ಪ್ರಜಾ ಪ್ರಭುತ್ವದ ಆಪ್ತ ರಕ್ಷಕ- ಫಾಲಿ ನಾರಿಮನ್ 

ಮರೆಯ ಬಾರದ ಮಹಾನುಭಾವ

ಪ್ರಜಾ ಪ್ರಭುತ್ವದ ಆಪ್ತ ರಕ್ಷಕ- ಫಾಲಿ ನಾರಿಮನ್ 

 


ಕೆ.ಪಿ.ಲಕ್ಷ್ಮಿ ಕಾಂತ ರಾಜೇ ಅರಸು

   “ ನಾನು ಜಾತ್ಯತೀತ ಭಾರತದಲ್ಲಿ ಬದುಕಿದ್ದೇನೆ ಮತ್ತು ಪ್ರವರ್ಧಮಾನಕ್ಕೆ ಬಂದಿದ್ದೇನೆ ಸಮಯದ ಪೂರ್ಣತೆಯಲ್ಲಿ ದೇವರು ಇಚ್ಛಿಸಿದರೆ ನಾನು ಜಾತ್ಯತೀತ ಭಾರತದಲ್ಲಿ ಸಾಯಬಯಸುತ್ತೇನೆ.”


-ನ್ಯಾಯವಾದಿ ಫಾಲಿ ನಾರಿಮನ್. 

     ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಬಲವರ್ಧನೆ ಮತ್ತು ಸಂವಿಧಾನದ ಆಶಯಗಳಿಗೆ ಧÀಕ್ಕೆ ಉಂಟಾಗುವ ಸಂದರ್ಭಗಳಲ್ಲೆಲ್ಲ ಗಟ್ಟಿ ಧ್ವನಿ ಎತ್ತಿದ ಹೆಸರಂತ ನ್ಯಾಯವಾದಿ ಫಾಲಿ ನಾರಿಮನ್ ಮೊನ್ನೆ ಕೊನೆಯುಸಿರೆಳೆದರು. ಕೊನೆಯುಸಿರು ಇರುವವರೆಗೆ ನ್ಯಾಯಕ್ಕಾಗಿ ವಕಾಲತ್ತು ಹಾಕಿದ ದೊಡ್ಡ ಮನುಷ್ಯ ಇವರು. ಕರ್ನಾಟಕವಂತೂ ಇವರನ್ನು ಮರೆಯುವಂತೆಯೇ ಇಲ್ಲ. 


   ಪಾರ್ಸಿ ಸಮುದಾಯಕ್ಕೆ ಸೇರಿದ, ನಾರಿಮನ್ 1919 ಜನವರಿ ಹತ್ತರಂದು ಆಧುನಿಕ ಮ್ಯಾನ್ಮಾರ್ (ಹಿಂದಿನ ಬರ್ಮಾ) ದೇಶದ ರಾಜಧಾನಿ ರಂಗೂನ್‌ನಲ್ಲಿ ಜನಿಸಿದ ನಾರಿಮನ್ 1950 ರ ದಶಕದಲ್ಲಿ ವಕೀಲ ವೃತ್ತಿ ಆರಂಭಿಸಿದರು. ಸಾಂವಿಧಾನಿಕ ಹಕ್ಕುಗಳಿಗೆ ಸಂಬಂಧಿಸಿದಂತೆ ತಕರಾರು ತಲೆದೋರಿದ ಸಂದರ್ಭಗಳಲ್ಲಿ ನಾಗರಿಕ ಹಕ್ಕು ಹಾಗೂ ಕಲ್ಯಾಣಕ್ಕಾಗಿ ಧ್ವನಿ ಎತ್ತಿದ್ದಾರೆ ಕೇಶವಾನಂದ ಭಾರತಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಪ್ರಕರಣವನ್ನು ಕೈಗೆತ್ತಿಕೊಂಡು ಕೇಂದ್ರ ಸರ್ಕಾರ ಪ್ರಜಾಪ್ರಭುತ್ವದ ಮೂಲಭೂತ ಪ್ರಸ್ತಾವನೆಗೆ ವಿರುದ್ಧವಾಗಿ ನಡೆದುಕೊಂಡಿದೆ ಎಂದು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿದಾರರ ಪರ ವಾದ ಮಂಡಿಸಿದರು. ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿ ಕೇಂದ್ರ ಸರ್ಕಾರ ನಡೆದು ಕೊಳ್ಳುತ್ತಿದೆ ಎಂದು ವಾದಿಸಿದರು.


      ಮೈಸೂರು ಸಂಸ್ಥಾನಕ್ಕೂ ಇವರ ನಂಟಿತ್ತು. ನಾರಿಮನ್ ಅವರ ಸಂಬಂಧಿಗಳಾಗಿದ್ದ ಎಫ್. ಕೆ.ಇರಾನಿ ಅವರು ಮೈಸೂರು ಸಂಸ್ಥಾನದ 25 ನೇ ದೊರೆ ಜಯಚಾಮರಾಜ ಒಡೆಯರ್ ಅವರೊಂದಿಗೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದ ಕಾರಣ ಮೈಸೂರು ನಗರದ ಉದಯಗಿರಿಯಲ್ಲಿ ಜಾವ ಮೋಟಾರ್ ಬೈಕ್ ತಯಾರಿಕಾ ಕೈಗಾರಿಕೆಯನ್ನು ತೆರೆದು ಅಟೋಮೊಬೈಲ್ ಕ್ಷೇತ್ರಕ್ಕೆ ಹೊಸ ಆಯಾಮ ತಂದರು. ಈ ಕಾರ್ಖಾನೆ ಸ್ಥಾಪನೆಯಿಂದಾಗಿ ಮೂಲಕ ಸಾವಿರಾರು ಮಂದಿಗೆ ಉದ್ಯೋಗ ದೊರೆಯಿತು. 


    ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಎಸ್. ಆರ್. ಬೊಮ್ಮಾಯಿ ನೇತೃತ್ವದ ಸರ್ಕಾರವನ್ನು ವಜಾ ಮಾಡಿದ ಕೇಂದ್ರ ಸರ್ಕಾರದ ವಿರುದ್ಧ ನಾರಿಮನ್ ಸಮರ್ಥವಾಗಿ ವಾದ ಮಂಡಿಸಿ ಇದು ಸಂವಿಧಾನದ ಆಶಯಗಳಿಗೆ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧ ಹಾಗೂ ಸಂವಿಧಾನದ 356ನೇ ಅನುಚ್ಚೇದದ ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತು. 


     ಕಾವೇರಿ ನದಿ ನೀರಿನ ಹಂಚಿಕೆ ವಿಷಯದಲ್ಲಿ ರಾಜ್ಯದ ಪರ ಸಮರ್ಥವಾಗಿ ವಾದ ಮಂಡಿಸಿದವರು ಈ ನಾರಿಮನ್ . ಇವರಿಂದಾಗಿ ಬೆಂಗಳೂರು ನಗರಕ್ಕೆ ಕುಡಿಯಲು ಕಾವೇರಿ ನೀರು ಸರಬರಾಜು ಮಾಡಲು ಸಾಧ್ಯವಾಯಿತು. ಮೇನಕಾ ಗಾಂಧಿ ಪ್ರಕರಣವೆಂದೇ ಪ್ರಸಿದ್ಧವಾಗಿರುವ ಮೇನಕಾ ಗಾಂಧಿ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಪಾಸ್‌ಪೋರ್ಟನು ಕಾರಣವಿಲ್ಲದೆ ಬಹು ದಿನಗಳ ಕಾಲ ಸರ್ಕಾರ ಇಟ್ಟುಕೊಳ್ಳುವಂತಿಲ್ಲ ಎಂಬುದನ್ನು ವಾದಿಸಿ ಅರ್ಜಿದಾರರಿಗೆ ನ್ಯಾಯ ಒದಗಿಸಿಕೊಟ್ಟರು. ರಾಜನಾರಾಯಣ್ ಪರ ವಾದಿಸಿ ಇಂದಿರಾ ಗಾಂಧಿಯ ಆಯ್ಕೆ ಅಸಿಂಧುಗೊಳ್ಳಲು ಇವರ ಸಮರ್ಥ ವಾದ ಮಂಡನೆ ಕಾರಣ. ಮಿನರ್ವ ಮಿಲ್‌ಗೆ ಸಂಬಂಧಿಸಿದಂತೆ ಸಂವಿಧಾನದ 42 ಅನುಚ್ಚೇದಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಪ್ರಯತ್ನಿಸಿದಾಗ ಇದು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿದೆ ಎಂದು ವಾದಿಸಿದ್ದರು. ಕರ್ನಾಟಕದ ಕೃಷ್ಣ ಕಾವೇರಿ ವಿವಾದ ಭೋಪಾಲ್ ಗ್ಯಾಸ್ ದುರಂತ, ಜಯಲಲಿತಾ ಪ್ರಕರಣ ಹೀಗೆ ದೇಶದ ಅನೇಕ ಪ್ರಮುಖ ಪ್ರಕರಣಗಳಲ್ಲಿ ಅವರು ವಾದ ಮಂಡಿಸಿದ್ದರು.


   ನ್ಯಾಯಾಧೀಶರನ್ನು ನೇಮಕ ಮಾಡುವ ಕೊಲಿಜಿಯಂ ವ್ಯವಸ್ಥೆಯನ್ನು ಬದಲಾಯಿಸಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು ಸ್ಥಾಪಿಸುವ ಸಾಂವಿಧಾನಿಕ ತಿದ್ದುಪಡಿಗೆ ಸವಾಲು ಹಾಕಿ ಅದರ ವಿರುದ್ಧ ವಾದಿಸಿದರು. ಇವರ ಪ್ರಮುಖ ಪುಸ್ತಕಗಳು ಬಿ ಫೋರ್ ದಿ ಮೆಮೋರಿ ಫ್ರೆಂಡ್ಸ್, ದಿ ಸ್ಟೇಟ್ ಆಫ್ ದಿ ನೇಷನ್. ಭಾರತದ ಕಾನೂನು ವ್ಯವಸ್ಥೆಯನ್ನು ಉಳಿಸಬಹುದೆ ಹಾಗೂ ಗಾಡ್ ಸೇವ್ ಹಾನರಬಲ್ ಸುಪ್ರೀಂ ಕೋರ್ಟ್ ಇವು ನಾರಿಮನ್ ಅವರ ಪ್ರಮುಖ ಪುಸ್ತಕಗಳು.