ಐತಿಹಾಸಿಕ ರೈತ ಚಳುವಳಿಯ ಕೆಲವು ನಿರೂಪಣೆಗಳು
ಐತಿಹಾಸಿಕ ರೈತ ಚಳುವಳಿಯ ಕೆಲವು ನಿರೂಪಣೆಗಳು
ದಿಲ್ಲಿಯ ಗಡಿಗಳಲ್ಲಿ ಒಂದು ವರ‍್ಷ ಕಾವಲು ಕೂತ ರೈತರ ಚಳವಳಿ ಮೇಲ್ನೋಟಕ್ಕೆ ಯಶಸ್ಸು ಕಂಡಂತೆ ಕಾಣುತ್ತಿದೆ. ಆದರೆ ಚುನಾವಣೆಗಳನ್ನು ಗೆಲ್ಲುವ ಸಲುವಾಗಿ ಒಕ್ಕೂಟ ಸರಕಾರ ರೈತರಿಗೆ ಬಾಗಿದಂತೆ ಕಂಡಿದೆ ಎನ್ನುತ್ತಾರೆ ನಮ್ಮ ನಡುವೆ ನಾಲ್ಕೈದು ದಶಕಗಳಿಂದ ಸದಾ ಎಚ್ಚರದಿಂದ ಜನಪರ ಚಳವಳಿಗಳಲ್ಲಿ ಭಾಗವಹಿಸುತ್ತ ಅದೇ ಸಂರ‍್ಭದಲ್ಲಿ ದಿಕ್ಕು ತೋರುತ್ತಲೂ ಬಂದಿರುವ ಪ್ರಸ್ತುತ ಗಾಂಧಿ ಸಹಜ ಬೇಸಾಯಾಶ್ರಮದ ಸಿ.ಯತಿರಾಜು ಅವರು. ದಿಲ್ಲಿಯ ರೈತ ಚಳವಳಿಯನ್ನು ಅವರು ನಿರೂಪಿಸಿರುವುದನ್ನು ಮೂರು ಭಾಗಗಳಲ್ಲಿ ನಿಮ್ಮ ಮುಂದಿರಿಸಿದ್ದೇವೆ.
ಐತಿಹಾಸಿಕ ರೈತ ಚಳುವಳಿಯ ಕೆಲವು ನಿರೂಪಣೆಗಳು
ರಾಷ್ಟ್ರದ ರಾಜಧಾನಿ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತ ಚಳುವಳಿ ಒಂದು ವರ‍್ಷ ಪೂರೈಸಿದೆ.
ದೇಶದ 200ಕ್ಕೂ ಅಧಿಕ ರೈತ ಸಂಘಟನೆಗಳು ಒಗ್ಗೂಡಿ “ಸಂಯುಕ್ತ ಕಿಸಾನ್ನ್ ಮೊರ‍್ಚಾ” ಐಕ್ಯ ಹೋರಾಟ ವೇದಿಕೆ ರೂಪಿಸಿಕೊಂಡು ಈ ಚಳುವಳಿಯನ್ನು ಮುನ್ನಡೆಸುತ್ತಿದೆ. ದೇಶವ್ಯಾಪ್ತಿ 500 ಕ್ಕೂ ಹೆಚ್ಚು ವಿವಿಧ ರಾಜ್ಯಗಳ ರೈತ ಸಂಘಟನೆಗಳು ಈ ಹೋರಾಟಕ್ಕೆ ಬೆಂಬಲವಾಗಿ ತಮ್ಮ ತಮ್ಮ ಪ್ರದೇಶಗಳಲ್ಲಿ ಹೋರಾಟ ನಡೆಸುವ ಮೂಲಕ ಈ ಹೋರಾಟಕ್ಕೆ ನಿಜವಾದ ಅಖಿಲ ಭಾರತ ಹೋರಾಟದ ಸ್ವರೂಪವನ್ನು ನೀಡಿವೆ. ನಾವೆಲ್ಲ ರೈತರು ಒಂದು ಎಂಬ ಅಸ್ಮಿತೆ ಈ ಹೋರಾಟಕ್ಕೆ ಪ್ರಾಪ್ತವಾಗಿದೆ. ಇದಲ್ಲದೆ ಹಲವಾರು ಜನಪರ ನಾಗರಿಕ ಸಂಘಟನೆಗಳು ಈ ರೈತ
ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿವೆ. ಒಂದು ರ‍್ಷಕ್ಕೂ ಅಧಿಕ ಕಾಲ ರ‍್ಕಾರ ರೈತ ಸಂಘಟನೆಗಳಲ್ಲಿ ಒಡಕುಂಟುಮಾಡುವ ನಿಸ್ಸೀಮ ನರ‍್ಲಕ್ಷ ತೋರಿ ಸತಾಯಿಸಿ ಸುಸ್ತುಮಾಡುವ, ಪೊಲೀಸ್ ಬಲಪ್ರಯೋಗ ಮಾಡಿ, ಚಳುವಳಿಯ ಒಳಗೆನುಗ್ಗಿ, ಚಳುವಳಿಯ ದಿಕ್ಕುತಪ್ಪಿಸುವ, ಸುಳ್ಳು ಮೊಕದ್ದಮೆಗಳನ್ನು ದಾಖಲಿಸುವ, ಚಳುವಳಿಗಾರರ ಮೇಲೆ ವಾಹನ ಹರಿಸಿ ರೈತರ ಮಾರಣ ಹೋಮ ನಡೆಸಿ ಹಿಂಸಾಚಾರಕ್ಕೆ ಪ್ರಚೋದಿಸಿದರು ರೈತರು ಸಂಕಲ್ಪದಿಂದ ಚಳುವಳಿಯನ್ನು ನಿರಂತರವಾಗಿ ಮುಂದುವರಿಸಿ ವ್ಯಾಪಕ ಬೆಂಬಲ ಪಡೆದುಕೊಂಡು ಚಳುವಳಿಗಳ ವಿನೂತನ ಚಾರಿತ್ರಿಕ ದಾಖಲೆ ನರ‍್ಮಿಸಿದೆ. ಭಾರತದ ಅಹಿಂಸಾತ್ಮಕ ಹೋರಾಟದ ಸ್ವಾತಂತ್ರ‍್ಯ ಚಳುವಳಿಯ ಪರಂಪರೆ ಮತ್ತೊಮ್ಮೆ ವಿಶ್ವದ ಗಮನ ಸೆಳೆಯುವಂತೆ ಮಾಡಿದೆ.
ನಮ್ಮ ಆಳುವ ವರ‍್ಗಗಳು ಇಂದು ಜಾರಿಗೊಳಿಸುತ್ತಿರುವ ರಾಜಕೀಯ ಆರ‍್ಥಿಕ ನೀತಿಗಳ ಭಾಗವಾಗಿ ಜಾರಿಗೊಳ್ಳುತ್ತಿರುವ ಕೃಷಿ ನೀತಿಗಳು, ಶಾಸನಗಳು ನಿಯಮಾವಳಿಗಳು ಕರ‍್ಯಕ್ರಮಗಳು, ಕೃಷಿ ಬಿಕ್ಕಟ್ಟನ್ನು ಪರಿಹರಿಸಲು ವಿಫಲವಾಗಿರುವುದೇ ಅಲ್ಲದೆ ಅವುಗಳು ಕೃಷಿ ಬಿಕ್ಕಟ್ಟುಗಳನ್ನು ಮತ್ತಷ್ಟು ತೀವ್ರಗೊಳಿಸಿ ಪರಿಹರಿಸಲು ಸಾಧ್ಯವಾಗಲಾರದ ಕಗ್ಗಂಟುಗಳನ್ನು ಸೃಷ್ಟಿಸುತ್ತಿವೆ. ಆದರೂ ರ‍್ಕಾರ ಅದೇ ಹಳಸಲು ನೀತಿಗಳನ್ನು ಹೊಸ ಹೊಸ ಸ್ವರೂಪಗಳಲ್ಲಿ ಜಾರಿಗೊಳಿಸುತ್ತಲೆ ರೈತರನ್ನು ಸಂಕಷ್ಟಗಳ ಸರಮಾಲೆಗೆ ದೂಡುತ್ತಿರುವುದೇ ಅಲ್ಲದೆ ಭಾರತೀಯ ಕೃಷಿಯ ಅಸ್ತಿತ್ವಕ್ಕೆ ಗಂಡಾಂತರಕಾರಿಯಾಗಿ ಪರಿಣಮಿಸಿ ರೈತರು ಇಂದು “ಮಾಡು ಇಲ್ಲವೆ ಮಡಿ” ಎಂಬ ನಿರ‍್ಣಾಯಕ ಹೋರಾಟಕ್ಕಿಳಿಯುವಂತೆ ಒತ್ತಾಯಿಸುತ್ತಿದೆ. ಈ ಹೋರಾಟ ಕೇವಲ ರೈತ ಹೋರಾಟ ಮಾತ್ರವಾಗಿರದೆ ಆಹಾರ ಸುಭದ್ರತೆ, ಪೋಷಕಾಂಶ ಸುಭದ್ರತೆ, ಆರೋಗ್ಯ ಸುಭದ್ರತೆ, ವ್ಯಾಪಾರ, ವಾಣಿಜ್ಯ, ಶಿಕ್ಷಣ, ವಿಜ್ಞಾನ ತಂತ್ರಜ್ಞಾನ, ಸಾರಿಗೆ ಸಂರ‍್ಕ, ಸರ‍್ವಜನಿಕ ಸಂವಹನ, ವಿವಿಧ ರೀತಿಯ ಜೀವನೋಪಾಯ ಗಳಿಗೂ ವ್ಯಾಪಿಸಿಕೊಂಡು ಒಂದು ವ್ಯಾಪಕ ದೇಶವ್ಯಾಪಿ ವಿಷಯಾಧಾರಿತ ರಾಜಕೀಯ ಜನಾಂದೋಲನವಾಗಿ ರೂಪುಗೊಳ್ಳುತ್ತ ದೇಶಾದ್ಯಂತ ಎಲ್ಲ ಜನ ವಿಭಾಗಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ ಸಾಗಿದೆ.
ಸರ‍್ಕಾರಿ ಎನ್. ಸಿ.ಆರ್. ಬಿ ದಾಖಲೆಗಳ ಪ್ರಕಾರವೇ ರೈತರ ಆತ್ಮಹತ್ಯೆಗಳು ನಿರಂತರವಾಗಿ ಹೆಚ್ಚುತ್ತಲೇ ಸಾಗಿವೆ. ದಾಖಲೆಗಳಿಡಲು ಆರಂಭಿಸಿದಂದಿನಿಂದ ಮೂರೂವರೆ ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆಗೆ ಕೊರಳೂಡ್ಡಿದ್ದಾರೆ.ಈ ಸಂಖ್ಯೆ ರ‍್ಕಾರ ಎಷ್ಟೇ ಅಂಕಿಅಂಶಗಳನ್ನು ತಿರುಚಲು ಪ್ರಯತ್ನಿಸಿದ್ದರು ನಿರಂತರವಾಗಿ ಹೆಚ್ಚಾಗುತ್ತಲೇ ಸಾಗಿದೆ. ಆತ್ಮಹತ್ಯೆಯ ಪಿಡುಗು ಇತರ ಜನ ವಿಭಾಗಗಳಿಗೂ ಹಬ್ಬುತ್ತಾಸಾಗಿ ಮಹಾ ಸಾಮಾಜಿಕ ಪಿಡುಗಿನ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ.
ತೀರ ಇತ್ತೀಚಿನ ರ‍್ಕಾರಿ ಅಂಕಿ ಅಂಶಗಳೇ ಹೇಳುವಂತೆ 5957 ರೈತರು ಮತ್ತು4324 ಕೃಷಿ ಕರ‍್ಮಿಕರು 2019 ರಲ್ಲಿ ಆತ್ಮಹತ್ಯೆಗೆ ಬಲಿಯಾಗಿದ್ದಾರೆ. ಪ್ರತಿನಿತ್ಯ 28ಕ್ಕೂ ಅಧಿಕ ಕೃಷಿ ಕಾರ‍್ಮಿಕರು ಮತ್ತು ಬೇಸಾಯಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.2020ರಲ್ಲಿ ಕೃಷಿ ವಲಯದಲ್ಲಿ ತೊಡಗಿಕೊಂಡಿದ್ದ10,677 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ಕರ‍್ಮಿಕರ ಆತ್ಮಹತ್ಯೆ 2020 ರಲ್ಲಿ ಶೇಕಡ 18ರಷ್ಟು ಅಧಿಕಗೊಂಡಿದೆ. ರ‍್ನಾಟಕದಲ್ಲಿ ಈ ಪ್ರಮಾಣ ಶೇಕಡಾ 43ರಷ್ಟು ಅಧಿಕ ಗೊಂಡಿರುವುದು ಅತ್ಯಂತ ಆತಂಕಕಾರಿ ವಿಷಯವಾಗಿದೆ. ಪ್ರತಿನಿತ್ಯ 2000 ಮಂದಿ ಬೇಸಾಯ ತ್ಯಜಿಸುತ್ತಾ ಇದ್ದಾರೆ,ಇಲ್ಲ ರೈತ ಎಂಬ ಹೆಗ್ಗಳಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ. ದಿನೇದಿನೇ ಅವರ ಆದಾಯ ಕ್ಷೀಣಿಸುತ್ತಾ ಸಾಗಿದೆ. ವಾಯುಗುಣ ವೈಪರಿತ್ಯಗಳಿಂದಾಗುವ ಅಕಾಲಿಕ ಮಳೆ, ಪ್ರವಾಹ, ಬರಗಾಲ, ಬಿಸಿ ಗಾಳಿಯ ಹೊಡೆತ, ಕಂಡುಕೇಳರಿಯದ ವಿನೂತನ ರೋಗ ಮತ್ತು ಕೀಟಬಾಧೆ ಗಳು ರೈತರು ಮತ್ತು ಕೃಷಿಯನ್ನು ಹಲವಾರು ರೂಪಗಳಲ್ಲಿ ಕಾಡುತ್ತಿವೆ. ಕೃಷಿಗೆ ಅಗತ್ಯವಾದ ಯಂತ್ರಗಳು, ಆಯುಧಗಳು, ಸಾಧನ ಸಲಕರಣೆಗಳು, ಕೃಷಿ ರಾಸಾಯನಿಕಗಳು ಮುಂತಾದುವುಗಳ ಬೆಲೆಗಳು ಏರುತ್ತಾ ಸಾಗಿವೆ. ಯಂತ್ರಗಳ ಬಾಡಿಗೆ, ಇಂಧನ, ಕರ‍್ಮಿಕರ ಕೂಲಿ ಮುಂತಾದವುಗಳ ವೆಚ್ಚ ದಿನೇದಿನೇ ಹೆಚ್ಚಾಗುತ್ತಾ ಕೃಷಿ ಚಟುವಟಿಕೆಗಳನ್ನು ಮಾಡಲಾಗದ ಪರಿಸ್ಥಿತಿ ಹೆಚ್ಚಾಗುತ್ತಿದೆ. ಭೂಮಿಯ ಒಡೆತನ ಹಾಗೂ ದಾಖಲೆಗಳ ನರ‍್ವಹಣೆ ಆಧುನೀಕರಣ ಆಗದಿರುವುದರಿಂದ ಸಣ್ಣ ಮತ್ತು ಅಂಚಿನ ರೈತರು ರ‍್ಕಾರದ ಯೋಜನಾ ಸಹಾಯಧನ, ಸಾಲಮನ್ನ ಮುಂತಾದುವುಗಳನ್ನು ದಕ್ಕಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಅವರು ಸಾಂಸ್ಥಿಕ ಸಾಲ ಪಡೆಯಲಾಗದೆ ಖಾಸಗಿ ಲೇವಾದೇವಿಗಾರರಿಂದ ಸಾಲ ಪಡೆಯುವುದು ಅದಕ್ಕೆ ದುಬಾರಿ ಬಡ್ಡಿ ತೆರುವುದು ಈ ಎಲ್ಲಾ ಹೊರೆಗಳು ದುಬಾರಿ ಕೃಷಿ ಒಳಸುರಿಗಳು ಕೃಷಿ ಉತ್ಪಾದನಾ ವೆಚ್ಚಗಳನ್ನು ಗಗನಮುಖಿಯಾಗಿಸಿವೆ. ರ‍್ಷವಿಡೀ ಅಪಾರ ಪರಿಶ್ರಮ ಮತ್ತು ಬಂಡವಾಳ ತೊಡಗಿಸಿ, ಗಂಡಾಂತರಗಳನ್ನು ದಾಟಿ ಫಸಲನ್ನು ಮಾರುಕಟ್ಟೆಗೆ ಸಾಗಿಸಲು ಸಾಗಾಣಿಕ ವೆಚ್ಚ ಭರಿಸಿ ಮಾರುವ ಸಂರ‍್ಭದಲ್ಲಿ ಬೆಲೆ ಕುಸಿತ, ಮಾರುಕಟ್ಟೆಯ ಏರಿಳಿತಗಳಿಂದಾಗಿ ಅಪಾರ ನಷ್ಟಕೀಡಾಗಿ ಹೆಚ್ಚಿನ ಸಂರ‍್ಭಗಳಲ್ಲಿ ತಾನು ಕೃಷಿಗೆ ಮಾಡಿದ ವೆಚ್ಚಗಳು ಕೂಡ ದೊರಕದೆ ನಷ್ಟಗಳ ವಿಷರ‍್ತುಲದಲ್ಲಿ ರೈತ ನರಳುತ್ತಿದ್ದಾನೆ.
ಈ ಎಲ್ಲಾ ಕೃಷಿ ಬಿಕ್ಕಟ್ಟುಗಳು ರೈತರನ್ನು ಅನಿವರ‍್ಯವಾಗಿ ಹೋರಾಟಗಳಿಗೆ, ಚಳುವಳಿಗೆ ನೂಕುತ್ತಿವೆ. ರೈತ ಮತ್ತು ಕೃಷಿ ಎರಡು ಕೃಷಿ ಬಿಕ್ಕಟ್ಟಿನ ಟೈಮ್ ಬಾಂಬ್ ಮೇಲೆ ಕುಳಿತಿವೆ. ಸಿ. ಎಸ್. ಇ ನ ವರದಿಯೊಂದರ ಪ್ರಕಾರ 2017 ರಿಂದ ರೈತರ ಪ್ರತಿಭಟನೆಗಳು ಐದು ಪಟ್ಟು ಹೆಚ್ಚಾಗಿವೆ. 2017ರಲ್ಲಿ 15 ರಾಜ್ಯಗಳಲ್ಲಿ 34 ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಆದರೆ ಈಗ 22 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 165 ಕೂ ಅಧಿಕ ಪ್ರಮುಖ ಪ್ರತಿಭಟನೆಗಳು ನಡೆದಿವೆ.
ಇವುಗಳಲ್ಲಿ 12 ಪ್ರಮುಖ ಪ್ರತಿಭಟನೆಗಳು ಅಖಿಲ ಭಾರತ ವ್ಯಾಪ್ತಿಯನ್ನು ಹೊಂದಿವೆ. ಹಾಗಾಗಿ ರೈತರು ತಮ್ಮ ಮತ್ತು ಕೃಷಿಯ ಅಸ್ತಿತ್ವ ಕಾಪಾಡಿಕೊಳ್ಳಲು ಆತ್ಮಹತ್ಯೆ ಇಲ್ಲವೇ ಹೋರಾಟ ಮಾಡದೆ ಬದುಕುಳಿಯುವುದು ಸಾಧ್ಯವಿಲ್ಲವೆನ್ನುವ ಪರಿಸ್ಥಿತಿ ನರ‍್ಮಾಣಗೊಂಡಿದೆ.
ಚದುರಿದಂತೆ ನಡೆಯುತ್ತಿದ್ದ ಹಲವಾರು ಸ್ಥಳೀಯ ರೈತಹೋರಾಟಗಳಲ್ಲಿ ಕುಸಿಯುತ್ತಾ ಸಾಗಿರುವ ಕೃಷಿ ಆದಾಯ, ಸ್ಥಗಿತಗೊಳ್ಳುತ್ತಾ ಸಾಗುತ್ತಿರುವ ಕೂಲಿ, ರ‍್ಕಾರಿ ಬೆಂಬಲ ಬೆಲೆಗಳ ಹಿಂತೆಗೆತ,ಕೃಷಿ ಗಂಡಾಂತರಗಳ ಸಾಮಾನ್ಯ ಸೂತ್ರ, ಈ ಎಲ್ಲ ಹೋರಾಟಗಳಲ್ಲಿ ಅಂರ‍್ಗತ ಗೊಂಡಿದೆ. ಕ್ರಮೇಣ ಈ ರೀತಿಯ ರೈತ ಹೋರಾಟಗಳು ಕೃಷಿ ಅವಲಂಬಿತ ಪೂರಕ ಕ್ಷೇತ್ರಗಳಿಗೂ ವ್ಯಾಪಿಸಿ ಕೊಳ್ಳುತ್ತಾ ಗ್ರಾಹಕರನ್ನು ಅದರಲ್ಲೂ ವಿಶೇಷವಾಗಿ ಪಡಿತರ ವ್ಯವಸ್ಥೆಯ ಹಾಗೂ ಸಾಮಾನ್ಯ ಗ್ರಾಹಕರನ್ನು ಒಳಗೊಳ್ಳುವ ಮೂಲಕ ಕೃಷಿ ಬಿಕ್ಕಟ್ಟು, ಜೀವನೋಪಾಯಗಳ ಆರೋಗ್ಯದ, ಆಹಾರ ಮತ್ತು ಪೋಷಕಾಂಶ ಸುಭದ್ರತೆಯ ಮತ್ತು ಅಂತಿಮವಾಗಿ ಪರಿಸರ ಬಿಕ್ಕಟ್ಟು, ನೈರ‍್ಗಿಕ ಸಂಪನ್ಮೂಲಗಳ ನರ‍್ವಹಣೆಯ ಬಿಕ್ಕಟ್ಟುಗಳೊಂದಿಗೆ ತಳಕು ಹಾಕಿಕೊಂಡು ನಾಗರಿಕ ಸ್ವರೂಪ ಪಡೆದುಕೊಂಡು ಸಾಮಾಜಿಕ ಜನಾಂದೋಲನವಾಗಿ ಇದೊಂದು ಮಹಾ ನಾಗರಿಕ ಬಿಕ್ಕಟ್ಟಿನ ಸ್ವರೂಪ ಪಡೆದುಕೊಂಡು ಒಂದು ಬೃಹತ್ ಸಾಮಾಜಿಕ ಜನಾಂದೋಲನವಾಗಿ ಅಪಾರ ಜನಬೆಂಬಲವನ್ನು ದೇಶಾದ್ಯಂತ ಪಡೆದುಕೊಂಡು ಭಾರತದ ಜನಾಂದೋಲನಗಳ ಇತಿಹಾಸದಲ್ಲಿ ವಿನೂತನ ಐತಿಹಾಸಿಕ ದಾಖಲೆ ನಿರ‍್ಮಿಸಿದೆ.
ಆಂದೋಲನ ಜೀವಿಗಳಾದ ರೈತ ಹೋರಾಟಗಾರರು
ಆದರೆ ನಮ್ಮ ಆಳುವ ರ‍್ಕಾರಗಳು ಈ ಬೆಳವಣಿಗೆಗಳಿಗೆ ಕುರುಡಾಗಿವೆ. ಅವು ರೈತ ಚಳುವಳಿಯನ್ನು ಅಪಹಾಸ್ಯಮಾಡಿ ಚಳುವಳಿಗಳನ್ನು ಹೀಗೆಳೆಯುತ್ತಿವೆ. ಚಳುವಳಿಗಾರರು ರೈತರೇ ಅಲ್ಲ ಕೃಷಿಗೂ ಅವರಿಗೂ ಸಂಬಂಧವಿಲ್ಲ ಅದು ರಾಜಕೀಯ ಪ್ರೇರಿತ ರಾಷ್ಟ್ರದ್ರೋಹಿ ಪಿತೂರಿ. ಚಳುವಳಿ ಅರಾಜಕವಾದಿಗಳು, ಭಯೋತ್ಪಾದಕರು, ಖಲಿಸ್ತಾನಿಗಳು ಒಳನುಸುಳಿ ರ‍್ಕಾರದ ವಿರುದ್ಧ ಹಾಗೂ ಕೃಷಿ ಸ್ನೇಹಿ ರೈತಪರ ಸುಧಾರಣೆಗಳನ್ನು ತಡೆಯುವ ರೈತ ದ್ರೋಹ ಎಸಗುತ್ತಿದ್ದಾರೆ. ರ‍್ಕಾರ ಮಾತುಕತೆಗೆ ತೆರೆದ ಮನಸ್ಸನ್ನು ಹೊಂದಿದೆ. ಕೃಷಿ ಕಾಯ್ದೆಗಳ ವಿರ‍್ಶೆಯನ್ನು ತಿದ್ದುಪಡಿಗಳನ್ನು ನರ‍್ದಿಷ್ಟವಾಗಿ ಸೂಚಿಸಿದರೆ ಅವುಗಳನ್ನು ಗಂಭೀರವಾಗಿ ಪರಿಗಣಿಸಲು ಸಿದ್ಧವಿದೆ ಎಂದು ಹೇಳಿಕೊಳ್ಳುತ್ತಾ ಮಾತುಕತೆಗಳು ಮುರಿದುಬೀಳಲು ರೈತರ ಬಿಗಿ ನಿಲುವೇ ಕಾರಣ ಎಂದು ಬಿಂಬಿಸುತ್ತಿದೆ. ರ‍್ಕಾರ ಮುಂದುವರೆದು ರೈತ ಚಳುವಳಿಗಾರರನ್ನು ಆಂದೋಲನ ಜೀವಿಗಳೆಂದು ಅವರು ರೈತ ಹೋರಾಟವನ್ನು ದರ‍್ಬಳಕೆ ಮಾಡಿಕೊಳ್ಳುತ್ತಿರುವ ಪರಾವಲಂಬಿಗಳೆಂದು ಹೀಗೆಳೆಯುತ್ತಿದೆ.
ಮತ್ತು ಯಾವುದೇ ಕಾರಣಕ್ಕೂ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳುವ ಮೂಲಕ ರೈತ ಚಳುವಳಿಯ ದಿಕ್ಕೆಡಿಸುವ ಗೇಲಿ ಮಾಡುವ ಮೂಲಕ ರೈತ ಚಳುವಳಿಗಾರ ರೊಂದಿಗೆ ಹಲವಾರು ಸುತ್ತುಗಳ ವಿಫಲ ಮಾತುಕತೆಗಳ ತೋರಿಕೆಯ ಸಾಂಕೇತಿಕ ಕ್ರಮಗಳಿಂದ ರೈತ ಚಳವಳಿಯನ್ನು ಸತಾಯಿಸಿ ಸತಾಯಿಸಿ ಸುಸ್ತು ಮಾಡಿ ರೈತ ಚಳುವಳಿಯನ್ನು ಹತ್ತಿಕ್ಕುವದಿಕ್ಕೆಡಿಸುವ, ರೈತ ವಿರೋಧಿ ಕೃಷಿ ವಿರೋಧಿ ಕರ‍್ಪೊರೇಟ್ ಉದ್ದಾರಕ ನಿಲುವಿಗೆ ಅಂಟಿಕೊಂಡಿದೆ. ವಿದೇಶಿ, ವಿನಾಶಕ ಸಿದ್ಧಾಂತ ರೈತರನ್ನುಳುತ್ತಿದೆ ಎಂದು ಸರಕಾರ ಆರೋಪಿಸಿದೆ.
ಕಾರ‍್ಪೊರೇಟ್ ಜೀವಿಗಳ ಸರ‍್ಕಾರ
ಇದಕ್ಕೆ ಪ್ರತಿಯಾಗಿ ರೈತರು ಈ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ನಾವು ಈ ಕರಾಳ ಶಾಸನಗಳನ್ನು ಹಿಮ್ಮೆಟ್ಟಿಸದೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇದಲ್ಲದೆ ವಿದ್ಯುತ್ಶಕ್ತಿ ಕಾಯ್ದೆ ತಿದ್ದುಪಡಿಗಳನ್ನು ಹಿಂಪಡೆಯಬೇಕು. ಕೃಷಿ ಉತ್ಪನ್ನಗಳಿಗೆ ಶಾಸನಾತ್ಮಕ ಬೆಂಬಲ ಬೆಲೆಯನ್ನು ಖಾತ್ರಿ ಪಡಿಸಬೇಕೆಂದು ಪಟ್ಟುಹಿಡಿದು ಕುಳಿತಿವೆ ಮತ್ತು ದಿನೇದಿನೇ ಹೋರಾಟಗಳ ಸ್ವರೂಪಗಳನ್ನು ಮರ‍್ಪಡಿಸಿಕೊಂಡು ಇಡೀ ರೈತ ಸಮುದಾಯವನ್ನು ದೇಶಾದ್ಯಂತ ಕರಾಳ ಕಾಯ್ದೆಗಳ ವಿರುದ್ಧ ನರ‍್ಣಾಯಕ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ರ‍್ಕಾರಕ್ಕೆ ರಣವೀಳ್ಯ ನೀಡಿದೆ. ಭಯ ಮೋಸ ಹಾಗೂ ಭೀತಿಗಳಿಂದ ಕರ‍್ಪೊರೇಟ್ ಜೀವಿಗಳು ನಮ್ಮನ್ನು ಮಣಿಸಲು ಸಾಧ್ಯವಿಲ್ಲವೆಂಬ ಸ್ಪಷ್ಟ ಸಂದೇಶವನ್ನು ರೈತ ಚಳವಳಿಗಾರರು ರ‍್ಕಾರಕ್ಕೆ ರವಾನಿಸಿದ್ದಾರೆ.
ರೈತ ಹೋರಾಟ ಕಾನೂನು ಸಮರ
ಕೆಲವರು ರೈತ ಹೋರಾಟವನ್ನು ಕಾನೂನಿನ ಸಂವಿಧಾನ ಮೂಲಭೂತ ಹಕ್ಕುಗಳು ಸಂರಕ್ಷಣೆಯ ನ್ಯಾಯಾಂಗ ಸಮರವನ್ನಾಗಿಸಿಕೊಂಡಿದ್ದಾರೆ. ರ‍್ವೋಚ್ಚ ನ್ಯಾಯಾಲಯ ಈ ಕಾಯ್ದೆಗಳ ಜಾರಿಗೆ ತಾತ್ಕಾಲಿಕ ತಡೆ ನೀಡಿರುವುದೇ ಅಲ್ಲದೆ ರೈತರು ಮತ್ತು ರ‍್ಕಾರದ ಮಾತುಕತೆಗಳಿಗಿರುವ ಅಡೆತಡೆಗಳನ್ನು ಗುರುತಿಸಿ ರೈತರ ನ್ಯಾಯುತ ಬೇಡಿಕೆಗಳ ಈಡೇರಿಕೆಗೆ ವಿಶೇಷ ಪರಿಣಿತರ ಸಮಿತಿಯನ್ನು ರಚಿಸಿದೆ. ಈ ಸಮಿತಿ ತನ್ನ ವರದಿಯನ್ನು ರ‍್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಿದೆ. ಆದರೆ ಅದನ್ನು ನ್ಯಾಯಾಲಯ ಬಹಿರಂಗಪಡಿಸಿಲ್ಲ ಹಾಗೂ ಅದರ ಬಗ್ಗೆ ಮುಂದಿನ ಕ್ರಮಗಳನ್ನು ಜರುಗಿಸಿಲ್ಲ. ಇದಲ್ಲದೆ ಇತ್ತೀಚೆಗೆ ರೈತರ ಪ್ರತಿಭಟನೆ ಹಕ್ಕು ಮತ್ತು ನಾಗರಿಕರು ಓಡಾಡುವ ದಾರಿಯ ಹಕ್ಕುಗಳ ಬಗ್ಗೆಯೂ ನ್ಯಾಯಾಲಯ ತನ್ನ ವಿಚಾರಣೆಯನ್ನು ಆರಂಭಿಸಿದೆ.
(ನಾಳಿನ ಸಂಚಿಕೆಗೆ)
ಐತಿಹಾಸಿಕ ರೈತ ಚಳುವಳಿಯ ಕೆಲವು ನಿರೂಪಣೆಗಳು (ನಿನ್ನೆಯ ಸಂಚಿಕೆಯಿಂದ)
ಚಳವಳಿಗಾರರ ಮೇಲೆ ಸಚಿವರಿಂದಲೇ ಹಿಂಸಾಚಾರ ಪ್ರಚೋದನಾ ಗಲಭೆ
ಇತ್ತೀಚೆಗೆ ಆಳುವ ಪಕ್ಷದ ಕರ‍್ಯರ‍್ತರು ಕೇಂದ್ರ ಗೃಹ ರಾಜ್ಯ ಸಚಿವರ ಮಗನ ನೇತೃತ್ವದಲ್ಲಿ ಅತ್ಯಂತ ರಭಸವಾಗಿ ವಾಹನವನ್ನು ಚಲಾಯಿಸಿ ಲಖೀಂಕೇರಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ನಾಲ್ಕು ಜನ ರೈತ ಮುಖಂಡರ ಸಾವಿಗೆ ಕಾರಣವಾಗಿರುವುದಲ್ಲದೆ ರ‍್ಕಾರವೇ ತನ್ನ ಗೃಹ ಸಚಿವರ ಮೂಲಕ ಹಿಂಸಾಚಾರಕ್ಕೆ ಪ್ರಚೋದನೆ ನೀಡಿ ದರ‍್ಜನ್ಯವೆಸಗಿದೆ. ಈ ಘಟನೆ ನಂತರ ಮೂರು ಜನ ಆಳವ ಪಕ್ಷದ ಕರ‍್ಯರ‍್ತರು ಹಾಗೂ ಮತ್ತರ‍್ವ ಪತ್ರರ‍್ತರ ಜೀವ ಹಾನಿಯಾಗಿ ಆರೋಪ-ಪ್ರತ್ಯಾರೋಪಗಳ ನಡುವೆ ಗೃಹ ರಾಜ್ಯಸಚಿವರ ರಾಜೀನಾಮೆಗೆ ಹಾಗೂ ನಿಷ್ಪಕ್ಷಪಾತ ತನಿಖೆಗೆ ರೈತರು ಒತ್ತಾಯಿಸಿದ್ದಾರೆ. ರ‍್ವೋಚ್ಚ ನ್ಯಾಯಾಲಯ ಈ ಬಗ್ಗೆ ವಿಚಾರಣೆ ಕೈಗೆತ್ತಿಕೊಂಡು ಸ್ವತಂತ್ರ ನಿಷ್ಪಕ್ಷಪಾತ ತನಿಖೆಯನ್ನು ಮಾಡಿಸುವ ನಿಟ್ಟಿನಲ್ಲಿ ಕರ‍್ಯನಿರತವಾಗಿದೆ. ರ‍್ವೋಚ್ಚ ನ್ಯಾಯಾಲಯದ ತಡೆಯಾಜ್ಞೆ ಜಾರಿಯಲ್ಲಿದ್ದರೂ ರ‍್ಕಾರ ಯಾವುದೇ ಹೆಗ್ಗಿಲ್ಲದೆ ಕರ‍್ಪೊರೇಟ್ ಪರವಾದ ಕೃಷಿ ಕರ‍್ಯಕ್ರಮಗಳನ್ನು ಮುಂದುವರಿಸಿದೆ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಪ್ಪಂದಗಳನ್ನು ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಮಾಡಿಕೊಳ್ಳುತ್ತಿದೆ. ರೈತರು ಕೃಷಿಯ ಕರ‍್ಪೊರೇಟೀಕರಣ ವನ್ನು ವಿರೋಧಿಸಿ ರಾಷ್ಟ್ರವ್ಯಾಪಿ ಹೋರಾಟ ನೆಡೆಸುತ್ತಿದ್ದರೂ ಅದಕ್ಕೆ ರ‍್ಕಾರ ಕವಡೆಕಾಸಿನ ಕಿಮ್ಮತ್ತನ್ನು ನೀಡದೆ ತಾನು ನಡೆದಿದ್ದೇ ದಾರಿ ಎಂದು ನಿರಂಕುಶ ನಡೆಯನ್ನು ಮುಂದುವರಿಸಿದೆ.
2014ರ ಲೋಕಸಭಾ ಚುನಾವಣೆ ರ‍್ಯಾಲಿಗಳಲ್ಲಿ ನಮ್ಮ ಘನವೆತ್ತ ಪ್ರಧಾನಮಂತ್ರಿಗಳು ನಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದರೆ ನಾವು ಕನಿಷ್ಠ ಬೆಂಬಲ ಬೆಲೆಯನ್ನು ಶಾಸನಾತ್ಮಕವಾಗಿ ಜಾರಿಗೊಳಿಸಲಾಗುವುದು ಎಂಬ ಭರವಸೆಯನ್ನು ಹಲವಾರು ಕಡೆ ಘೋಷಿಸಿದ್ದರು. ಆದರೆ ರೈತ ಚಳುವಳಿಯ ಸಂರ‍್ಭದಲ್ಲಿ ಅವು ನೆನಪಾಗುತ್ತಿಲ್ಲ. ಅವರ ಗೃಹ ಸಚಿವರೇ ಹೇಳಿಕೊಂಡಂತೆ ಅದೊಂದು ಚುನಾವಣಾ ಜುಮ್ಲಾ. ಚುನಾವಣೆಗಳಲ್ಲಿ ಬಾಯಿಗೆ ಬಂದಂತೆ ಜನರಿಗೆ ಭರವಸೆ ನೀಡಿ ಮತಗಳಿಸಿ ಅಧಿಕಾರ ಹಿಡಿಯುವುದು. ಅಧಿಕಾರ ದೊರೆತ ನಂತರ ಮತದಾರರನ್ನು ಸಂಪರ‍್ಣವಾಗಿ ಮರೆತು ಕಾಸು ಕೊಟ್ಟ ಕರ‍್ಪೊರೇಟ್ ಕಂಪನಿಗಳ ಜೀತ ಮಾಡುವ ರ‍್ಕಾರಕ್ಕೆ ನಾವಿಂದು ಸ್ಪಷ್ಟ ರಾಜಕೀಯ ಸಂದೇಶವನ್ನು ಚುನಾವಣೆಗಳ ಮೂಲಕವೇ ನೀಡಿ ದೇಶದಲ್ಲಿ ಪ್ರಜಾಪ್ರಭುತ್ವ ರಕ್ಷಣೆಗೆ ಮುಂದಾಗಬೇಕಿದೆ.
2011ರಲ್ಲಿ ಹಾಗೂ ಗುಜರಾತ್ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಇಂದಿನ ಪ್ರಧಾನಮಂತ್ರಿಗಳ ಅಧ್ಯಕ್ಷತೆಯಲ್ಲಿ ಗ್ರಾಹಕರ ವಿಷಯವಾಗಿ ಒಂದು ಸಮಿತಿಯನ್ನು ನೇಮಿಸಲಾಗಿತ್ತು. ಆ ಸಮಿತಿಯ ಅಧ್ಯಕ್ಷರಾಗಿ ಕೃಷಿ ಮಾರುಕಟ್ಟೆಗಳು ಬಗ್ಗೆ ಪರಿಶೀಲಿಸಿ, ರಾಷ್ಟ್ರೀಯ ಕೃಷಿ ಮಾರುಕಟ್ಟೆ ನರ‍್ಮಿಸಲು ಮಂತ್ರಿಗಳ ಮಟ್ಟದ ನೀತಿ ನಿರೂಪಣೆ ಸಮಿತಿಯನ್ನು ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಸ್ಥಾಪಿಸಬೇಕೆಂಬ ಶಿಫಾರಸನ್ನು ಮಾಡಲಾಗಿತ್ತು. ಆದರೆ ಶಿಫಾರಸ್ಸು ಈಗ ಅವರಿಗೆ ನೆನಪಾಗುತ್ತಿಲ್ಲವೇ ಕೆ? ನಾನು ಮಾಡಿದ್ದೆಲ್ಲ ಸರಿ ನನ್ನ ದಾರಿ ಹೆದ್ದಾರಿ ಎಂದು ಬೀಗುತ್ತಾ ದಿಡೀರ್ ಆಘಾತಕ ತರ‍್ಮಾನಗಳನ್ನು ಪರ‍್ವಪರಾಗಳನ್ನು ವಿವೇಚಿಸದೆ ಜಾರಿಗೋಳಿಸುತ್ತಾ ಸಾಗುವುದು ರ‍್ವಾಧಿಕಾರಿ ಧೋರಣೆ. ಅಪ್ರಜಾಸತ್ತಾತ್ಮಕ ನಡಿಗೆ. ಇಂತಹ ರ‍್ವಾಧಿಕಾರಿ ಅಪ್ರಜಾಸತಾತ್ಮಕ ನಾಯಕರನ್ನು ನಮ್ಮ ದೇಶದ ಜನ ಇತಿಹಾಸದ ಕಸದಬುಟ್ಟಿಗೆ ಎಸೆದಿದ್ದಾರೆ. ಇಂದಿನ ಆಳುವಪಕ್ಷ ಭಟ್ಟಂಗಿಗಳ ಅಮಲಿನಲ್ಲಿ ಇಂತಹ ರ‍್ವಾಧಿಕಾರಿ ಹೆದ್ದಾರಿಯಲ್ಲಿ ದಾಪುಗಾಲು ಹಾಕುತ್ತಿದೆ. ಜನ ತರ‍್ತುಪರಿಸ್ಥಿತಿಯ ನಾಯಕರಿಗೆ ಯಾವ ರಾಜಕೀಯ ಚಿಕಿತ್ಸೆಯನ್ನು ನೀಡಿದ್ದರೂ
ಅದೇ ಚಿಕಿತ್ಸೆಯನ್ನು ಈಗ ತುರ‍್ತಾಗಿ ನೀಡಬೇಕಾಗಿದೆ. ತಡಮಾಡಿದರೆ ಮುಂದೆ ಅಪಾರ ಬೆಲೆಯನ್ನು ತೆರಬೇಕಾಗುತ್ತದೆ.
ಕೃಷಿ ರಾಜ್ಯದ ವ್ಯಾಪ್ತಿಯಲ್ಲಿ ಬರುವ ವಿಷಯ. ಇದು 7ನೇ ಶೆಡ್ಯೂಲ್ ನ ಪಟ್ಟಿ 2ರ 14ನೇ ವಿಷಯವಾಗಿದೆ. ಕೃಷಿಗೆ ಸಂಬಂಧಿಸಿದ ಶಾಸನಗಳನ್ನು ಮಾಡಲು ಕೇಂದ್ರ ರ‍್ಕಾರಕ್ಕೆ ಅಧಿಕಾರವಿಲ್ಲ. ಆದರೂ ರಾಜ್ಯಗಳ ಪಟ್ಟಿಯಲ್ಲಿ ಬರುವ ಕೃಷಿ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ರ‍್ಕಾರ ಅತ್ಯಂತ ತರಾತುರಿಯಲ್ಲಿ ಮೂರು ಕೃಷಿ ಮಸೂದೆಗಳನ್ನು ಎರಡು ವಾರಕ್ಕೂ ಕಡಿಮೆ ಅವಧಿಯಲ್ಲಿ ಈ ಮಸೂದೆಗಳನ್ನು ಸಂಸತ್ತಿನಲ್ಲಿ ಅಂಗೀಕರಿಸಿ ಜಾರಿಗೊಳಿಸಲು ಮುನ್ನುಗ್ಗುತ್ತಿದೆ. ರ‍್ವೋಚ್ಚ ನ್ಯಾಯಾಲಯದ ತಡೆಯಾಜ್ಞೆಯನ್ನು ಲೆಕ್ಕಿಸದೆ ಅಧಿಕಾರವಿಲ್ಲದ ವಿಷಯದಲ್ಲಿ ರಾಜ್ಯಗಳ ಅಧಿಕಾರವನ್ನು ಅತಿಕ್ರಮಿಸಿ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಲು ಮುಂದಾಗಿರುವ ಕೇಂದ್ರ ರ‍್ಕಾರದ ನಡೆ ಅಸಂವಿಧಾನಾತ್ಮಕ ವಾದದ್ದು ಮಾತ್ರವಲ್ಲದೆ ಭಾರತೀಯ ಗಣತಂತ್ರ ಒಕ್ಕೂಟ ವ್ಯವಸ್ಥೆಗೆ ಮಾಡಿದ ದ್ರೋಹ ಈ ಸಂವಿಧಾನಬಾಹಿರ, ಕ್ರಮ,ಅದಕ್ಕೆ ಬಲವಾದ ಕೊಡಲಿ ಪೆಟ್ಟನ್ನು ನೀಡಿದೆ.
ಮೂರು ಕೃಷಿ ಕಾಯ್ದೆಗಳನ್ನು ದಿನಾಂಕ 14/9/2020 ರಂದು ಮಂಡಿಸಲಾಯಿತು. ದಿನಾಂಕ 17/9/20 20ರಂದು ಲೋಕಸಭೆಯಲ್ಲಿ ಕಾಯ್ದೆಗಳಿಗೆ ಅನುಮೋದನೆ ಪಡೆಯಲಾಯಿತು. ದಿನಾಂಕ20/09/2020 ರಾಜ್ಯಸಭೆ ಈ ಕಾಯ್ದೆಗಳಿಗೆ ಅನುಮೋದನೆ ನೀಡಿದೆ ಎಂದು ಹೇಳಲಾಗಿದೆ. ದಿನಾಂಕ24/09/20 ರಂದು ಕಾಯ್ದೆಗಳಿಗೆ ರಾಷ್ಟ್ರಪತಿಗಳು ಅಂಕಿತ ಹಾಕಿದರು. ದಿನಾಂಕ27/09/20 ರಂದು ಈ ಕಾಯ್ದೆಗಳನ್ನು ಭಾರತೀಯ ಗೆಜೆಟ್ ನಲ್ಲಿ ಪ್ರಕಟಿಸಲಾಯಿತು. ಹೀಗೆ ಮಾಡುವ ಮೂಲಕ 5/6/20 ರಂದು ಹೊರಡಿಸಿದ್ದ ಸುಗ್ರೀವಾಜ್ಞೆಗಳಿಗೆ ಶಾಸನದ ಸ್ವರೂಪ ನೀಡಲಾಯಿತು.
ಕೇಂದ್ರ ಸರ‍್ಕಾರ ಮೂರು ಕೃಷಿ ಕಾಯ್ದೆಗಳನ್ನು ಅತ್ಯಂತ ಆತುರದಲ್ಲಿ ತರಲು ಸಂಸತ್ತಿನಲ್ಲಿ ಮಸೂದೆಗಳನ್ನು ಮಂಡಿಸಿ ಅದರ ಅನುಮೋದನೆ ಪಡೆಯಲು ಅನುಸರಿಸಬೇಕಾದ ಅತ್ಯಗತ್ಯ ಪ್ರಕ್ರಿಯೆಗಳಿಗೆ ತಿಲಾಂಜಲಿ ನೀಡಿತು. ಪ್ರಜಾಸತ್ತಾತ್ಮಕ ನೀತಿಗಳನ್ನು ಗಾಳಿಗೆತೂರಿ ಶೀಘ್ರ ಸಂಸತ್ತಿನ ಅನುಮೋದನೆಯನ್ನು ಪಡೆಯಲಾಯಿತು. ಈ ಮಸೂದೆಗಳಿಗೆ ಸುಗ್ರೀವಾಜ್ಞೆ ಹೊರಡಿಸುವ ಯಾವ ಅಗತ್ಯತೆ ಇರಲಿಲ್ಲ. ಲೋಕಸಭೆ ಈ ಮಸೂದೆಗಳ ಬಗ್ಗೆ ವ್ಯಾಪಕ ರ‍್ಚೆ ಮತ್ತು ಪರಿಶೀಲನೆ ನಡೆಸಲಿಲ್ಲ. ಇಂತಹ ಪ್ರಮುಖ ಮಸೂದೆಯನ್ನು ಇಲಾಖಾ ಸ್ಥಾಯಿ ಸಮಿತಿಗೆ ವಹಿಸಿ ಅಲ್ಲೇ ರ‍್ಚಿಸಿ ಪರಿಸರ ಪರಿಣಿತರ ಅಭಿಪ್ರಾಯ ಪಡೆದು ಸಮಗ್ರ ಪರಿಶೀಲನೆ ನಂತರ ಲೋಕಸಭೆಯಲ್ಲಿ ಮಂಡಿಸಿ ಮತ್ತಷ್ಟು ವ್ಯಾಪಕ ರ‍್ಚೆಗೊಳಪಡಿಸಿ ಲೋಕಸಭೆ ಅನುಮೋದನೆ ಪಡೆಯುವ ಎಲ್ಲಾ ನೀತಿ ನಿಯಮಗಳನ್ನು ಸಂಪರ‍್ಣವಾಗಿ ಅಲಕ್ಷಿಸಿ ಈ ಮಸೂದೆಯನ್ನು ಅಂಗೀಕರಿಸಿದೆ. ದುಂಡಾರ‍್ತನೆ ಮಾಡಿ ಅಂಗೀಕರಿಸಲಾದ ಮಸೂದೆಯನ್ನು ಅಧಿಕೃತ ಕಾಯ್ದೆ ಎಂದು ಮಾನ್ಯ ಮಾಡುವುದು ಅತ್ಯಂತ ಅಸಂವಿದಾತ್ಮಕ ಮತ್ತು ಗಣತಂತ್ರ ಒಕ್ಕೂಟ ವ್ಯವಸ್ಥೆಯ ಬರ‍್ಬರ ಹತ್ಯೆ.
ಮಸೂದೆ ರೂಪಿಸಲು ಅದರಲ್ಲೂ ವಿಶೇಷವಾಗಿ ರಾಜ್ಯ ವ್ಯಾಪ್ತಿಯಲ್ಲಿ ಬರುವ ವಿಷಯದ ಬಗ್ಗೆ ಮಸೂದೆಗಳನ್ನು ರೂಪಿಸುವಾಗ ರಾಜ್ಯಗಳೊಂದಿಗೆ ಸಮಾಲೋಚಿಸುವ ರ‍್ಚಿಸಿ ಅವರ ಅಭಿಪ್ರಾಯ ಪಡೆದು ಕೃಷಿ ಮಸೂದೆಗಳನ್ನು ರೂಪಿಸಬೇಕಾಗಿದೆ. ಮಸೂದೆಗಳನ್ನು ಶಾಸನಗಳನ್ನು ರೂಪಿಸುವುದು ಸುಲಭ ಆದರೆ ಅದನ್ನು ಅನುಷ್ಠಾನಗೊಳಿಸುವುದು ಸವಾಲಿನ ಕೆಲಸ. ಕೃಷಿ ಕಾಯ್ದೆಗಳನ್ನು ಅನುಷ್ಠಾನಗೊಳಿಸುವ ಹೊಣೆ ರಾಜ್ಯ ಸರ‍್ಕಾರದ್ದು. ಹೊಣೆಗಾರಿಕೆಯನ್ನು ರಾಜ್ಯ ರ‍್ಕಾರಗಳು ಸರ‍್ಥಕವಾಗಿ ಯಶಸ್ವಿಯಾಗಿ ನರ‍್ವಹಿಸುವಂತೆ ಮಾಡಲು ಅವುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ತೀರ ಅತ್ಯಗತ್ಯ. ಆದರೆ ಕೇಂದ್ರ ರ‍್ಕಾರ ಏಕಪಕ್ಷೀಯವಾಗಿ ರಾಜ್ಯಗಳ ಮೇಲೆ ಈ ಶಾಸನಗಳನ್ನು ಬಲತ್ಕಾರದಿಂದ ಹೇರುತ್ತಿದೆ. ಇದು ರ‍್ವಾಧಿಕಾರಿ ಧೋರಣೆಯ ಪರಮಾವಧಿ. ಈ ದೋರಣೆಯ ವಿರುದ್ಧ ಹಲವಾರು ರಾಜ್ಯಗಳು ಧ್ವನಿಯೆತ್ತಿವೆ. ಪಂಜಾಬ್, ಕೇರಳ, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳು ತಮ್ಮ ಶಾಸನಸಭೆಗಳಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ನರ‍್ಣಯ ಕೈಗೊಂಡು ತಮ್ಮ ವಿರೋಧವನ್ನು ದಾಖಲಿಸಿವೆ.
ಇತ್ತೀಚಿನ ದಿನಗಳಲ್ಲಿ ಕೇಂದ್ರ ರ‍್ಕಾರ ಅತ್ಯಂತ ಕೇಂದ್ರೀಕೃತ ಶಾಸನಗಳನ್ನು ಅನೇಕ ರಂಗಗಳಲ್ಲಿ ಅನೇಕ ವಿಷಯಗಳ ಬಗ್ಗೆ ಏಕಪಕ್ಷೀಯವಾಗಿ ಹಠಾತ್ತಾಗಿ ಜಾರಿಗೊಳಿಸುವ ವ್ಯಸನದಲ್ಲಿದಲ್ಲಿ ಬಿದ್ದು ನರಳುತ್ತಿದೆ. ಇಂತಹ ಅಪಾಯಕಾರಿ ರ‍್ವಾಧಿಕಾರಿ, ಕೇಂದ್ರ ರ‍್ಕಾರದ ಧೋರಣೆಯ ಬಗ್ಗೆ ರಾಜ್ಯ ರ‍್ಕಾರಗಳು ಜಾಗೃತರಾಗಿ ಧ್ವನಿ ಎತ್ತಬೇಕಾಗಿದೆ. ಗಣತಂತ್ರ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ರ‍್ಕಾರಗಳು ಕನಿಷ್ಠ ರಾಜ್ಯ ವ್ಯಾಪ್ತಿಯಲ್ಲಿ ಬರುವ ವಿಷಯಗಳ ಬಗ್ಗೆಯಾದರೂ ರ‍್ವಾಧಿಕಾರಿ ಕೇಂದ್ರ ಧೋರಣೆಗಳ ವಿರುದ್ಧ ಸಂಘಟಿತರಾಗಿ ಧ್ವನಿ ಎತ್ತಬೇಕಾದ ಸಂರ‍್ಭ ಇಂದು ನಿಶ್ಚಲವಾಗಿದೆ. ಸಂವಿಧಾನಾತ್ಮಕ ರಾಜ್ಯರ‍್ಕಾರಗಳ ಪರಮಾಧಿಕಾರ ಗಳನ್ನು ಸಂರಕ್ಷಿಸಿಕೊಳ್ಳಲಾದರೂ ಅವರು ಈ ನಿಟ್ಟಿನಲ್ಲಿ ಶೀಘ್ರ ವ್ಯಾಪಕ ಕರ‍್ಯಾಚರಣೆಗಳಿಗೆ ಇಳಿಯಬೇಕಾಗಿದೆ. ಕೆಲವು ವಿಷಯಗಳ ಬಗ್ಗೆ ರಾಜ್ಯಗಳು ತಮಗಿರುವ ಪರಮಾಧಿಕಾರವನ್ನು ನಿಧಾನವಾಗಿ ಸವೆದು ಸವೆದು ಹೋಗುತ್ತಿರುವುದರ ವಿರುದ್ಧ ಧ್ವನಿಯೆತ್ತಿ ತಮ್ಮ ಹಕ್ಕುಬಾಧ್ಯತೆಗಳನ್ನು ರಾಜ್ಯಗಳ ಪರಮಾಧಿಕಾರಿ ಗಳನ್ನು ಕಾಪಾಡಿಕೊಳ್ಳಲು ಮುಂದಾಗದಿದ್ದರೆ ತಮ್ಮ ತಮ್ಮ ರಾಜ್ಯಗಳ ಅಭಿವೃದ್ಧಿಗೆ ಜನತೆಗೆ ಸಂವಿಧಾನಿಕ ಗಣತಂತ್ರ ವ್ಯವಸ್ಥೆಗೆ ಮಾಡುವ ಮಹಾ ದ್ರೋಹವಾಗುತ್ತದೆ.
ಸಂವಿಧಾನದ ಏಳನೇ ಶೆಡ್ಯೂಲ್ ಎರಡರ ಪಟ್ಟಿಯಲ್ಲಿ ವಿಧಿ 246 ರಿಂದ ಕೃಷಿಯನ್ನು ಸಹರ‍್ತಿ ಪಟ್ಟಿ ಬದಲಿಸಿಕೊಳ್ಳಲು 368(2) ರಲ್ಲಿ ನಿರೂಪಿತಗೊಂಡಿರುವ ವಿಧಾನಗಳನ್ನು ಕೇಂದ್ರರ‍್ಕಾರ ಅನುಸರಿಸದೆ ಇರುವುದರಿಂದ ಈ ಮಸೂದೆಗಳು ಸಂವಿಧಾನಾತ್ಮಕವಾಗಿ ಅನುಮೋದನೆಗೊಂಡ ಮಸೂದೆಗಳಾಗಿಲ್ಲ. ಆದ್ದರಿಂದ ರೈತ ಸಂಘಟನೆಗಳು ಈ ಮೂರು ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಪಟ್ಟು ಹಿಡಿದಿವೆ. ಸಂವಿಧಾನಬದ್ಧವಾಗಿ ಅನುಮೋದನೆ ಆಗದ ಕಾಯ್ದೆಗಳಿಗೆ ಯಾವ ಮಾನ್ಯತೆಯೂ ಇಲ್ಲ. ಹಾಗಾಗಿ ಈ ಕಾಯ್ದೆಗಳ ಬಗೆಗಿನ ರ‍್ಚೆಯೇ ಅಪ್ರಸ್ತುತ. ಅತಿಶೀಘ್ರವಾಗಿ ಅವುಗಳನ್ನು ಹಿಂಪಡೆದು, ಅತ್ಯಂತ ವಿವರವಾದ ಸಂವಿದಾನತ್ಮಕ ನಡಾವಳಿಗಳನ್ನು ಅನುಸರಿಸಿ ಸಂಸತ್ತಿನ ಅನುಮೋದನೆ ಪಡೆಯದ ಈ ಕಾಯ್ದೆಗಳನ್ನು ರೈತ ಸಮುದಾಯ ಗಟ್ಟಿಧ್ವನಿಯಲ್ಲಿ ವಿರೋಧಿಸುತ್ತಿದೆ.
ಕೇಂದ್ರ ಮತ್ತು ರಾಜ್ಯ ರ‍್ಕಾರಗಳ ಅಧಿಕಾರಗಳ ಬಗ್ಗೆ ಪರಿಶೀಲನೆ ನಡೆಸಿದ ರ‍್ಕಾರಿಯ ಆಯೋಗ ರಾಜ್ಯ ಮತ್ತು ಕೇಂದ್ರ ರ‍್ಕಾರಗಳ ವ್ಯಾಪ್ತಿಗೆ ಬರುವ ವಿಷಯಗಳ ಬಗ್ಗೆ ಕಾಯ್ದೆಗಳನ್ನು ರೂಪಿಸುವಾಗ ನೀತಿ ಮತ್ತು ಕ್ರಿಯಾತ್ಮಕ ಸಮನ್ವಯವನ್ನು ಸಾಧಿಸುವುದು ಅತ್ಯಗತ್ಯ ಮತ್ತು ಪರಸ್ಪರ ಸಹಕಾರ ಸಮಾಲೋಚನೆ ನಡೆಸಿ ಮಸೂದೆಗಳನ್ನು ರೂಪಿಸಬೇಕೆಂದು ಶಿಫಾರಸು ಮಾಡಿದೆ.
ನ್ಯಾಯಮರ‍್ತಿ ವೆಂಕಟಾಚಲಯ್ಯ ಅಧ್ಯಕ್ಷತೆಯ ಸಂವಿಧಾನದ ಕರ‍್ಯನರ‍್ವಹಣೆಯ ಪರಿಶೀಲನಾ ರಾಷ್ಟ್ರೀಯ ಆಯೋಗ ರಾಜ್ಯಗಳ ವ್ಯಾಪ್ತಿಗೆ ಬರುವ ವಿಷಯಗಳ ಬಗ್ಗೆ ಮಸೂದೆಗಳನ್ನು ರೂಪಿಸುವಾಗ ರಾಜ್ಯಗಳೊಂದಿಗೆ ವ್ಯಕ್ತಿಗತವಾಗಿ ಮತ್ತು ಸಾಮೂಹಿಕವಾಗಿ ಸಮಾಲೋಚಿಸುವುದು ಅತ್ಯಗತ್ಯವೆಂದು ಹೇಳಿದೆ. ಈ ಉದ್ದೇಶಕ್ಕಾಗಿ 363 ರ ಪ್ರಕಾರ ರಚಿತಗೊಂಡ ಅಂತರರಾಜ್ಯ ಪರಿಷತ್ ಮೂಲಕ ಸಮಾಲೋಚನೆಗಳನ್ನು ನಡೆಸಬೇಕೆಂಬ ಶಿಫಾರಸ್ಸನ್ನು ಮಾಡಿದೆ.
ಎಸ್.ಆರ್ ಬೊಮ್ಮಾಯಿ ಗಿ/S ಯುನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ರ‍್ವೋಚ್ಚ ನ್ಯಾಯಾಲಯ ರಾಜ್ಯಗಳು ಕೇಂದ್ರ ರ‍್ಕಾರದ ಬಾಲಂಗೋಚಿಗಳಲ್ಲ. ಕೇಂದ್ರ ರ‍್ಕಾರ ರಾಜ್ಯ ರ‍್ಕಾರಗಳ ಅಧಿಕಾರಗಳನ್ನು,ತುಳಿದುಹಾಕಬಾರದೆಂದುಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಸಹಕಾರಿ ಗಣತಂತ್ರದ ಅಂತಃಸತ್ವ ಸಮಾಲೋಚನೆ ಮತ್ತು ಮಾತುಕತೆಗಳಲ್ಲಿ ಅದು ಅಡಗಿದೆ. ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಶಾಸನಗಳನ್ನು ರೂಪಿಸುವುದು ಬೀದಿಗಳಲ್ಲಿನ ಪ್ರತಿಭಟನೆಗಳಿಗೆ ಹೆಚ್ಚಾಗಿ ದಾರಿ ಮಾಡಿಕೊಡುತ್ತದೆ ಎಂದು ಹೇಳಿದೆ.
ತೀರ ಇತ್ತೀಚೆಗೆ ರ‍್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮರ‍್ತಿಗಳಾದ ಎಸ್. ವಿ. ರಮಣ ರವರು ಹಲವಾರು ಮಸೂದೆಗಳ ಬಗ್ಗೆ ವ್ಯಾಪಕ ರ‍್ಚೆ ಪರಿಶೀಲನೆಗಳು ನಡೆಯದಿರುವ ಬಗ್ಗೆ ತಮ್ಮ ಅಸಂತೋಷವನ್ನು ಹೊರಹಾಕಿದ್ದಾರೆ. ಮಸೂದೆಗಳು ಅತ್ಯಂತ ಕಳಪೆ ಕರಡುಗಳಾಗಿವೆ. ನಿಯಮಗಳನ್ನು ಮತ್ತು ಪ್ರಕ್ರಿಯೆಗಳನ್ನು ಅನುಸರಿಸದೆ ರ‍್ಚೆಗೊಳಪಡಿಸದೆ ಮಸೂದೆಗಳನ್ನು ರೂಪಿಸಲಾಗುತ್ತಿದೆ. ಜನರನ್ನು ಬಾಧಿಸುವ, ರಾಷ್ಟ್ರೀಯ ಪ್ರಾಮುಖ್ಯತೆ ವಿಷಯಗಳನ್ನು ವಿವರವಾಗಿ ರ‍್ಚಿಸಲು ಸಂಸತ್ತು ಅತ್ಯಂತ ಸೂಕ್ತವಾದ ವೇದಿಕೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ 3 ಕೃಷಿ ಕಾಯ್ದೆಗಳನ್ನು ಸಂಸತ್ತಿನಲ್ಲಿ ಮಂಡಿಸಿ ಅನುಮೋದನೆ ಪಡೆಯುವಾಗ ಈ ಮೇಲಿನ ಎಲ್ಲಾ ಸಿದ್ಧಾಂತಗಳನ್ನು ಗಾಳಿಗೆ ತೂರಲಾಗಿದೆ.
ಅತಿಯಾದ ಕೇಂದ್ರಿಕೃತ ವ್ಯವಸ್ಥೆಗಳನ್ನು ಕರ‍್ಪೊರೇಟ್ ಸಂಸ್ಥೆಗಳು ಬಲವಾಗಿ ಪ್ರತಿಪಾದಿಸುತ್ತವೆ. ಏಕೆಂದರೆ ಈ ವ್ಯವಸ್ಥೆಯಿಂದ ಹೂಡಿಕೆಗಳನ್ನು ನಿರಾತಂಕ ಮಾಡಬಹುದು ಮತ್ತು ಬಂಡವಾಳವನ್ನು ಗರಿಷ್ಠ ಲಾಭ ತಂದುಕೊಡುವ ಸ್ಥಳಗಳಿಗೆ ಪೂರೈಸಿಕೊಳ್ಳಬಹುದು. ತಮ್ಮ ಉತ್ಪಾದಿತ ಸರಕುಗಳನ್ನು ಮತ್ತು ಅತ್ಯಾಧುನಿಕ ಸೇವೆಗಳನ್ನು ಒಳಗೊಂಡಂತೆ ಎಲ್ಲಾ ಸೇವೆಗಳನ್ನು ಮಾರಾಟ ಮಾಡಿಕೊಳ್ಳಲು ವಿಶಾಲ ಮಾರುಕಟ್ಟೆಗಳನ್ನು ನಿರ್ಮಿಸಿಕೊಂಡು ಅಪಾರ ಲಾಭಗಳನ್ನು ಅಲ್ಪಾವಧಿಯಲ್ಲಿ ಕೊಳ್ಳೆಹೊಡೆದು ತಮ್ಮ ಹೂಡಿಕೆಗಳ ಮೇಲಿನ ಲಾಭಗಳಿಕೆಯನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳಲು, ಅನುಕೂಲ ಮಾಡಿಕೊಳ್ಳಲು ಸಾಧ್ಯವಾಗಿಸುತ್ತದೆ. ಹಾಗಾಗಿ ಕರ‍್ಪೊರೇಟ್ ಕಂಪನಿಗಳು ಇಂತಹ ವ್ಯವಸ್ಥೆಗಳನ್ನು ರೂಪಿಸಿಕೊಡುವ ಅನುವುಗೊಳಿಸುವ ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ ಗಳ ರೂಪದಲ್ಲಿ ಅಪಾರ ದೇಣಿಗೆಗಳನ್ನು ನೀಡಿ ಅವುಗಳನ್ನು ತಮ್ಮ ಋಣದಲ್ಲಿ ಕೆಡವಿಕೊಂಡು ಸೂತ್ರದ ಗೊಂಬೆಗಳನ್ನಾಗಿಸಿಕೊAಡು ತಮಗೆ ಬೇಕಾದಂತೆ ಕುಣಿಸುತ್ತವೆ ಮತ್ತು ಕರ‍್ಪೊರೇಟ್ ಪ್ರಭುತ್ವ ವಿಶ್ವಾದ್ಯಂತ ರೂಪಿಸಿಕೊಂಡು ತಮ್ಮ ಹೂಡಿಕೆಗಳಿಗೆ, ಲಾಭಗಳ ಮೇಲಿನ ತೆರಿಗೆ ಇಳಿಸಿಕೊಳ್ಳಲು ಅದನ್ನು ತಮಗೆ ಬೇಕಾದ ಕಡೆಗೆ ಬೇಕಾದಾಗ ಸಾಗಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಳ್ಳುವುದಕ್ಕೆ ಉದಾರೀಕರಣ ಮತ್ತು ಖಾಸಗೀಕರಣ ನೀತಿಗಳನ್ನೇ ನಿಜವಾದ ಅಭಿವೃದ್ಧಿ ಎಂದು ಬಿಂಬಿಸಿ ರ‍್ಕಾರಗಳನ್ನು ನಂಬಿಸಿ ಜನರಿಗೆ ತಮ್ಮ ಸರಕು ಮತ್ತು ಸೇವೆಗಳ ಮಾರಾಟ ಮಾಡಿ ನಿರಂತರ ಲಾಭಗಳಿಕೆಯ ಮಾರುಕಟ್ಟೆಗಳನ್ನು ಗಳಿಸಿಕೊಳ್ಳುವುದೇ ನಿಜವಾದ ಅಭಿವೃದ್ಧಿ ಎಂದು ಬಿಂಬಿಸುತ್ತಿವೆ. ಹೀಗೆ ಬಿಂಬಿಸಲು ಸಾಮಾಜಿಕ ಮಾಧ್ಯಮಗಳನ್ನು ಒಳಗೊಂಡಂತೆ ಎಲ್ಲಾ ರೀತಿಯ ಸಂವಹನ ಮಾಧ್ಯಮಗಳನ್ನು ವ್ಯಾಪಕವಾಗಿ ದರ‍್ಬಳಕೆ ಮಾಡಿಕೊಂಡು ಸರ‍್ವಜನಿಕ ಅಭಿಪ್ರಾಯಗಳನ್ನು ತಮಗೆ ಬೇಕಾದ ನೀತಿಗಳನ್ನು ಜಾರಿಗೊಳಿಸಿ ಕೊಳ್ಳಲು ಪೂರಕವಾಗಿ ಬಳಸಿಕೊಳ್ಳುವ ಸಾಮಾಜಿಕ ವ್ಯವಸ್ಥೆಗಳನ್ನು ಮಾಡಿಕೊಂಡಿವೆ. ಈ ರಾಜ್ಯಸಭೆಯಲ್ಲಿ ವಿಧಿಬದ್ಧವಾಗಿ ಕಾಯ್ದೆಗಳ ಅನುಮೋದನೆ ಪಡೆಯಲಾಗಿಲ್ಲ.ರಾಜ್ಯಸಭೆಯಲ್ಲಿ
ಮಸೂದೆಗಳನ್ನು ಅಂಗೀಕರಿಸಿ ಅನುಮೋದಿಸುವಾಗ ಅಗತ್ಯ ನಿಯಮಗಳನ್ನು ಗಾಳಿಗೆ ತೂರಲಾಗಿದೆ.
ಮಸೂದೆಯ ಪರವಾಗಿ ಹಾಗೂ ವಿರೋಧವಾಗಿ ಬಿದ್ದ ಮತಗಳನ್ನು ವಿಭಜಿಸಿ ದಾಖಲಿಸಬೇಕಾಗಿದೆ. ಸಂವಿಧಾನದ 100 ನೇ ವಿಧಿಯನ್ನು ಸ್ಪಷ್ಟವಾಗಿ ಉಲ್ಲಂಘಿಸಿ ರಾಜ್ಯಸಭೆಯಲ್ಲಿ ಮಸೂದೆಗಳನ್ನು ಅಂಗೀಕರಿಸಲಾಗಿದೆ. ವಿಧಿ 107ನ್ನು ಅನುಸರಿಸ ದಿರುವುದರಿಂದ ನ್ಯಾಯಾಲಯ ಅಸಂವಿಧಾನಾತ್ಮಕನಡೆಗಳಿಗೆ ಈ ಮಸೂದೆಗಳ ಅನುಮೋದನೆಯನ್ನು ವಜಾಗೊಳಿಸಬಹುದೆಂದು ಅನೇಕ ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಐತಿಹಾಸಿಕ ರೈತ ಚಳುವಳಿಯ ಕೆಲವು ನಿರೂಪಣೆಗಳು
ಭಾಗ 3
ಹಲವಾರು ನೀತಿ ಸಂಶೋಧನಾ ಸಂಸ್ಥೆಗಳ ಜಾಲಗಳನ್ನು ಕರ‍್ಪೊರೇಟ್ ಕಂಪನಿಗಳು ನರ‍್ಮಿಸಿಕೊಂಡಿವೆ. ಇವುಗಳು ರೂಪಿಸಿಕೊಡುವ ನೀತಿಗಳನ್ನು ಅನಾಮತ್ತಾಗಿ ಬಳಸಿಕೊಳ್ಳುವ ನೀತಿ ಆಯೋಗದಂತಹ ರ‍್ಕಾರಿ ಸಂಸ್ಥೆಗಳನ್ನು ಅವು ರ‍್ಕಾರಿ ಅಂಗ ಸಂರಚನೆಗಳಲ್ಲಿ ರೂಪಿಸಿಕೊಂಡಿವೆ. ಅವುಗಳ ಮೂಲಕ ಈ ನೀತಿಗಳ ಪರವಾಗಿ ಬೌದ್ಧಿಕ ವಕೀಲಿಕೆ ಮಾಡಲು ಮಾಡಲು ಅತ್ಯಂತ ವೃತ್ತಿಪರವಾದ ಪರಿಣತರ ಲಾಬಿಗಾರರ ಪಡೆಗಳನ್ನು ತಮಗೆ ಬೇಕಾದ ನೀತಿಗಳನ್ನು ರ‍್ಕಾರ ರೂಪಿಸಿಕೊಳ್ಳಲು ಪರಿಣಿತರ ಲಾಬಿಗಾರರ ಮಾನವ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಂಡು ಈ ಮೂರು ಕೃಷಿ ಕಾಯ್ದೆಗಳನ್ನು ರೂಪಿಸಲಾಗಿದೆ. ಈ ಕಾಯ್ದೆಗಳ ಪರವಾಗಿ ಲಾಬಿ ಮಾಡುವುದನ್ನೇ ಸರ‍್ವಜನಿಕ ಸಮಾಲೋಚನೆ ಎಂದು ಬಿಂಬಿಸಿ ರಾಜ್ಯಗಳೊಂದಿಗೆ ಪ್ರಮುಖ ಸಮುದಾಯಗಳೊಂದಿಗೆ ಸಮಾಲೋಚನೆಗಳನ್ನು ತಪ್ಪಿಸಿವೆ. ಆದರೆ ಸಂಯುಕ್ತ ಕಿಸಾನ್ ಮರ‍್ಚಾದ ಸದಸ್ಯ ಸಂಘಟನೆಗಳು ಹಾಗೂ ಈ ಹೋರಾಟವನ್ನು ಬೆಂಬಲಿಸುವ ಇತರ ಸಂಘಟನೆಗಳು ತಮ್ಮ ಹೋರಾಟಗಳು ಮತ್ತು ಕಿಸಾನ್ ಪಂಚಾಯಿತಿಗಳ ಮೂಲಕ ಜನಜಾಗೃತಿ ಮೂಡಿಸಿ ತಮ್ಮ ವಿರೋಧವನ್ನು ದಾಖಲಿಸಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಹಾಗೂ ವ್ಯಾಪಕಗೊಳಿಸುವ. ದಿನೇ ದಿನೇ ಕಾಯ್ದೆಗಳ ವಿರುದ್ಧದ ಹೋರಾಟಗಳು ಮತ್ತಷ್ಟು ತೀವ್ರವಾಗಿ ದೃಢವಾಗಿ ರೈತರ ಸಮುದಾಯಗಳನ್ನು ಹಾಗೂ ಇತರ ಕೃಷಿ ಸಂಬಂಧಿತ ಗ್ರಾಮೀಣ ಸಮುದಾಯಗಳಿಗೆ ಹರಡಿಕೊಳ್ಳುತ್ತವೆ.
ಈ ಹೋರಾಟವನ್ನು ಇಂಗೆಲೆದು ಹತ್ತಿಕ್ಕಲು ರ‍್ಕಾರ ಮತ್ತು ಕರ‍್ಪೊರೇಟ್ ನೀತಿಗಳ ಪರ ಲಾಬಿಗಳು ನಿರಂತರವಾಗಿ ರೈತರ ಸಂಘಟನೆಗಳ ಮೇಲೆ ಎಲ್ಲಾ ರೀತಿಯ ಶುಲಕ ಆರೋಪಗಳ ಚಿರು ಮಳೆಯನ್ನು ಸುರಿಸುವ ಆರಂಭಿಸಿತು ಮತ್ತು ತಮಗಾಗುವ ಮುಖಭಂಗವನ್ನು ನಿವಾರಿಸಿಕೊಳ್ಳಲು ಎಲ್ಲಾ ರೀತಿಯ ತಂತ್ರಗಳಲ್ಲಿ ನಿರತವಾಗಿವೆ. ಇಂದಿನ ರೈತ ಹೋರಾಟ ಕರ‍್ಪೊರೇಟ್ ಪ್ರಣಿತ ನೀತಿಗಳು ಹಾಗೂ ಕಾಯ್ದೆಗಳ ವಿರುದ್ಧ ಅವುಗಳಿಂದ ಬಂಧಿಸಲ್ಪಟ್ಟ, ಸಂಕಷ್ಟಕ್ಕೀಡಾಗುವ, ಜನ ವಿಭಾಗಗಳ ಹೋರಾಟವಾಗಿದೆ. ಇಂತಹ ಕಾಲಘಟ್ಟದಲ್ಲಿ ಈ ಬೆಳವಣಿಗೆಗಳ ಬಗ್ಗೆ ನಾವು ಯಾರ ಪರ ಯಾವ ನೀತಿಗಳ ಪರ ನಿಲ್ಲುತ್ತೇವೆ ಎಂಬ ಬಗ್ಗೆ ನಿಶ್ಚಲ ಸರ‍್ವಜನಿಕ ನಿಲುವನ್ನು ಸ್ಪಷ್ಟವಾಗಿ ದಾಖಲಿಸಬೇಕಾಗಿದೆ.
ಒಂದು ರ‍್ಷಕ್ಕೂ ಅಧಿಕ ಕಾಲ ನಡೆಸಿದ ಅಹಿಂಸಾತ್ಮಕ ಹೋರಾಟ ಇತ್ತೀಚಿನ ದಿನಗಳಲ್ಲಿ ರಾಜಕೀಯ ಸ್ವರೂಪವನ್ನು ಪಡೆಯುತ್ತಾ ಹೋದಂತೆ ಆಳುವ ರ‍್ಕಾರ ತನ್ನ ಕಠಿಣ ನಿಲುವನ್ನು ಬದಲಾಯಿಸಿಕೊಳ್ಳಬೇಕಾದ ಅನಿವರ‍್ಯತೆ ಸೃಷ್ಟಿಯಾಗಿದೆ. ಉತ್ತರ ಭಾರತದ ಕೆಲವು ಪ್ರಮುಖ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಗಳಲ್ಲಿ ಹಿನ್ನೆಡೆ ಅನುಭವಿಸಬೇಕಾಗಬಹುದೆಂಬ ಸೂಚನೆ ದೊರೆತ ಮೇಲೆ ಕೇಂದ್ರ ರ‍್ಕಾರ ಅನಿವರ‍್ಯವಾಗಿ ಹಿಂದಕ್ಕೆ ಸರಿದಿದೆ. ಒಂದು ರ‍್ಷಕಾಲ ರೈತ ಚಳುವಳಿಯನ್ನು ಹತ್ತಿಕ್ಕಲು, ಹಿಮ್ಮೆಟ್ಟಿಸಲು, ದಿಕ್ಕುತಪ್ಪಿಸಲು, ಅವಮಾನಿಸಿ, ಹೀಗೆಳೆದ ರ‍್ಕಾರ ಮುಂಬರುವ ರಾಜಕೀಯ ಹಿನ್ನಡೆಯಿಂದ ಪಾರಾಗಲೂ ಇದ್ದಕ್ಕಿದ್ದಂತೆ ಹಿಂದೆ ಸರಿಯ ಲಾರಂಭಿಸಿದೆ. ಕಳೆದ ರ‍್ಷ ನಂಬರ್ 19 ರಂದು ಪ್ರಧಾನಮಂತ್ರಿ ತಮ್ಮ ಮಾಮೂಲಿ ಶೈಲಿಯಲ್ಲಿ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ರಾಜಕೀಯ ಲಾಭ ನಷ್ಟಗಳ ಲೆಕ್ಕಚಾರ ಪ್ರಧಾನವಾಗಿ ಕೆಲಸ ಮಾಡಿದೆ ಅತ್ಯಾತುರ ವಾಗಿ ತನ್ನ ಸಂವಿಧಾನವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ಅಷ್ಟೇ ಏಕಪಕ್ಷೀಯವಾಗಿ ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಇದರಿಂದಾಗಿ ರೈತ ಹೋರಾಟದ ಒಂದು ಪ್ರಧಾನ ಬೇಡಿಕೆ ಈಡೇರಿದಂತಾಗಿದೆ. ಆದರೆ ರೈತ ಹೋರಾಟ ಮುನ್ನೆಲೆಗೆ ತಂದ ಹಲವಾರು ಅಂಶಗಳು ಬಗೆಹರಿದಿಲ್ಲ. ಹಾಗಾಗಿ ಈ ಹೋರಾಟ ತಾತ್ಕಾಲಿಕವಾಗಿ ಸ್ಥಗಿತಗೊಂಡAತೆ ಕಂಡರೂ ಅದು ಮುಂದುವರೆಯುವಂತೆ ಕಾಣುತ್ತಿದೆ .
ಮತ್ತೊಂದು ಪ್ರಮುಖ ಬೇಡಿಕೆಯಾದ ಶಾಸನಾತ್ಮಕವಾಗಿ ಖಾತ್ರಿಪಡಿಸಿದ ಬೆಂಬಲ ಬೆಲೆಯ ಪ್ರಶ್ನೆ ಪರಿಹಾರವಾಗಿಲ್ಲ. ಅದರ ಪರಿಹಾರಕ್ಕಾಗಿ ಒಂದು ಸಮಿತಿ ರಚನೆಗೊಂಡಿದೆ. ಅದರಲ್ಲಿ ರೈತ ಚಳವಳಿಗಾರರಿಗೆ ಪ್ರಾತಿನಿಧ್ಯ ಕಲ್ಪಿಸಿದ್ದರೂ, ಅದರ ಸ್ವರೂಪ ನೀಡಬೇಕಾದ ಶಿಫಾರಸ್ಸಿನ ವಿಚಾರಗಳು ಖಚಿತಗೊಳ್ಳಬೇಕಾಗಿದೆ.
ವಿದ್ಯುತ್ ಶಕ್ತಿ ತಿದ್ದುಪಡಿ ಮಸೂದೆ 2020ರ ಪ್ರಶ್ನೆ ಹಾಗೆಯೇ ಉಳಿದಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಕೃಷಿ ಕ್ಷೇತ್ರದ ಬಿಕ್ಕಟ್ಟುಗಳು ರೈತರ ಆದಾಯ ಖಾತ್ರಿ ಮತ್ತು ದ್ವಿಗುಣಗೊಳಿಸುವ ಪ್ರಶ್ನೆ ಕೃಷಿಕ್ಷೇತ್ರದ ಕರ‍್ಪೊರೇಟೀಕರಣದ ಪ್ರಶ್ನೆಗಳು, ಕೈಗಾರಿಕಾ ಕೃಷಿಯ ಅನುಷ್ಠಾನ ತಂದೊಡ್ಡಿರುವ ಜೀವಪರಿಸರಾತ್ಮಕ ಸಮಸ್ಯೆಗಳ ನಿವಾರಣೋಪಾಯಗಳು, ಕೃಷಿಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ರಾಜ್ಯ ಮತ್ತು ಕೇಂದ್ರ ರ‍್ಕಾರಗಳು ತೆಗೆದುಕೊಳ್ಳಬೇಕಾದ ಕ್ರಮಗಳು, ಪಾತ್ರಗಳು ಹಾಗೂ ಅಂತರರಾಷ್ಟ್ರೀಯ ಒಪ್ಪಂದಗಳು ಕೃಷಿ ಕ್ಷೇತ್ರದ ಮೇಲೆ ಉಂಟುಮಾಡುವ ಪರಿಣಾಮಗಳು ಕೃಷಿಕ್ಷೇತ್ರದ ಬೆನ್ನೆಲುಬಾಗಿರುವ ಕೃಷಿ ಕರ‍್ಮಿಕರು, ಭೂಹೀನ ರೈತರ ಪ್ರಶ್ನೆಗಳು ಮುನ್ನೆಲೆಗೆ ಬರಬೇಕಾಗಿದೆ.
ನಮ್ಮ ದೇಶದ ಶೇಕಡ 86ರಷ್ಟು ರೈತರು ಸಣ್ಣ ಮತ್ತು (ಅತಿ ಸಣ್ಣ) ಅಂಚಿನ ರೈತರು ದಿನೇದಿನೇ ಭಾರತದಲ್ಲಿ ಭೂ ಹಿಡುವಳಿಗಳ ಗಾತ್ರ ಕಿರಿದಾಗುತ್ತಾ ಸಾಗುತ್ತಿದೆ. 1970-71 ರಲ್ಲಿ 2.28 ಹೆ. ರಷ್ಟಿದ್ದ ಭೂಹಿಡುವಳಿಗಳ ಸರಾಸರಿ ಗಾತ್ರ 2015-16ರಲ್ಲಿ1.08ಹೆ.ಗಳಷ್ಟಾಗಿದೆ.ಇವುಗಳ ಕೃಷಿಯು ಲಾಭದಾಯಕವಾಗಬೇಕಾದ ಬಹುದೊಡ್ಡ ಸವಾಲು ಭಾರತೀಯ ಕೃಷಿಯ ಮುಂದಿದೆ. ಈ ಸಣ್ಣ ಸಣ್ಣ ನಡುವಳಿಗೆ ಸಣ್ಣ ಮತ್ತು ಅಂಚಿನಲ್ಲಿನ ರೈತರಿಗೆ ಸೂಕ್ತವಾಗಬಲ್ಲ ವಿಜ್ಞಾನ ತಂತ್ರಜ್ಞಾನ ಪ್ರಶ್ನೆಗಳನ್ನು ಪ್ರಧಾನವಾಗಿ ಪರಿಗಣಿಸಬೇಕಾಗಿದೆ. ಬಹಳ ದೊಡ್ಡ ರೀತಿಯಲ್ಲಿ ಕೃಷಿ ಅವಲಂಬಿತರು ಉದ್ಯೋಗ ಅರಸಿಕೊಂಡು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಇವರೆಲ್ಲರಿಗೂ ಗ್ರಾಮಗಳಲ್ಲೇ ಸೂಕ್ತ ಉದ್ಯೋಗ ಕಲ್ಪಿಸುವ, ಅವರನ್ನು ಆಧುನಿಕ ಗ್ರಾಮೀಣ ಕುಶಲಿಗಳನ್ನಾಗಿಸುವ ಸಬಲೀಕರಣ, ಸಶಕ್ತಿಕರಣ ವನ್ನು ಗ್ರಾಮೀಣಾಭಿವೃದ್ಧಿಯ ಕಾಳಜಿಯಾಗಿಸಬೇಕಾಗಿದೆ. ಆದಾಯ ರ‍್ಧನೆ ಕೃಷಿಕರ‍್ಮಿಕರಿಗೆ, ಭೂಹೀನರಿಗೆ, ಸಣ್ಣ ಮತ್ತು ಅಂಚಿನಲ್ಲಿನ ರೈತರಿಗೂ ದೊರಕಬಲ್ಲ ರಾಜಕೀಯ, ರ‍್ಥಿಕ ವ್ಯವಸ್ಥೆಗಳನ್ನು ವಿಕೇಂದ್ರಿಕೃತವಾಗಿ ಪ್ರಜಾಸತ್ತಾತ್ಮಕವಾಗಿ ಗ್ರಾಮೀಣ ಭಾಗಗಳಲ್ಲಿ ನೆಲೆಗೊಳಿಸಬೇಕಾಗಿದೆ. ಭೂಹೀನರಿಗೆ,ಕೃಷಿ ಕರ‍್ಮಿಕರಿಗೆ ಭೂಮಿ ನೀಡುವುದು ಗ್ರಾಮಾಭಿವೃದ್ಧಿಯ ಪ್ರಧಾನ ಆಶಯವಾಗಬೇಕಾಗಿದೆಗಬೇಕಾಗಿದೆ. ಕೃಷಿ ಕೆಲಸಮಾಡುತ್ತಿರುವರೆಲ್ಲರಿಗೂ, ಭೂಮಿ ದೊರಕಿಸುವ ಸ್ವಾತಂತ್ರ ಚಳುವಳಿಯ ಪ್ರಧಾನ ಆಶಯವಾದ “ಉಳುವವನಿಗೆ ಭೂಮಿ” ಆದ್ಯತೆಯ ಮೇಲೆ ಶೀಘ್ರವಾಗಿ ಜಾರಿಗೂಳ್ಳಬೇಕಾಗಿದೆ. ಈ ಪ್ರಶ್ನೆ ಏಳು ದಶಕಗಳಿಂದಲೂ ನೆನೆಗುದಿಗೆ ಬಿದ್ದಿದೆ. ಅಭಿವೃದ್ಧಿ ಯೋಜನೆಗಳು ಅರಣ್ಯಗಳನ್ನು ಕಬಳಿಸುತ್ತಾ ಸಾಗಿವೆ. ಈ ದಶಕವೊಂದರಲ್ಲೇ ಭಾರತ ಶೇ. 16 ರಷ್ಟು ನೈರ‍್ಗಿಕ ಅರಣ್ಯವನ್ನು ಕಳೆದುಕೊಂಡಿದೆ. “ಯಾವುದೇ ಬೆಲೆ ತೆತ್ತಾದರೂ ಅಭಿವೃದ್ಧಿ” ಎಂಬುದು ನೂತನ ರ‍್ಥಿಕ ನೀತಿಯ ಮೂಲಮಂತ್ರವಾಗಿದೆ.
2010 ರ ಐ.ಸಿ.ಎ.ಆರ್ ನ ಅಂದಾಜಿನ ಪ್ರಕಾರ ದೇಶದ 328.73 ಮಿಲಿಯನ್ ಹೆ. ಒಟ್ಟು ಭೂ ವಿಸ್ತರ‍್ಣ ದಲ್ಲಿ 120.40 ಮಿಲಿಯನ್ ಹೆಕ್ಟೇರ್ ಭೂಮಿ ಹಾಳಾಗಿ ಮರುಭೂಮಿಕರಣಗೊಳ್ಳುತ್ತಿದೆ. 5.3 ಮಿಲಿಯನ್ ಟನ್ ಗಳಷ್ಟು ಫಲವತ್ತಾದ ಮೇಲ್ಮೈ ಮಣ್ಣು ಸವಕಳಿಗಿಡಾಗಿ ಸಮುದ್ರ ಸೇರುತ್ತಿದೆ. ಶೇ 10 ರಷ್ಟು ಮಣ್ಣು ಅಣೆಕಟ್ಟುಗಳಲ್ಲಿ ತುಂಬಿ ಹೂಳಿನಿಂದ ಅವುಗಳ ನೀರಿನ ಸಂಗ್ರಹಣಾ ಸಾರ‍್ಥ್ಯ ಕುಗ್ಗುತ್ತಾ ಸಾಗಿದೆ. ದೇಶಾದ್ಯಂತ ಅಂರ‍್ಜಲವನ್ನು ಕುಡಿಯುವ ನೀರು ಮತ್ತು ಕೃಷಿಗೆಅತಿಯಾಗಿ ಬಳಸಲಾಗುತ್ತಿದೆ. ಕಳೆದ ನಾಲ್ಕು ದಶಕಗಳಲ್ಲಿ ಹೆಚ್ಚುವರಿಯಾದ ನೀರಾವರಿ ಪ್ರದೇಶದಲ್ಲಿ ಶೇಕಡ 84ರಷ್ಟು ಅಂರ‍್ಜಲ ಬಳಕೆ ಯಿಂದ ಬಂದಿದೆ. ಭಾರತದ ಶೇಕಡ 60ರಷ್ಟು ಜಿಲ್ಲೆಗಳಲ್ಲಿ ಅಂರ‍್ಜಲದ ಅತಿ ಬಳಕೆಯಿಂದ ಗುಣಮಟ್ಟದ ಇಲ್ಲವೇ, ಪ್ರಮಾಣಾತ್ಮಕ ಇಲ್ಲವೇ, ಇವೆರಡರ ಸಮಸ್ಯೆಗಳಿವೆ. ಮಣ್ಣಿನ ದರ‍್ಬಳಕೆ ಅತಿಯಾದ ರಾಸಾಯನಿಕಗಳ ಬಳಕೆಯಿಂದ ಮಣ್ಣು ಆಮ್ಲಿಯಕ್ಷಾರೀಯಗೊಂಡು ಹಾಳಾಗುತ್ತಾ ಸಾಗಿರುವುದೇ ಅಲ್ಲದೆ, ಬರಡಾಗುತ್ತಿದೆ. ಇದಲ್ಲದೆ ಏಕಬೆಳೆ ಸಾಮ್ರಾಜ್ಯಗಳ ನರ‍್ಮಾಣದಿಂದ ಇಳುವರಿ ಸ್ಥಗಿತಗೀಡಾಗಿದೆ.. ಇಲ್ಲವೇ ಕುಸಿಯುತ್ತ ಸಾಗಿದೆ. ಅಂರ‍್ಜಲದ ಮಟ್ಟ ಕುಸಿತದಿಂದ ನೀರು ಫ್ಲೋರೈಡ್ ನೈಟ್ರೇಟ್ ಮುಂತಾದ ಲವಣಗಳಿಂದ ಮಲಿನಗೊಳ್ಳುತ್ತಿದೆ. ಹಸಿರು ಕ್ರಾಂತಿ ಬೆಳೆಗಳು ಅತಿಯಾದ ಮತ್ತು ರಾಸಾಯನಿಕ ಒಳಸುರಿಗಳನ್ನು ಬೇಡುತ್ತವೆ. ಕೃಷಿ ವೈವಿಧ್ಯತೆ ಸಂಪರ‍್ಣ ವಿನಾಶದೆಡೆಗೆ ಮುಖಮಾಡಿದೆ. ಹೈಬ್ರಿಡ್, ಅಧಿಕ ಇಳುವರಿ ತಳಿಗಳು, ಗುಣಾಣು ರೂಪಾಂತರಿ ತಳಿಗಳು ದೇಸಿ ತಳಿಗಳನ್ನು ಹೇಳಹೆಸರಿಲ್ಲದಂತೆ ಮಾಡಿವೆ. ವಿಶಾಲ ಏಕಬೆಳೆ ಸಾಮ್ರಾಜ್ಯಗಳು ವಿನೂತನ ರೋಗ ಮತ್ತು ಕೀಟಬಾಧೆ ಗಳಿಗೀಡಾಗಿ ರೈತರಿಗೆ ಅಪಾರ ನಷ್ಟ ಉಂಟು ಮಾಡುತ್ತಿವೆ.
ಕರ‍್ಪೊರೇಟ್ ಪರವಾದ ಕಾಯ್ದೆಗಳನ್ನು ಮಾತ್ರ ಹಿಂಪಡೆಯಲಾಗಿದೆ. ಆದರೆ ಕರ‍್ಪೊರೇಟ್ ಪರವಾದ ಕೃಷಿ ನೀತಿಗಳು ಜಾರಿಯಲ್ಲಿವೆ. ರೈತ ಹೋರಾಟ ನಡೆಯುತ್ತಿದ್ದಾಗಲೇ ಭಾರತ ರ‍್ಕಾರ Iಆಇಂ ಎಂಬ ಹೊಸ ನೀತಿಯನ್ನು ತರಾತುರಿಯಲ್ಲಿ ಜಾರಿಗೊಳಿಸಿದೆ. ಇದರಡಿಯಲ್ಲಿ ಹಲವಾರು ಕೃಷಿ ಭೂಮಿ ಸಂಬಂಧಿತ ಬೀಜ, ಬೆಳೆ ಸಂಬಂಧಿತ ಕೃಷಿ, ರಾಸಾಯನಿಕಗಳ ಸಂಬಂಧಿತ ಹಾಗೂ ಇತರೆ ಕೃಷಿ ವಲಯಗಳ ಬಗ್ಗೆ ಹಲವಾರು ದರ‍್ಘಕಾಲೀನ ಒಪ್ಪಂದಗಳನ್ನು ಹಲವಾರು ಪ್ರಬಲ ರಾಷ್ಟ್ರೀಯ ಕರ‍್ಪೊರೇಟ್ ಕಂಪನಿಗಳೊಂದಿಗೆ ಮಾಡಿಕೊಳ್ಳಲಾಗಿದೆ.
ರೈತ ಹೋರಾಟ ನೀತಿ ಆಧಾರಿತವಾಗಿರುವುದು ಬಹಳ ಮುಖ್ಯ. ಯಾವ ನೀತಿಗಳು ಇಂದಿನ ಕೃಷಿ ಬಿಕ್ಕಟ್ಟುಗಳನ್ನು ಸೃಷ್ಟಿಸಿವೆಯೋ ಆದಾಯಗಳನ್ನು ದೋಚಿ ಅವರನ್ನು ನರ‍್ಗತಿಕರನ್ನಾಗಿ ಆತ್ಮಹತ್ಯೆಗೆ ದೂಡುತ್ತಿವೆಯೋ, ಯಾವ ಯಾವ ನೀತಿಗಳು ಗ್ರಾಹಕರಿಗೆ ವಿಷಮಿಶ್ರಿತ ಆಹಾರಧಾನ್ಯಗಳನ್ನು ತಿನ್ನಿಸುತ್ತವೆಯೋ ಅವುಗಳನ್ನು ಹಿಮ್ಮೆಟ್ಟಿಸದೆ ಕೃಷಿ ಬಿಕ್ಕಟ್ಟುಗಳಿಗಾಗಲಿ ಇಲ್ಲವೇ ರೈತರಿಗಾಗಲಿ ಆಗುತ್ತಿರುವ ಅನ್ಯಾಯಗಳಿಂದ ಅವರನ್ನು ಪಾರುಮಾಡಲು ಸಾಧ್ಯವಿಲ್ಲ. ರಫ್ತು ಆಧಾರಿತ ಮುಕ್ತ ವ್ಯಾಪಾರ ಆಧಾರಿತ ದೊಡ್ಡ ಭೂ ಹಿಡುವಳಿಗಳ ಕೈಗಾರಿಕಾ ಕೃಷಿ ನಮ್ಮ ರೈತರು ಮತ್ತು ಕೃಷಿ ಕರ‍್ಮಿಕರನ್ನು ನಷ್ಟ ಮತ್ತು ಕಡಿಮೆ ಕೂಲಿ ಇಲ್ಲವೇ ನಿರುದ್ಯೋಗದೆಡೆಗೆ ದೂಡಿ ಅವರನ್ನು ಬಡತನ ಮತ್ತು ರ‍್ಥಿಕ ಹಿನ್ನಡೆಗೆ ದೂಡಿ ನಗರ ಪ್ರದೇಶಗಳಿಗೆ ವಲಸೆ ಹೋಗುವಂತೆ ಬಲಾತ್ಕಾರಿಸುತ್ತಿವೆ. ವಲಸೆ ಹಸಿವು, ಬಡತನ, ಅಪೌಷ್ಟಿಕತೆ, ಮತ್ತು ಪರಿಸರ ವಿನಾಶವನ್ನು ತೀವ್ರಗೊಳಿಸುತ್ತಿರುವ ಈ ಕೃಷಿ ನೀತಿಗಳನ್ನು ಹಿಮ್ಮೆಟ್ಟಿಸದೆ ಸಂಪರ‍್ಣವಾಗಿ ಈ ಸಂಕಷ್ಟಗಳಿಂದ ಈ ವಿಶಾಲ ಜನಸಮೂಹಗಳನ್ನು ವಿಮೋಚನೆಗೊಳಿಸಲು ಸಾಧ್ಯವಿಲ್ಲ. ಈ ಕರ‍್ಪೊರೇಟ್ ಪ್ರಣೀತ ನೀತಿಗಳಿಗೆ ರ‍್ಯಾಯವಾಗಿ ಜನಪರ, ಕೃಷಿಪರ, ಕೃಷಿ ಕರ‍್ಮಿಕರ ಪರ, ಸಣ್ಣ ಮತ್ತು ಅಂಚಿನ ರೈತಪರ ಪರಿಸರಸ್ನೇಹಿ ಕೃಷಿ ನೀತಿಗಳನ್ನು ರೂಪಿಸಿ ಜಾರಿಗೊಳಿಸುವ ಸಾಮಾಜಿಕ ವ್ಯವಸ್ಥೆಗಳನ್ನು ರೂಪಿಸಲು ಮುಂದಾಗಬೇಕಾಗಿದೆ. ಅಂತಹ ರ‍್ಯಾಯ ನೀತಿಗಳು ಮಾತ್ರವೇ ಪರಿಹಾರ ರೂಪಿಸಲು ಸಾಧ್ಯ. ರ‍್ಯಾಯ ನೀತಿ ಆಧಾರಿತ ವ್ಯವಸ್ಥೆಗಳ ಜಾರಿಗಾಗಿ ಒತ್ತಾಯಿಸುವ ಸವಾಲು ಇಂದು ರೈತ ಚಳುವಳಿಯ ಮುಂದಿದೆ.
ಕಳೆದ ವರ‍್ಷ ಸೆಪ್ಟೆಂಬರ್ ನಲ್ಲಿ ವಿಶ್ವಸಂಸ್ಥೆಯ ಆಹಾರ ವ್ಯವಸ್ಥೆಗಳ ಸಮಾವೇಶ(UಓಈSS) ನಡೆದು ಆಹಾರ ಉತ್ಪಾದನೆ, ಸಾಗಾಟ, ಮಾರಾಟ ಇತ್ಯಾದಿ ವಿಚಾರಗಳ ಬಗ್ಗೆ ವಿವರವಾದ ಸಮಾಲೋಚನೆಗಳನ್ನು ರ‍್ಚೆಗಳನ್ನು ನಡೆಸಿ ಆಹಾರ ವ್ಯವಸ್ಥೆಗಳನ್ನುಅಮೂಲಾಗ್ರವಾಗಿ ರೂಪಾಂತರಿಸಲು ಕರೆ ನೀಡಿದೆ. ಸುಸ್ಥಿರ ಅಭಿವೃದ್ಧಿಯ 17 ಜಾಗತಿಕ ಗುರಿಗಳಲ್ಲಿ 11 ಗುರಿಗಳು ಆಹಾರ ವ್ಯವಸ್ಥೆಗೆ ಸಂಬಂಧಿಸಿವೆ. ಇದಕ್ಕನುಗುಣವಾಗಿ ನಮ್ಮ ದೇಶದ ಅಗತ್ಯಗಳಿಗನುಸಾರವಾಗಿ ನೂತನ ವ್ಯವಸ್ಥೆಗಳ ನೀತಿಯೊಂದನ್ನು ರ‍್ಯಾಯವಾಗಿ ರೂಪಿಸಬೇಕಾಗಿದೆ.
1. ಎಲ್ಲರಿಗೂ ಸುರಕ್ಷಿತ ಪೋಷಕಾಂಶಭರಿತ ಆಹಾರ ಲಭ್ಯತೆಯ ಖಾತ್ರಿ.
2. ಸುಸ್ಥಿರ ಗ್ರಾಹಕ( ಬಳಕೆ) ಮಾದರಿಗಳಿಗೆ ಬದಲಾವಣೆಗೊಳ್ಳುವುದು.
3. ಪರಿಸರ ಧನಾತ್ಮಕ ಆಹಾರೋತ್ಪಾದನ ಮಾದರಿಗೆ ಪ್ರೋತ್ಸಾಹ.
4. ಸಮಾನ ಜೀವನೋಪಾಯಗೆಡೆಗೆ ಮುನ್ನಡೆಯುವುದು.
5. ದರ‍್ಬಲತೆಗಳು, ಒತ್ತಡಗಳು ಮತ್ತು ಆಘಾತಗಳಿಂದ ಚೇತರಿಸಿಕೊಳ್ಳುವಿಕೆಯನ್ನು ನರ‍್ಮಿಸುವುದಕ್ಕೆ ಆದ್ಯತೆ ನೀಡಬೇಕೆಂದು ಸಮಾವೇಶ ಕರೆ ನೀಡಿದೆ.
ನಮ್ಮ ಆಹಾರ ಅಕ್ಕಿ ಮತ್ತು ಗೋದಿ ಪ್ರಧಾನವಾಗಿ, ಪೋಷಕಾಂಶ ಸವಾಲುಗಳನ್ನು, ಆಹಾರ ಸುರಕ್ಷತೆ ಮತ್ತು ಭದ್ರತೆ, ಆಹಾರ ಪದ್ಧತಿಗಳ ವೈವಿಧ್ಯತೆಯ ಪ್ರಶ್ನೆಗಳನ್ನು ಆದರಿಸಿದ ಆರೋಗ್ಯ ಫಲಿತಗಳ ವಿಚಾರಗಳನ್ನು ನೀತಿ ನಿರೂಪಕರು ಪರಿಗಣಿಸಲೇಬೇಕಾದ ಪರಿಸ್ಥಿತಿಯನ್ನು ನರ‍್ಮಿಸಿವೆ. ಕೋವಿಡ್ ನಂತರದ ಜಗತ್ತು ಮನುಷ್ಯರು, ಪ್ರಾಣಿ ಸಸ್ಯಗಳು, ನಾವೆಲ್ಲರೂ ಜೀವಿಸುತ್ತಿರುವ ಈ ಭೂಗ್ರಹದ ಆರೋಗ್ಯಗಳೊಂದಿಗೆ ಅವಿನಾಭಾವ ಸಂಬಂಧವಿದೆ ಎಂಬ “ಒಂದೇ ಆರೋಗ್ಯ” ಎಂಬ ಪರಿಕಲ್ಪನೆಯನ್ನು ಮುನ್ನೆಲೆಗೆ ತಂದಿದೆ. ಆಹಾರ ವ್ಯವಸ್ಥೆಗಳು ಮಾನವ ಅಸ್ತಿತ್ವದ ಪ್ರತಿ ಅಂಶದ ಮೇಲು ಪರಿಣಾಮ ಉಂಟುಮಾಡುತ್ತವೆ. ನಾವು ತಿನ್ನುವ ಆಹಾರ ನಮ್ಮ ಆರೋಗ್ಯ ಮಾತ್ರವಲ್ಲದೆ ನಮ್ಮ ಪರಿಸರ ಆರೋಗ್ಯವನ್ನು ನರ‍್ಧರಿಸುತ್ತವೆ.
ಮುಂದಿನ ದಿನಗಳಲ್ಲಿ ಜಾಗತಿಕ ಬಿಸಿಏರುವಿಕೆ, ವಾಯುಗುಣ ವೈಪರೀತ್ಯ ಇಡೀ ಜಗತ್ತನ್ನು ಅದರಲ್ಲೂ ವಿಶೇಷವಾಗಿ ಕೃಷಿಕ್ಷೇತ್ರವನ್ನು ಅಪಾರವಾಗಿ ಕಾಡಲಿದೆ ಎಂದು ವಿಜ್ಞಾನಿಗಳು ಹಲವಾರು ರ‍್ಷಗಳಿಂದಲೂ ಎಚ್ಚರಿಸುತ್ತಲೇ ಬರುತ್ತಿದ್ದಾರೆ. ಇತ್ತೀಚಿನ ರ‍್ಷಗಳಲ್ಲಿ ಅದು ಅತ್ಯಂತ ನಿಶ್ಚಳವಾಗಿ ಜನಸಾಮಾನ್ಯರ ಮತ್ತು ರೈತರ ಅನುಭವಕ್ಕೂ ಬರಲಾರಂಭಿಸಿದೆ. ಜಾಗತಿಕ ಬಿಸಿ ಏರುವಿಕೆ ಮತ್ತು ವಾಯುಗುಣ ವೈಪರೀತ್ಯದ ಪರಿಣಾಮಗಳು ಪ್ರದೇಶದಿಂದ ಪ್ರದೇಶಕ್ಕೆ ಕಾಲಕಾಲಕ್ಕೆ ನಿರಂತರವಾಗಿ ಬದಲಾಗುತ್ತವೆ. “ಇಲ್ಲಿ ಮತ್ತು ಈಗ” ಅದರ ಪರಿಣಾಮಗಳಿರುತ್ತವೆ. ಆದರೆ ಇಂದು ನಾವು ಅಂರ‍್ಜಲವನ್ನು ಬರಿದುಮಾಡಿಕೊಂಡು ಕುಳಿತಿದ್ದೇವೆ. ಅನಿರೀಕ್ಷಿತ ಮತ್ತು ಅಕಾಲಿಕ ನೈರ‍್ಗಿಕ ಪ್ರಕೋಪಗಳಾದ ಪ್ರವಾಹಗಳು, ಬರಗಾಲಗಳು, ಬಿಸಿಗಾಳಿ, ಶೀತ ಮಾರುತಗಳು, ಚಂಡಮಾರುತಗಳು, ಕೃಷಿಕ್ಷೇತ್ರವನ್ನು ಅಪಾರವಾಗಿ ಬಾಧಿಸಲಿವೆ. ಅವುಗಳಿಂದ ಕಂಡುಕೇಳರಿಯದ ರೋಗಗಳು ಮತ್ತು ಕೀಟಬಾಧೆ ಗಳು ಕೃಷಿ ಬೆಳೆಗಳನ್ನು ಕಾಡುತ್ತವೆ. ಹಲವು ಪ್ರಧಾನ ಬೆಳೆ ಇಳುವರಿಯಲ್ಲಿ ಅಪಾರ ಕುಸಿತ ಉಂಟಾಗಲಿದೆ ಎಂದು ರ‍್ನಾಟಕ ಮೇಲಿನ ವಾಯುಗುಣ ವೈಪರಿತ್ಯ ಕ್ರಿಯಾಯೋಜನೆ ತಿಳಿಸಿದೆ. ಆಧುನಿಕ ತಳಿಗಳು ವಾಯುಗುಣ ವೈಪರಿತ್ಯ ಪರಿಣಾಮಗಳನ್ನು ತಾಳಿ ಕೊಳ್ಳುವುದಿಲ್ಲ. ಮತ್ತು ಅವುಗಳಿಗೆ ಪುನರ್ ಚೇತರಿಕೆ ಧಾರಣ ಸಾರ‍್ಥ್ಯವಿಲ್ಲ. ವಾಯುಗುಣ ವೈಪರೀತ್ಯದ ಪರಿಣಾಮಗಳನ್ನು ಸ್ಥಳೀಯ ನೆಲೆಗಳಲ್ಲಿ ಅಭ್ಯಾಸ ಮಾಡಿ ದತ್ತಾಂಶ ಸಂಗ್ರಹಿಸಿ ಸ್ಥಳೀಯ ಪರಿಹಾರ ಕರ‍್ಯಾಚರಣೆಗಳನ್ನು ಅತ್ಯಂತ ವಿಕೇಂದ್ರಿಕೃತವಾಗಿ ರೂಪಿಸುವ ತರ‍್ತು ಅಗತ್ಯವಿದೆ. ವಾಯುಗುಣ ವೈಪರಿತ್ಯ ಇಂದು ಕೃಷಿ ಉತ್ಪಾದಕತೆಗೆ ಬಹುದೊಡ್ಡ ಸವಾಲನ್ನು ಒಡ್ಡುತ್ತಿದೆ. ಅದು ಕೇವಲ ಜೀವ ಪರಿಸರಾತ್ಮಕ ಸುಸ್ಥಿರತೆಯ ಪ್ರಶ್ನೆ ಮಾತ್ರವಾಗಿ ಉಳಿಯದೆ, ಸುಸ್ಥಿರ ರ‍್ಥಿಕತೆಯ ಪ್ರಶ್ನೆಯಾಗಿಯೂ ಈ ಜಗತ್ತನ್ನು ಕಾಡಲಾರಂಭಿಸಿದೆ. ನಮ್ಮ ರೈತರನ್ನು ಈ ಸವಾಲುಗಳಿಗೆ ಸಬಲೀಕರಣಗೊಳಿಸುವ ಮತ್ತು ಸರ‍್ಥರನ್ನಾಗಿ ರೂಪಿಸುವ ಸವಾಲು ನಮ್ಮ ಮುಂದಿದೆ. ವಾಯುಗುಣ ವೈಪರಿತ್ಯ ಗಳಿಗನುಗುಣವಾಗಿ ಹೊಂದಿಕೊಳ್ಳಬಲ್ಲ ಸಾರ‍್ಥ್ಯಗಳನ್ನು ರೈತರಲ್ಲಿ ರೂಪಿಸಬೇಕಾದ ಜರೂರು ನಮ್ಮನ್ನು ದಿಟ್ಟಿಸುತ್ತಿದೆ. ಇವುಗಳಿಂದ ಉಂಟಾಗುವ ನೈರ‍್ಗಿಕ ವಿಕೋಪಗಳನ್ನು ನಿಗಾವಣೆ ಮಾಡುವ ಅಗತ್ಯ ದತ್ತಾಂಶ ಸಂಗ್ರಹಿಸಿ ಅದರ ಆಧಾರದಲ್ಲಿ ಸಾಂಪ್ರದಾಯಿಕ ಕೃಷಿಯ ಉತ್ತಮಾಂಶಗಳನ್ನು ಸೂಕ್ತವಾಗಿ ಸಮಕಾಲೀನಗೊಳಿಸಿ ನಿಭಾಯಿಸಿ ಯಶಸ್ವಿಯಾಗಿ ನರ‍್ವಹಣೆ ಮಾಡುವುದು ಮಾತ್ರ ನಮ್ಮ ರೈತರನ್ನು, ವಾಯುಗುಣ ವೈಪರಿತ್ಯಗಳ ದುಷ್ಪರಿಣಾಮಗಳಿಂದ ಪಾರುಮಾಡಿ ಕೃಷಿ ಪುನರ್ ಚೇತರಿಕೆಯನ್ನು ನರ‍್ಮಿಸಬಲ್ಲದು.