ತೊಗರಿ ಬೆಳೆ: ಕಾಯಿಕೊರಕ, ಗೂಡುಮಾರು ಹುಳು ಬಾಧೆ ನಿಯಂತ್ರಣ ವಿಧಾನ
ತೊಗರಿ ಬೆಳೆ: ಕಾಯಿಕೊರಕ, ಗೂಡುಮಾರು ಹುಳು ಬಾಧೆ ನಿಯಂತ್ರಣ ವಿಧಾನ
ಜಿಲ್ಲೆಯಲ್ಲಿ ತೊಗರಿ ಒಂದು ಪ್ರಮುಖ ದ್ವಿದಳಧಾನ್ಯ ಬೆಳೆಯಾಗಿದ್ದು, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 11,878 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಬಿತ್ತನೆಯಾಗಿರುವ ತೊಗರಿ ಬೆಳೆಯು ಹೂವು ಬಿಡುವ ಹಂತದಲ್ಲಿದ್ದು, ಹೂ ಬಿಡುವ ಹಂತದಲ್ಲಿ ಸಾಮಾನ್ಯವಾಗಿ ಕಾಯಿ ಕೊರಕ ಹುಳು ಮತ್ತು ಗೂಡುಮಾರು ಹುಳು ಬಾಧೆ ಕಂಡು ಬರುತ್ತದೆ. ಕೀಟನಾಶಕ ಸಿಂಪಡಣೆ, ಬೇವಿನ ಬೀಜದ ಕಷಾಯ, ಸಮಗ್ರ ಕೀಟ ನಿರ್ವಹಣ ಕ್ರಮಗಳನ್ನು ಅನುಸರಿಸುವುದರಿಂದ ಈ ಹುಳುಗಳ ಬಾಧೆಯನ್ನು ಹತೋಟಿಗೆ ತರಬಹುದು.
ಕಾಯಿ ಕೊರಕ ಹುಳುವಿನ ಬಾಧೆಃ
ಕಾಯಿ ಕೊರಕ ಹುಳುಗಳ ಬಾಧೆ ತಗುಲಿದಾಗ ತೊಗರಿ ಗಿಡದಲ್ಲಿ ಹುಳುಗಳು ಮೊಗ್ಗನ್ನು ಕೊರೆಯುತ್ತವೆ. ತೊಗರಿ ಹೂಗಳು ಉದುರುತ್ತವೆ. ಕಾಯಿಗಳನ್ನು ಕೊರೆದು ಕಾಳುಗಳನ್ನು ತಿನ್ನುತ್ತವೆ. ಅಂತಹ ಕಾಯಿಗಳಲ್ಲಿ ಹುಳು ಕೊರೆಯುವಾಗ ತನ್ನ ತಲೆಯ ಭಾಗ ಮಾತ್ರ ಕಾಯಿಯಲ್ಲಿ, ಉಳಿದ ದೇಹದ ಭಾಗ ಕಾಯಿಯ ಹೊರಗಡೆ ಇರುತ್ತದೆ.
ಗೂಡುಮಾರು ಹುಳುವಿನ ಬಾಧೆಃ
ಗೂಡುಮಾರು ಹುಳುಗಳು ಎಲೆ ಮತ್ತು ಹೂವಿನ ಭಾಗವನ್ನು ಹೊಂದುಗೂಡಿಸಿ ಗೂಡನ್ನು ಕಟ್ಟಿ, ಹೂವು ಮತ್ತು ಎಲೆಗಳನ್ನು ತಿನ್ನುತ್ತವೆ ಆದ್ದರಿಂದ, ಏಕ ಬೆಳೆಯಾಗಿ ತೊಗರಿಯನ್ನು ಬೆಳೆದಾಗ ಕೇವಲ ಕೀಟನಾಶಕಗಳನ್ನು ಬಳಸಿ ಕೀಟಗಳನ್ನು ಹತೋಟಿ ಮಾಡುವುದು ಕಷ್ಟಕರ. ಆದುದರಿಂದ ಸಮಗ್ರ ಕೀಟ ನಿರ್ವಹಣಾ ಕ್ರಮಗಳನ್ನು ಅನುಸರಿಸಿ ಹತೋಟಿ ಮಾಡುವುದು ಉತ್ತಮ.
ಮೊಗ್ಗ, ಹೂವಿನ ಹಂತದಲ್ಲೇ ಹತೋಟಿಗೆ ತರಬೇಕು:
ತೊಗರಿ ಬೆಳೆಯು ಮೊಗ್ಗು ಮತ್ತು ಹೂವಿನ ಹಂತದಲ್ಲಿದ್ದಾಗಲೇ ಎಕರೆಗೆ 200 ಎಲ್.ಇ ನಂಜು ರೋಗಾಣು (ಹೆಚ್‌ಎ.ಎನ್.ಪಿ.ವಿ)ಗಳನ್ನು 400 ಲೀಟರ್ ನೀರಿನಲ್ಲಿ ಸೇರಿಸಿ ಶೇ.0.1 ಟಿ-ಪಾಲ್ ಮತ್ತು ಶೇ.0.5ರ ಬೆಲ್ಲದ ಪಾಕವನ್ನು ಬೆರೆಸಿ ಸಾಯಂಕಾಲದ ಸಮಯದಲ್ಲಿ ಸಿಂಪಡಿಸುವುದರಿAದ ಮರಿ ಹುಳುಗಳಿಗೆ ನಂಜಾಣು ರೋಗ ತಗಲಿ ತಲೆ ಕೆಳಗಾಗಿ ನೇತಾಡುತ್ತಾ ಸಾಯುತ್ತವೆ.
ಹೆಚ್‌ಎ.ಎನ್.ಪಿ.ವಿ. ಸಿಂಪಡಿಸಿದ 10-15 ದಿನಗಳ ನಂತರ ಶೇ.4ರ ಬೇವಿನ ಬೀಜದ ಕಷಾಯವನ್ನು ಸಿಂಪರಣೆ ಮಾಡುವುದು. ಈ ಕಷಾಯ ತಯಾರಿಸಲು 32 ಕಿ.ಗ್ರಾಂ ಬೇವಿನ ಬೀಜದ ಪುಡಿಯನ್ನು (ಸಿಪ್ಪೆಸಹಿತ) ಸುಮಾರು 50 ಲೀಟರ್ ನೀರಿನಲ್ಲಿ ಒಂದು ರಾತ್ರಿ ನೆನೆಸಿ, ಎರಡು ಮೂರು ಬಾರಿ ಸೋಸಿ, ಇದರಿಂದ ಬಂದ ದ್ರಾವಣಕ್ಕೆ 400 ಗ್ರಾಂ ಸಾಬೂನಿನ ಪುಡಿ ಸೇರಿಸಿ ನಂತರ 350 ಲೀಟರ್ ನೀರಿಗೆ ಈ 50 ಲೀಟರ್ ಬೇವಿನ ಬೀಜದ ದ್ರಾವಣ ಸೇರಿಸಿದರೆ ಒಟ್ಟು 400 ಲೀಟರ್ ಬೇವಿನ ಬೀಜದ ಕಷಾಯ ಸಿದ್ಧವಾಗುತ್ತದೆ. ಈ 400 ಲೀಟರ್ ದ್ರಾವಣ ಒಂದು ಎಕರೆಗೆ ಸಿಂಪಡಿಸಲು ಸಾಕಾಗುತ್ತದೆ.
ಕೀಟನಾಶಕಗಳ ಬಳಕೆ:
ಬೇವಿನ ಬೀಜದ ಕಷಾಯ ಸಿಂಪಡಿಸಿದ 10-15 ದಿನಗಳ ನಂತರ, ಅವಶ್ಯಕತೆ ಕಂಡುಬAದರೆ ಕಾಯಿಕೊರಕ ಹುಳುವಿನ ಹತೋಟಿಗೆ ಕೀಟನಾಶಕಗಳನ್ನು ಸಿಂಪಡಿಸಬೇಕು.
ಇAಡಾಕ್ಸಾಕಾರ್ಬ್ 14.5 ಎಸ್.ಸಿ 0.5 ಮಿ.ಲೀ ಪ್ರತಿ ಲೀಟರ್ ನೀರಿಗೆ ಅಥವಾ ಕ್ಲೊರ‍್ಪೆöÊರಿಫಾಸ್ 20 ಇ.ಸಿ 2 ಮಿ.ಲೀ ಪ್ರತಿ ಲೀಟರ್ ನೀರಿಗೆ ಅಥವಾ ಎಮಾಮೆಕ್ಟಿನ್ ಬೆನ್‌ಜೋಯೆಟ್ 0.3 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಸಕಾಲಕ್ಕೆ ಸಮಗ್ರ ಕೀಟ ನಿರ್ವಹಣೆ ಕೈಗೊಳ್ಳುವುದರಿಂದ ರೋಗ ಹತೋಟಿಗೆ ತರಬಹುದಾಗಿದ್ದು, ಇಳುವರಿಯೂ ಹೆಚ್ಚಲಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನಾ ತಿಳಿಸಿದ್ದಾರೆ.
- ಆರ್. ರೂಪಕಲಾ