ದಲಿತ ಸಂಘರ್ಷ ಸಮಿತಿಯ ಸ್ಥಾಪನೆಯ50 ವರ್ಷದ ಸಂಭ್ರಮ

ಸಹಕಾರ ಸಚಿವರಾದ ಕೆ.ಎನ್.ರಾಜಣ್ಣನವರು ಸಮಾರಂಭವನ್ನು ಉದ್ಘಾಟಿಸಲಿದ್ದು, ದಸಂಸ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ತಿಪಟೂರಿನ ನಾರಾಯಣ ರಾಜು ಬನಶಂಕರಿ ನಗರ ಬರೆದಿರುವ ಬಿ.ಕೃಷ್ಣಪ್ಪನವರ ಭಾಷಣಗಳನ್ನು ಒಳಗೊಂಡ ಪುಸ್ತಕವನ್ನು ದಸಂಸ ರಾಜ್ಯ ಸಂಚಾಲಕ ಶಿವಮೊಗ್ಗದ ಎಂ.ಗುರುಮೂರ್ತಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ದಲಿತ ಸಂಘರ್ಷ ಸಮಿತಿಯ ಸ್ಥಾಪನೆಯ50 ವರ್ಷದ ಸಂಭ್ರಮ


ಡಾ. ಶಿವಣ್ಣ ತಿಮ್ಲಾಪುರ `ದಲಿತ' ಮತ್ತು`ದಸಂಸ' (ದಲಿತ ಸಂಘರ್ಷ ಸಮಿತಿ) ಎನ್ನುವ ಈ ಎರಡು ಶಬ್ದಗಳು ನಮ್ಮೊಳಗೆ ಒಂದುರೀತಿಯ ಪುಳಕ ಮತ್ತು ಸೋಜಿಗವನ್ನು ಹುಟ್ಟಿಸುತ್ತಲೇ ಬಂದಿವೆ. `ಮಾತಿಲ್ಲದವರಿಗೆ ಮಾತು ಕಲಿಸಿ, ಕನಸಿಲ್ಲದವರಿಗೆ ಕನಸು ಚಿಗುರಿಸಿ, ಕಣ್ಣಿಲ್ಲದವರಿಗೆಕಣ್ಣು ಧರಿಸಿ' ನೋಡುವಂತೆ ಮಾಡಿದ ದಸಂಸಕ್ಕೀಗ ಭರ್ತಿಐವತ್ತು ವರ್ಷಗಳು. ಈ ಐವತ್ತು ವರ್ಷಗಳ ಕತ್ತಿ ಅಂಚಿನ ನಡಿಗೆಯ ಸುದೀರ್ಘರೋಚಕ ಪಯಣವನ್ನು ನೆನೆದರೆ ಮೈ ರೋಮಾಂಚನಗೊಳ್ಳದೇ ಇರಲಾರದು. ಅಂಬೇಡ್ಕರ್ ನೀಡಿದ ಸಂವಿಧಾನದಿಂದದಕ್ಕಿದ ಅರಿವಿನ ಮೂಲಕ ಜಾಗೃತಗೊಂಡ ಕೆಳಜಾತಿ ಮತ್ತು ಕೆಳವರ್ಗಗಳ ದಲಿತರು, ಮಹಿಳೆಯರು ಮತ್ತುಅಲ್ಪಸಂಖ್ಯಾತ ಸಮುದಾಯದ ಶೋಷಿತರುತಮ್ಮ ಅಸ್ಥಿತ್ವವನ್ನು ಸ್ಥಾಪಿಸಿಕೊಳ್ಳಲು ಪ್ರೇರೇಪಿಸಿದ ಕಾಲಘಟ್ಟಎಪ್ಪತ್ತರದಶಕ.


 ಮಹಾರಾಷ್ಟçದಲ್ಲಿ ಜನಪ್ರಿಯವಾಗಿದ್ದ `ಪ್ಯಾಂಥರ‍್ಸ್' ಚಳುವಳಿಯಿಂದ ಪ್ರೇರಣೆಗೊಂಡ ಕರ್ನಾಟಕದ ದಲಿತರು ಕ್ರಾಂತಿ ದಳದ ಮುಖೇನ ಭೀಮಸೇನೆಕಟ್ಟಿ, ಕ್ರಿಯೆಗಿಳಿದ ಪರಿಯೇ ರೋಚಕವಾದುದು. 1974ರಲ್ಲಿ ಪ್ರೊ. ಬಿ.ಕೃಷ್ಣಪ್ಪನವರ ನೇತೃತ್ವದಲ್ಲಿ ಭದ್ರಾವತಿಯಲ್ಲಿ ಅಸ್ತಿತ್ವಕ್ಕೆ ಬಂದ ದಸಂಸವನ್ನು ಅಂದಿನ ದಲಿತ ಮಂತ್ರಿಗಳಾದ ಬಿ.ಬಸವಲಿಂಗಪ್ಪ ಹಾಗೂ ಡಾ. ಬಿ.ಎಂ.ತಿಪ್ಪೇಸ್ವಾಮಿಯವರು ಉದ್ಘಾಟಿಸಿದರು. ಪ್ರೊ. ಬಿ.ಕೃಷ್ಣಪ್ಪನವರಜೊತೆಯಲ್ಲಿಹೆಗಲಿಗೆ ಹೆಗಲುಕೊಟ್ಟವರುದೇವನೂರು ಮಹಾದೇವ, ಎಚ್.ಗೋವಿಂದಯ್ಯ, ಡಾ. ಸಿದ್ದಲಿಂಗಯ್ಯ, ಕೆ.ಬಿ.ಸಿದ್ದಯ್ಯ, ಕೋಟಿಗಾನಹಳ್ಳಿ ರಾಮಯ್ಯ, ಗಂಗಮ್ಮ ಕೆಂಪಯ್ಯ, ದೇವಯ್ಯ ಹರವೆ, ಶ್ರೀಧರ ಕಲಿವೀರ, ಇಂದೂಧರ ಹೊನ್ನಾಪುರ ಇನ್ನು ಮುಂತಾದವರಿಂದ ದಲಿತ ಪ್ರಜ್ಞೆ ಎರಡು ರೀತಿಯಲ್ಲಿ ಸ್ಫೋಟಗೊಂಡು, ಒಂದು ದಲಿತ ಚಳುವಳಿ, ಇನ್ನೊಂದು ದಲಿತ ಸಾಹಿತ್ಯದ ರೂಪ ತಾಳಿದ್ದು ಈಗ ಮೈಲಿಗಲ್ಲು.


 ಕುದುರೆ ಮೋತಿ ಪ್ರಕರಣ, ಬೆಲ್ಚಿ ಪ್ರಕರಣ, ಕಾರಂಜೇಡು ಪ್ರಕರಣ, ಮೀಸಲಾತಿ ವಿರೋಧಿ ಪ್ರಕರಣ, ಮತಾಂತರ ಪ್ರಕರಣಗಳು, ವೆಂಕಟಸ್ವಾಮಿಆಯೋಗದ ವರದಿ, ಮುನಿವೆಂಕಟಪ್ಪನವರ ಪ್ರಕರಣ, ಬೆತ್ತಲೆಸೇವೆ ವಿರೋಧಿ ಪ್ರಕರಣ, ಚುನಾವಣಾ ಬಹಿಷ್ಕಾರದಂತಹ ವಿಚಾರಗಳು ದಲಿತ ಬಹರಗಾರರಿಗೆ ಬಾಹ್ಯ ಪ್ರೇರಣೆ ನೀಡಿದರೆಅಂಬೇಡ್ಕರ್‌ರವರಿಂದ ಸ್ಫೂರ್ತಿಗೊಂಡು ಅಂಬೇಡ್ಕರ್‌ ಚಿಂತನೆ, ಬದುಕು, ವ್ಯಕ್ತಿತ್ವದಿಂದ ಆಂತರಿಕವಾಗಿ ಪ್ರೇರಣೆಗೊಂಡು ಕರ್ನಾಟಕ ದಲಿತರು ಚಳುವಳಿ ಮತ್ತು ದಲಿತ ಸಾಹಿತ್ಯವನ್ನು ಒಟ್ಟೊಟ್ಟಿಗೆ ಕೊಂಡೊಯ್ದರು. ಹೀಗೆ ಅಸಮಾನತೆಯಕಾರಣಕ್ಕೆ, ಜಾತಿಯಕಾರಣಕ್ಕೆ, ಶೋಷಣೆಗೆ ಒಳಗಾದ ದಲಿತರು ತಮ್ಮ ನೋವು, ಅವಮಾನ, ದಬ್ಬಾಳಿಕೆ, ಹಿಂಸೆಯಂತಹ ಕ್ರೌರ್ಯಗಳಿಗೆ ಎದೆಯೊಡ್ಡಿ ನಿಂತಿದ್ದ ದಸಂಸ, ವಿಘಟನೆಯ ಹಾದಿ ಹಿಡಿದಿದ್ದು ವಿಪರ್ಯಾಸ. ಈ ವಿಘಟನೆಗೆ ಕಾರಣಗಳೇನೇ ಇದ್ದರೂಯಾವ ನಾಯಕನೇ ಆದರೂ ದಸಂಸ ವಿಘಟನೆಯ ಕಾರಣ ಹುಡುಕುವುದರಲ್ಲೇ ಕಾಲಹರಣ ಮಾಡುವ ಕಾಲವಲ್ಲವಿದು. ಒಡೆದು ದಿಕ್ಕೆಟ್ಟ ಮನಸ್ಸುಗಳನ್ನು ಬೆಸೆಯುವ ಕಾಲವಿದು. ಇದರಜೊತೆಗೆ ದಲಿತ ರಾಜಕೀಯ ನಾಯಕರು ಅವಕಾಶವಾದಿಗಳಾಗಿ `ಸಂತೆಯೊಳಗಿನ ಸಂತರಂತೆ' ಪೋಜು ಕೊಡುತ್ತಿರುವುದು ಅಂಬೇಡ್ಕರ್ ಮತ್ತು ಸಂವಿಧಾನಕ್ಕೆ ಮಾಡುತ್ತಿರುವ ಘೋರ ಅವಮಾನಎನ್ನುವುದನ್ನು ಮನಗಾಣಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಚರಿತ್ರೆಯ ಲೋಪವನ್ನು ಮುಚ್ಚಿಡಬಹುದು, ಆದರೆ ಚರಿತ್ರೆಯನ್ನಲ್ಲ......... ಬನ್ನಿ ಒಟ್ಟಾಗೋಣ. ಪಟ್ಟಭದ್ರರಿಂದ ದೇಶವನ್ನು ಪಾರು ಮಾಡೋಣ.ಇಂದುತುಮಕೂರಿನಲ್ಲಿ ಸಮಾರಂಭ


ದಿವಂಗತ ಪ್ರೊ.ಬಿ.ಕೃಷ್ಣಪ್ಪನವರು ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ನೊಂದಾಯಿಸಿ  50 ವರ್ಷತುಂಬಿರುವ ಹಿನ್ನೆಲೆಯಲ್ಲಿ ಫೆಬ್ರವರಿ 18ರಂದು ಭಾನುವಾರ ಬೆಳಗ್ಗೆ 10.30ಕ್ಕೆ ತುಮಕೂರಿನ ಎಂಪ್ರೆಸ್‌ ಆಡಿಟೋರಿಯಂನಲ್ಲಿ ದಸಂಸ ಸುವರ್ಣ ಮಹೋತ್ಸವ ಎಂಬ ಕಾರ್ಯಕ್ರಮವನ್ನು ಕುಂದೂರು ತಿಮ್ಮಯ್ಯನವರ ತುಮಕೂರು ಜಿಲ್ಲಾದಲಿತ ಸಂಘರ್ಷ ಸಮಿತಿ ಏರ್ಪಡಿಸಿದೆ.


ಸಹಕಾರ ಸಚಿವರಾದ ಕೆ.ಎನ್.ರಾಜಣ್ಣನವರು ಸಮಾರಂಭವನ್ನು ಉದ್ಘಾಟಿಸಲಿದ್ದು, ದಸಂಸ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ತಿಪಟೂರಿನ ನಾರಾಯಣ ರಾಜು ಬನಶಂಕರಿ ನಗರ ಬರೆದಿರುವ ಬಿ.ಕೃಷ್ಣಪ್ಪನವರ ಭಾಷಣಗಳನ್ನು ಒಳಗೊಂಡ ಪುಸ್ತಕವನ್ನು ದಸಂಸ ರಾಜ್ಯ ಸಂಚಾಲಕ ಶಿವಮೊಗ್ಗದ ಎಂ.ಗುರುಮೂರ್ತಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.


ಮುಖ್ಯ ಅತಿಥಿಗಳಾಗಿ ರಾಜ್ಯಸಭಾ ಸದಸ್ಯಎಲ್.ಹನುಮಂತಯ್ಯ, ಕೋಟಿಗಾನಹಳ್ಳಿ ರಾಮಯ್ಯ, ಕೆ.ದೊರೈರಾಜ್, ಸುಬ್ಬು ಹೊಲೆಯಾರ್, ಬೆಲ್ಲದ ಮಡುಗು ಕೃಷ್ಣಪ್ಪ, ಗಂಗಾಧರಪ್ಪ, ಗಂಗಮ್ಮಎಂ.ಎಸ್.ಕೆಂಪಯ್ಯ, ಗಂಗರಾಜಮ್ಮ ಕೆ.ಬಿ.ಸಿದ್ದಯ್ಯ ಭಾಗಿಯಾಗಲಿದ್ದಾರೆ.


ದಲಿತ ಚಳವಳಿಯ ಸವಾಲುಗಳು ಮತ್ತು ಸಾಧ್ಯತೆಗಳು ವಿಷಯಕುರಿತು ಡಾ.ಸಿ.ಜಿ.ಲಕ್ಷ್ಮೀಪತಿ, ಡಾ.ರವಿಕುಮಾರ್ ನೀಹ, ವಿ.ಎಲ್.ನರಸಿಂಹಮೂರ್ತಿ, ಗುರುಪ್ರಸಾದ್‌ ಕಂಟಲಗೆರೆ ಮಾತನಾಡಲಿದ್ದಾರೆ. ಜೊತೆಗೆ ಸನ್ಮಾನ ಕಾರ‍್ಯಕ್ರಮವೂ ನಡೆಯಲಿದೆ.