ದಾಖಲೆಗಳಿದ್ದರೂ ರೈತರ ಒಕ್ಕಲೆಬ್ಬಿಸುತ್ತಿರುವ ಅರಣ್ಯ ಇಲಾಖೆ ರೈತರೊಂದಿಗೆ ಕಚೇರಿ ಮುತ್ತಿಗೆ: ಕೆಎನ್‌ಆರ್ ಎಚ್ಚರಿಕೆ

ದಾಖಲೆಗಳಿದ್ದರೂ ರೈತರ ಒಕ್ಕಲೆಬ್ಬಿಸುತ್ತಿರುವ ಅರಣ್ಯ ಇಲಾಖೆ ರೈತರೊಂದಿಗೆ ಕಚೇರಿ ಮುತ್ತಿಗೆ: ಕೆಎನ್‌ಆರ್ ಎಚ್ಚರಿಕೆ

ದಾಖಲೆಗಳಿದ್ದರೂ ರೈತರ ಒಕ್ಕಲೆಬ್ಬಿಸುತ್ತಿರುವ ಅರಣ್ಯ ಇಲಾಖೆ ರೈತರೊಂದಿಗೆ ಕಚೇರಿ ಮುತ್ತಿಗೆ: ಕೆಎನ್‌ಆರ್ ಎಚ್ಚರಿಕೆ


ದಾಖಲೆಗಳಿದ್ದರೂ ರೈತರ ಒಕ್ಕಲೆಬ್ಬಿಸುತ್ತಿರುವ ಅರಣ್ಯ ಇಲಾಖೆ
ರೈತರೊಂದಿಗೆ ಕಚೇರಿ ಮುತ್ತಿಗೆ: ಕೆಎನ್‌ಆರ್ ಎಚ್ಚರಿಕೆ


ಮಧುಗಿರಿ: ತಾಲೂಕಿನಲ್ಲಿ ಸಾಗುವಳಿ ಪತ್ರ ಮತ್ತು ಪಹಣಿ ಹೊಂದಿದ್ದರೂ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿರುವ ಅರಣ್ಯ ಇಲಾಖೆಯ ಕಚೇರಿಗೆ 25 ಸಾವಿರ ರೈತರೊಂದಿಗೆ ಮುತ್ತಿಗೆ ಹಾಕಲಾಗುವುದು ಎಂದು ಮಾಜಿ ಶಾಸಕ ಕೆ.ಎನ್. ರಾಜಣ್ಣ ಎಚ್ಚರಿಸಿದರು. 


ಕಸಬಾ ವ್ಯಾಪ್ತಿಯ ಬಂದ್ರೆಹಳ್ಳಿಯ ತೇರಿನ ಬೀದಿ ಸಮೀಪದ ಬೆಳ್ಳೂರು ಕಟ್ಟೆ ಬಳಿ ಶನಿವಾರ ತಾಲೂಕಿನ ಕಸಬಾ, ಐಡಿಹಳ್ಳಿ ಹಾಗೂ ಮಿಡಿಗೇಶಿ ವ್ಯಾಪ್ತಿಯ ರೈತರನ್ನುದ್ದೇಶಿಸಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಈ ಭಾಗದ ರೈತರು ತಮ್ಮ ಜಮೀನುಗಳಲ್ಲಿ ಉಳುಮೆ ಮಾಡಿ ಅನುಭವಸ್ಥದಾರರಾಗಿದ್ದು, ಈಗ ಬಂದು ಜಮೀನುಗಳನ್ನು ಬಿಟ್ಟುಕೊಡಿ ಎಂದು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿರುವುದು ಯಾವ ನ್ಯಾಯ...? ರೈತರೇ ಯಾವುದೇ ಕಾರಣಕ್ಕೂ ತಮ್ಮ ಜಮೀನುಗಳನ್ನು ಬಿಟ್ಟು ಕೊಡಬೇಡಿ. ಈ ಸಂಬAಧ ಮುಖಂಡರುಗಳೊAದಿಗೆ ಗ್ರಾಮಗಳಲ್ಲಿ ಸಭೆ ನಡೆಸಿ ಹೋರಾಟಕ್ಕೆ ಸಜ್ಜಾಗಿ ಎಂದು ಕರೆ ನೀಡಿದರು.


ತೋಟ, ಮನೆ, ಗದ್ದೆ ಇರುವ ರೈತರುಗಳಿಗೆ ಯಾವುದೇ ಕಾರಣಕ್ಕೂ ಅಧಿಕಾರಿಗಳು ತೊಂದರೆ ಕೊಡಬಾರದು. ಸಂಬAಧಪಟ್ಟ ಇಲಾಖೆಯವರು ದಾಖಲಾತಿಗಳನ್ನು ಸರಿಪಡಿಸುವ ಕೆಲಸ ಮಾಡಿ, ಈ ಮೊದಲೇ ಸಮರ್ಪಕ ದಾಖಲಾತಿಗಳನ್ನು ಹೊಂದಿಸುವ ಕೆಲಸ ಮಾಡಿದರೆ ಈಗ ರೈತರಿಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಕಾನೂನಿಗಿಂತ ಮಾನವೀಯ ಮೌಲ್ಯಗಳು ಮುಖ್ಯವಾಗಿದ್ದು, ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲ ಮಾಡುವ ಸಂದರ್ಭ ಬಂದಾಗ ಅಧಿಕಾರಿಗಳು ಮಾನವೀಯತೆ ಮೆರೆಯಬೇಕು ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿ.ಎಸ್. ಬಸವರಾಜುಗೆ ಬೆಂಬಲಿಸಿದ್ದೇನೆ ಹೊರತು ಬಿಜೆಪಿಗಲ್ಲ.  ಅವರದು ಹಳೆಯ ಕಾಂಗ್ರೆಸ್ಸಿನ ಸಂಬAಧ.  ಜಿ.ಎಸ್. ಬಸವರಾಜು ಮತ್ತು ಆರ್. ರಾಜೇಂದ್ರರವರನ್ನು ಗೆಲ್ಲಿಸಿದ ಕೀರ್ತಿ ನಿಮ್ಮದು.  ಜೆಡಿಎಸ್ ದ್ವಿಮುಖ ನೀತಿ ಅನುಸರಿಸುತ್ತಿದ್ದು, ಒಂದು ಕಡೆ ಗೋ ಮಸೂದೆಗೆ ಬೆಂಬಲಿಸಿ ಇನ್ನೊಂದು ಕಡೆ ವಿರೋಧಿಸುತ್ತಿದೆ.  ರಾಮನಗರ, ಚನ್ನಪಟ್ಟಣಗಳಲ್ಲಿ ಮುಸ್ಲೀಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡದೇ ಇತ್ತೀಚೆಗೆ 3 ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಮುಸ್ಲೀಂ ಅಭ್ಯರ್ಥಿಗಳನ್ನು ನಿಲ್ಲಿಸಿರುವುದನ್ನು ನೋಡಿದರೆ ಗೆಲ್ಲುವ ಕಡೆ ಟಿಕೆಟ್ ನೀಡದೇ, ಸೋಲುವ ಕಡೆ ಟಿಕೆಟ್ ನೀಡಿ ಚುನಾವಣಾ ಸಮಯದಲ್ಲಿ ಮುಸ್ಲೀಂ ಸಮುದಾಯವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.


ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ. ನಾಗೇಶ್ ಬಾಬು ಮಾತನಾಡಿ, ಅರಣ್ಯ ಇಲಾಖೆಯವರು ಈ ಭಾಗದ ರೈತರ ಮೇಲೆ ಏಕಾಏಕಿ ದೌರ್ಜನ್ಯ ಮಾಡುತ್ತಿರುವುದು ಖಂಡನೀಯ. ಅನೇಕ ದಶಕಗಳಿಂದ ಈ ಜಮೀನುಗಳನ್ನು ನಂಬಿ ಜೀವನ ನಡೆಸುತ್ತಿರುವ ರೈತರಿಗೆ ತೊಂದರೆ ಕೊಡುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಮಾಜಿ ಶಾಸಕ ಕೆ.ಎನ್. ರಾಜಣ್ಣನವರ ನೇತೃತ್ವದಲ್ಲಿ ಹೋರಾಟ ನಡೆಸಿ ತಮ್ಮ ಜಮೀನುಗಳನ್ನು ಕಾಪಾಡಿ ಕೊಳ್ಳಲಾಗುವುದು ಎಂದರು
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ. ರಾಜಣ್ಣ, ನಿರ್ದೇಶಕ ರಾಜ್ ಕುಮಾರ್, ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಕೆ. ನಂಜುAಡಯ್ಯ, ಎನ್. ಗಂಗಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಬಿ. ಮರಿಯಣ್ಣ, ಗ್ರಾ.ಪಂ ಅಧ್ಯಕ್ಷರಾದ ಪಂಚಾಕ್ಷರಯ್ಯ, ಸಾವಿತ್ರಮ್ಮ ಡಿ.ಹೆಚ್. ನಾಗರಾಜು, ಭವ್ಯ ಕೇಶವ ಮೂರ್ತಿ, ಉಪಾಧ್ಯಕ್ಷೆ ಗೌರಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್. ಮಲ್ಲಿಕಾರ್ಜುನಯ್ಯ,  ಎಸ್.ಆರ್. ರಾಜಗೋಪಾಲ್, ಮುಖಂಡರಾದ ಫಾಜಿಲ್, ಆರ್ಯ ನಾರಾಯಣ್ ಮಧುಚಂದ್ರ ಕಾಂತರಾಜು ಸಿದ್ದಗಂಗಪ್ಪ ಎಂ.ವಿ. ಮೂಡ್ಲಗಿರೀಶ್, ಸಿದ್ದಾಪುರ ರಂಗಶ್ಯಾಮಣ್ಣ ಇತರರಿದ್ದರು.



2023ರಲ್ಲಿ ಕಾಂಗ್ರೆಸ್‌ಗೇ ಗೆಲುವು


ಮಧುಗಿರಿ ಕ್ಷೇತ್ರದ ಜನರು ಸ್ವಾಭಿಮಾನಿಗಳಾಗಿದ್ದು, ಈ ಬಾರಿ ಜಾತಿ ಮತ್ತು ಹಣದ ಆಮಿಷಕ್ಕೆ ಒಳಗಾಗದೇ ಮತಚಲಾಯಿಸಲಿದ್ದಾರೆ. ಮಧುಗಿರಿ ಕ್ಷೇತ್ರದಲ್ಲಿ ಹಾಣ ಬಲವಿದ್ದರೆ ಚುನಾವಣೆ ಗೆಲ್ಲಬಹುದು ಎಂದು ಹೇಳಿಕೊಂಡು ಓಡಾಡುತ್ತಿರುತ್ತಿರುವವರಿಗೆ ತಕ್ಕ ಪಾಠ ಕಲಿಸಲಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ.
- ಕೆ.ಎನ್. ರಾಜಣ್ಣ, ಮಾಜಿ ಶಾಸಕ.