“ಜೆಡಿಎಸ್‌ಗೇ ಬೇಡದ ರಿಜೆಕ್ಟ್ ಪೀಸ್ ನಮಗೇಕೆ?” ವಾಸಣ್ಣ ಸೇರ್ಪಡೆ ವದಂತಿಗೆ ಗುಬ್ಬಿ ಬ್ಲಾಕ್ ಕಾಂಗ್ರೆಸ್ ತೀವ್ರ ವಿರೋಧ 

“ಜೆಡಿಎಸ್‌ಗೇ ಬೇಡದ ರಿಜೆಕ್ಟ್ ಪೀಸ್ ನಮಗೇಕೆ?” ವಾಸಣ್ಣ ಸೇರ್ಪಡೆ ವದಂತಿಗೆ ಗುಬ್ಬಿ ಬ್ಲಾಕ್ ಕಾಂಗ್ರೆಸ್ ತೀವ್ರ ವಿರೋಧ 

“ಜೆಡಿಎಸ್‌ಗೇ ಬೇಡದ ರಿಜೆಕ್ಟ್ ಪೀಸ್ ನಮಗೇಕೆ?”

ವಾಸಣ್ಣ ಸೇರ್ಪಡೆ ವದಂತಿಗೆ ಗುಬ್ಬಿ ಬ್ಲಾಕ್ ಕಾಂಗ್ರೆಸ್ ತೀವ್ರ

ವಿರೋಧ 


ಗುಬ್ಬಿ: ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್(ವಾಸಣ್ಣ) ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಬರಲಿದ್ದಾರೆಂಬ ಸುದ್ದಿಯಿಂದ ತಾಲೂಕು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಅದರನ್ನು ಪರಿಹರಿಸುವ ಸಲುವಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮುಖಂಡರು ಸುದ್ದಿಗೋಷ್ಟಿ ಕರೆದು ಸ್ಪಷ್ಟೀಕರಣ ನೀಡಬೇಕಾಗಿ ಬಂದಿತು.
ಪಟ್ಟಣದಲ್ಲಿ ಬಸ್ ನಿಲ್ದಾಣದ ಎದುರು ಬಿ.ಹೆಚ್.ರಸ್ತೆಯಲ್ಲಿ ಮಹಾತ್ಮಗಾಂಧಿ ಟ್ರಸ್ಟ್ ಕಟ್ಟಡದ ಎರಡನೇ ಮಹಡಿಯಲ್ಲಿರುವ ತಾಲೂಕು ಕಾಂಗ್ರೆಸ್ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರಸಿಂಹಯ್ಯ, ಮುಖಂಡರಾದ ಹೊನ್ನಗಿರಿಗೌಡ, ಜಿ.ಎಸ್.ಪ್ರಸನ್ನಕುಮಾರ್, ಸಿ.ಆರ್.ಚಿಕ್ಕರಂಗೇಗೌಡ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಕಳೆದ ೧೫ ವರ್ಷಗಳಿಂದ ಗುಬ್ಬಿ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಶಾಸಕರಾಗಿ ಚುನಾಯಿತರಾಗುತ್ತಿರುವ ಹಾಗೂ ಕಾಂಗ್ರೆಸ್ ವಿರೋಧಿ ರಾಜಕಾರಣ ಮಾಡುತ್ತ ಕಾರ್ಯಕರ್ತರು ಹಲವಾರು ನ್ಯಾಯಾಲಯ ಪ್ರಕರಣಗಳನ್ನು ಎದುರಿಸಲು ಕಾರಣವಾಗಿರುವ ವಾಸಣ್ಣನವರು ಕಾಂಗ್ರೆಸ್ ಸೇರಿ ವಿಧಾನ ಸಭೆಗೆ ಚುನಾಯಿತರಾಗುವ ಪ್ರಯತ್ನ ಮಾಡಿದ್ದೇ ಆದಲ್ಲಿ ತಾಲೂಕು ಕಾಂಗ್ರೆಸ್‌ನ ಭಾರೀ ವಿರೋಧವನ್ನು ಎದುರಿಸಬೇಕಾಗಿ ಬರುತ್ತದೆ ಎಂದು ೨೦೧೩ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಧಾನಸಭೆಗೆ ಸ್ಪರ್ಧಿಸಿ ಪರಾಭವಗೊಂಡಿರುವ ಹೊನ್ನಗಿರಿಗೌಡರು ಎಚ್ಚರಿಕೆ ನೀಡಿದರು.
ಜೆಡಿಎಸ್‌ಗೇ ಬೇಡದ ರಿಜೆಕ್ಟ್ ಪೀಸ್ ನಮಗೇಕೆ ಎಂದು ಆಕ್ರೋಶದಿಂದ ನುಡಿದ ಹೊನ್ನಗಿರಿಗೌಡರು, ವಾಸಣ್ಣನವರನ್ನು ಯಾವ ಕಾರಣಕ್ಕೂ ಕಾಂಗೆಸ್‌ಗೆ ಸೇರ್ಪಡೆ ಮಾಡಿಕೊಳ್ಳಬಾರದೆಂದು ಆಗ್ರಹಿಸಿ ಜಿಲ್ಲಾ ಹಾಗೂ ಪ್ರದೇಶ ಕಾಂಗ್ರೆಸ್ ಮುಖಂಡರಿಗೆ ಲಿಖಿತ ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದರು.
೨೫ -೩೦ ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು  ಕಟ್ಟಿರುವಂತಹ ವ್ಯಕ್ತಿಗಳನ್ನು ಬಿಟ್ಟು ಬೇರೆಯವರನ್ನು ಪಕ್ಷದೊಳಗೆ ಆಹ್ವಾನಿಸುವುದನ್ನು ನಾವು ಖಡಾಖಂಡಿತವಾಗಿ ವಿರೋಧಿಸುತ್ತೇವೆ.ಮುಂದೆ ಬರುವಂತಹ  ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ,ಹಾಗೂ ವಿಧಾನಸಭಾ ಚುನಾವಣೆಯಲ್ಲೂ ಕೂಡ ನಮ್ಮ ಪಕ್ಷದಲ್ಲಿ ಇರುವವರೇ  ಅಭ್ಯರ್ಥಿಗಳಾಗುತ್ತಾರೆ ಹೊರತು ಬೇರೆಯವರನ್ನು ಯಾವುದೇ ಕಾರಣಕ್ಕೂ ಪಕ್ಷದೊಳಗಡೆ ಸೇರಿಸಿಕೊಳ್ಳುವುದಿಲ್ಲ ಎನ್ನುವುದನ್ನು ರಾಜ್ಯ ಕಮಿಟಿ ಜಿಲ್ಲಾ ಕಮಿಟಿ ಅರ್ಥ ಮಾಡಿಕೊಳ್ಳಬೇಕಾಗಿದೆ  ಎಂದರು.
ಹೈಕೋರ್ಟ್ ವಕೀಲರು ಹಾಗೂ ತಾಲೂಕು ಕಾಂಗೆಸ್ ಮುಖಂಡ ಜಿ.ಎಸ್.ಪ್ರಸನ್ನ ಕುಮಾರ್ ಮಾತನಾಡಿ, ಕ್ಷೇತ್ರದ ಶಾಸಕರು ಅವರ ಚುನಾವಣೆಗಳಿಗೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೆರವಾಗಿದ್ದಾರೆಂದು ಹೇಳಿರುವುದನ್ನು ಮಾಧ್ಯಮಗಳ ಮುಖಾಂತರ ಕೇಳಿ ತಿಳಿದಿದ್ದು, ಅವರ ಮಾತನ್ನು ಡಿ.ಕೆ.ಶಿವಕುಮಾರ್ ಒಪ್ಪದೇ ಹೋದಲ್ಲಿ ವಾಸಣ್ಣನವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬಹುದಾಗಿರುತ್ತದೆ ಎಂದು ಎಚ್ಚರಿಕೆ ನೀಡಿದರು.
೨೦ ವರ್ಷಗಳ ನಂತರ ನಮ್ಮ ತಂದೆ ಹಾಗೂ ನಾನೂ ಕೂಡ ಕಾಂಗ್ರೆಸ್‌ನಲ್ಲಿದ್ದೆ ಎಂಬ ಮಾತುಗಳನ್ನು ಆಡುತ್ತಿರುವುದು ಸರಿಯಲ್ಲ ಇನ್ನೊಂದು ಪಕ್ಷದ ಶಾಸಕರಾಗಿ ಮತ್ತೊಂದು ಪಕ್ಷದ ವಿಚಾರಗಳು ಮಾತನಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು  ವಾಸಣ್ಣನವರ ನಡೆಗೂ ನುಡಿಗೂ ತಾದ್ಯಾತ್ಮವಿಲ್ಲದಾಗಿದ್ದು, ಹದಿನೈದು ವರ್ಷ ಇದ್ದ ಜೆಡಿಎಸ್‌ಗೇ ನಿಷ್ಟೆ ಇಲ್ಲದ ಅವರು ಕಾಂಗ್ರೆಸ್‌ಗೆ ಕೇವಲ ಅಧಿಕಾರ ಹೊಂದಲು ಬರುವಂತಿಲ್ಲ, ಬರುವುದೇ ಆದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷಕ್ಕೆ ದುಡಿಯುವುದಾದಲ್ಲಿ ಬರಲಿ ಎಂದು ಸ್ಪಷ್ಟಪಡಿಸಿದರು.
ವಕೀಲರು ಹಾಗೂ ಪಕ್ಷದ ಮುಖಂಡÀ ಸಿ.ಆರ್.ಚಿಕ್ಕರಂಗೇಗೌಡರು ಮಾತನಾಡಿ, ವಾಸಣ್ಣನವರು ಕಾಂಗ್ರೆಸ್‌ಗೆ ಬರುವುದಾಗಿ ಎಂದೂ ಹೇಳಿಲ್ಲ, ಯಾರಾದರೂ ಕಾಂಗ್ರೆಸ್ ಮುಖಂಡರು ಅವರೊಂದಿಗೆ ಸಾಂದರ್ಭಿಕವಾಗಿ  ಕಾಣಿಸಿಕೊಂಡಾಕ್ಷಣ ಆತಂಕ ಪಡುವಂತಿಲ್ಲ, ಈಗ ವಿಧಾನ ಪರಿಷತ್ ಚುನಾವಣೆ ನಮ್ಮ ಕಣ್ಣ ಮುಂದಿದೆ. ಕೆ.ಎನ್.ರಾಜಣ್ಣನವರ ಮಗ ಆರ್. ರಾಜೇಂದ್ರ ಅಥವಾ ಇನ್ನಾರಿಗೇ ಆದರೂ ಪಕ್ಷ ಟಿಕೆಟ್ ಕೊಡುವ ಅಭ್ಯರ್ಥಿ ಪರ ನಾವು ಕೆಲಸ ಮಾಡಿ ಗೆಲ್ಲಿಸಿಕೊಳ್ಳಬೇಕಿದೆ. ಜೊತೆಗೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳು ಬರಲಿವೆ, ವಿಧಾನ ಸಭೆ ಚುನಾವಣೆ ಇನ್ನೂ ಒಂದೂವರೆ ವರ್ಷವಿದೆ, ಒಂದು ವೇಳೆ ಹೈಕಮಾಂಡ್ ವಾಸಣ್ಣನವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ತೀರ್ಮಾನ ಮಾಡಿದರೆ ಆಗ ಮತ್ತೆ ತಾಲೂಕು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಕಲೆತು ಚರ್ಚಿಸುವಾ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್ .ನರಸಿಂಹಯ್ಯ ಮಾತನಾಡಿ, ವಾಸಣ್ಣನವರ ಹೆಸರು ಹೇಳದೆಯೇ, ಅವರು ಕಾಂಗ್ರೆಸ್ ಸೇರುತ್ತಾರೆಂಬ ಗೊಂದಲ ಕಾರ್ಯಕರ್ತರಲ್ಲಿ ಸೃಷ್ಟಿಯಾಗಿದೆ. ತಾಲೂಕು ಕಾಂಗ್ರೆಸ್‌ನೊಳಗೆ ಈಗ ಯಾವುದೇ ಗುಂಪುಗಾರಿಕೆ ಇಲ್ಲ, ಎಲ್ಲ ಬಣಗಳೂ ಒಂದಾಗಿವೆ. ಈ ಸಂದೇಶ ಇಡೀ ತಾಲೂಕಿನ ಕಾರ್ಯಕರ್ತರಿಗೆ ತಲುಪಲಿ ಎಂದು ಸುದ್ದಿಗೋಷ್ಟಿ ಕರೆಯಲಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಮುಖಂಡ ಸಲೀಂ ಪಾಷಾ ಮಾತನಾಡಿ , ಕೊಳೆತ ಬದನೆಕಾಯಿಯನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವಂತಹ ಅವಶ್ಯಕತೆ ನಮಗಿಲ್ಲ.ಇಪ್ಪತ್ತು ವರ್ಷಗಳ ಕಾಲ ವಿರೋಧ ಮಾಡಿಕೊಂಡೇ ಬಂದಿರುವAತಹ ವ್ಯಕ್ತಿಯನ್ನು ಮತ್ತೆ ಕಾಂಗ್ರೆಸ್ಸಿಗೆ ಸೇರ್ಪಡೆ ಮಾಡಿಕೊಂಡು ಕಾಂಗ್ರೆಸ್ಸನ್ನು ಸೋಲಿಸುವುದಕ್ಕೆ ನಮಗೆ ಇಷ್ಟ ಇಲ್ಲ ಹೈಕಮಾಂಡ್ ಇದರ ಬಗ್ಗೆ ಹೆಚ್ಚು ಗಮನ ಹರಿಸಬೇಕು ಸ್ಥಳೀಯವಾಗಿ ಕಾಂಗ್ರೆಸ್ ನಿಂದ ಬೇರೆ ಪಕ್ಷದಿಂದ ಬರುವವರ ಬಗ್ಗೆ ವಿರೋಧವಿದೆ ಎಂದು ನೇರವಾಗಿ ತಿಳಿಸಿದರು
ಹಾಜರಿದ್ದ ಮುಖಂಡರು
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಂ.ವಿ.ಶ್ರೀನಿವಾಸ್ ವೀರಣ್ಣಗೌಡ, ಜಿ.ವಿ.ಮಂಜುನಾಥ್, ನಿಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಬೆಕಟ್ಟೆ ಜಯಣ್ಣ, ಕೆ. ಜಿ. ನಾರಾಯಣ್, ಜಿ.ಎಂ.ಶಿವಾನAದ್,  ಜಿ.ಎಸ್.ಮಂಜುನಾಥ್, ಜಿ.ಎಲ್. ರಂಗನಾಥ್, ವಿನಯ್, ಮಧು, ರೂಪಾ, ಬೃಂದಾ, ವಸಂತಮ್ಮ,  ಮೊದಲಾದವರು


ಗುಬ್ಬಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು !


ಗುಬ್ಬಿ ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಿAದ ಅಭ್ಯರ್ಥಿಗಳಿಗೆ ಕೊರತೆಯಿಲ್ಲ, ಎಂ. ಹೊನ್ನಗಿರಿಗೌಡರು, ಶ್ರೀನಿವಾಸ್ ವೀರಣ್ಣಗೌಡ, ಜಿ.ಎಸ್.ಪ್ರಸನ್ನಕುಮಾರ್ ಈ ಮೂವರಲ್ಲಿ ಯಾರನ್ನಾದರೂ ಪಕ್ಷ ಕಣಕ್ಕಿಳಿಸಬಹುದು.
-ಸಿ.ಆರ್.ಗೌಡ, ಕಾಂಗ್ರೆಸ್ ಮುಖಂಡರು