ಹಿಂಡು ಹಿಂಡು ಚಿರತೆಯ ದಂಡು: ನಶಿಸುತ್ತಿದೆ ಕೃಷ್ಣ ಮೃಗ ಸಂತತಿ
ಹಿಂಡು ಹಿಂಡು ಚಿರತೆಯ ದಂಡು: ನಶಿಸುತ್ತಿದೆ ಕೃಷ್ಣ ಮೃಗ ಸಂತತಿ
ಕೊಡಿಗೇನಹಳ್ಳಿ: ವನ್ಯಧಾಮದಲ್ಲಿ ಸುತ್ತಮುತ್ತಲಿನಲ್ಲಿ ಜಿರತೆಗಳು ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತಿದ್ದು ದಿನೇ ದಿನೇ ಕೃಷ್ಣ ಮೃಗ ಸಂತತಿ ನಶಿಸುತ್ತಿರುವದಲ್ಲದೆ ಈ ಭಾಗದ ರೈತರು ತನ್ನ ಜಮೀನಿನಲ್ಲಿ ಕೃಷಿಯಲ್ಲಿ ತೊಡಗಿಕೊಳ್ಳಲೂ ಭಯದ ವಾತಾವರಣ ನಿರ್ಮಾಣವಾಗಿದೆ.
ಮಧುಗಿರಿ ಹೋಬಳಿಯ ಮೈದನಹಳ್ಳಿಯ ಜಯಮಂಗಲಿ ಕೃಷ್ಣ ಮೃಗ ವನ್ಯದಾಮದ ಸಮೀಪದಲ್ಲಿರುವ ದೊಡ್ಡೇನಹಳ್ಳಿಯ ಸರ್ವೆ 9 ರಲ್ಲಿ ವಾಸವಿರುವ ಎನ್.ಕೆ ಗಂಗಯ್ಯ ಅವರ ಪುತ್ರ ನವೀನ್ ಎಂದಿನಂತೆ ತೋಟದಿಂದ ಮನೆಗೆ ವಾಪಸ್ ತೆರಳುತಿದ್ದಾಗ ಚಿರತೆಗಳು ಹಿಂಡಾಗಿ ಕಾಣಿಸಿಕೊಂಡಿವೆ.
ಕಳೆದ ಎರಡು ವರ್ಷಗಳಿಂದಲೂ ಚಿರತೆಗಳ ಬೀಡುಬಿಟ್ಟಿದ್ದವು, ಈ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ತೋಟದಿಂದ ವಾಪಸ್ ಬರುತಿದ್ದಾಗ ಎರಡು ಚಿರತೆಗಳು ಹಾಗು ನಾಲ್ಕು ಮರಿಗಳು ರಸ್ತೆಗೆ ಅಡ್ಡ ಬಂದಿದ್ದು ತಕ್ಷಣ ವನ್ಯಧಾಮದಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಸಂಪರ್ಕಿಸಿ ಫಾರೆಸ್ಟ್ ಗಾರ್ಡ್ ಹಾಗೂ ವನಪಾಲಕರನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ ತೋರಿಸಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಿಂಡು ಹಿಂಡು ಚಿರತೆಗಳನ್ನು ಹಿಡಿದು ಸ್ಥಳಾಂತರಗೊಳಿಸಿದರೆ ಈ ಭಾಗದ ರೈತರು ನೆಮ್ಮದಿಯ ಜೀವನ ಸಾಗಿಸಬಹುದು ಜತೆಗೆ ಈ ಅಪರೂಪದ ಕೃಷ್ಣ ಮೃಗ ಸಂತತಿ ರಕ್ಷಿಸಿಬಹುದು ಎಂದು ಒತ್ತಾಯಿಸಿದ್ದಾರೆ.
ತೋಟಕ್ಕೆ ಹೋಗಿ ಬರುವಾಗ ನಮಗೆ ಚಿರತೆ ಅಡ್ಡ ಬರುವುದು ಮಾಮೂಲಿಯಾಗಿ ಬಿಟ್ಟಿದೆ, ಸುಮಾರು ನಾಯಿ ಮರಿಗಳನ್ನು ಕೃಷ್ಣ ಮೃಗ ಗಳನ್ನು ತಿಂದಿವೆ, ಬುಧವಾರ ರಾತ್ರಿ ಬರುತಿದ್ದಾಗ ಚಿರತೆ ಮರಿಗಳು ಅಡ್ಡ ಬಂದಿದ್ದು ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗೆ ಕರೆದುಕೊಂಡು ತೋರಿಸಿದ್ದೇನೆ ಎಂದು ಪ್ರತ್ಯಕ್ಷದರ್ಶಿ ನವೀನ್ ಕುಮಾರ್ ತಿಳಿಸಿದ್ದಾರೆ.