ಜಿಲ್ಲಾ ಬೋರ್‌ವೆಲ್ ಏಜೆಂಟ್ಸ್ ಅಸೋಸಿಯೇಷನ್ ಉದ್ಘಾಟನೆ

ಜಿಲ್ಲಾ ಬೋರ್‌ವೆಲ್ ಏಜೆಂಟ್ಸ್ ಅಸೋಸಿಯೇಷನ್ ಉದ್ಘಾಟನೆ


ಜಿಲ್ಲಾ ಬೋರ್‌ವೆಲ್ ಏಜೆಂಟ್ಸ್ ಅಸೋಸಿಯೇಷನ್ ಉದ್ಘಾಟನೆ


ತುಮಕೂರು: ನಗರದ ಕನ್ನಡ ಭವನದಲ್ಲಿ ತುಮಕೂರು ಜಿಲ್ಲಾ ಬೋರ್‌ವೆಲ್ ಏಜೆಂಟ್ಸ್ ಅಸೋಸಿಯೇಷನ್ ಉದ್ಘಾಟನಾ ಸಮಾರಂಭವನ್ನು ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ನೆರವೇರಿಸಿದರು.
ಉದ್ಘಾಟನಾ ನುಡಿಗಳನ್ನಾಡಿದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ, ಇಲ್ಲಿಯವರೆಗೆ ಬೋರ್‌ವೆಲ್ ಏಜೆಂಟರುಗಳು ಎಷ್ಟು ಮಂದಿ ಇದ್ದಾರೆ ಎಂಬುದು ಗೊತ್ತಿರಲಿಲ್ಲ. ಇಂದು ಎಲ್ಲರೂ ನೊಂದಾಯಿಸಿಕೊAಡು ಯರ‍್ಯಾರು ಎಲ್ಲೆಲ್ಲಿ ಇದ್ದೇವೆ, ಏನು ಮಾಡುತ್ತಿದ್ದೇವೆ ಎಂಬ ಎಲ್ಲವೂ ಸಂಘದಿAದ ತಿಳಿಯಲಿದೆ ಎಂದರು.
ನಜೀರ್‌ಸಾಬ್ ಅವರನ್ನು ಬೋರ್‌ವೆಲ್ ಕೊರೆಯುವವರು ನಿಜವಾಗಲೂ ಜ್ಞಾಪಿಸಿಕೊಳ್ಳಬೇಕು. ಅವರು ಮೊದಲಿಗೆ ಬೋರ್‌ವೆಲ್ ಯೋಜನೆಯನ್ನು ತಂದು ರೈತರಿಗೆ ಮಾತ್ರ ಕೃಷಿಗೆ ಮಾತ್ರ ಎಂಬ ನಿಟ್ಟಿನಲ್ಲಿ ಪ್ರಾರಂಭ ಮಾಡಿದರು. ಅಲ್ಲಿಂದ ಬೋರ್‌ವೆಲ್ ಕಾರ್ಯ ದೊಡ್ಡ ಉದ್ಯಮವಾಗಿ ಬೆಳೆದು ಇಂದು ಎಲ್ಲಾ ಕ್ಷೇತ್ರಗಳಲ್ಲೂ ವಿಸ್ತರಿಸಿಕೊಂಡಿದೆ. ಇಂದು ಎಲ್ಲಾ ಕಡೆ ನೀರು ಕುಡಿಯುತ್ತಿದ್ದಾರೆ ಎಂದರೆ ಅದು ಬೋರ್‌ವೆಲ್‌ನಿಂದ ಮಾತ್ರ ಎಂದರು. 
ರೈತರಿಗೆ ಅತ್ಯಂತ ಕಡಿಮೆ ದರದಲ್ಲಿ ರೈತರ ಬಳಿ ಹಣವಿಲ್ಲದಿದ್ದರೂ ಬಡ್ಡಿ ರಹಿತವಾಗಿ ಬೋರ್‌ವೆಲ್ ಕೊರೆಸಿಕೊಡುತ್ತಿದ್ದೇವೆ ಎಂಬ ಬೋರ್‌ವೆಲ್ ಅಸೋಸಿಯೇಷನ್‌ನ ಪದಾಧಿಕಾರಿಗಳ ಉದ್ದೇಶ ಬಹಳ ಉತ್ತಮವಾಗಿದೆ. ಎಲ್ಲಾ ರೀತಿಯಿಂದಲೂ ಕಷ್ಟಪಡುವವನು, ತೊಂದರೆಗೊಳಗಾಗುವವನು ರೈತನೇ ಆಗಿರುವುದರಿಂದ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಅವರ ಕೈಹಿಡಿಯಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ ಎಂದು ಭಾವಿಸಬೇಕು ಎಂದು ತಿಳಿಸಿದರು.
ಐಕ್ಯತೆ ಒಂದೇ ಮಂತ್ರ, ಕಲಿಯುಗದಲ್ಲಿ ಸಂಘಟನೆಗೆ ಮಾತ್ರ ಶಕ್ತಿ ಇರುವಂತಹದ್ದು, ಇಂತಹ ಸಂಘಟನೆಯಿAದ ಏನೇ ಕೆಲಸ ನಿರ್ವಹಿಸಿದರೂ ಯಶಸ್ಸು ಖಂಡಿತಾ ಸಾಧ್ಯವಾಗಲಿದೆ. ನಿಮ್ಮ ಅಸೋಸಿಯೇಷನ್ ಇನ್ನೂ ಉತ್ತಮವಾಗಿ ಬೆಳೆಯಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತುಮಕೂರು ಜಿಲ್ಲಾ ಬೋರ್‌ವೆಲ್ ಏಜೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಮಚಂದ್ರಮೂರ್ತಿ (ರಾಮಣ್ಣ), ರೈತರ ಕಷ್ಟಕ್ಕೆ ಸ್ಪಂದಿಸಿ, ಕಡಿಮೆ ದರದಲ್ಲಿ ಬೋರ್‌ವೆಲ್ ಕೊರೆಸಿಕೊಡುವ ಉದ್ದೇಶದಿಂದ ತುಮಕೂರು ಜಿಲ್ಲಾ ಬೋರ್‌ವೆಲ್ ಅಸೋಸಿಯೇಷನ್ ಸ್ಥಾಪನೆ ಮಾಡಲಾಗಿದೆ ಎಂದರು.
ಬೋರ್‌ವೆಲ್ ಮಾಲೀಕರು ಕೊಳವೆಬಾವಿ ಕೊರೆಯುವ ದರವನ್ನು ಕಾಲಕಾಲಕ್ಕೆ ಹೆಚ್ಚಿಸುವುದರಿಂದ ಅಷ್ಟೊಂದು ಮಟ್ಟದ ಹಣವನ್ನು ಭರಿಸುವುದು ಎಲ್ಲರಿಗೂ ಸಾಧ್ಯವಾಗದ ಕಾರಣ, ಜಿಲ್ಲಾ ಮಟ್ಟದಲ್ಲಿ ನಿಗದಿತ ದರವನ್ನು ನಿಗದಿ ಮಾಡಿಸಿಕೊಡುವುದು ಉದ್ದೇಶವಾದರೆ, ಸಂಘಟನೆ ಮೂಲಕ ರೈತಾಪಿ ಬಂಧುಗಳಿಗೆ ಕೈಲಾದ ಸಹಾಯ ನೀಡಿ ಅತೀ ಕಡಿಮೆ ದರದಲ್ಲಿ ಬೋರ್‌ವೆಲ್ ಕೊರೆಸಿಕೊಟ್ಟು, ಬೆಳೆಗಳನ್ನು ಬೆಳೆಯಲು ಸಹಕರಿಸುವುದು ನಮ್ಮ ಉದ್ದೇಶ ಎಂದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಅಸೋಸಿಯೇಷನ್‌ಗೆ ಶುಭ ಹಾರೈಸಿ ಮಾತನಾಡಿದ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್, ಬೋರ್‌ವೆಲ್ ಏಜೆಂಟ್ಸ್ ಅಸೋಸಿಯೇಷನ್ ಸಂಘಕ್ಕೆ ಒಳ್ಳೆಯದಾಗಲಿ. ಈ ಸಂಘ ರಚನಾತ್ಮಕ ಕಾರ್ಯಕ್ರಮಗಳನ್ನು ಕೊಡುವುದರ ಮುಖೇನ ರೈತರ ಹಿತಾಸಕ್ತಿಯನ್ನು ಕಾಪಾಡುವುದರ ಜೊತೆಗೆ ರೈತರಿಗೆ ಯಾವುದೇ ರೀತಿಯಿಂದಲೂ ತೊಂದರೆಯಾಗದ ಹಾಗೆ ಸಮಾಜಮುಖಿಯಾಗಿ ಕೆಲಸ ಮಾಡಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾ ಬೋರ್‌ವೆಲ್ ಏಜೆಂಟ್ಸ್ ಅಸೋಸಿಯೇಷನ್‌ನ ನೊಂದಣಿ ಪತ್ರವನ್ನು ಶ್ರೀ ಸಿದ್ಧಲಿಂಗಸ್ವಾಮೀಜಿ ಬಿಡುಗಡೆ ಮಾಡಿದರು. ಇದೇ ವೇಳೆ ಜಗದೀಶ್, ಬೆಣ್ಣೆ ರಾಜಣ್ಣ, ಅನಿಲ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಕರ್ನಾಟಕ ಬೋರ್‌ವೆಲ್ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ ಅನಿಲ್‌ಕುಮಾರ್, ಡಾ. ರಾಜ್‌ಕುಮಾರ್ ಪ್ರಶಸ್ತಿ ಪುರಸ್ಕೃತ ಎಂ.ವಿ. ನಾಗಣ್ಣ, ಗೌರವಾಧ್ಯಕ್ಷರಾದ ಬೆಣ್ಣೆ ರಾಜಣ್ಣ, ಎಸ್. ಜಗದೀಶ್, ನಗರಸಭಾ ಮಾಜಿ ಸದಸ್ಯರಾದ ಡಿ.ಆರ್.ಬಸವರಾಜು, ಮುನಿಯಪ್ಪ, ಮುಖಂಡರಾದ ಕೆ.ಬಿ. ಬೋರೇಗೌಡ, ಸಿದ್ದೇಶ್, ಕೆ.ಸಿ. ನರಸಿಂಹಮೂರ್ತಿ, ಶಂಕರಪ್ಪ, ಬಿ.ಜಿ. ನರಸಿಂಹರಾಜು ಸೇರಿದಂತೆ ಅಸೋಸಿಯೇಷನ್‌ನ ಎಲ್ಲಾ ಪದಾಧಿಕಾರಿಗಳು, ಬೋರ್‌ವೆಲ್ ಏಜೆಂಟರು ಭಾಗವಹಿಸಿದ್ದರು.