ಬುಧವಾರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ-ಬಿ.ವೈ.ವಿಜಯೇಂದ್ರ

ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ

ಬುಧವಾರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ-ಬಿ.ವೈ.ವಿಜಯೇಂದ್ರ

ತುಮಕೂರು :  ಈ ಬುಧವಾರ 15ನೇ ತಾರೀಕು ಬೆಂಗಳೂರು ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬೆಳಗ್ಗೆ 10 ಗಂಟೆಗೆ ಪಕ್ಷದ ಅಧ್ಯಕ್ಷನಾಗಿ ಜವಾಬ್ದಾರಿ ಸ್ವೀಕಾರ ಮಾಡುತ್ತಿದ್ದೇನೆ ಎಂದು ನಿಯೋಜಿತ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿಳಿಸಿದ್ದಾರೆ.


 ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು,  ವರಿಷ್ಟರಾದ  ನಡ್ಡಾ, ಅಮಿತ್ ಷಾ, ಸಂತೋಷ್ ಜೀ ಎಲ್ಲಾರು  ಚರ್ಚೆ ಮಾಡಿ ಪಾರ್ಟಿ ಅಧ್ಯಕ್ಷ ಮಾಡಿದ್ದಾರೆ.‌  ಅಧಿಕಾರ ವಹಿಸಿಕೊಳ್ಳುವ ಮುನ್ನ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟು ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದರು.


ಪೂಜ್ಯ ತಂದೆ ಯಡಿಯೂರಪ್ಪ ಯಾವುದೇ ನಿರ್ಣಯ ತೆಗೆದುಕೊಳ್ಳುವ ಮುನ್ನ ಶಿವಕುಮಾರಸ್ಚಾಮೀಜಿ ಆಶೀರ್ವಾದ ಪಡೆದುಕೊಳ್ಳುತ್ತಿದ್ದರು ಎಂದರು. 


ನಳಿನ್ ಕುಮಾರ್ ಕಟೀಲ್ ಜೀ ಯಶಸ್ವಿಯಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಕಟ್ಟಿದ್ರು.  16 ನೇ ತಾರೀಕು ಗುರುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೆಳಗ್ಗೆ 11 ಗಂಟೆಗೆ ಕಾರ್ಯಕರ್ತರ ಸಭೆ ನಿಶ್ಚಯ ಮಾಡಿದ್ದೇವೆ ಎಂದರು.


ಪಕ್ಷದ ಎಲ್ಲಾ‌ ಹಿರಿಯ ಮುಖಂಡರು ಯಡಿಯೂರಪ್ಪ, ಬಸವರಾಜು ಬೊಮ್ಮಾಯಿ, ಈಶ್ವರಪ್ಪ ಸದಾನಂದಗೌಡರು, ಕಾರಜೋಳ, ಯತ್ನಾಳ, ಸೋಮಣ್ಣ, ಎಲ್ಲಾ ಹಿರಿಯ ಸಮುಖದಲ್ಲಿ ಜವಾಬ್ದಾರಿ ಸ್ವೀಕಾರ ಮಾಡುತ್ತಿದ್ದೇವೆ ಎಂದರು.


ರಾಷ್ಟ್ರೀಯ ನಾಯಕರಿಗೆ ಚುನಾವಣೆ ಇರುವುದರಿಂದ ಬರುತ್ತಿಲ್ಲ.  ‌ಕೇಂದ್ರದ ವೀಕ್ಷಕರು ಬರಲಿದ್ದಾರೆ. ಶುಕ್ರವಾರದೊಳಗೆ  ಬಿಜೆಪಿ ಪಕ್ಷದ ಶಾಸಕಾಂಗ ಸಭೆ ಕರೆಯಲಿದ್ದೇವೆ ಸಂಜೆಯೊಳಗೆ ನಿರ್ಧಾರವಾಗುತ್ತೆ ಎಂದರು. ಬರ ಪರಿಸ್ಥಿತಿ ವಿಚಾರದಲ್ಲಿ ರೈತರನ್ನು ಕಾಡುತ್ತಿರುವ ಬರಕ್ಕೆ ಯಾವ ರೀತಿ ಪರಿಹಾರ ಮಾಡಬೇಕು ಅಂತ ಪಕ್ಷದ ಮುಖಂಡರೊಂದಿಗೆ ಚರ್ಚೆ ಮಾಡುತ್ತೇವೆ ಎಂದರು.


ಕೆಲ ಮುಖಂಡ ಅಸಮಾಧಾನ ವಿಚಾರ.ದೊಡ್ಡ ಪಕ್ಷವಿದೆ ಸಣ್ಣ ಪುಟ್ಟ ಅಸಮಾಧಾನವಿದೆ.  ಮಾಧುಸ್ವಾಮಿ ಕಾಲಿಗೆ ಪ್ರಾಬ್ಲಂ‌ ಆಗಿದೆ ಅದಕ್ಕೆ ಬಂದಿಲ್ಲ ಎಂದರು.


 ಎಲ್ಲಾರನ್ನು ಒಗ್ಗೂಡಿಸಿಕೊಂಡು ಹೋಗುತ್ತೇನೆ. ಕಾಂಗ್ರೆಸ್ ಪಕ್ಷದ ಮುಖಂಡರ ಸಲಹೆ ವಿಚಾರ.ಎಲ್ಲಾ‌ ಹಿರಿಯರು ಸಲಹೆ ನೀಡುತ್ತಾರೆ.  ಕಾಂಗ್ರೆಸ್ ಪಕ್ಷದ ಮುಖಂಡರು ನಮ್ಮ‌ ಮೇಲಿನ ಪ್ರೀತಿಯಿಂದ ಸಲಹೆ ನೀಡುತ್ತಾರೆ ಎಂದರು. ಯಡಿಯೂರಪ್ಪ ಸೈಡ್ ಲೈನ್ ವಿಚಾರ. ಯಾರನ್ನು ಸೈಡ್ ಲೈನ್ ಮಾಡಿಲ್ಲ, ಚುನಾವಣೆಯಲ್ಲಿ ನಮಗೆ ಹಿನ್ನಡೆಯಾಗಿರಬಹುದು.  ಎಲ್ಲಾವನ್ನು ಬದಿಗಿಟ್ಟು  ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಿಸಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.


ವಿರೋಧ ಪಕ್ಷ ನಾಯಕನ ಆಯ್ಕೆ ಬಳಿಕ ಕೇಂದ್ರಕ್ಕೆ‌ ಭೇಟಿ ನೀಡಿ  ಮುಂದೆ ಯಾವ ರೀತಿ ನಡಿ ಬೇಕು ಅಂತ ಸಲಹೆ ಪಡೆಯುತ್ತೇನೆ ಎಂದು ಹೇಳಿದರು.