ಕ್ಷಯರೋಗ ನಿರ್ಮೂಲನಾ ಆಂದೋಲನಕ್ಕೆ ಯಶಸ್ಸು : ದೇಶಕ್ಕೇ 3ನೇ ಸ್ಥಾನದಲ್ಲಿ ಜಿಲ್ಲೆ  ಕಂಚಿನ ಪದಕದ ಸಂಭ್ರಮ-ಸಿಇಓ ಡಾ.ವಿದ್ಯಾಕುಮಾರಿ

ಕ್ಷಯರೋಗ ನಿರ್ಮೂಲನಾ ಆಂದೋಲನಕ್ಕೆ ಯಶಸ್ಸು : ದೇಶಕ್ಕೇ 3ನೇ ಸ್ಥಾನದಲ್ಲಿ ಜಿಲ್ಲೆ  ಕಂಚಿನ ಪದಕದ ಸಂಭ್ರಮ-ಸಿಇಓ ಡಾ.ವಿದ್ಯಾಕುಮಾರಿ

ಕ್ಷಯರೋಗ ನಿರ್ಮೂಲನಾ ಆಂದೋಲನಕ್ಕೆ ಯಶಸ್ಸು : ದೇಶಕ್ಕೇ 3ನೇ ಸ್ಥಾನದಲ್ಲಿ ಜಿಲ್ಲೆ    ಕಂಚಿನ ಪದಕದ ಸಂಭ್ರಮ-ಸಿಇಓ ಡಾ.ವಿದ್ಯಾಕುಮಾರಿ



ಕ್ಷಯರೋಗ ನಿರ್ಮೂಲನಾ ಆಂದೋಲನಕ್ಕೆ ಯಶಸ್ಸು : ದೇಶಕ್ಕೇ 3ನೇ ಸ್ಥಾನದಲ್ಲಿ ಜಿಲ್ಲೆ 


ಕಂಚಿನ ಪದಕದ ಸಂಭ್ರಮ-ಸಿಇಓ ಡಾ.ವಿದ್ಯಾಕುಮಾರಿ


ತುಮಕೂರು : ರಾಷ್ಟ್ರ ಮಟ್ಟದ "ಕ್ಷಯ ಸೋಲಿಸಿ ದೇಶ ಗೆಲ್ಲಿಸಿ" ಅಭಿಯಾನದಡಿ ಜಿಲ್ಲೆಯು ಕಂಚಿನ ಪದಕ ಪಡೆದು ದೇಶದಲ್ಲಿಯೇ 3ನೇ ಸ್ಥಾನ ಗಳಿಸಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ: ಕೆ. ವಿದ್ಯಾಕುಮಾರಿ ಸಂತಸ ವ್ಯಕ್ತಪಡಿಸಿದ್ದಾರೆ.


ನಗರದ ಟೌನ್‌ಹಾಲ್ ವೃತ್ತದಲ್ಲಿ ಗುರುವಾರ ಅವರು ವಿಶ್ವ ಕ್ಷಯ ರೋಗ ದಿನದ ಅಂಗವಾಗಿ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ಮೂಲಕ ಚಾಲನೆ ನೀಡಿ ಮಾತನಾಡಿ, "ಕ್ಷಯ ಸೋಂಕು ಕೊನೆಗೊಳಿಸಲು ಹೂಡಿಕೆ ಮಾಡಿ, ಜೀವಗಳನ್ನು ಉಳಿಸಿ" ಎಂಬುದು 2022ರ  ಘೋಷವಾಕ್ಯವಾಗಿದ್ದು, ಕ್ಷಯ ನಿರ್ಮೂಲನೆಗಾಗಿ ಶ್ರಮವನ್ನು ಹೂಡಿಕೆ ಮಾಡುವ ಅಗತ್ಯವಿದೆ. ಪ್ರತಿಯೊಬ್ಬ ನಾಗರಿಕನು ರೋಗ ನಿರ್ಮೂಲನೆಗಾಗಿ ಜವಾಬ್ದಾರಿಯನ್ನು ಹೊಂದಿರಬೇಕು ಎಂದು ತಿಳಿಸಿದರು.


ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಬಿ. ನಾಗೇಂದ್ರಪ್ಪ ಮಾತನಾಡಿ 2021ರಲ್ಲಿ 2703 ಕ್ಷಯ ರೋಗಿಗಳನ್ನು ಪತ್ತೆಹಚ್ಚಿ " ಡಾಟ್ಸ್" ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದ ಅವರು  ಜಿಲ್ಲೆಯಲ್ಲಿ ಟಿ.ಬಿ.-ಎಚ್.ಐ.ವಿ. ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು,  ಕ್ಷಯರೋಗಿಗಳನ್ನು  ಎಚ್‌ಐವಿ   ಪರೀಕ್ಷೆಗೊಳಪಡಿಸಿದಾಗ 247  ಮಂದಿ ಎರಡೂ ರೋಗಗಳಿಂದಲೂ  ಬಳಲುತ್ತಿರುವುದು ಖಚಿತವಾಗಿದೆ. ಇವರಿಗೆ "ಕೋಟ್ರೆöÊಮಾಕ್ಸಜೋಲ್" ಮಾತ್ರೆಗಳನ್ನು ವಿತರಿಸಲಾಗುತ್ತಿದೆಯಲ್ಲದೇ ಇವರನ್ನು ಎ.ಆರ್.ಟಿ. ಚಿಕಿತ್ಸೆಗೂ ಒಳಪಡಿಸಲಾಗಿದೆ. ಈ ಕ್ರಮಗಳಿಂದ ರೋಗಿಗಳಲ್ಲಿ ಸಾವು-ನೋವಿನ ಪ್ರಮಾಣವನ್ನು ತಗ್ಗಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.


ಗುಣಮಟ್ಟದ ಪೌಷ್ಟಿಕ ಆಹಾರ  ಸೇವಿಸುವ ಸಲುವಾಗಿ ಕ್ಷಯ ರೋಗಿಗಳಿಗೆ ಪ್ರತಿ ಮಾಹೆ 500 ರೂ.ಗಳನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತಿದೆ.  ಕ್ಷಯ ರೋಗ ಲಕ್ಷಣಗಳಾದ 3 ವಾರಕ್ಕಿಂತಲೂ ಅಧಿಕ ಕೆಮ್ಮು, ಜ್ವರ, ತೂಕ ಕಡಿಮೆಯಾಗುವುದು ಕಂಡು ಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ  ನೀಡಿ ಪರೀಕ್ಷೆಗೆ ಒಳಪಡಬೇಕು ಎಂದರಲ್ಲದೇ, 2025ರ ವೇಳೆಗೆ ಕ್ಷಯ ರೋಗ ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ ಎಂದು  ತಿಳಿಸಿದರು.


ನಗರದ ಟೌನ್ ಹಾಲ್ ವೃತ್ತದಿಂದ ಆರಂಭವಾದ ಜಾಥಾ ಕಾರ್ಯಕ್ರಮವು ಅಶೋಕ ರಸ್ತೆ, ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ತಲುಪಿತು. ನಗರದ ಕೆ.ಎಸ್.ಆರ್.ಟಿ.ಸಿ. ಖಾಸಗಿ ಬಸ್ ನಿಲ್ದಾಣ, ವಿಶ್ವವಿದ್ಯಾನಿಲಯ, ಅಂತರಸನಹಳ್ಳಿ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಮಳಿಗೆಗಳನ್ನು ತೆರೆದು ಕ್ಷಯರೋಗದ ಬಗ್ಗೆ ಅರಿವು ಮೂಡಿಸಲಾಯಿತು. 


ಮೇಯರ್ ಬಿ.ಜಿ ಕೃಷ್ಣಪ್ಪ, ಪಾಲಿಕೆ ಆಯುಕ್ತೆ ರೇಣುಕಾ, ಆರ್‌ಸಿಎಚ್ ಅಧಿಕಾರಿ ಡಾ: ಕೇಶವ್ ರಾಜ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ: ಲಕ್ಷ್ಮಿಕಾಂತ್, ಸಹಾಯಕ ಡ್ರಗ್ ಕಂಟ್ರೋಲರ್ ಮಮತಾ, ಡೆಪ್ಯುಟಿ ಡ್ರಗ್ ಕಂಟ್ರೋಲರ್ ಬಸವರಾಜು ಆಸಂಗಿ ಹಾಜರಿದ್ದರು.
************