ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡಿರುವುದು ಅನೇಕ ಕಡೆ ಕಂಡುಬರುತ್ತದೆ. ಫುಟ್‌ಪಾತ್ ಜಾಗದಲ್ಲಿ ನಾಮಫಲಕ ಅಳವಡಿಸುವುದು, ಬಿಸಿಲು-ಮಳೆಯಿಂದ ರಕ್ಷಣೆಗೆ ಶಾಶ್ವತವಾಗಿ ಶೆಲ್ಟರ್ ನಿರ್ಮಿಸುವುದು, ವ್ಯಾಪಾರದ ಸಾಮಗ್ರಿಗಳನ್ನು ಫುಟ್‌ಪಾತ್ ಜಾಗದಲ್ಲೇ ಇರಿಸುವುದು, ಫುಟ್‌ಪಾತ್‌ನಲ್ಲೇ ವಾಹನಗಳನ್ನು ಪಾರ್ಕಿಂಗ್ ಮಾಡುವುದು ಇತ್ಯಾದಿಗಳನ್ನು ಕಾಣಬಹುದಾಗಿದೆ ಎಂದು ಅವರು ಸಮಸ್ಯೆಗಳನ್ನು ಪಟ್ಟಿ ಮಾಡಿದರು. 
ಈ ರೀತಿಯ ಫುಟ್‌ಪಾತ್ ಒತ್ತುವರಿಗಳಿಂದ ಪಾದಚಾರಿಗಳು ತೊಂದರೆಗೆ ಸಿಲುಕುತ್ತಿದ್ದಾರೆ. ಪಾದಚಾರಿಗಳು ಅನಿವಾರ್ಯವಾಗಿ ರಸ್ತೆಯಲ್ಲೇ ನಡೆಯುವಂತಾಗುತ್ತಿದೆ. ಪಾದಚಾರಿಗಳ ಸುರಕ್ಷತೆಗಾಗಿ ಕೋಟ್ಯಂತರ ರೂ. ಗಳನ್ನು ಪಾಲಿಕೆಯು ವೆಚ್ಚ ಮಾಡಿ ನಿರ್ಮಿಸಿರುವ ಫುಟ್‌ಪಾತ್ ಈಗ ನಿರುಪಯುಕ್ತ ಎನಿಸುತ್ತಿದೆ. ಅಕ್ಕಪಕ್ಕದ ಮಳಿಗೆಗಳವರ ಅನುಕೂಲಕ್ಕಾಗಿಯೇ ಫುಟ್‌ಪಾತ್ ನಿರ್ಮಿಸಲಾಗಿದೆಯೆಂಬ ಅನುಮಾನ ಸಾರ್ವಜನಿಕರಲ್ಲಿ ಮೂಡುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಸಿ.ಎನ್. ರಮೇಶ್ ಸ್ಪಷ್ಟವಾಗಿ ಹೇಳಿದರು.
ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿ ತರಕಾರಿ ಮಾರಾಟಗಾರರೂ ಸೇರಿದಂತೆ ವಿವಿಧ ರೀತಿಯ ರಸ್ತೆ ಬದಿ ವ್ಯಾಪಾರಿಗಳಿಗೆ ಮಹಾನಗರ ಪಾಲಿಕೆಯು ನಿರ್ದಿಷ್ಟವಾದ ಸಮಯವನ್ನು ನಿಗದಿ ಮಾಡಬೇಕು. ವ್ಯಾಪಾರಿಗಳು ನಿರ್ದಿಷ್ಟ ಸಮಯದಲ್ಲಿ ಮಾತ್ರ ಬಂದು ವ್ಯಾಪಾರ ಮಾಡಿ ಹೋಗಬೇಕು. ಉಳಿದ ಸಮಯಗಳಲ್ಲಿ ಫುಟ್‌ಪಾತ್ ಸಂಪೂರ್ಣವಾಗಿ ಪಾದಚಾರಿಗಳ ಓಡಾಟಕ್ಕೆ ಮುಕ್ತವಾಗಿರುವಂತೆ ಪಾಲಿಕೆಯು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು. 
ವೆಂಡರ‍್ಸ್ ಜೋನ್ ನಿರ್ಮಾಣ: ಪ್ರಸ್ತುತ ಶೆಟ್ಟಿಹಳ್ಳಿ ಮುಖ್ಯರಸ್ತೆಯ ಜಯನಗರ ಬಸ್‌ಸ್ಟಾಪ್ ಬಳಿ (ಭಾರದ್ವಾಜ ಟವರ್ಸ್ ಎದುರು) ಇದ್ದ ಖಾಲಿ ಜಾಗದಲ್ಲಿ ಬೀದಿಬದಿ ವ್ಯಾಪಾರಿಗಳಿಗಾಗಿ, ಅದರಲ್ಲೂ ವಿಶೇಷವಾಗಿ ತರಕಾರಿ ಮಾರಾಟಗಾರರಿಗಾಗಿ ‘ವೆಂರ‍್ಸ್ ಜೋನ್’ ಸ್ಮಾರ್ಟ್ಸಿಟಿ ಕಂಪನಿ ವತಿಯಿಂದ ನಿರ್ಮಾಣಗೊಳ್ಳುತ್ತಿದೆ. ಇದು ಪೂರ್ಣಗೊಂಡ ಬಳಿಕ ನಿರ್ದಿಷ್ಟ ಬಗೆಯ ಬೀದಿಬದಿ ವ್ಯಾಪಾರಿಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗುವುದು. ನಂತರ ಇವರುಗಳು ಇಲ್ಲಿ ಮಾತ್ರ ವ್ಯಾಪಾರ ಮಾಡಬಹುದೇ ವಿನಃ, ಫುಟ್‌ಪಾತ್‌ನಲ್ಲಿ ವ್ಯಾಪಾರ ಮಾಡುವಂತಿಲ್ಲ ಎಂದು ಕಾರ್ಪೊರೇಟರ್ ಸಿ.ಎನ್. ರಮೇಶ್ ತಿಳಿಸಿದರು.