ಬಜರಂಗದಳ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ  ನಾಳೆ ನಗರ ಬಂದ್‌ಗೆ ವಿಹೆಚ್‌ಪಿ ಕರೆ ಘಟನೆಗೆ ಸಂಬಂಧಿಸಿದ ಐವರ ಬಂಧನ

ಬಜರಂಗದಳ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ  ನಾಳೆ ನಗರ ಬಂದ್‌ಗೆ ವಿಹೆಚ್‌ಪಿ ಕರೆ ಘಟನೆಗೆ ಸಂಬಂಧಿಸಿದ ಐವರ ಬಂಧನ

ಬಜರಂಗದಳ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ 
ನಾಳೆ ನಗರ ಬಂದ್‌ಗೆ ವಿಹೆಚ್‌ಪಿ ಕರೆ
ಘಟನೆಗೆ ಸಂಬಂಧಿಸಿದ ಐವರ ಬಂಧನ
ತುಮಕೂರು: ಬಜರಂಗದಳ ಜಿಲ್ಲಾ ಸಂಚಾಲಕ ಮಂಜು ಭಾರ್ಗವ್ ಮತ್ತು ಕಿರಣ್ ಮೇಲೆ ಮಂಗಳವಾರ ನಡೆದ ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗುವಿನ ವಾತಾವರಣ ಬೂದಿ ಮುಚ್ಚಿದ ಕೆಂಡದAತಿದೆ. ಘಟನೆಯನ್ನು ಖಂಡಿಸಿ ಬಜರಂಗದಳ ನಾಳೆ ನಗರ ಬಂದ್‌ಗೆ ಕರೆ ನೀಡಿದೆ.
ಇನ್ನು ಘಟನೆಗೆ ಸಂಬAಧಿಸಿದAತೆ ಐವರನ್ನು ಬಂಧಿಸಲಾಗಿದೆ. ಐಜಿ ಚಂದ್ರಶೇಖರ್ ಅವರು ನಗರಕ್ಕೆ ಆಗಮಿಸಿ ಬಂದೋಬಸ್ತ್ ವ್ಯವಸ್ಥೆಯನ್ನು ಪರಾಮರ್ಶಿಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ನಗರದಲ್ಲಿ ಕಟ್ಟೆಚ್ಚರ ವಹಿಸಿದ್ದು, ನೆರೆಯ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಕರೆಸಿಕೊಂಡ ಜಿಲ್ಲಾ ಪೊಲೀಸರು ಬುಧವಾರ ಬೆಳಗಿನ ಜಾವದಿಂದಲೇ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಮುಂಜಾಗ್ರತೆ ವಹಿಸಿದ್ದರು. 
ಘಟನೆ, ಹಾಗೂ ಅದಕ್ಕೆ ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ ರೀತಿಯನ್ನು ಗಮನಿಸಿದ ಕೆಲವು ನಾಗರಿಕರು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿದ್ದರು. ಆಟೋ ಚಾಲಕರು ಯಾವ ಸಂದರ್ಭದಲ್ಲಿ ಏನೋ ಎಂಬ ಆತಂಕದಲ್ಲೇ ಆಟೋ ಓಡಿಸುತ್ತಿದ್ದುದು ಕಂಡುಬಂದಿತು.
ತುಮಕೂರು ಬಂದ್‌ಗೆ ಮಂಗಳವಾರ ರಾತ್ರಿಯೇ ಕರೆ ನೀಡಲಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೂ ಹರಿದಾಡುತ್ತಿತ್ತು. ಆದರೆ, ನಾಯಕರ ಸೂಚನೆ ಮೇರೆಗೆ ಅದನ್ನು ವಾಪಸ್ಸು ಪಡೆಯಲಾಯಿತು. ಬುಧವಾರ ವಾಲ್ಮೀಕಿ ಜಯಂತಿ ಆಚರಣೆ ಇರುವುದರ ಹಿನ್ನೆಲೆಯಲ್ಲಿ ಬಂದ್‌ಗೆ ಕರೆ ನೀಡಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಕಾರಣದಿಂದಲೋ ಏನೋ ಬಂದ್ ನಡೆಸದಂತೆ ಖಡಕ್ ಸೂಚನೆ ನೀಡಲಾಗಿತ್ತು ಎನ್ನಲಾಗಿದೆ.
ಇದೆಲ್ಲದರ ಹಿನ್ನೆಲೆಯಲ್ಲಿ ನಗರದಲ್ಲಿ ಬಹುತೇಕ ಶಾಂತ ವಾತಾವರಣ ಕಂಡುಬAದಿತ್ತು. ಪ್ರಮುಖ ರಸ್ತೆ, ವೃತ್ತಗಳಲ್ಲಿ ಪೊಲೀಸರ ದಂಡನ್ನೇ ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿತ್ತು.


ನಾಳೆ ತುಮಕೂರು ಬಂದ್‌ಗೆ ಕರೆ:
ಬಜರಂಗದಳದ ಜಿಲ್ಲಾ ಸಂಚಾಲಕರ ಮೇಲೆ, ಒಂದು ಸಂಘಟನೆಯ ಜನರು ನಡೆಸಿರುವ ಮಾರಾಣಾಂತಿಕ ಹಲ್ಲೆಯನ್ನು ಖಂಡಿಸಿ, ನಾಳೆ, ಶುಕ್ರವಾರ ತುಮಕೂರು ಬಂದ್‌ಗೆ ವಿಶ್ವ ಹಿಂದೂ ಪರಿಷತ್ ಕರೆ ನೀಡಿದೆ.
ನಗರದ ಗುಬ್ಬಿಗೇಟ್ ಸರ್ಕಲ್ ಸಮೀಪ ನಡೆದ ಘಟನೆಯಲ್ಲಿ ಹಿಂದೂಪರ ಸಂಘಟನೆಯಾದ ಬಜರಂಗದಳದ ತುಮಕೂರು ಜಿಲ್ಲಾ ಸಂಚಾಲಕ ಮಂಜು ಭಾರ್ಗವ್ ಮತ್ತು ಕಿರಣ್ ಎಂಬುವವರ ಮೇಲೆ ಒಂದು ಸಮುದಾಯದ ಜನರು ನಡೆಸಿರುವ ಮಾರಾಣಾಂತಿಕ ಹಲ್ಲೆಯನ್ನು ಖಂಡಿಸಿ, ಅಕ್ಟೋಬರ್ ೨೨ ರಂದು ತುಮಕೂರು ಬಂದ್‌ಗೆ ವಿಶ್ವ ಹಿಂದೂ ಪರಿಷತ್ ಕರೆ ನೀಡಿದೆ. ತುಮಕೂರು ನಗರದ ಎಲ್ಲಾ ವಾಣಿಜ್ಯ ಮಳಿಗೆಗಳ ಮಾಲೀಕರು ತಮ್ಮ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿ, ತುಮಕೂರು ಬಂದ್‌ಗೆ ಬೆಂಬಲ ನೀಡಬೇಕು ಎಂದು ವಿಶ್ವ ಹಿಂದೂ ಪರಿಷತ್ ತುಮಕೂರು ಜಿಲ್ಲಾಧ್ಯಕ್ಷ ಜಿ.ಕೆ. ಶ್ರೀನಿವಾಸ್ ನಗರದ ಜನತೆಯಲ್ಲಿ ಮನವಿ ಮಾಡಿದ್ದಾರೆ.