ಪುನೀತ್‌ಗೆ `ಬಸವಶ್ರೀ' ಪ್ರಶಸ್ತಿ: ಮರಣೋತ್ತರವಾಗಿ ಪ್ರದಾನ - ಮುರುಘಾ ಶ್ರೀ

ಪುನೀತ್‌ಗೆ `ಬಸವಶ್ರೀ' ಪ್ರಶಸ್ತಿ: ಮರಣೋತ್ತರವಾಗಿ ಪ್ರದಾನ - ಮುರುಘಾ ಶ್ರೀ


ಪುನೀತ್‌ಗೆ `ಬಸವಶ್ರೀ' ಪ್ರಶಸ್ತಿ:
ಮರಣೋತ್ತರವಾಗಿ ಪ್ರದಾನ - ಮುರುಘಾ ಶ್ರೀ

ಚಿತ್ರದುರ್ಗ: ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಪ್ರತಿಷ್ಟಿತ `ಬಸವಶ್ರೀ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಬಸವ ಜಯಂತಿಯAದು ಮರಣೋತ್ತರವಾಗಿ ಪುನೀತ್ ರಾಜ್‌ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ಪುನೀತ್ ರಾಜ್‌ಕುಮಾರ್ ಬಾಲನಟ, ನಾಯಕ ನಟ, ಹಿನ್ನೆಲೆ ಗಾಯಕ ಹಾಗೂ ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸಾಮಾಜಿಕ ಜಾಗೃತಿಯ ಪ್ರಚಾರಕರಾಗಿಯೂ ಸಮಾಜ ಸೇವೆ ಸಲ್ಲಿಸಿದ್ದಾರೆ. ಮಾನವೀಯ ಮೌಲ್ಯಗಳನ್ನು ಹೊಂದಿದ್ದ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಶಸ್ತಿಯು 5 ಲಕ್ಷ ನಗದು ಹಾಗೂ ಫಲಕವನ್ನು ಒಳಗೊಂಡಿದೆ. ನವೆಂಬರ್ 10 ರಂದು ಶರಣರು ಪುನೀತ್ ರಾಜ್‌ಕುಮಾರ್ ಮನೆಗೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ.