ಕೋಲಾರದ ಸರ್ಕಾರಿ ಮಹಿಳಾ ಕಾಲೇಜಿಗೆ  ಬಿ+ ಗ್ರೇಡ್: ಪ್ರೊ. ಗಂಗಾಧರ್ ರಾವ್

ಕೋಲಾರದ ಸರ್ಕಾರಿ ಮಹಿಳಾ ಕಾಲೇಜಿಗೆ  ಬಿ+ ಗ್ರೇಡ್: ಪ್ರೊ. ಗಂಗಾಧರ್ ರಾವ್

ಕೋಲಾರದ ಸರ್ಕಾರಿ ಮಹಿಳಾ ಕಾಲೇಜಿಗೆ  ಬಿ+ ಗ್ರೇಡ್: ಪ್ರೊ. ಗಂಗಾಧರ್ ರಾವ್

ಕೋಲಾರದ ಸರ್ಕಾರಿ ಮಹಿಳಾ ಕಾಲೇಜಿಗೆ  ಬಿ+ ಗ್ರೇಡ್: ಪ್ರೊ. ಗಂಗಾಧರ್ ರಾವ್

ಕೋಲಾರ : ಸರ್ಕಾರಿ ಮಹಿಳಾ ಕಾಲೇಜು ಕೋಲಾರ ರಾಷ್ಟ್ರೀಯ ಮೌಲ್ಯಂಕನ ಪ್ರಕ್ರಿಯೆಯ ಮೂರನೇ ಘಟ್ಟದಲ್ಲಿ  2015-16 ರಿಂದ 2019-20ರ ಶೈಕ್ಷಣಿಕ ಅವಧಿಯಲ್ಲಿ ಕಾರ್ಯ ನಿರ್ವಹಿಸಿರುವ ಕಾಲೇಜಿನ ಭೌತಿಕ ಮತ್ತು ಆನ್ಲೈನ್ ಮೂಲಕ ಪೂರಕ ದಾಖಲೆಗಳನ್ನು ನ್ಯಾಕ್ ವತಿಯಿಂದ ನೇಮಿಸಲಾಗಿದ್ದ ಪೀರ್ ಸಮಿತಿಯು ಕಳೆದ ಗುರುವಾರ ಮತ್ತು ಶುಕ್ರವಾರ ಬೇಟಿ ನೀಡಿ ಪೂರಕ ದಾಖಲೆಗಳನ್ನು ಪರಿಶೀಲಿಸಿ   ಅಉPಂ  2.62 ಯೊಂದಿಗೆ ಬಿ+' ಗ್ರೇಡ್ ಮಾನ್ಯತೆಯನ್ನುನ್ಯಾಕ್ ಪೀರ್ ಸಮಿತಿಯ ಅಧ್ಯಕ್ಷ ರಾದ ಪ್ರೋ. ಸತ್ಯನಾರಾಯಣರವರು ನೀಡಿದ್ದಾರೆ ಎಂದು  ತಿಳಿಸಿದರು


ಇದೇ ಸಮಿತಿಯ ಶಿರಸನಿ, ಸಂಯೋಜಕರಾದ  ಪ್ರೋ.ಪುಷ್ಪ ಕೆ.ಎಸ್. ಮತ್ತು ಸದಸ್ಯರರಾದ ಮೀನಾಕ್ಷಿ ವಾಯಕೋಲೆ ರವರು ಕಾಲೇಜಿನ ಅಭಿವೃದ್ಧಿ ಸಮಿತಿಯ ಆಧ್ಯಕ್ಷರಾದ ಶ್ರೀನಿವಾಸಗೌಡರು ಮತ್ತು ಸದಸ್ಯರು ಹಾಗೂ ದಾನಿಗಳ ಜೊತೆ ಸಭೆ ನಡೆಸಿದರು. ನಂತರ ಪೋಷಕರು,ಹಳೆಯ ವಿಧ್ಯಾರ್ಥಿಗಳು ಮತ್ತು ಕಾಲೇಜಿನ ವಿಧ್ಯಾರ್ಥಿಗಳ ಜೊತೆ ಪ್ರತ್ಯೇಕವಾಗಿ ಸಭೆ ನಡೆಸಿ ಕಾಲೇಜಿನ ಬಗ್ಗೆ ಮಾಹಿತಿಯನ್ನು ಪಡೆದರು. ನಂತರ ವಿವಿಧ  ವಿಭಾಗಗಳಿಗೆ ಭೇಟಿ ಗುಣಾತ್ಮಕ ಪರೀಶಿಲನೆ ಮಾಡಿದರು. ಕಾಲೇಜಿನ ಶೈಕ್ಷಣಿಕ ಗುಣಮಟ್ಟದ ಬಗ್ಗೆ ವಿಧ್ಯಾರ್ಥಿಗಳು ಮತ್ತು ಪ್ರಾಧ್ಯಾಪಕಕರುಗಳಿಗೆ ಗುಣಾತ್ಮಕ ಸಲಹೆ ನೀಡಿದರು. ನಂತರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಿ ಕಾಲೇಜಿನ ವಿಧ್ಯಾರ್ಥಿಗಳನ್ನು ಪ್ರಶಂಸಿದರು.


 ಇದೇ ಸಂದರ್ಭದಲ್ಲಿ ಕಾಲೇಜು ಸಮಿತಿಯ ಅಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ ಮಾತಾನಾಡಿ ಹೆಚ್ಚಿನ ಸ್ನಾತಕೋತ್ತರ ಪದವಿ ಕೋರ್ಸ್ಗಳನ್ನು ಪ್ರಾರಂಭಿಸುವAತೆ, ಪ್ರತ್ಯೇಕ ಗ್ರಂಥಾಲಯ ಕಟ್ಟದಡ ಜೊತೆಗೆ ನುರಿತ ಸಹ ಗ್ರಂಥಪಾಲಕರನ್ನ ನೇಮಿಸುವಂತೆ, ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮತ್ತು ಸೋಲಾರ್ ವಿದ್ಯುತ್ ಬಳಸಿಕೊಳ್ಳುವಂತೆ ತಿಳಿಸಿದರು.


ಅಉPಂ  2.62 ಪಡೆಯುವುದರೊಂದಿಗೆ ಬಿ+ ಗ್ರೇಡ್ ಮಾನ್ಯತೆ ಪಡೆದು ಕೊಂಡಿರುವುದಕ್ಕೆ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ,ಪ್ರಾಂಶುಪಾಲರು ಮತ್ತು ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ. ಸಕ್ರಿಯವಾಗಿ ಕಾಲೇಜಿನ ಪ್ರಾಧ್ಯಾಪಕರು ಸಹಕರಿಸಿದ್ದಕ್ಕಾಗಿ  ಕಾಲೇಜು ಉತ್ತಮ ಸ್ಥಿತಿಯಲ್ಲಿ ಇದೆ ಎಂದರು.


ಸರ್ಕಾರಿ ಮಹಿಳಾ ಕಾಲೇಜು, ಕೋಲಾರ ಐ.ಕ್ಯೂ.ಎ.ಸಿ. ಸಂಯೋಜಕರಾದ ಆರ್. ಡಿ.ಜನಾರ್ಧನ ಈ ಪ್ರಕ್ರಿಯೆಯ ಸಾರಥ್ಯವನ್ನು ವಹಿಸುತ್ತಾರೆ ಹಾಗೂ ಪ್ರಾಂಶುಪಾಲರಾದ ಶ್ರೀ ಗಂಗಾಧರ ರಾವ್, ಸತೀಶ್, ಪ್ರೊ. ಬೃಂದಾದೇವಿ, ಪ್ರೊ.ಗಂಗರಾಜು, ಪ್ರೊ. ಖಮರ್ ಫಾತಿಮ  ಹಾಗೂ ಪ್ರೊ ಸುನೀಲ್ ಇದ್ದರು.