ಕೋಲಾರ ಜಿಲ್ಲಾ ಪತ್ರಕರ್ತರ ಸಂಘಕ್ಕೆ ಅವಿರೋಧ ಆಯ್ಕೆ ಅಧ್ಯಕ್ಷರಾಗಿ ಗೋಪಿನಾಥ್-ರಾಜ್ಯಕಾರ್ಯಕಾರಿ ಸಮಿತಿಗೆ ಗಣೇಶ್
ಕೋಲಾರ ಜಿಲ್ಲಾ ಪತ್ರಕರ್ತರ ಸಂಘಕ್ಕೆ ಅವಿರೋಧ ಆಯ್ಕೆ ಅಧ್ಯಕ್ಷರಾಗಿ ಗೋಪಿನಾಥ್-ರಾಜ್ಯಕಾರ್ಯಕಾರಿ ಸಮಿತಿಗೆ ಗಣೇಶ್
ಕೋಲಾರ ಜಿಲ್ಲಾ ಪತ್ರಕರ್ತರ ಸಂಘಕ್ಕೆ ಅವಿರೋಧ ಆಯ್ಕೆ
ಅಧ್ಯಕ್ಷರಾಗಿ ಗೋಪಿನಾಥ್-ರಾಜ್ಯಕಾರ್ಯಕಾರಿ ಸಮಿತಿಗೆ ಗಣೇಶ್
ಕೋಲಾರ:- ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಬಿ.ವಿ.ಗೋಪಿನಾಥ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ.ಎಸ್.ಗಣೇಶ್,ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಕೆ.ಚಂದ್ರಶೇಖರ್,ಖಜಾಂಚಿಯಾಗಿ ಎ.ಜಿ.ಸುರೇಶ್‌ಕುಮಾರ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಅವಿರೋಧ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾಯಿತು.
ಪತ್ರಕರ್ತರೂ ಹಾಗೂ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಬ್ಯಾಲಹಳ್ಳಿ ಗೋವಿಂದಗೌಡ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಅವರ ನೇತೃತ್ವದಲ್ಲಿ ಅವಿರೋಧ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಯಿತು.
ಅಧ್ಯಕ್ಷ ವಿ.ಮುನಿರಾಜು ಚುನಾವಣೆಗೆ ಅವಕಾಶ ನೀಡದೇ ಎಲ್ಲಾ ಪತ್ರಕರ್ತರನ್ನು ಒಂದೆಡೆ ಸೇರಿ, ಒಮ್ಮತದ ಆಯ್ಕೆಗೆ ಅವಕಾಶ ಕಲ್ಪಿಸುವ ಮೂಲಕ ಗುಂಪುಗಾರಿಕೆ,ವಿವಾದಗಳಿಗೆ ಕೊನೆಯಾಡಿ ಸಂಘಟನಾ ಶಕ್ತಿಯನ್ನು ನಿರೂಪಿಸಿದರು.
ಜಿಲ್ಲಾ ಅಧ್ಯಕ್ಷರಾಗಿ ಬಿ.ವಿ.ಗೋಪಿನಾಥ್
ಪತ್ರಿಕಾರಂಗದಲ್ಲಿ 40 ವರ್ಷಗಳಿಗೂ ಹೆಚ್ಚು ಸುಧೀರ್ಘ ಸೇವೆಯ ಮೂಲಕ ಗುರುತಿಸಿಕೊಂಡಿರುವ ಬಿ.ವಿ.ಗೋಪಿನಾಥ್ 3ನೇ ಬಾರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿ ಇತಿಹಾಸ ಬರೆದರು.
ಮೊದಲ ಬಾರಿಗೆ 2022ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಅವರು, ಸುಮಾರು 30 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಂಘದ ನಿವೇಶನದಲ್ಲಿ ಸುಸಜ್ಜಿತ ಪತ್ರಕರ್ತರ ಭವನ ನಿರ್ಮಾಣಕ್ಕೆ ನೇತೃತ್ವವಹಿಸಿ ದಿವಂಗತ ಎಂ. ಮಲ್ಲೇಶ್,ಕೆ.ಎಸ್.ಗಣೇಶ್ ಜತೆಗೂಡಿ ಸಂಘದ ಕಾರ್ಯಚಟುವಟಿಕೆಗಳಿಗೆ ವೇದಿಕೆ ಕಲ್ಪಿಸಿದ್ದರು.
ಇದಾದ ನಂತರ 2012 ರಲ್ಲಿ 2ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ವಿ.ಗೋಪಿನಾಥ್ ನಂತರ ಒಂದು ಬಾರಿ ಪತ್ರಕರ್ತರ ಒಕ್ಕೂಟದ ರಾಷ್ಟಿçÃಯ ಮಂಡಳಿ ಸದಸ್ಯರಾಗಿ, ಒಂದು ಬಾರಿ ರಾಜ್ಯ ಕಾರ್ಯಕಾರಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ರಾಜ್ಯ ಕಾರ್ಯಕಾರಿಗೆ ಕೆ.ಎಸ್.ಗಣೇಶ್
2002 ರಿಂದಲೇ ಸಂಘದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿರುವ ಗಣೇಶ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ, ಖಜಾಂಚಿಯಾಗಿ, ಮಾಧ್ಯಮ ಅಕಾಡೆಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದು, ಇದೀಗ ರಾಜ್ಯ ಕಾರ್ಯಕಾರಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗಣೇಶ್ ಜಿಲ್ಲೆಯಲ್ಲಿ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪಿಸಿ ಅದರ ಅಧ್ಯಕ್ಷರಾಗಿ, ಪತ್ರಕರ್ತರಿಗೆ ಆರ್ಥಿಕ ನೆರವು ನೀಡುವ ಸಂಸ್ಥೆಯೊAದನ್ನು ಹುಟ್ಟುಹಾಕಿದ್ದಲ್ಲದೇ ಭವನದ ವಿಸ್ತರಿಸುವ ಕಾಮಗಾರಿ ಪೂರ್ಣಗೊಳಿಸಿದ್ದರು.
ಚಂದ್ರಶೇಖರ್ ಪತ್ರಕರ್ತ ಸಂಘದ ಪ್ರಧಾನ ಕಾರ್ಯದಶಿಯಾಗಿ 2ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ಅವರೊಂದಿಗೆ ಕಳೆದ ಅವಧಿಯಲ್ಲೂ ಕೆಲಸ ಮಾಡಿದ ಎ.ಜಿ.ಸುರೇಶ್‌ಕುಮಾರ್ 2ನೇ ಬಾರಿಗೆ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳ ವಿವರ ಇಂತಿದೆ
ಉಪಾಧ್ಯಕ್ಷರಾಗಿ ಎ.ಸದಾನಂದ, ಎ.ಅಪ್ಪಾಜಿಗೌಡ, ಎಸ್.ಲಕ್ಷ್ಮೀಶ, ಜಿಲ್ಲಾ ಕಾರ್ಯದರ್ಶಿಗಳಾಗಿ ಸಿ.ಜಿ.ಮುರಳಿ, ಎಂ.ರವಿಕುಮಾರ್, ಎಸ್.ಪಿ.ವೆಂಕಟೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿಗೆ ರಾಮು, ನಾ.ಮಂಜುನಾಥ್, ಕೆ.ಆಸಿಫ್‌ಪಾಷ, ವೆಂಕಟೇಶಪ್ಪ, ಕೆ.ಎನ್.ಮಹೇಶ್, ಕೆ.ರಾಮಮೂರ್ತಿ, ಹೆಚ್.ಎಲ್.ನಾಗರಾಜ, ರಾಜೇಂದ್ರವೈದ್ಯ, ಜಿ.ಮಂಜುನಾಥಗೌಡ, ಎಲ್.ಮುರಳಿಮೋಹನ್, ಮರಿಪಲ್ಲಿ ಎಂ.ಲಕ್ಷö್ಮಣ, ಎಂ.ನಾಗರಾಜಯ್ಯ, ವಿ.ರಾಮಕೃಷ್ಣ, ವೈ.ಶಿವಶಂಕರ್, ಪುರುಷೋತ್ತಮರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಗಳಾಗಿ ಹಿರಿಯ ಪತ್ರಕರ್ತ ಪಾ.ಶ್ರೀ.ಅನಂತರಾಮ್ ಹಾಗೂ ಎಸ್.ಎನ್.ಪ್ರಕಾಶ್ ಕಾರ್ಯನಿರ್ವಹಿಸಿದರು.