“ಸಿನಿಮಾದವರಿಗಿಂತ ಚೆನ್ನಾಗಿ ಆಕ್ಟ್ ಮಾಡುವವರು ನಾವು” ಎಂದರೇಕೆ ವಾಸಣ್ಣ !?

“ಸಿನಿಮಾದವರಿಗಿಂತ ಚೆನ್ನಾಗಿ ಆಕ್ಟ್ ಮಾಡುವವರು ನಾವು” ಎಂದರೇಕೆ ವಾಸಣ್ಣ !?, bevarahani-kuchangi-prasanna-ondu-ghalige-political-parties-vasasanna

“ಸಿನಿಮಾದವರಿಗಿಂತ ಚೆನ್ನಾಗಿ ಆಕ್ಟ್ ಮಾಡುವವರು ನಾವು” ಎಂದರೇಕೆ ವಾಸಣ್ಣ !?

“ಸಿನಿಮಾದವರಿಗಿಂತ ಚೆನ್ನಾಗಿ ಆಕ್ಟ್ ಮಾಡುವವರು ನಾವು” ಎಂದರೇಕೆ ವಾಸಣ್ಣ !?


“ ಹೇಳಿ ಕೇಳಿ ಪೊಲಿಟೀಶಿಯನ್ ನಾವು, ನಾವು ಇವರಿಗಿನ್ನ(ಸಿನಿಮಾ ನಟರು) ಚೆನ್ನಾಗಿ ಆಕ್ಟ್ ಮಾಡ್ತೀವಿ, ಇವರಿಗಿನ್ನಾ ಚೆನ್ನಾಗಿ ಆಕ್ಟ್ ಮಾಡಲಿಲ್ಲಾ ಅಂದರೆ ನಾವು ಸರ್ವೈವ್‌  ಆಗಲ್ಲ!!!”


“ಎದೆಯೆತ್ತರ ಮೀರಿ ಬೆಳೆದ ಮಗನನ್ನು ಗೆಳೆಯನಂತೆ ಬೆಳೆಸಿದೆ, ನಾನು ಆಶಿಸಿದ ಕ್ಷೇತ್ರವನ್ನು ಬಿಟ್ಟು ಸಿನಿಮಾ ರಂಗ ಆಯ್ಕೆ ಮಾಡಿದ್ದು ನನಗೆ ಇಷ್ಟವಾಗಿಲ್ಲ, ನನ್ನ ಹಾದಿಗೆ ಬರದವರನ್ನು ನಾನೇನು ದ್ವೇಷಿಸಲ್ಲ, ಆದರೆ ಅವರ ಪಾಡಿಗೆ ಅವರನ್ನು ಬಿಟ್ಟು ಬಿಡುತ್ತೇನೆ.”


“ರಾಜ್‌ಕುಮಾರನ ಬಂಗಾರದ ಮನುಷ್ಯ ಫಿಲಿಮ್ ಅನ್ನ 25 ಸಲ ನೋಡಿದ್ದೇನೆ, ಅಪ್ಪು ನಟನೆಯ ಫಿಲಿಮ್‌ಗಳು ನನಗೆ ಇಷ್ಟ,  ಮಗ ಸಿನಿಮಾಗಳಲ್ಲಿ ನಟಿಸುತ್ತಾನೆ ಎಂದಾಗ ಇರಿಟೇಟ್ ಆಗುತ್ತೆ” 


“ ಮುಯ್ಯಾಳು ಹೋಗಿ ಕೂಲಿ ಮಾಡಿ ಬೆಳೆದ ನಾನು ಇವತ್ತು ನೂರು ಎಕರೆ ತೋಟ ಮಾಡಿದ್ದೇನೆ, 20 ಸಾವಿರ ಅಡಿಕೆ ಸಸಿ, ಎಂಟು ಸಾವಿರ ತೆಂಗು ಫಸಲಿಗೆ ಬಂದಿವೆ. ಸಿನಿಮಾ ಪ್ರೊಡ್ಯೂಸ್ ಮಾಡೋದು ನನಗೆ ಕಷ್ಟ ಅಲ್ಲ, ಹತ್ತಿಪ್ಪತ್ತು ಕೋಟಿ ಖರ್ಚು ಮಾಡುವ ಶಕ್ತಿ ನನಗಿದೆ, ಆದರೆ ನನ್ನ ಕ್ಷೇತ್ರವಲ್ಲ ಅದು, ಒಟ್ಟಾರೆ ಅವನಿಗೂ ಅವನ ಜೊತೆ ಇರುವ ಎಲ್ಲರಿಗೂ ಒಳ್ಳೇದಾಗಲಿ”  


ಮಗ ದುಷ್ಯಂತ್ ಸಿನಿಮಾ ಹೀರೋ ಟೀಸರ್ ಲಾಂಚ್ ವೇದಿಕೆಯಲ್ಲಿ ನಮ್ಮ ಜಿಲ್ಲೆಯ ಮಾಜಿ ಮಂತ್ರಿ , ಗುಬ್ಬಿಯ ಶಾಸಕ ವಾಸಣ್ಣನವರು ಒಡಲಾಳದಿಂದ ಪ್ರಾಮಾಣಿಕ ಮಾತುಗಳಿವು, ವಾಸಣ್ಣ ತಮ್ಮ ಎದೆಯೊಳಗಿನ ಒಗರು ಮಾತುಗಳಿಗೆ ಒಂದಿಷ್ಟೂ ಸಕ್ಕರೆ ಬೆರೆಸದೇ ಆಡುತ್ತಿದ್ದರೆ ಇಂಥಾ ಮುಕ್ತ ಹೃದಯವಂತಿಕೆ ನಮ್ಮ ಜೊತೆ ಇರುವ ಎಲ್ಲರಿಗೂ ಇದ್ದರೆ ಎಷ್ಟು ಚೆಂದ ಅನಿಸುತ್ತೆ ಅಲ್ವಾ.


“ ಹೇಳಿ ಕೇಳಿ ನಾವು ರಾಜಕಾರಣಿಗಳು, ನಾವು ಸಿನಿಮಾ ನಟರಿಗಿಂತಾ ಚೆನ್ನಾಗಿ ನಟಿಸುತ್ತೇವೆ, ಸಿನಿಮಾ ಕಲಾವಿದರಿಂತ ಚೆನ್ನಾಗಿ ನಟಿಸದೇ ಹೋದಲ್ಲಿ ನಮಗೆ ಉಳಿಗಾಲವಿಲ್ಲ” ಎಂಬ ವಾಸಣ್ಣನವರ ಮಾತಿಗೆ ವಾಪಸ್ ಬನ್ನಿ. ಗುಬ್ಬಿ ತಾಲೂಕಿನಲ್ಲಿ ಒಂದು ಸಲ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ನಾಲ್ಕು ಅವಧಿಗೆ ಶಾಸಕರಾಗಿ ಚುನಾಯಿತರಾಗಿರುವ ಅದರಲ್ಲೂ ಮೊದಲ ಸಲ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ವಾಸಣ್ಣ ಕ್ಷೇತ್ರದ ಜನರೊಂದಿಗೆ ಆಕ್ಟ್ ಮಾಡಿಕೊಂಡು ಬಂದಿದ್ದರೆ ನಾಲ್ಕು ಸಲ ಗೆಲ್ಲುತ್ತಿದ್ದರೇ? ನನ್ನ ಈ ಪ್ರಶ್ನೆಗೆ ಯಾರೂ ಉತ್ತರ ಕೊಡದಿದ್ದರೂ ಪರವಾಗಿಲ್ಲ, ವಾಸಣ್ಣ ಕ್ಷೇತ್ರದ ಜನರ ಎದುರು ಒಂದು ತರಾ ಹಿಂದೆ ಒಂದು ತರಾ ನಡೆದುಕೊಳ್ಳುತ್ತಾರೆಯೇ ಎಂಬುದನ್ನು ನಿಮ್ಮ ಎದೆ ಮುಟ್ಟಿ ನೀವೇ ಕೇಳಿಕೊಳ್ಳಿ.


******


ಇಂಡಿಯಾದ ರಾಜಕಾರಣಿಗಳೆಲ್ಲರೂ ಅವರು ಯಾವ ಪಕ್ಷದವರೇ ಆಗಿರಲಿ ನಮ್ಮ ವಾಸಣ್ಣ ಹೇಳಿದಂತೆ ಸಿನಿಮಾ ನಟರಿಗಿಂತ ಚೆನ್ನಾಗಿ ಆಕ್ಟ್ ಮಾಡುತ್ತಾರೆ. ಹಾಗೆ ಆಕ್ಟ್ ಮಾಡುತ್ತ ಬಂದಿರುವುದರಿAದಲೇ ಅಗತ್ಯ ಪದಾರ್ಥಗಳ ಬೆಲೆ ಏರಿಕೆ ಆಕಾಶ ದಾಟಿ ಮಂಗಳ ಗ್ರಹ ತಲುಪಲಿ, ಕೋವಿಡ್‌ನಂಥಾ ಹತ್ತಾರು ಸಾಂಕ್ರಾಮಿಕ ಬಂದು ಜನಗಳು ಹುಳಗಳಂತೆ ಉದುರಿಬಿದ್ದು, ಗಂಗೆಯಲ್ಲಿ ಹೆಣಗಳ ಮೆರವಣಿಗೆಯೇ ಸಾಗಲಿ, ಮಾಡಲು ಉದ್ಯೋಗವಿಲ್ಲದೇ ಎಲ್ಲರೂ ತಟ್ಟೆ ಜಾಗಟೆ ಬಡಿಯುತ್ತಿರಲಿ, ದಿನಕ್ಕೊಂದು ಅತ್ಯಾಚಾರ, ಬಲಾತ್ಕಾರಗಳು ನಡೆಯುತ್ತಿರಲಿ, ಮತ್ತೆ ಮತ್ತೆ ಅಂಥ ನಟರನ್ನೇ ಆಯ್ಕೆ ಮಾಡುತ್ತಾರೆ ಎನ್ನುವುದನ್ನು ಗುರುವಾರ ಪ್ರಕಟವಾದ ಉತ್ತರ ಪ್ರದೇಶ, ಉತ್ತರಾಕಾಂಡ, ಮಣಿಪುರ ಹಾಗೂ ಗೋವಾ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರತಿಫಲಿಸಿವೆ.


ಪಂಜಾಬ್ ಜನರು, ಸದಾ ಅಂಕದ ಹುಂಜಗಳAತೆ ಕತ್ತು ನಿಗುರಿಸಿಕೊಂಡು ಕಿತ್ತಾಡುತ್ತಿದ್ದ ಕಾಂಗ್ರೆಸ್‌ಗೆ ಕೈ ಕೊಟ್ಟು, ಬಿಜೆಪಿ ಹಾದಿಯಲ್ಲೇ ಆದರೆ ತುಸು ಮೃದುವಾದ ರೀತಿಯಲ್ಲಿ ರಾಜಕೀಯದೊಳಗೆ ಧರ್ಮವನ್ನು ಬೆರೆಸಿ ಬಳಸಿಕೊಳ್ಳುತ್ತಿರುವ ಅರವಿಂದ ಕೇಜ್ರಿವಾಲರ ಆಮ್ ಆದ್ಮಿ ಪಕ್ಷಕ್ಕೆ ಅತ್ಯಪೂರ್ವ ಬೆಂಬಲ ನೀಡಿ ಗೆಲ್ಲಿಸಿಕೊಂಡಿರುವುದು ಎಷ್ಟರ ಮಟ್ಟಿಗೆ ವಿವೇಕಯುತ ಎನ್ನುವುದನ್ನು ಕಾಲವೇ ಹೇಳಲಿದೆ.


“ಎಲ್ಲ ಮಂತ್ರಿಗಳು ಮತ್ತು ಎಂಎಲ್‌ಎಗಳಿಗೆ ವಿದ್ಯುತ್ ಉಚಿತ, ನಾನು ನನ್ನ ರಾಜ್ಯದ ಜನರಿಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ಕೊಟ್ಟರೆ ಇವರೆಲ್ಲರಿಗೆ ಏಕೆ ಕಷ್ಟವಾಗುತ್ತದೆ, ಎಲ್ಲ ಮಂತ್ರಿಗಳು, ಶಾಸಕರು ಹಾಗೂ ಎಂಪಿಗಳ ಎಲ್ಲ ಚಿಕಿತ್ಸೆ ಉಚಿತವಾಗಿ ಸಿಗುವಾಗ ದಿಲ್ಲಿಯ ಜನತೆಗೆ ಉಚಿತ ಚಿಕಿತ್ಸೆ ನೀಡಿದರೆ ಇವರಿಗೇನು ಕಷ್ಟ.


ಮುಖ್ಯಮಂತ್ರಿಯೊಬ್ಬ ಸ್ವಂತಕ್ಕಾಗಿ 190 ಕೋಟಿ ರೂಪಾಯಿ ತೆತ್ತು ಹಡಗು ಖರೀದಿಸಿರುವಾಗ ನಾನು ನನ್ನ ತಾಯಂದಿರು ಸೋದರಿಯರಿಗೆ ದಿಲ್ಲಿ ನಗರ ಸಾರಿಗೆಯಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕೊಟ್ಟರೆ ಇವರಿಗೇನು ಕಷ್ಟ. ಈ ಮಂತ್ರಿಗಳು ಮತ್ತು ಶಾಸಕರಿಗೆ ಏನೇನು ಪುಕ್ಕಟೆಯಾಗಿ ಸಿಗುತ್ತದೆಯೋ ಅದನ್ನೆಲ್ಲ ಜನತೆಗೆ ಕೊಡುವುದರಲ್ಲಿ ತಪ್ಪೇ” 


ಇವು ಪಂಜಾಬ್‌ನಲ್ಲಿ ದಿಲ್ಲಿಯಲ್ಲಿ ಮೊದಲ ಸಲ ಗೆದ್ದಂತೆಯೇ ಅತ್ಯಧಿಕ ಸೀಟುಗಳಿಂದ ಅಂದರೆ 117ರಲ್ಲಿ 93 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರ ಹಿಡಿದ ಆಮ್ ಆದ್ಮಿ ಪಕ್ಷ (ಎಎಪಿ-ಆಪ್)ದ ಲೋ ಪ್ರೊಫೈಲ್ ನಾಯಕ ಮಾಜಿ ಐಆರ್‌ಎಸ್ ಅಧಿಕಾರಿ ಅರವಿಂದ ಕೇಜ್ರಿವಾಲರು ಈ ಸಲದ ಚುನಾವಣೆಯಲ್ಲಿ ಜನರ ಮುಂದಿಟ್ಟ ಪ್ರಶ್ನೆಯಾಗಿತ್ತು.


ವಾಸ್ತವದಲ್ಲಿ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಏಕಾಏಕಿ ಈ ಸಾಧನೆ ಮಾಡಿದ್ದಲ್ಲ, 2014ರ ಲೋಕಸಭಾ ಚುನಾವಣೆಯಲ್ಲಿ ಆಪ್‌ನ ನಾಲ್ವರು ಎಂಪಿಗಳು ಚುನಾಯಿತರಾಗಿದ್ದರು. ಜೊತೆಗೆ 2017ರ ವಿಧಾನ ಸಭಾ ಚುನಾವಣೆಯಲ್ಲಿ 20 ಶಾಸಕರೂ ಈ ಪಕ್ಷದಿಂದ ಆಯ್ಕೆಯಾಗಿದ್ದರು, ಆದರೆ ಆ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಅಧಿಕೃತ ವಿರೋಧ ಪಕ್ಷವಾಗಿರಲಿಲ್ಲ ಎನ್ನುವುದನ್ನು ಗಮನಿಸಬೇಕಿದೆ.


“ರಾಜಕಾರಣ ತತ್ಕಾಲದ ಧರ್ಮವಾದರೆ ಧರ್ಮ ದೀರ್ಘಕಾಲೀನ ರಾಜಕಾರಣ” ಎಂದಿದ್ದ ರಾಮ ಮನೋಹರ ಲೋಹಿಯಾ ಹಾಗೂ “ ಧರ್ಮ ಅಫೀಮಿನಂತೆ ಅಮಲುಕಾರಕ” ಎಂದಿದ್ದ ಕಾರ್ಲ್ಮಾರ್ಕ್ಸ್ ಅವರನ್ನು ಇವತ್ತಿನ ರಾಜಕೀಯ ಸನ್ನಿವೇಶದಲ್ಲಿ ನೆನಪಿಸಿಕೊಳ್ಳಲೇ ಬೇಕಿದೆ.


ಲೋಹಿಯಾ ಅವರ ಈ ಮಾತುಗಳಿಗೆ ಸಾಕಷ್ಟು ಮುಂಚಿತವಾಗಿಯೇ ಆರ್‌ಎಸ್‌ಎಸ್, ಹಿಂದೂ ಮಹಾ ಸಭಾ ಇತ್ಯಾದಿಗಳು ಧರ್ಮ ಆಧಾರಿತ ರಾಜಕಾರಣದಲ್ಲಿ ತೊಡಗಿದ್ದವು. 
ರಾಮಚಂದ್ರ ಗುಹಾ ಗೊತ್ತಲ್ಲ, ಬೆಂಗಳೂರಿನವರು, ಇತಿಹಾಸಕಾರ ಮತ್ತು ಲೇಖಕ, ಅವರು ಮೊನ್ನೆ ಉತ್ತರ ಪ್ರದೇಶದ ಚುನಾವಣಾ ಫಲಿತಾಂಶ ಬಂದ ಮೇಲೆ 403ರಲ್ಲಿ ಕೇವಲ ಎರಡು ಸ್ಥಾನ ಗೆದ್ದ ಕಾಂಗ್ರೆಸ್‌ನ ಶೋಚನೀಯ ಪರಿಸ್ಥಿತಿಯನ್ನು ಕಂಡು, ಕಾಂಗ್ರೆಸ್ ಹಿತ ದೃಷ್ಟಿಯಿಂದ ಹಾಗೂ ದೇಶದ ಭವಿಷ್ಯದ ಹಿತದೃಷ್ಟಿಯಿಂದ ಸೋನಿಯಾ , ರಾಹುಲ್ ಹಾಗೂ ಪ್ರಿಯಾಂಕ ಕಾಂಗ್ರೆಸ್ ತೊರೆಯಬೇಕು ಹಾಗೂ ರಾಜಕೀಯವನ್ನೂ ತೊರೆಯಬೇಕು ಎಂಬ ಕಟು ಅಭಿಪ್ರಾಯವನ್ನು ಲೇಖನ ಹಾಗೂ ಟಿವಿ ಸಂದರ್ಶನಗಳಲ್ಲಿ ವ್ಯಕ್ತಪಡಿಸಿದ್ದಾರೆ. ಆದರೆ ಇಂಥ ಗಟ್ಟಿ ಮಾತುಗಳನ್ನು ಅತ್ಯಂತ ಗಡಸು ರಾಜಕಾರಣಿ ಮತ್ತು ಜನತಾ ಪರಿವಾರದಿಂದ ಹೊರ ಬಂದು ರಾಜಕೀಯ ಅನಿವಾರ್ಯತೆಯಿಂದಾಗಿ ಕಾಂಗ್ರೆಸ್‌ನಲ್ಲಿರುವ ಸಿದ್ದರಾಮಯ್ಯ ಕೂಡಾ ಹೇಳಲಾರರು ಎನ್ನುತ್ತಾರೆ ಗುಹಾ.


ಸತ್ವಹೀನ ಗಾಂಧಿ ಕುಟುಂಬ ನಾಯಕತ್ವ ಕಾಂಗ್ರೆಸ್‌ಗೆ ಶಕ್ತಿ ತುಂಬಲಾರದು, ಜನರ ನಾಡಿ ಮಿಡಿತವನ್ನು ಅರಿಯುವಲ್ಲಿ ಇಡಿಯಾಗಿ ಸೋತಿದೆ. ಇತ್ತೀಚಿನ ಕರ್ನಾಟಕದ ಹಿಜಾಬ್ ಪ್ರಕರಣದಲ್ಲಿ ಪ್ರಿಯಾಂಕ ಹೇಳಿಕೆ ಗಮನಿಸಿ, ಆಕೆ ನೀಡಿದ “ ಹಿಜಾಬ್ ಏನು, ಈಜುಡುಗೆ ಧರಿಸಿ ಬಂದರೇನು ತಪ್ಪು” ಎಂಬ ಬೇಜವಾಬ್ದಾರಿ ಹೇಳಿಕೆ ವಿರುದ್ಧ ಪರಿಣಾಮವನ್ನೇ ಬೀರಿತು ಎಂದು ಗುಹಾ ಹೇಳಿದ್ದಾರೆ. ಇಲ್ಲಿ ಬಿಜೆಪಿ ಸರ್ಕಾರದ ಶಾಸಕರೇ ಹಿಂದೆ ನಿಂತು ಸೃಷ್ಟಿಸಿದ ಹಿಜಾಬ್ ಖ್ಯಾತೆ ಹಾಗೂ ಶಿವಮೊಗ್ಗದಲ್ಲಿ ನಡೆದ ಭಜರಂಗದಳದ ಕರ‍್ಯಕರ್ತನ ಹತ್ಯೆಗಳು ಉತ್ತರದ ರಾಜ್ಯಗಳಲ್ಲಿ ಬಿಜೆಪಿಗೆ ಗೆಲುವಿಗೆ ನೆರವಾಗಿಲ್ಲ ಅಂತ ಹೇಳಲಾಗುವುದಿಲ್ಲ.


ಹಿಂದೆ, ಗುಜರಾತ್ ಚುನಾವಣಾ ಪ್ರಚಾರದಲ್ಲಿ ಸೋನಿಯಾ ಗಾಂಧಿ ಅಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು “ಸಾವಿನ ದಳ್ಳಾಳಿ” ಅಂತ ಕರೆದದ್ದು ಎಂಥಾ ಪ್ರಮಾದವನ್ನು ಸೃಷ್ಟಿಸಿತೆಂದರೆ ಯಾರೋ ಬರೆದುಕೊಟ್ಟದ್ದನ್ನು ಒಪ್ಪಿಸಿದಂತಿದ್ದ ಈ ಮಾತು ಮೋದಿಯನ್ನು ರಾಷ್ಟç ರಾಜಕಾರಣಕ್ಕೆ ಬರಲು ಚಿನ್ನದ ಅವಕಾಶವನ್ನೇ ಕಲ್ಪಿಸಿಬಿಟ್ಟಿತು ಎನ್ನುತ್ತಾರೆ ರಾಜಕೀಯ ಇತಿಹಾಸಕಾರರು.


ಕಳೆದ 2017ರ ವಿಧಾನ ಸಭಾ ಚುನಾವಣೆಗಿಂತ 57 ಸೀಟುಗಳನ್ನು ಕಳೆದುಕೊಂಡರೂ 255 ಸೀಟುಗಳನ್ನು ಗೆದ್ದು ಸರಳ ಬಹುಮತಕ್ಕಿಂತ 52 ಹೆಚ್ಚು ಶಾಸಕರನ್ನು ಹೊಂದಿ( 41% ಓಟು ಪಾಲು) ಉತ್ತರ ಪ್ರದೇಶದ ರಾಜಕೀಯದಲ್ಲೇ ಹಲವು ಇತಿಹಾಸಗಳನ್ನು ಯೋಗಿ ಆದಿತ್ಯನಾಥ ನಿರ್ಮಿಸಿದ್ದಾರೆ. ಇದೇ ಹೊತ್ತಿನಲ್ಲಿ ಬಿಎಸ್‌ಪಿ, ಕಾಂಗ್ರೆಸ್, ಪಕ್ಷೇತರರು ಹಾಗೂ ಇವೆಲ್ಲಕ್ಕಿಂತ ಮುಖ್ಯವಾಗಿ ಆಡಳಿತದಲ್ಲಿದ್ದ ಬಿಜೆಪಿಯಿಂದಲೂ ಸೀಟುಗಳನ್ನು ಕಸಿದುಕೊಂಡ ಅಖಿಲೇಶಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷ 2017ರ ಚುನಾವಣೆಗಿಂತ 64 ಹೆಚ್ಚಿನ ಕ್ಷೇತ್ರಗಳನ್ನು ಗೆದ್ದು (32 % ಓಟು ಪಾಲು)  ನಿಜಕ್ಕೂ ಬುಡ ಭದ್ರಪಡಿಸಿಕೊಂಡಿದೆ. 13 ಓಟು ಗಳಿಸಿದರೂ ಕೇವಲ ಒಂದು ಸೀಟು ಗೆದ್ದ ಮಾಯಾವತಿ ಅವರ ಬಿಎಸ್‌ಪಿ ಹಾಗೂ ಕೇವಲ ಎರಡು ಸೀಟಿಗೆ ಸೀಮಿತಗೊಂಡ ಪ್ರಿಯಾಂಕ ಗಾಂಧಿ ಅವರ ಕಾಂಗ್ರೆಸ್ ಈ ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಂಡು, ದ್ವಿಪಕ್ಷ ರಾಜಕೀಯ ವ್ಯವಸ್ಥೆಗೆ  2022ರ ಚುನಾವಣೆ ಹಾದಿಮಾಡಿಕೊಟ್ಟಿದೆ.


ಚುನಾವಣಾ ಪ್ರಕ್ರಿಯೆ ಆರಂಭದ ದಿನಗಳಲ್ಲಿ ವಿಧಾನಸೌಧದಲ್ಲಿ ಉತ್ತರ ಪ್ರದೇಶದ ರಾಜಕೀಯ ಸನ್ನಿವೇಶ ಕುರಿತು ಮಾತನಾಡುವಾಗ, ಹಿರಿಯ ಕೆಎಎಸ್ ಅಧಿಕಾರಿಯೊಬ್ಬರು, “ ಇಲ್ಲರೀ, ಯೋಗಿ ಒಂದಷ್ಟು ಕೆಲಸ ಮಾಡಿದ್ದಾನೆ ಅಂತ ವರದಿಗಳಿವೆ, ಅಷ್ಟು ನೆಗ್ಲೆಕ್ಟ್ ಮಾಡಕ್ಕಾಗಲ್ಲ” ಅಂತ ಅಂದಿದ್ದರು. ಆದರೆ, ಚುನಾವಣಾ ಪ್ರಚಾರ ರ‍್ಯಾಲಿಗಳಿಗೆ ಜನರೇ ಸೇರುತ್ತಿರಲಿಲ್ಲ, ಆದರೂ ಇಷ್ಟೊಂದು ಪ್ರಮಾಣದ ಓಟು ಬಂದಿದೆ ಎಂದು ಕೆಲವು ಅಚ್ಚರಿ ಪಡುತ್ತಿದ್ದಾರೆ. 


ಮೋದಿಗೆ ಯೋಗಿ ಜನಪ್ರಿಯತೆ ಕಂಡರೆ ಆಗುತ್ತಿಲ್ಲ, ಅದಕ್ಕೇ ಅವರು ಹೆಚ್ಚಿಗೆ ಉತ್ತರಪ್ರದೇಶದಲ್ಲಿ ಪ್ರಚಾರ ಮಾಡುತ್ತಿಲ್ಲ ಎಂಬ ಮಾತೂ ಕೇಳಿ ಬಂದಿತ್ತು. ಯೋಗಿ ಮೋದಿಯ ಉತ್ತರಾಧಿಕಾರಿ ಎಂದು ಮಾಧ್ಯಮಗಳು ಬಿಕ್ಕಳಿಸುತ್ತಲೇ ಇವೆ. ಯೋಗಿ ಆದಿತ್ಯನಾಥ್ ವಯಸ್ಸಿನಲ್ಲಿ ರಾಹುಲ್ ಗಾಂಧಿ, ಅಖಿಲೇಶ್ ಯಾದವ್‌ಗಳಿರಲಿ, ಇಡೀ ಬಿಜೆಪಿಯಲ್ಲಿರುವ ಎಲ್ಲ ರಾಜಕೀಯ ನಾಯಕರಿಗಿಂತ ಕಿರಿಯರು ಎನ್ನುವುದನ್ನು ಗಮನಿಸಿ.


ಉತ್ತರ ಪ್ರದೇಶದ ಈ ಚುನಾವಣಾ ಫಲಿತಾಂಶ 2024ರ ಲೋಕಸಭಾ ಚುನಾವಣೆಗೆ ಮುನ್ನುಡಿ ಎಂದು ಮೋದಿ ಸಾಹೇಬರು ಹೇಳಿದ್ದನ್ನು ಲೆಕ್ಕಕ್ಕೆ ತೆಗೆದುಕೊಳ್ಳಬಾರದು ಎಂದು ಚುನಾವಣಾ ತಂತ್ರ ನಿಪುಣ ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿದ್ದರೂ, ಫಲಿತಾಂಶದ ಮರುದಿನವೇ ಬರುವ ಡಿಸೆಂಬರ್‌ನಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿರುವ ಗುಜರಾತ್‌ಗೆ ಧಾವಿಸಿ ಮೋದಿ- ಅಮಿತ್ ಶಾ ವಿಜಯೋತ್ಸವ ಆಚರಿಸಿದ್ದನ್ನು ಗಮನಿಸಿದರೆ, ಒಂದು ಸಾಸಿವೆ ಕಾಳಿನಷ್ಟು ಗಾತ್ರದ ಅವಕಾಶವನ್ನೂ ಬಿಡದೇ ಚುನಾವಣೆಗಳನ್ನು ಗೆಲ್ಲುವುದೇ ತಮ್ಮ ಸಾಧನೆ ಎಂದು ಇವರು ನಂಬಿಕೊAಡಿದ್ದಾರೆ ಎನ್ನುವುದು ಅರ್ಥವಾಗುತ್ತದೆ.


ಇಷ್ಟೆಲ್ಲ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದಾಗ,  ಇಲ್ಲಿ ಕರ್ನಾಟಕದಲ್ಲಿ 2013ರಲ್ಲಿ ಮತ್ತೆ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಮಹತ್ವ ಕೊಡಲಾಗುವುದಿಲ್ಲ. ಏಕೆಂದರೆ, ಭ್ರಷ್ಟಾಚಾರ, ದುರಾಡಳಿತ, ವಿಪರೀತ ಬೆಲೆ ಏರಿಕೆ, ಜನಾಂಗೀಯ ದ್ವೇಷಗಳ್ಯಾವುದನ್ನೂ ಈ ದೇಶದ ಮತದಾರ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎನ್ನುವುದನ್ನು ಈ ಚುನಾವಣೆಗಳು ಸಾಬೀತು ಮಾಡಿವೆ. ದಿಲ್ಲಿಯ ಗಡಿಗಳಲ್ಲಿ ವರ್ಷ ಪೂರ್ತಿ ರಸ್ತೆಯಲ್ಲಿ ಧರಣಿ ಕೂತಿದ್ದ ಉತ್ತರ ಪ್ರದೇಶದ ರೈತರು ಓಟು ಮಾಡುವಾಗ ಅಷ್ಟೇ ತೀವ್ರತೆಯ ರಾಜಕೀಯ ಪ್ರಜ್ಞೆಯನ್ನು ಮೆರೆಯಲಿಲ್ಲ. ಅಯ್ಯೋ, ಕರ್ನಾಟಕದಲ್ಲಿ ಇಂಥದ್ದು 80ರ ದಶಕದಲ್ಲೇ ಆಗಿ ಹೋಯಿತಲ್ಲ. ಪ್ರತಿ ಅಕ್ಟೋಬರ್ ಎರಡರಂದು ಬೆಂಗಳೂರಿನ ಕಬ್ಬನ್ ಪಾರ್ಕ್ಗೆ ಲಕ್ಷಾಂತರ ಸಂಖ್ಯೆಯಲ್ಲಿ ಕಾಲ್ನಡಿಗೆಯಲ್ಲಿ ಬೀದರ್-ಚಾಮರಾಜನಗರಗಳಿಂದ ಬರುತ್ತಿದ್ದ ರೈತರು ಚುನಾವಣೆಗಳಲ್ಲಿ ರೈತ ಸಂಘದ ಅಭ್ಯರ್ಥಿಗಳಿಗೆ ಠೇವಣಿಯನ್ನೂ ಕೊಡುತ್ತಿರಲಿಲ್ಲ ಎನ್ನುವುದು ನಿಮಗೇನು ಗೊತ್ತಿಲ್ಲವಾ. 


ಮತ್ತೆ ಇನ್ನೊಂದು ಅಂಶವನ್ನೂ ಹೇಳಲೇ ಬೇಕಿದೆ. ಆಮ್ ಆದ್ಮಿ ಪಾರ್ಟಿ ದಿಲ್ಲಿ ನಂತರ ಪಂಜಾಬ್ ಗೆದ್ದಿದೆ, ಅದರ ಮುಂದಿನ ಹೆಜ್ಜೆ ಗುಜರಾತ್, ಅಲ್ಲಿ ಕನಿಷ್ಟ 10 % ಓಟು ಗಳಿಸಲಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಅವಕಾಶ ಸಿಕ್ಕಾಗ ರ‍್ಯಾಣವನ್ನೂ ಗೆಲ್ಲಬಹುದು ಅದು. ಸಾಮಾನ್ಯ ಮಧ್ಯಮ ವರ್ಗದವರಂತೆ ಅಂಗಿ, ಪ್ಯಾಂಟು ಧರಿಸುತ್ತ, ತೀರಾ ಸರಳ ಮಾತುಗಳಲ್ಲಿ ಅರವಿಂದ್ ಕೇಜ್ರಿವಾಲ್ ದಿಲ್ಲಿ ಮತ್ತು ಪಂಜಾಬ್‌ನಲ್ಲಿ ಕಾಂಗ್ರೆಸ್‌ಗೆ ರ‍್ಯಾಯವಾಗಿ ನೆಲೆ ಕಂಡುಕೊಳ್ಳುತ್ತಿದ್ದಾರೆ. ಬಿಜೆಪಿಯ “ ಕಾಂಗ್ರೆಸ್ ಮುಕ್ತ ಭಾರತ” ಘೋಷಣೆಯನ್ನು ಅನುಷ್ಟಾನಕ್ಕೆ ತರುತ್ತಿದ್ದಾರೆ.ಇಂಡಿಯಾದ ರಾಜಕೀಯ ಪಕ್ಷಗಳ ಇತಿಹಾಸ

1947ರಲ್ಲಿ ಭಾರತ ಸ್ವತಂತ್ರವಾಯಿತು. ಬ್ರಿಟಿಷ್ ಇಂಡಿಯಾದಲ್ಲಿ 1885ರಲ್ಲಿ ಏ.ಓ. ಹ್ಯೂಮ್ ಸ್ಥಾಪಿಸಿದ್ದ ಕಾಂಗ್ರೆಸ್ ಅನ್ನೇ ಸ್ವಾತಂತ್ರö್ಯ ಹೋರಾಟಗಾರರು ತಮ್ಮದನ್ನಾಗಿ ಮಾಡಿಕೊಂಡು 1946ರಲ್ಲಿ ಮಧ್ಯಂತರ ಸರ್ಕಾರವನ್ನು ರಚಿಸಿದ್ದರು. ಮತ್ತು ಆ ಕಾಂಗ್ರೆಸ್‌ನ ಏಕಚಕ್ರಾಧಿಪತಿಯಂತಿದ್ದ ಜವಹರಲಾಲ್ ನೆಹರೂ ಅವರ ರಾಜಕೀಯ ನಡೆಗಳು ಮತ್ತು ನಿರ್ಧಾರಗಳನ್ನು ಲೋಕಸಭೆಯ ಒಳಗೆ ಮತ್ತು ಹೊರಗೆ ಪ್ರಶ್ನಿಸಿದ್ದು ಇದೇ ಲೋಹಿಯಾ, ಜಯಪ್ರಕಾಶ್ ನಾರಾಯಣ್ ಹಾಗೂ ಖುದ್ದು ನೆಹರೂ ಅಳಿಯನಾಗಿದ್ದ ಫಿರೋe಼ï ಗಾಂಧಿ ಮತ್ತವರ ಮಿತ್ರ ಮಂಡಳಿ. ಪ್ರಶ್ನಿಸುತ್ತಿದ್ದುದು ಮಾತ್ರವೇ ಅಲ್ಲದೇ ರಾಷ್ಟಿçÃಯವಾದಿ ಕಾಂಗ್ರೆಸ್‌ಗೆ ಪರ್ಯಾಯವಾಗಿ ರಾಜಕೀಯ ಪಕ್ಷಗಳನ್ನು ಹುಟ್ಟು ಹಾಕಿದ್ದು ಇದೇ ಯಂಗ್ ಟರ್ಕ್ಗಳೇ.


ಸ್ವಾತಂತ್ರö್ಯ ಹೋರಾಟದ ತೀವ್ರತೆಗೆ ಸಮಾಜವಾದಿಗಳ ವರ್ಗ ಸಂಘರ್ಷ ಅಡ್ಡಿ ಎಂದು ಚಳವಳಿಯ ನಾಯಕರು ಪರಿಗಣಿಸಿದ್ದರಿಂದಾಗಿ ಇಂಡಿಯಾದ ರಾಜಕೀಯ ರಂಗದಲ್ಲಿ ಸಮಾಜವಾದ ತಡವಾಗಿ ಪ್ರವೇಶ ಪಡೆದಂತೆ ಕಂಡು ಬರುತ್ತದೆ. ಸ್ವಾತಂತ್ರö್ಯದ ಅಂತರ್ಜಲವಾಗಿದ್ದ ಈ ಸಮಾಜವಾದವು ಕಾಲಾನಂತರದಲ್ಲಿ ಗಾಂಧಿ ತತ್ವಗಳನ್ನು ಮೈಗೂಡಿಸಿಕೊಂಡು ಜನ ಮಾನಸದೊಂದಿಗೆ ಒಡನಾಡತೊಡಗಿತು.


ಕಾಂಗ್ರೆಸ್‌ನೊಳಗೆ ಇದ್ದುಕೊಂಡೇ ಕಾಂಗ್ರೆಸ್ ಸೋಶಲಿಸ್ಟ್ ಪಾರ್ಟಿ ಎಂಬ ಪ್ರತ್ಯೇಕ ಅಸ್ತಿತ್ವ ಕಂಡುಕೊAಡಿದ್ದರು ಈ ಸಮಾಜವಾದಿಗಳು. ಮಹಾತ್ಮ ಗಾಂಧಿ ಅನುಪಸ್ಥಿತಿಯಲ್ಲಿ ನೆಹರೂ ಕಾಂಗ್ರೆಸ್‌ನ ಬಡವರ ಕಲ್ಯಾಣಕ್ಕೆ ಕರ‍್ಯಕ್ರಮಗಳನ್ನು ರೂಪಿಸುತ್ತಿಲ್ಲ ಎಂದು ದೂರುತ್ತಾ, ಸ್ವಾತಂತ್ರ ಗಳಿಸಿದ ಮರುವರ್ಷವೇ 1948ರಲ್ಲಿ ಜಯಪ್ರಕಾಶ್ ನಾರಾಯಣ್ ಹಾಗೂ ಆಚಾರ್ಯ ನರೇಂದ್ರ ದೇವ  ಮತ್ತು ಗೆಳೆಯರು ಕಾಂಗ್ರೆಸ್‌ನಿAದ ಹೊರಬಂದು ಸಮಾಜವಾದಿ ಪಾರ್ಟಿ ಸ್ಥಾಪಿಸುತ್ತಾರೆ. ನೆಹರೂ ಆಪ್ತ ವಲಯದಲ್ಲಿದ್ದ  ಜೆ.ಬಿ.ಕೃಪಲಾನಿ 1951ರಲ್ಲಿ ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿ ಸ್ಥಾಪಿಸುತ್ತಾರೆ. 


1951ರ ಮಹಾ ಚುನಾವಣೆಯಲ್ಲಿ ನೆಹರೂ ಕಾಂಗ್ರೆಸ್ ಎದುರು ಕೇವಲ 12 ಸೀಟುಗಳನ್ನು ಗೆಲ್ಲುವ ಜೆಪಿ ತಮ್ಮ ಜನಪ್ರಿಯತೆ ಓಟುಗಳಾಗಿ ಪರಿವರ್ತಿತವಾಗದ್ದನ್ನು ಕಂಡು ಸಮಾಜವಾದಿ ಪಾರ್ಟಿಯನ್ನು ಜೆ.ಬಿ.ಕೃಪಲಾನಿ ಅವರ ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿಯೊಂದಿಗೆ ವಿಲೀನಗೊಳಿಸಿದಾಗ ಹುಟ್ಟಿದ್ದೇ ಪ್ರಜಾ ಸೋಷಲಿಸ್ಟ್ ಪಾರ್ಟಿ(ಪಿಎಸ್‌ಪಿ).


ಈ ಪಿಎಸ್‌ಪಿ 1952ರಿಂದ 1972ರವರೆಗೆ ರಾಜಕೀಯವಾಗಿ ಸಕ್ರಿಯವಾಗಿತ್ತು. ರಾಮಮನೋಹರ ಲೋಹಿಯಾ 1964ರಲ್ಲಿ ಈ ಪ್ರಜಾ ಸೋಷಲಿಸ್ಟ್ ಪಾರ್ಟಿಯಿಂದ ಹೊರಬಂದು ಸಂಯುಕ್ತ ಸಮಾಜವಾದಿ ಪಾರ್ಟಿ ಸ್ಥಾಪಿಸುತ್ತಾರೆ. ಮತ್ತೆ 1972ರಲ್ಲಿ ಲೋಹಿಯಾ ಅವರ ಈ ಎಸ್‌ಎಸ್‌ಪಿ ಮತ್ತೆ ಪಿಎಸ್‌ಪಿ ಜೊತೆ ವಿಲೀನವಾಗಿ ಸಮಾಜವಾದಿ ಪಾರ್ಟಿಯಾಗಿ ರೂಪುಗೊಳ್ಳುತ್ತದೆ.


1974-75ರಲ್ಲಿ ಜಯಪ್ರಕಾಶ್ ನಾರಾಯಣ್ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಆಡಳಿತದ ವಿರುದ್ಧ ಸಂಪೂರ್ಣ ಕ್ರಾಂತಿಗೆ ಕರೆ ನೀಡಿ ಸತ್ಯಾಗ್ರಹ ಆರಂಭಿಸುತ್ತಾರೆ. ಎಮರ್ಜೆನ್ಸಿ ಘೋಷಣೆ ಆಗಿ ಜೆಪಿ ಜೈಲು ಕಾಣುತ್ತಾರೆ. ಭೂಗತ ಚಟುವಟಿಕೆಗಳಲ್ಲಿ ತೊಡಗಿದ್ದ ಸಮಾಜವಾದಿ ಪಾರ್ಟಿಯ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಕೂಡಾ ಜೈಲು ಕಾಣುತ್ತಾರೆ.  ಇಂದಿರಾ ಆಡಳಿತದ ವಿರುದ್ಧ ಹೋರಾಡಲು ಈ ಪಕ್ಷಗಳು ಸೇರಿ ರೂಪುಗೊಳ್ಳುವ ಜನತಾ ಮೋರ್ಚಾ ಎಮರ್ಜೆನ್ಸಿ ಮುಗಿದ ಮೇಲೆ ಜನತಾ ಪಕ್ಷಕ್ಕೆ ನಾಂದಿ ಹಾಡುತ್ತದೆ. 


ಎಮರ್ಜೆನ್ಸಿ ಅಧಿಕೃತವಾಗಿ ಅಂತ್ಯಗೊಳ್ಳದೇ ಹೋದರೂ  ಲೋಕಸಭೆಗೆ ಚುನಾವಣೆ ಘೋಷಣೆಯಾಗಿ 1977ರ ಜನವರಿ 18ರಂದು ಜೇಲಿನಲ್ಲಿದ್ದ ಎಲ್ಲ ಕ್ರಾಂತಿಕಾರಿಗಳನ್ನು ಬಿಡುಗಡೆ ಮಾಡಲಾಗುತ್ತದೆ, ಪತ್ರಿಕೆಗಳ ಮೇಲಿನ ನಿರ್ಬಂಧ ಕೊನೆಗೊಳ್ಳುತ್ತದೆ. ವಿರೋಧ ಪಕ್ಷದ ನಾಯಕರು ಜೆಪಿ ಅವರ ನೆರವು ಕೋರಿದಾಗ ಎಲ್ಲ ಪಕ್ಷಗಳು ಒಂದಾಗುವAತೆ ಅವರು ಸಲಹೆ ನೀಡುತ್ತಾರೆ. ಅದೇ ಜನವರಿ 23ರಂದು ಮೇಲೆ ಹೇಳಿದ ಜನತಾ ಮೋರ್ಚಾ, ಚರಣ ಸಿಂಗ್‌ರವರ ಭಾರತೀಯ ಲೋಕದಳ, ಸಿ.ರಾಜಗೋಪಾಲಚಾರಿಯವರ ಸ್ವತಂತ್ರ ಪಾರ್ಟಿ, ಅಷ್ಟೊತ್ತಿಗಾಗಲೇ ಲೋಕದಳದೊಂದಿಗೆ ಸೇರಿಹೋಗಿದ್ದ ರಾಜ್ ನಾರಾಯಣ್ ಹಾಗೂ ಜಾರ್ಜ್ ಫರ್ನಾಂಡಿಸ್ ನಾಯಕತ್ವದ ಸಮಾಜವಾದಿ ಪಾರ್ಟಿ ಆಫ್ ಇಂಡಿಯಾ ಮತ್ತು ಆರ್‌ಎಸ್‌ಎಸ್‌ನ ರಾಜಕೀಯ ವಿಭಾಗ ಭಾರತೀಯ ಜನಸಂಘಗಳು ವಿಲೀನವಾಗಿ ತಮ್ಮ ಸ್ವತಂತ್ರ ರಾಜಕೀಯ ಅಸ್ತಿತ್ವ ತೊರೆದು ಜನತಾ ಪಾರ್ಟಿಯನ್ನು ಸ್ಥಾಪಿಸುತ್ತವೆ. ಚಂದ್ರಶೇಖರ್ ಅಧ್ಯಕ್ಷರಾಗಿ, ರಾಮಕೃಷ್ಣ ಹೆಗಡೆ ಪ್ರಧಾನ ಕಾರ್ಯದರ್ಶಿಯಾಗಿ, ಜನಸಂಘದ ಲಾಲ್ ಕೃಷ್ಣ ಅಡ್ವಾಣಿ ವಕ್ತಾರರಾಗಿ ನೇಮಕಗೊಳ್ಳುತ್ತಾರೆ. ಅದರೆ ಈ ವಿಲೀನ ಪ್ರಕ್ರಿಯೆ ಪೂರ್ಣಗೊಂಡದ್ದು ಚುನಾವಣೆಯ ನಂತರವಾದ್ದರಿAದ ಆಗಿನ ಲೋಕಸಭಾ ಚುನಾವಣೆಯಲ್ಲಿ ಅವರವರ ಪಕ್ಷದ ಚಿಹ್ನೆಗಳಿಂದಲೇ ಸ್ಪರ್ಧೆಗಿಳಿಯುತ್ತವೆ. 
1977ರ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಭಾರತೀಯ ಜನಸಂಘದ ಎಸ್.ಮಲ್ಲಿಕಾರ್ಜುನಯ್ಯ ಅಭ್ಯರ್ಥಿಯಾಗಿದ್ದರು, ಆಗ ಏಳನೇ ತರಗತಿ ವಿದ್ಯಾರ್ಥಿಯಾಗಿದ್ದ ನಾನು ಹುಡುಗರ ಗುಂಪಿನೊAದಿಗೆ ಸೋಮೇಶ್ವರ ಬಡಾವಣೆಯಲ್ಲಿ ಎಸ್.ಮಲ್ಲಿಕ್ ಪÀರ “ದೀಪದ ಗುರ್ತಿಗೆ ನಿಮ್ಮ ಮತ ದೇಶಕ್ಕೆ ಹಿತ” ಎಂದು ಪ್ರಚಾರ ಮಾಡಿದ್ದು ನೆನಪಿಗೆ ಬರುತ್ತಿದೆ. ಆದರೆ ಆಗ ಇಡೀ ಇಂಡಿಯಾದಲ್ಲಿ ಕಾಂಗ್ರೆಸ್ ಸೋತರೂ ಇಲ್ಲಿ ಆ ಪಕ್ಷದ ಕೆ.ಲಕ್ಕಪ್ಪ ಗೆದ್ದು ಇತಿಹಾಸ ನಿರ್ಮಿಸಿದರು.


ಜನತಾ ಪಾರ್ಟಿಯ ಆಯುಸ್ಸು ಕೇವಲ ಮೂರೇ ವರ್ಷ, ಜನತಾ ರಂಗ ಸರ್ಕಾರವೂ ಕೊನೆಗೊಂಡು, ಭಾರತೀಯ ಜನಸಂಘ 1980ರಲ್ಲಿ ಭಾರತೀಯ ಜನತಾ ಪಾರ್ಟಿಯಾಗಿ ಹೊಸ ಹೆಸರಿನೊಂದಿಗೆ ಅಸ್ತಿತ್ವ ಕಂಡುಕೊAಡದ್ದು ಈಗ ಇತಿಹಾಸ. ನೇಗಿಲು ಹೊತ್ತ ರೈತನ ಗುರುತು ಅವರಿವರ ಕೈ ದಾಟಿ ಇದೀಗ ಅದೇ ಬಿಜೆಪಿಯ ದೋಸ್ತಿ ಸುಬ್ರಮಣ್ಯಸ್ವಾಮಿ ಕೈಯಲ್ಲಿದೆ.


1948ರಲ್ಲಿ ಸ್ಥಾಪನೆಯಾಗಿದ್ದ ಸಮಾಜವಾದಿ ಪಾರ್ಟಿಯ ಆಶೋತ್ತರಗಳನ್ನು ಮುಂದುವರೆಸುವುದಾಗಿ ಹೇಳುತ್ತ 2011ರಲ್ಲಿ ಪನ್ನಾಲಾಲ್ ಸುರಾನಾ ಹಾಗು ಪ್ರೊ.ಕೇಶವರಾವ್ ಜಾಧವ್ ಸೇರಿ ಮತ್ತೆ ಸಮಾಜವಾದಿ ಪಾರ್ಟಿ ರಚಿಸಿದ್ದಾರೆ. 


ಜನತಾ ಪಕ್ಷವೆಂಬ ಸ್ವತಂತ್ರ ಅಸ್ತಿತ್ವ ಹೊಂದಿದ ಸಂಯುಕ್ತ ರಂಗ ವಿಘಟನೆಯಾದ ಬಳಿಕ ಲೋಕದಳ, ಜಗಜೀವನರಾಂ ಕಾಂಗ್ರೆಸ್ ಹಾಗೂ ಇತರ ಸಣ್ಣ ಪುಟ್ಟ ಪಕ್ಷಗಳು ಜಯಪ್ರಕಾಶ್ ನಾರಾಯಣ್ ಅವರ ಜನ್ಮದಿನ 11.10.1988ರಂದು ವಿ.ಪಿ.ಸಿಂಗ್ ನಾಯಕತ್ವದಲ್ಲಿ ರಚಿಸಿಕೊಂಡದ್ದೇ ಚಕ್ರದ ಗುರುತಿನ ಜನತಾ ದಳ. 


ಈ ಜನತಾದಳದಿಂದ ಹೊರಬಂದ ಮುಲಾಯಂ ಸಿಂಗ್ ಯಾದವ್ ಉತ್ತರ ಪ್ರದೇಶದಲ್ಲಿ 1992ರ ಅಕ್ಟೋಬರ್ ನಾಲ್ಕರಂದು ಬಾಬ್ರಿ ಮಸೀದಿ ಉರುಳುವ ಎರಡು ತಿಂಗಳ ಮೊದಲು ಸ್ಥಾಪಿಸಿದ ಸಮಾಜವಾದಿ ಪಕ್ಷವೇ ಬೇರೆ. ರಾಮ ಮನೋಹರ ಲೋಹಿಯಾ ಹಾಗೂ ರಾಜ್ ನಾರಾಯಣ್ ಅವರೊಂದಿಗೆ ರಾಜಕೀಯ ಅಸ್ತಿತ್ವ ಕಂಡುಕೊAಡ ಮುಲಾಯಂ ಎಮರ್ಜೆನ್ಸಿಯಲ್ಲಿ ಜೈಲು ಕಂಡಿದ್ದರು. 1977ರಲ್ಲಿ ಜನತಾ ಪಕ್ಷದಲ್ಲಿ ಕರಗಿಹೋಗಿದ್ದ ಲೋಕ ದಳ ಮತ್ತೆ 1980ರಲ್ಲಿ ಜನ್ಮ ಪಡೆದಾಗ ಅದರ ಅಧ್ಯಕ್ಷರಾದವರು ಇವರು, ಮತ್ತೆ ಲೋಕದಳ ಒಡೆದಾಗ ಕ್ರಾಂತಿಕಾರಿ ಲೋಕದಳ ಕಟ್ಟಿ ಕೊಂಡಿದ್ದರು. ಹೀಗೇ 1970ರ ದಶಕದಲ್ಲಿ ಜೆಪಿಯವರ ಬಿಹಾರ ಚಳವಳಿಯಲ್ಲಿ ವಿದ್ಯಾರ್ಥಿ ನಾಯಕರಾಗಿದ್ದ ಲಾಲೂ ಪ್ರಸಾದ್ ಯಾದವರ ರಾಷ್ಟಿçÃಯ ಜನತಾ ದಳ(ಆರ್‌ಜೆಡಿ), ಲೋಹಿಯಾ ಅವರ ಮತ್ತೊಬ್ಬ ಒಡನಾಡಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಯಾದವ್ ಅವರ  ಸಂಯುಕ್ತ ಜನತಾ ದಳ ಮತ್ತು ಕರ್ನಾಟಕದ ಹೆಚ್.ಡಿ.ದೇವೇಗೌಡರ ಜನತಾ ದಳ (ಸೆಕ್ಯುಲರ್)ಗಳನ್ನೂ ನೆನಪಿನಲ್ಲಿ ಇಟ್ಟುಕೊಳ್ಳಿ.