ದಿವಂಗತ ಅಲಂಗೂರು ಶ್ರೀನಿವಾಸ್ ಹೆಸರಿನಲ್ಲಿ ಸುಸಜ್ಜಿತ ಸಹಕಾರ ಭವನ ಡಿಸಿಸಿ ಬ್ಯಾಂಕ್, ಸಹಕಾರಿ ಯೂನಿಯನ್ ನೇತೃತ್ವ ವಹಿಸಲಿ-ಶ್ರೀನಿವಾಸಗೌಡ

ದಿವಂಗತ ಅಲಂಗೂರು ಶ್ರೀನಿವಾಸ್ ಹೆಸರಿನಲ್ಲಿ ಸುಸಜ್ಜಿತ ಸಹಕಾರ ಭವನ ಡಿಸಿಸಿ ಬ್ಯಾಂಕ್, ಸಹಕಾರಿ ಯೂನಿಯನ್ ನೇತೃತ್ವ ವಹಿಸಲಿ-ಶ್ರೀನಿವಾಸಗೌಡ

ದಿವಂಗತ ಅಲಂಗೂರು ಶ್ರೀನಿವಾಸ್ ಹೆಸರಿನಲ್ಲಿ ಸುಸಜ್ಜಿತ ಸಹಕಾರ ಭವನ ಡಿಸಿಸಿ ಬ್ಯಾಂಕ್, ಸಹಕಾರಿ ಯೂನಿಯನ್ ನೇತೃತ್ವ ವಹಿಸಲಿ-ಶ್ರೀನಿವಾಸಗೌಡ

ದಿವಂಗತ ಅಲಂಗೂರು ಶ್ರೀನಿವಾಸ್ ಹೆಸರಿನಲ್ಲಿ ಸುಸಜ್ಜಿತ ಸಹಕಾರ ಭವನ
ಡಿಸಿಸಿ ಬ್ಯಾಂಕ್, ಸಹಕಾರಿ ಯೂನಿಯನ್ ನೇತೃತ್ವ ವಹಿಸಲಿ-ಶ್ರೀನಿವಾಸಗೌಡ

ಕೋಲಾರ:- ಜಿಲ್ಲಾ ಕೇಂದ್ರದಲ್ಲಿ ಸಹಕಾರಿ ಚಟುವಟಿಕೆಗಳನ್ನು ಕ್ರಿಯಾಶೀಲಗೊಳಿಸಲು ಸುಂದರ ಸಹಕಾರ ಭವನ ನಿರ್ಮಾಣ ಮಾಡುವ ಮೂಲಕ ಇದಕ್ಕಾಗಿ ನಿವೇಶನ ಒದಗಿಸಿದ್ದ ದಿವಂಗತ ಸಚಿವ ಅಲಂಗೂರು ಶ್ರೀನಿವಾಸ್ ಅವರ ಕನಸು ನನಸಾಗಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.


ನಗರದ ತಮ್ಮ ನಿವಾಸದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮೂರಂಡಹಳ್ಳಿ ಗೋಪಾಲಪ್ಪ ಅವರು ಕೃತಜ್ಞತಾ ಪೂರ್ವಕವಾಗಿ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. 


ಸಹಕಾರ ಕ್ಷೇತ್ರ ಬಲಗೊಳ್ಳಲು ಇದರ ಅರಿವು,ಪ್ರಾಮುಖ್ಯತೆಯ ಕುರಿತು ತಿಳಿಸಿಕೊಡುವ ಅಗತ್ಯವಿದೆ ಈ ಹಿನ್ನಲೆಯಲ್ಲಿ ನಿರಂತರವಾಗಿ ತರಬೇತಿ ಕಾರ್ಯಾಗಾರಗಳನ್ನು ನಡೆಸಲು ಸುಂದರ,ಸುಸಜ್ಜಿತ ಭವನದ ಅಗತ್ಯವಿದೆ ಎಂದರು.


ಈ ಹಿನ್ನಲೆಯಲ್ಲಿ ಸಹಕಾರ ಮಹಾಮಂಡಳ, ಡಿಸಿಸಿ ಬ್ಯಾಂಕ್ ಸಹಕಾರಿ ಯೂನಿಯನ್ ಸೇರಿದಂತೆ ಎಲ್ಲಾ ಸಹಕಾರಿ ಸಂಸ್ಥೆಗಳ ಸಹಯೋಗದೊಂದಿಗೆ ಈ ಭವನ ನಿರ್ಮಿಸುವ ಕಾರ್ಯ ನಡೆಯಬೇಕು, ಇದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.


ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಸಾಕಷ್ಟು ಅಭಿವೃದ್ಧಿಯಾಗುತ್ತಿದೆ. ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ಪ್ರವರ್ಧಮಾನದತ್ತ ಬೆಳೆದಿದೆ, ಇದು ಹೆಮ್ಮೆಯ ವಿಷವಾಗಿದೆ, ಈ ಹಿನ್ನಲೆಯಲ್ಲಿ ಸಹಕಾರಿ ಯೂನಿಯನ್ ಮತ್ತು ಡಿಸಿಸಿ ಬ್ಯಾಂಕ್ ಆಶ್ರಯದಲ್ಲಿ ಭವನ ನಿರ್ಮಾಣವಾಗಬೇಕು, ಇದಕ್ಕೆ ಎರಡೂ ಕ್ಷೇತ್ರಗಳ ಅಧ್ಯಕ್ಷರು ಮುಂದಾಗಬೇಕು ಎಂದು ಸಲಹೆ ನೀಡಿದರು.


ಕೋಲಾರ-ಚಿಕ್ಕಬಳ್ಳಾಪುರ ಸಹಕಾರ ಕೇಂದ್ರ ಬ್ಯಾಂಕಿನಿAದ ಲಕ್ಷಾಂತರ ಮಂದಿ ಮಹಿಳೆಯರಿಗೆ, ರೈತರಿಗೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಪಡೆದುಕೊಂಡ ಸಾಲವನ್ನು ಹೇಗೆ ಉಪಯೋಗಿಸಿಕೊಳ್ಳಬೇಕು, ಸ್ವಾವಲಂಬಿ ಬದುಕು ಪಡೆಯುವುದು ಹೇಗೆ ಎಂಬುದರ ಕುರಿತು ತರಬೇತಿ ನೀಡುವ ಅಗತ್ಯವಿದೆ ಎಂದರು. 


ಸಹಕಾರ ರಂಗವನ್ನು ಮತ್ತಷ್ಟು ಬೆಳೆಸುವ ನಿಟ್ಟಿನಲ್ಲಿ ಅಗತ್ಯವಾದ ತರಬೇತಿ ನೀಡಲು ಸುಸಜ್ಜಿತ ಭವನ ಅವಶ್ಯಕತೆಯಿದೆ. ಸಹಕಾರ ಮಹಾ ಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡರ ಬಳಿ ನಿಯೋಗ ತೆರಳಲು ಸಿದ್ದರಾಗಿ ಎಂದು ಡಿಸಿಸಿ ಬ್ಯಾಂಕ್ ಹಾಗೂ ಯೂನಿಯನ್ ಅಧ್ಯಕ್ಷರಿಗೆ ಸಲಹೆ ನೀಡಿದರು.


ಅಲಂಗೂರು ಹೆಸರಲ್ಲಿ ಸಹಕಾರ ಭವನ


ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಹಕಾರ ಕ್ಷೇತ್ರವು ತನ್ನದೆ ಆದ ಛಾಪು ಮೂಡಿಸಿ ಮನೆ ಮಾತಾಗಿದೆ. ಇಲ್ಲಿಗೆ ಸಹಕಾರ ಭವನ ಅತ್ಯವಶ್ಯಕವಾಗಿದ್ದು, ಶಾಸಕರು ಇದಕ್ಕೆ ಸಹಕಾರ ನೀಡಬೇಕು ಎಂದು ಕೋರಿದರು.


ಸಹಕಾರ ಮಹಾ ಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡರನ್ನು ಹಾಗೂ ಸಹಕಾರ ಸಚಿವರ ಬಳಿ ಜಿಲ್ಲೆಯಿಂದ ನಿಯೋಗ ತೆರಳಿ ಭವನ ನಿರ್ಮಾಣಕ್ಕೆ ಅಗತ್ಯವಾಗಿ ಬೇಕಾಗಿರುವ ಅನುದಾನ ಮಂಜೂರು ಮಾಡಲು ಪ್ರಸ್ತಾವ ಸಲ್ಲಿಸಲಾಗುವುದು ಎಂದರು.


ಡಿಸಿಸಿ ಬ್ಯಾಂಕ್ ಹಾಗೂ ಸಹಕಾರ ಒಕ್ಕೂಟದಿಂದ ಈ ಕೆಲಸ ಪೂರ್ಣಗೊಳ್ಳಲಿದ್ದು, ಸಹಕಾರ ಕ್ಷೇತ್ರಕ್ಕೆ ಜಾಗ ಮಂಜೂರು ಮಾಡಿಸಿರುವ ದಿವಂಗತ ಅಲಂಗೂರು ಶ್ರೀನಿವಾಸ ಹೆಸರಿನಲ್ಲಿ ಸುಸಜ್ಜಿತ ಭವನ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.


ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಮೂರಂಡಹಳ್ಳಿ ಇ.ಗೋಪಾಲಪ್ಪ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ, ಸಿಬ್ಬಂದಿಗೆ ಸಹಕಾರ ಯೂನಿಯನ್‌ನಿಂದ ತರಬೇತಿ ನೀಡಲಾಗುತ್ತಿದೆ. ಕ್ಷೇತ್ರದ ಕಾರ್ಯವ್ಯಾಪ್ತಿ ವಿಸ್ತಾರಗೊಂಡಿರುವುದರಿAದ ಸುಸಜ್ಜಿತವಾದ ತರಬೇತಿ ಕೇಂದ್ರ ನಿರ್ಮಾಣವಾಗಬೇಕಾಗಿದೆ ಎಂದರು.


ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಯೂನಿಯನ್ ಉಪಾಧ್ಯಕ್ಷ ಬೈರೇಗೌಡ, ನಿರ್ದೇಶಕರಾದ ಸುರೇಶ್, ಅಣ್ಣಿಹಳ್ಳಿ ನಾಗರಾಜ್, ಮುಖಂಡರಾದ ಖಾದ್ರಿಪುರ ರಾಮು, ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.