ಪತ್ರಿಕೆಯ ವರದಿ ಪರಿಣಾಮ ವಾಲಿದ್ದ ಕಂಬ ನೆಟ್ಟಗಾಯಿತು
ಪತ್ರಿಕೆಯ ವರದಿ ಪರಿಣಾಮ
ವಾಲಿದ್ದ ಕಂಬ ನೆಟ್ಟಗಾಯಿತು
ತುರುವೇಕೆರೆ : ಪಟ್ಟಣದ ಬಾಣಸಂದ್ರ ರಸ್ತೆಯ ಡಿವೈಡರ್ ನ ಮಧ್ಯದಲ್ಲಿ ಹಾಕಲಾಗಿದ್ದ ವಿದ್ಯುತ್ ಕಂಬವೊAದು ವಾಲಿದ್ದು ಇಂದೋ ನಾಳೆಯೋ ಬಿದ್ದು ಅನಾಹುತಕ್ಕೆ ದಾರಿ ಮಾಡಿಕೊಡುತ್ತಿತ್ತು. ಇದನ್ನು ಗಮನಿಸಿದ ಪತ್ರಿಕೆ ಈ ಕುರಿತು ವರದಿ ಮಾಡಿ ಅಧಿಕಾರಿಗಳಿಗೆ ಮುಂದಾಗುವ ಅನಾಹುತದ ಬಗ್ಗೆ ಎಚ್ಚರಿಸಿತ್ತು. ಇದನ್ನು ಗಮನಿಸಿದ ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ಅಂಜನ್ ಕುಮಾರ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುಳಾದೇವಿ ಸ್ಥಳಕ್ಕೆ ಭೇಟಿ ನೀಡಿ ಪಟ್ಟಣ ಪಂಚಾಯ್ತಿಯ ಸಿಬ್ಬಂದಿಯ ಸಹಾಯದಿಂದ ವಾಲಿದ್ದ ವಿದ್ಯುತ್ ಕಂಬವನ್ನು ಜೆಸಿಬಿ ಮೂಲಕ ಸರಿಪಡಿಸಿ, ಬುಡವನ್ನು ಭದ್ರಗೊಳಿಸಿದರು.
ಪಟ್ಟಣ ಪಂಚಾಯ್ತಿಯವರ ಕ್ರಮದಿಂದಾಗಿ ಸಾರ್ವಜನಿಕರು ನೆಮ್ಮದಿಯ ನಿಟ್ಟಿಸುರು ಬಿಡುವಂತಾಯಿತು.
೧೬ ಟಿವಿಕೆ ೨ – ತುರುವೇಕೆರೆಯ ಬಾಣಸಂದ್ರ ರಸ್ತೆಯಲ್ಲಿ ವಾಲಿದ್ದ ವಿದ್ಯುತ್ ಕಂಬವನ್ನು ಸರಿಪಡಿಸುತ್ತಿರುವ ಸಿಬ್ಬಂದಿ.