ಹೊಸ ಕೈಗಾರಿಕಾ ನೀತಿಯ ಅನುಷ್ಟಾನದ ಅವಕಾಶ

training and india's new factories

ಹೊಸ ಕೈಗಾರಿಕಾ ನೀತಿಯ ಅನುಷ್ಟಾನದ ಅವಕಾಶ

ಸಿ.ಚಿಕ್ಕಣ‍್ಣ , ಐಎಎಸ್(ನಿ)

 

ಹೊಸ ಕೈಗಾರಿಕಾ ನೀತಿಯ ಅನುಷ್ಟಾನದ ಅವಕಾಶ

ಗುಲಬರ್ಗದ ದೊಡ್ಡ ಉದ್ದಿಮೆ MSK Mills ಇದರ ಪಕ್ಕದಲ್ಲಿದ್ದ Industrial Estate ನಲ್ಲಿದ್ದ ಮಾದರಿ ಬಡಗಿತನ ಹಾಗೂ ಕುಲುಮೆ ಕೇಂದ್ರದಲ್ಲಿ 2 ತಿಂಗಳ ತರಬೇತಿ: ಶ್ರೀಕೃಷ್ಣ ಲಾಡ್ಜ್‌ನಲ್ಲಿ ವಸತಿ, ಆದರೆ ಕೆಳಗಿದ್ದ ಕಾಮತ್ ಹೋಟೆಲ್‌ನಲ್ಲಿ  ಊಟ ತಿಂಡಿ, ಸೈಕಲ್ ರಿಕ್ಷಾದಲ್ಲಿ ದಿನವೂ ಬಿಸಿಲಲ್ಲೇ ಹೋಗಿ ಬರುವುದು, ರಾಯಚೂರಿಗಿಂತಲೂ ಇಲ್ಲಿನ ಹವಾಮಾನ 1 ರಿಂದ 2 ಡಿಗ್ರಿವರೆಗೂ ಹೆಚ್ಚು ಹೀಗಾಗಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿತ್ತು ಪರಿಸ್ಥಿತಿ. ಹಾಗೂ-ಹೀಗೂ ಮಾಡಿ ಎರಡು ತಿಂಗಳ ತರಬೇತಿ ಮುಗಿಸಿ, ರೈಲು ಹತ್ತಿ ಹಿಂದೂಪುರಕ್ಕೆ ಬಂದ. ಅಲ್ಲಿಂದ ಬಸ್‌ನಲ್ಲಿ ಮಧುಗಿರಿಗೆ ಬಂದು ನಂತರ ತಿಪ್ಪನಹಳ್ಳಿ ತಲುಪಿದೆ. ರಾಯಚೂರು-ಗುಲಬರ್ಗದ ಹೋಟೆಲ್ ಊಟ, ತಿಂಡಿಯಿಂದಾಗಿ ಗ್ಯಾಸ್ಟ್ರಿಕ್ಕ್ ರೋಗ ಅಂಟಿಕೊಂಡಿತ್ತು.

ಎಂಪಿಎಂ ಭದ್ರಾವತಿಯಲ್ಲಿ ತರಬೇತಿ

ಊರಲ್ಲಿ 2 ದಿನ ಇದ್ದು ತುಮಕೂರು ಮಾರ್ಗವಾಗಿ ಬಸ್‌ನಲ್ಲಿ ಭದ್ರಾವತಿಯ ಎಂಪಿಎಂ ಕಾಗದದ ಕಾರ್ಖಾನೆಗೆ ಹಾಜರಾದೆ. ಆಗಲೆ ಮಳೆಗಾಲ ಆರಂಭವಾಗಿತ್ತು. ಎಂಪಿಎಂ ಲೇಬರ್‌ಆಫೀಸರ್ ಮುರಳೀಧರ ಅವರ ಸಹಾಯ-ಸಹಕಾರದಿಂದ, ಕ್ವಾರ್ಟ‌್ರಸ್ ನಲ್ಲಿ ಒಬ್ಬರೇ ಇದ್ದ ನಂಜುಂಡಯ್ಯ ಎಂಬ ಇಂಜಿನಿಯರ್ ಜತೆ ನಾನು ವಾಸ ಮಾಡಿದೆ. ಎಂಪಿಎಂ ಆಗ ತುಂಬಾ ಚೆನ್ನಾಗಿ ಕೆಲಸ ನಿರ್ವಹಿಸಿ Top Institutions ನಲ್ಲಿನ ಪಟ್ಟಿಯಲ್ಲಿ ಹೆಸರು ಪಡೆದಿತ್ತು. ಎರಡು ತಿಂಗಳ ತರಬೇತಿ ಮುಗಿಸಿ, ಬೆಂಗಳೂರಿಗೆ ಪ್ರಯಾಣಿಸಿ, ನನ್ನ ಹಳೆಯ ಜಾಗ ಶೇಷಾದ್ರಿಪುರಂನ ಗಣೇಶ ಲಾಡ್ಜ್‌ನಲ್ಲಿ ರೂಂ ಮಾಡಿಕೊಂಡು ತರಬೇತಿ ಮುಂದುವರೆಸಿದೆ.

ಎನ್‌ಜಿಇಎಫ್ / ಐಟಿಐನಲ್ಲಿ ತರಬೇತಿ

1962ರಲ್ಲಿ ಕವಿಕಾದ ವಿಸ್ತಾರ ಯೋಜನೆಯಾಗಿ ಆರಂಭವಾದ ಈ ಕಾರ್ಖಾನೆ West Germany AEG ಕಂಪನಿಯ ಸಹಯೋಗದೊಂದಿಗೆ, ಬೆಂಗಳೂರಿನ ಹಳೆ ಮದ್ರಾಸು ರಸ್ತೆಯಲ್ಲಿರುವ ಬೈಯಪ್ಪನಹಳ್ಳಿಯಲ್ಲಿ ಸುಮಾರು 1000 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿತ್ತು. ಈ ಕಾರ್ಖಾನೆಯಲ್ಲಿ Heavy Duty Transformers, Switch Gears, Electric Motors, Bus Bars woo Electrics Appliances ತಯಾರಿಸುತ್ತಿದ್ದರು. ಸುಮಾರು 1500 ಜನ ಕಾರ್ಮಿಕರಿಗೆ ಉದ್ಯೋಗ ಒದಗಿಸಿತ್ತು. ಅದರ ಸಿಎಂಡಿ ಆಗಿದ್ದ ಎಂ ಸಚ್ಚಿದಾನಂದಮೂರ್ತಿಯವರನ್ನು ಭೇಟಿ ಮಾಡಿದ ಮೇಲೆ, ಅದರ ಜನರಲ್ ಮ್ಯಾನೇಜರ್ ನಾರಾಯಣಶೆಟ್ಟಿಯವರ ಸಹಯೋಗದೊಂದಿಗೆ ನಮ್ಮ ಎರಡು ತಿಂಗಳ ತರಬೇತಿ ನಡೆಯಿತು.

ತರಬೇತಿಯಲ್ಲಿ ನನ್ನ ಜತೆ ನನ್ನ ಬ್ಯಾಚ್‌ಮೇಟ್ ಎಂ. ಈರಯ್ಯ ಸಹ ಇದ್ದರು. ಇಬ್ಬರೂ ಲವಲವಿಕೆಯಿಂದ ತರಬೇತಿಗೆ ಹಾಜರಾಗುತ್ತಿದ್ದವು. ಕಾರ್ಖಾನೆಯ ಎಲ್ಲಾ ವಿಭಾಗಗಳಲ್ಲಿ ತರಬೇತಿ ವ್ಯವಸ್ಥೆ ಮಾಡಿದ್ದರು, ತರಬೇತಿ ಮುಗಿಸಿ ಕೆ.ಆರ್. ಪುರಂನಲ್ಲಿರುವ ಐಟಿಐಗೆ ಹೋಗಿ ಇಬ್ಬರೂ ಸೇರಿಕೊಂಡೆವು. ಕೇಂದ್ರ ಸರ್ಕಾರದ ಉದ್ದಿಮೆಯಾದ್ದರಿಂದ, ಅಲ್ಲಿನ ಆಡಳಿತ ನಮ್ಮ ತರಬೇತಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಲಿಲ್ಲ. ಹೀಗಾಗಿ ಕಾಟಾಚಾರಕ್ಕೆ ತರಬೇತಿಯ ಎರಡು ತಿಂಗಳ ಅವಧಿಯನ್ನು ಮುಗಿಸಿ, ಕೇಂದ್ರ ಕಛೇರಿಗೆ ಹೋಗಿ ವರದಿ ನೀಡಿದೆವು.

ಅಲ್ಲಿಗೆ ನಮ್ಮ ಮೊದಲ 18 ತಿಂಗಳ ತರಬೇತಿ ಕಾರ್ಯಕ್ರಮ ಮುಗಿಯಿತು. ಇನ್ನು ಸ್ವತಂತ್ರ ಪ್ರಭಾರದ ಜಿಲ್ಲಾ ಆಡಳಿತಕ್ಕೆ ವ್ಯವಸ್ಥೆ ಮಾಡುವಂತೆ ನಿರ್ದೇಶಕರಿಗೆ ಮನವಿ ಮಾಡಿದೆವು.

ಹೊಸ ಕೈಗಾರಿಕಾ ನೀತಿ

ಸ್ವಾತಂತ್ರ್ಯಾನಂತರ ಕೈಗಾರಿಕೋದ್ಯಮಕ್ಕೆ ಹೆಚ್ಚು ಗಮನವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡಲು ಆರಂಭಿಸಿ, ಪಂಚವಾರ್ಷಿಕ ಯೋಜನೆಯಲ್ಲಿ ಹೊಸ ಕೈಗಾರಿಕೆಗಳ (ಬೃಹತ್, ಮಧ್ಯಮ ಹಾಗೂ ಸಣ್ಣ) ಸ್ಥಾಪನೆ, ಹಳೆಯ ಕೈಗಾರಿಕೆಗಳ ವಿಸ್ತರಣೆ ಮುಂತಾಗಿ ಅನೇಕ ಅಭಿವೃದ್ಧಿ ಕಾರ್ಯಗಳು ಆರಂಭವಾದವು.

ಮೈಸೂರು ಸಂಸ್ಥಾನದಲ್ಲಿ ಶಿವನಸಮುದ್ರ ಜಲ ವಿದ್ಯುತ್‌ಉತ್ಪಾದನ ಘಟಕ ವಿಸ್ತರಣೆಯಾಯಿತು. ಶರಾವತಿ ಅಣೆಕಟ್ಟು ಆದ ನಂತರ, ಜೋಗ್‌ನಲ್ಲಿ ಜಲ ವಿದ್ಯುತ್‌ಉತ್ಪಾದನಾ ಘಟಕ ಆರಂಭವಾಗಿತ್ತು. ಉತ್ಪಾದಿಸಿದ ವಿದ್ಯುತ್ತನ್ನು ಸೂಕ್ತವಾಗಿ ಉಪಯೋಗಿಸುವ ಕಾರ್ಯತಂತ್ರಗಳು ಯೋಜನೆಗಳು ತಯಾರಾದವು. ರಾಜ್ಯದಲ್ಲಿ ಹತ್ತಿ ಗಿರಣಿಗಳು, ಖಾದ್ಯ ತೈಲ ಉತ್ಪನ್ನಗಳು, ಅಕ್ಕಿ ಗಿರಣಿಗಳು, ಮೆಷಿನ್ ಟೂಲ್ಸ್, ಕೇಂದ್ರ ಸರ್ಕಾರದ ಹೆಚ್ ಎಂಟಿ, ಹೆಚ್ ಎಂಟಿ ವಾಚ್, Hindustan Aeronautics ಮುಂತಾದ ಮಧ್ಯಮ ಹಾಗೂ ಬೃಹತ್‌ಕೈಗಾರಿಕೆಗಳು ಆರಂಭವಾದವು. ಕೈಗಾರಿಕಾ ಕ್ಲಸ್ಟರ್‌ಗಳು, ಕೈಗಾರಿಕಾ ವಸಾಹತುಗಳು ತಲೆ ಎತ್ತಿದವು. ರೈತರಿಂದ ಜಮೀನು ಪಡೆದು ಪರಿವರ್ತನೆ ಮಾಡಿ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿ ಪಡಿಸಲು ಮೈಸೂರು ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (MIADB) ಸಣ್ಣ ಕೈಗಾರಿಕಾ ವಸಾಹತುಗಳನ್ನು ರಾಜ್ಯದಾದ್ಯಂತ MSSIDC ಮೂಲಕ ಷೆಡ್‌ಗಳನ್ನು ನಿರ್ಮಿಸಿ ಇಂಜಿನಿಯರುಗಳಿಗೆ, ತಂತ್ರಜ್ಞರಿಗೆ ಆದ್ಯತೆಯ ಮೇಲೆ ಬಾಡಿಗೆಗೆ ನೀಡಲಾಯಿತು. MSFC, MSIIDC ಬ್ಯಾಂಕುಗಳ ಮೂಲಕ ಕೈಗಾರಿಕಾ ಬಂಡವಾಳ ಹೂಡಿಕೆ ಹಾಗೂ ಸಾಲ ನೀಡುವ ವ್ಯವಸ್ಥೆ ಜಾರಿಗೆ ಬಂತು. ಕೇಂದ್ರ `ಸರ್ಕಾರದ NSIC ಮೂಲಕ ಸಣ್ಣ ಕೈಗಾರಿಕೆಗಳಿಗೆ Hire Purchase ಮೂಲಕ, ಮೆಷಿನರಿಗಳನ್ನು ಒದಗಿಸುವ ಯೋಜನೆ ಅನುಷ್ಠಾನವಾಯಿತು. ತಾಂತ್ರಿಕ ಸಲಹೆ, ಮಾರ್ಗದರ್ಶನ ನೀಡಲು SISI, Tecsok ಮುಂತಾದ ತಾಂತ್ರಿಕ ಸಂಸ್ಥೆಗಳು ಆರಂಭವಾದವು. ಹೆಚ್ಚು ಹೆಚ್ಚು ತಂತ್ರಜ್ಞರನ್ನು ಸೃಜಿಸಲು ಹೊಸ ಇಂಜಿನಿಯರಿಂಗ್‌ಕಾಲೇಜುಗಳು, ಪಾಲಿಟೆಕ್ನಿಕ್‌ಗಳು, ITIಗಳು ಆರಂಭವಾಗಿ ತಂತ್ರಜ್ಞರ ಕೊರತೆ ನೀಗಿಸುವ ಪ್ರಯತ್ನ ಮಾಡಲಾಯಿತು. ತಂತ್ರಜ್ಞರಿಗೆ Enterprenuership Development Programme ಗಳ ಮೂಲಕ ಮಾರ್ಗದರ್ಶನ ಮಾಡಿ, ಅವರು ಕೈಗಾರಿಕೆಗಳನ್ನು ಸ್ಥಾಪಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸತತವಾಗಿ ಶ್ರಮಿಸಿತು