'ಗ್ರಾಮಗಳ ಅಭಿವೃದ್ಧಿಯೇ ಗಾಂಧೀಜಿಯವರ ಆಶಯ'  

 'ಗ್ರಾಮಗಳ ಅಭಿವೃದ್ಧಿಯೇ ಗಾಂಧೀಜಿಯವರ ಆಶಯ'  

  
 

 'ಗ್ರಾಮಗಳ ಅಭಿವೃದ್ಧಿಯೇ ಗಾಂಧೀಜಿಯವರ ಆಶಯ'  


 ಗ್ರಾಮಗಳ ಅಭಿವೃದ್ಧಿ, ವಿಕಾಸ ಮತ್ತು ಸ್ವಾವಲಂಬನೆಯಿಂದ ಮಾತ್ರ ದೇಶಗಳ ಉದ್ಧಾರವಾಗುತ್ತದೆ ಹೊರತು ಕೇಂದ್ರಿತ ರಾಜ್ಯ ವ್ಯವಸ್ಥೆಯಿಂದ ಅದು ಸಾಧ್ಯವಾಗುವುದಿಲ್ಲ ಎಂದು ಚಿಕ್ಕನಾಯಕನಹಳ್ಳಿ ತಾಲೂಕು ವೈದ್ಯಾಧಿಕಾರಿಗಳು ಹಾಗೂ ಶೆಟ್ಟಿಕೆರೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಡಾ.ಎಸ್ ಟಿ ನವೀನ್ ಅಭಿಪ್ರಾಯಪಟ್ಟರು

ಅವರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಚಿಕ್ಕನಾಯಕನಹಳ್ಳಿ, ತಾಲ್ಲೂಕು ಕಸಾಪ ಶೆಟ್ಟಿಕೆರೆ ಹೋಬಳಿ ಘಟಕ, ಸರ‍್ಕಾರಿ ಪದವಿ ಪರ‍್ವ ಕಾಲೇಜು, ಗೋಡೆಕೆರೆ ಹಾಗು ಶೃಂಗಾರ ಪ್ರಕಾಶನ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಗೋಡೆಕೆರೆ ಸರ‍್ಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಗಾಂಧಿವಾದಿ ದಿ. ಜಿ ವಿ ನಾರಾಯಣಮೂರ‍್ತಿಯವರ ದತ್ತಿ ಕರ‍್ಯಕ್ರಮ 'ಗಾಂಧಿ ಸಿದ್ಧಾಂತ - ಸರ‍್ವೋದಯ ಪಥ' ಉಪನ್ಯಾಸ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು

ಉಪನ್ಯಾಸ ನೀಡಿದ ಸಹಜ ಕೃಷಿಕ, ಸರ‍್ವೋದಯ ಪ್ರತಿಪಾದಕ ಷಡಕ್ಷರಿ ತರಬೇನಹಳ್ಳಿ ಗ್ರಾಮೀಣರ ಗುಡಿಕೈಗಾರಿಕೆಗಳು, ಜೀವನ ಪದ್ಧತಿ, ಕೃಷಿಯಾಧಾರಿತ ಜೀವನ ಗಾಂಧೀಜಿಯವರ ರ‍್ವೋದಯದ ಜೀವಾಳ ಇದರೊಟ್ಟಿಗೆ ಸಾಮಾಜಿಕ ನೈತಿಕತೆ, ಸಚ್ಚಾರಿತ್ರ‍್ಯ ಶಿಕ್ಷಣ, ಬೇಧವರಿಯದ ಬಾಳು ಸಿದ್ಧಾಂತದ ಮೂಲ ಆಶಯವಾಗಿದೆ ಎಂದು ನುಡಿದರು.ರ‍್ವರಿಗೂ ಸಮಪಾಲು ಸರ‍್ವರಿಗೂ ಸಮಬಾಳು ಈ ವಿಚಾರಧಾರೆಯ ಬುನಾದಿಯಾಗಿದ್ದು ಸರ‍್ವರ ಅಭಿವೃದ್ಧಿಯಿಂದ ಸರ‍್ವೋದಯ ಅನುಷ್ಠಾನಗೊಳ್ಳಲು ಸಾಧ್ಯ. ಇದಕ್ಕಾಗಿ ಗ್ರಾಮಾಡಳಿತಗಳು ಸಬಲೀಕೃತ ವಿಕೇಂದ್ರೀಕರಣ ಗೋಳ್ಳಬೇಕಿದೆ ಇದೇ ಗಾಂಧೀಜಿಯವರ ಆರ‍್ಶ ರಾಜ್ಯ ಕಲ್ಪನೆ ಎಂದು ಅಭಿಪ್ರಾಯಪಟ್ಟರು.

ದತ್ತಿ ದಾನಿಗಳನ್ನು ಅಭಿನಂದಿಸುತ್ತ ತಾಲ್ಲೂಕು ಕಸಾಪ ಅಧ್ಯಕ್ಷ ಎಂ ಎಸ್ ರವಿಕುಮಾರ್ ಕಟ್ಟೆಮನೆ ಮಾತನಾಡಿ ದತ್ತಿ ಸ್ಥಾಪನೆಯ ಮೂಲಕ ಗಾಂಧೀಜಿಯವರ ವಿಚಾರವನ್ನು ಹರಡಲು ಸಾಧ್ಯ ಮಾಡಿಕೊಟ್ಟ ಜೀವಿನಾ ಪ್ರತಿಷ್ಠಾನಕ್ಕೆ ಧನ್ಯವಾದಗಳು ರ‍್ಪಿಸುತ್ತಾ ಜಗತ್ತಿಗೆ ರ‍್ವೋದಯ ವಿಚಾರಧಾರೆ ಭಾರತ ಕೊಟ್ಟ ದೊಡ್ಡ ಕೊಡುಗೆ. ಆ ವಿಚಾರಧಾರೆಗೆ ಸೈದ್ಧಾಂತಿಕ ಸ್ರ‍್ಶವನ್ನು ನೀಡಿ ಮತ್ತೊಮ್ಮೆ ಜಗತ್ತಿನ ಎದುರಿಗೆ ತೆರೆದಿಟ್ಟವರು  ಗಾಂಧೀಜಿ ಎಂದರು

ಗೌರವ ಸ್ವೀಕರಿಸಿದ ಹಿರಿಯ ಸಾಹಿತಿ ಡಾ. ಎಂ ವಿ ನಾಗರಾಜರಾವ್ ಮಾತನಾಡಿ ಜೀ ವಿ ನಾರಾಯಣಮೂರ‍್ತಿಯವರ ಬದುಕು ಗಾಂಧಿ ವಿಚಾರಧಾರೆಗೆ ಸಮರ‍್ಪಿತ. ಅವರ ಸರ‍್ವೋದಯ ವಿಚಾರಧಾರೆಯನ್ನು ಪ್ರತಿವರ‍್ಷ ಜೀವಂತವಾಗಿರಿಸಿರುವ ಕಸಾಪ ದತ್ತಿಯನ್ನು ಸಮರ‍್ಪಕವಾಗಿ ನಿಭಾಯಿಸಿದೆ ಎಂದು ಅಭಿಪ್ರಾಯಪಟ್ಟರು.

ತಾಲ್ಲೂಕು ಕಸಾಪಗೌರವ ಕಾರ್ಯದರ‍್ಶಿ ಸಿ ಎ ನಿರೂಪ ರಾವತ್  ಆಶಯ ನುಡಿ ಆಡಿದರು. ಅಧ್ಯಕ್ಷತೆಯನ್ನು ಗೋಡೆಕೆರೆ ಸರ‍್ಕಾರಿ ಪದವಿ ಪೂರ‍್ವ ಕಾಲೇಜಿನ ಪ್ರಾಂಶುಪಾಲರಾದ ಹೆಚ್ ಎ ಮಲ್ಲಯ್ಯ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ತಾಲ್ಲೂಕು ಕಸಾಪ ಶೆಟ್ಟಿಕೆರೆ ಹೋಬಳಿ ಘಟಕದ ಅಧ್ಯಕ್ಷರಾದ ಎಸ್ ಮಹೇಶ್ ರವರು ತಾಲ್ಲೂಕು ಕಸಾಪ ಪ್ರತಿನಿಧಿ ಗೋ ನಿ ವಸಂತ್ ಕುಮಾರ್ ಭಾಗವಹಿಸಿದ್ದರು

ಉಪನ್ಯಾಸಕಿ ಮೇ ನಾ ತರಂಗಿಣಿ ಸ್ವಾಗತಿಸಿದರು, ತಾಲ್ಲೂಕು ಕಸಾಪ ನಗರ - ಕಸಬಾ ಹೋಬಳಿ ಘಟಕದ ಉಪಾಧ್ಯಕ್ಷರಾದ ಎಂ ಶಿವಣ್ಣ ನಿರೂಪಿಸಿದರು,ತಾಲ್ಲೂಕು ಕಸಾಪ ನಗರ - ಕಸಬಾ ಹೋಬಳಿ ಘಟಕದ ಗೌರವ ಕೋಶಾಧ್ಯಕ್ಷ  ಸಿ ಎ ನವೀನ್ ರಾವತ್ ವಂದಿಸಿದರು