"ಗೂಳಿಯ ಗುಂಡಿಗೆ"  ಎಂಬ ಅಪರೂಪದ ಹಣ್ಣು

"ಗೂಳಿಯ ಗುಂಡಿಗೆ"  ಎಂಬ ಅಪರೂಪದ ಹಣ್ಣು, gooliya gundige hannu

"ಗೂಳಿಯ ಗುಂಡಿಗೆ"    ಎಂಬ ಅಪರೂಪದ ಹಣ್ಣು

ನಮ್ಮ  ಪರಿಸರ


ಬಿ.ಎಸ್.ಸೋಮಶೇಖರ್

ರಾಮ ಫಲ, ಲಕ್ಷö್ಮಣ ಫಲ, ಸೀತಾ ಫಲ ಹಾಗೂ ಹನುಮಾನ್ ಫಲಗಳ ಹಣ್ಣುಗಳ ಮೂಲ ನೆಲೆ ನಮ್ಮ ಭಾರತವಲ್ಲ, ಬದಲಿಗೆ ಲ್ಯಾಟಿನ್ ಅಮೆರಿಕಾ- ಅಲ್ಲಿಯ ಮೆಕ್ಸಿಕೋ, ಗ್ವಾಟೆಮಾಲಾ, ಈಕ್ವೆಡಾರ್ ದೇಶಗಳನ್ನು ಆವರಿಸಿದ ವನ್ಯನೆಲೆಗಳು ಈ ಹಣ್ಣುಗಳ ತವರುನೆಲ. ಹದಿನಾರನೇ ಶತಮಾನದಲ್ಲಿ, ಪೋರ್ಚುಗೀಸ್ ವ್ಯಾಪಾರಿಗಳ ಮೂಲಕ, ಅಲ್ಲಿಂದ ದಕ್ಷಿಣ ಭಾರತಕ್ಕೆ ಕಾಲಿಟ್ಟ ಹಣ್ಣುಗಳಿವು. ಇಲ್ಲೇ ಹುಟ್ಟಿ ಬೆಳೆದು ಏಳಿಗೆ ಪಡೆದ ಸಸ್ಯಗಳೇನೋ ಎನ್ನುವಷ್ಟು ಸಹಜವಾಗಿ ನಮ್ಮ ನೆಲೆಗಳಲ್ಲಿ ಸೇರಿಕೊಂಡಿವೆ. ಅದರಲ್ಲೂ ಸೀತಾಫಲವಂತೂ ದಕ್ಷಿಣ ಭಾರತ ಮತ್ತು ಮಧ್ಯಭಾರತದ ಗುಡ್ಡಗಾಡುಗಳ ವನ್ಯ ನೆಲೆಗಳಲ್ಲಿ ಹೊರಜಗತ್ತಿನ ಯಾವುದೇ ನೆರವಿಲ್ಲದೇ ತನ್ನ ಸಂತತಿಯನ್ನು ಮುಂದುವರಿಸಿಕೊAಡು ಬಂದಿದೆ.



ಈ ಹಣ್ಣಿನಲ್ಲಿ ಹಲವು ಪ್ರಮುಖ ರಸಾಯನಿಕ ಅಂಶಗಳಿವೆ. ಹಣ್ಣಿನ ಖಂಡದಲ್ಲಿ ಪೈನೀನ್, ಮಿರ್ಸೀನ್, ಲೈಮೋನೀನ್ ಅಂಶಗಳು ಧಾರಾಳವಾಗಿವೆ, ಮಧ್ಯೆ ಹುದುಗಿರುವ ಬೀಜಗಳು ಮತ್ತೊಂದು ಬಗೆಯ ರಸಾಯನಿಕ ಸಾಮಗ್ರಿಯ ಕಣಜ. ಅನೋರೆಟಿಕುಯಿನ್, ಅನೋಮೋನಿಸಿನ್, ಅನೋರೆಟಿಸಿನ್, ಸ್ಕ್ವಾಮೋಸಿನ್ ರಸಾಯನಿಕಗಳು ಪ್ರಮುಖವಾದವು. ಜೊತೆಗೆ ಎಲೆ ಮತ್ತು ಕಾಂಡದ ತೊಗಟೆಯಲ್ಲಿ ಡೋಪಮಿನ್ ಅಂಶವು ಕಂಡುಬAದಿರುವುದು ವಿಶೇಷ. ಎಲೆ, ಬೀಜ ಮತ್ತು ತೊಗಟೆಯಲ್ಲಿ ಹಲವು ಔಷಧೀಯ ಗುಣಗಳಿರುವುದು ಕೂಡ ಪತ್ತೆಯಾಗಿದೆ. ಅದರಲ್ಲೂ, ಎಲೆಗಳಿಗೆ ಕರುಳಿನ ಹುಣ್ಣು ನಿವಾರಕ, ಮಧುಮೇಹ ನಿವಾರಕ, ಜ್ವರಹಾರಕ, ನೋವುನಿವಾರಕ ಮತ್ತು ಶಾಮಕ ಗುಣಗಳಿರುವುದು ಇದರ ಔಷಧೀಯ ಮಹತ್ವವನ್ನು ಹೆಚ್ಚಿಸಿದೆ. 


"ಗೂಳಿಯ ಗುಂಡಿಗೆ" 


ಎಂಬ ಅಪರೂಪದ ಹಣ್ಣು

ಇದರ ಸೋದರ ಸಂಬAಧಿಯನ್ನು ಹಣ್ಣಿನ ಮಳಿಗೆಗಳಲ್ಲಿ ನೀವು ಖಂಡಿತಾ ನೋಡಿರುತ್ತೀರಿ, ಆ ಹಣ್ಣಿನ ಸಾಲಿನಲ್ಲಿ, ಈ ಹಣ್ಣನ್ನು ಕೂಡಾ ನೋಡಿರುವ ಅಥವಾ ಕುತೂಹಲದಿಂದ ಇದರ ಹೆಸರನ್ನು ಕೇಳಿರುವ ಸಾಧ್ಯತೆಯಿದೆ. ಆದರೆ ಇದರ ಸವಿರುಚಿಯನ್ನು ಆಸ್ವಾದಿಸಿದ್ದೀರೋ? ಸಾಧ್ಯತೆ ಬಲು ಕಡಿಮೆ. ಹಾಗೊಮ್ಮೆ ಇದನ್ನು ಸವಿದಿದ್ದರೆ ಅದನ್ನು ನೀವೇ ಖಚಿತಪಡಿಸಬೇಕು. ಹೀಗಾಗಿ ಇದರ ಒಂದು ಹೆಸರು ನಿಮಗೆ ತಿಳಿದಿದ್ದರೂ ಕೂಡ, ಇದನ್ನು ಸವಿದಿರುವ ಸಂಭವ ಕಡಿಮೆ. 


ಇದು "ಗೂಳಿಯ ಗುಂಡಿಗೆ" ಎಂಬ ಅಪರೂಪದ ಹೆಸರುಳ್ಳ ಅಷ್ಟೇ ಅಪರೂಪದ ಹಣ್ಣು. ಸೀತಾಫಲದ ಜೊತೆಯಲ್ಲೇ ಕೇಳಿಬರುವ ಆದರೆ, ಮರೆಯಲ್ಲೇ ಉಳಿಯುವ ಹಣ್ಣು. ಅನೋನಾ ರೆಟಿಕುಲೇಟಾ ಎಂಬ ವೈಜ್ಞಾನಿಕ ಹೆಸರು ಇದಕ್ಕೆ. ಅನೋನೇಸೀ ಕುಟುಂಬದ ಪ್ರಮುಖ ಸದಸ್ಯ. ಜೊತೆಗೆ ಜಮೈಕಾ ಆಪಲ್, ಬುಲಕ್ಸ್ ಹಾರ್ಟ್ ಎಂಬ ಇಂಗ್ಲಿಷ್ ಹೆಸರುಗಳು. 


"ಗೂಳಿಯ ಗುಂಡಿಗೆ" ಎಂಬ ಅಪರಿಚಿತ ಹೆಸರಿನ ಬದಲು, "ರಾಮಫಲ" ಎಂದು ಇದನ್ನು ಪರಿಚಯಿಸಿದರೆ ಆಗ, "ಓಹ್! ಹೌದಲ್ಲವೇ, ಹಣ್ಣಿನ ಅಂಗಡಿಯಲ್ಲಿ ಕಳೆದ ಸಾರಿ ಇದನ್ನು ನೋಡಿದ ನೆನಪಿದೆ" ಎಂದು ನೆನಪಿಸಿಕೊಳ್ಳುವವರೇ ಹೆಚ್ಚು. ಸೀತಾಫಲ-ರಾಮಫಲ-ಲಕ್ಷ್ಮಣಫಲ-ಹನುಮಾನ್ ಫಲ ಎಂಬ ಫಲ ಚತುಷ್ಟಯದಲ್ಲಿ ಎರಡನೇ ಸ್ಥಾನದಲ್ಲಿರುವ ಹಣ್ಣು ಇದು. 


"ಗೂಳಿಯ ಗುಂಡಿಗೆ" ಎಂಬ ಇದರ ಹೆಸರಿನ ಹಿನ್ನೆಲೆ ವಿಶಿಷ್ಟವಾಗಿದೆ. ಈ ಹಣ್ಣಿನ ರೂಪ, ಆಕಾರ ಮತ್ತು ಬಣ್ಣ ಅಕ್ಷರಶಃ ಒಂದು ಹೋರಿ ಗರುವಿನ ಹೃದಯವನ್ನು ಹೋಲುತ್ತದೆ ಎಂಬುದು ಇಲ್ಲಿನ ಅಚ್ಚರಿ. ಹಣ್ಣಿನಲ್ಲಿರುವ ಈ ತದ್ರೂಪು ಗುಣಗಳನ್ನು ಗುರುತಿಸಿ, ಯೂರೋಪಿಯನ್ನರು ಇದಕ್ಕೆ ಕೊಟ್ಟ ಹೆಸರು "ಬುಲಕ್ಸ್ ಹಾರ್ಟ್"- ಅಂದರೆ "ಗೂಳಿಯ ಗುಂಡಿಗೆ"; ಹೀಗಾಗಿ ಒಂದರ್ಥದಲ್ಲಿ ಇದು ಈ ಹಣ್ಣಿನ ಅನ್ವರ್ಥ ನಾಮವೇ ಸರಿ. 


ರಾಮ ಫಲ, ಸೀತಾ ಫಲ, ಲಕ್ಷ್ಮಣ ಫಲ, ಹನುಮಾನ್ ಫಲ ಎನ್ನುವ ಈ ಫಲಚತುಷ್ಟಯದ ಹೆಸರುಗಳನ್ನು ನೋಡಿದರೆ, ಇವು ನಮ್ಮ ನೆಲಸಂಸ್ಕೃತಿಗೆ ಸೇರಿಹೋದ ಸಹಜ ಸಸ್ಯಗಳು ಎಂದು ಯಾರಿಗಾದರೂ ತೋರುತ್ತದೆ. ಆದರೆ ಇವು ನಮ್ಮ ದೇಶದವಲ್ಲ ಎಂದರೆ ಅದು ಅಚ್ಚರಿಯಾದರೂ, ಸತ್ಯ. ಈ ಹಣ್ಣುಗಳ ಮೂಲ ನೆಲೆ ನಮ್ಮ ಭಾರತವಲ್ಲ, ಬದಲಿಗೆ ಲ್ಯಾಟಿನ್ ಅಮೆರಿಕಾ- ಅಲ್ಲಿಯ ಮೆಕ್ಸಿಕೋ, ಗ್ವಾಟೆಮಾಲಾ, ಈಕ್ವೆಡಾರ್ ದೇಶಗಳನ್ನು ಆವರಿಸಿದ ವನ್ಯನೆಲೆಗಳು ಈ ಹಣ್ಣುಗಳ ತವರುನೆಲ. ಹದಿನಾರನೇ ಶತಮಾನದಲ್ಲಿ, ಪೋರ್ಚುಗೀಸ್ ವ್ಯಾಪಾರಿಗಳ ಮೂಲಕ, ಅಲ್ಲಿಂದ ದಕ್ಷಿಣ ಭಾರತಕ್ಕೆ ಕಾಲಿಟ್ಟ ಹಣ್ಣುಗಳಿವು. ಇಲ್ಲೇ ಹುಟ್ಟಿ ಬೆಳೆದು ಏಳಿಗೆ ಪಡೆದ ಸಸ್ಯಗಳೇನೋ ಎನ್ನುವಷ್ಟು ಸಹಜವಾಗಿ ನಮ್ಮ ನೆಲೆಗಳಲ್ಲಿ ಸೇರಿಕೊಂಡಿವೆ. ಅದರಲ್ಲೂ ಸೀತಾಫಲವಂತೂ ದಕ್ಷಿಣ ಭಾರತ ಮತ್ತು ಮಧ್ಯಭಾರತದ ಗುಡ್ಡಗಾಡುಗಳ ವನ್ಯ ನೆಲೆಗಳಲ್ಲಿ ಹೊರಜಗತ್ತಿನ ಯಾವುದೇ ನೆರವಿಲ್ಲದೇ ತನ್ನ ಸಂತತಿಯನ್ನು ಮುಂದುವರಿಸಿಕೊAಡು ಬಂದಿದೆ.


ಈ ರಾಮಫಲ, ಸೀತಾಫಲ ಹಾಗೂ ನಮಗೆ ಪರಿಚಿತವಾದ ಸಂಪಿಗೆ, ಹಿಮಸಂಪಿಗೆ, ಮರಗಳು ಹತ್ತಿರದ ಸಂಬAಧಿಗಳು. ಆದರೆ ಬೇರೆ ಬೇರೆ ಪಿತೃಕುಟುಂಬಗಳಿಗೆ ಸೇರಿದವು. ಮೊದಲಿನೆರಡು ಹಣ್ಣುಗಳು ಅನೋನೇಸೀ ಕುಟುಂಬಕ್ಕೂ (ಸೀತಾಫಲ ಕುಟುಂಬ) ಹಾಗೂ ಹೂಗಳು ಮ್ಯಾಗ್ನೋಲಿಯೇಸೀ ಕುಟುಂಬಕ್ಕೂ (ಸಂಪಿಗೆ ಕುಟುಂಬ) ಸೇರಿದವು. ಇವೆರಡನ್ನೂ ಜ್ಞಾತಿ ಕುಟುಂಬಗಳು ಎಂದು ಸಸ್ಯವಿಜ್ಞಾನದಲ್ಲಿ ಗುರುತಿಸಲಾಗುತ್ತದೆ. ಇವೆರಡೂ ಕುಟುಂಬಗಳಿಗೆ ಒಂದು ಹೆಗ್ಗಳಿಕೆಯಿದೆ. ಭೂಮಂಡಲದ ಸಮಗ್ರ ಸಸ್ಯಸಂಕುಲದ ವಿಕಾಸದ ಹಾದಿಯಲ್ಲಿ ಉಳಿದೆಲ್ಲಕ್ಕಿಂತಲೂ ಮೊದಲು ಟಿಸಿಲೊಡೆದ ಎರಡು ವಿಶಿಷ್ಟ ಕುಟುಂಬಗಳಿವು ಎಂದು ಇವನ್ನು ಗುರುತಿಸುವುದು ವಾಡಿಕೆ. ಅಂದರೆ, ಇವೆರಡೂ ಸಸ್ಯ ಪ್ರಪಿತಾಮಹಿ ಕುಟುಂಬಗಳು ಎಂದಾಯ್ತು. ಇವೆರಡೂ ಕುಟುಂಬಗಳ ಆದಿಮ ಚಹರೆ ಇವುಗಳ ಹೂಗಳಲ್ಲಿ ಹೆಚ್ಚಾಗಿ ಕಾಣುತ್ತದೆ. ಅಂದರೆ, ಈ ಸಸ್ಯಗಳಲ್ಲಿ ಹೂಗಳ ಹಾಗೆ ಕಾಣುವ ಹೂಗಳು ನಿಜವಾಗಿ ಬಿಡಿಬಿಡಿ ಹೂಗಳಲ್ಲ, ಬದಲಿಗೆ ಈ "ಹೂವು" ಎಂಬುದು, ಸಸ್ಯ ವಿಜ್ಞಾನದ ಪರಿಭಾಷೆಯಲ್ಲಿ ವಿಶಿಷ್ಟ ಪ್ರಕಾರದ ಒಂದಿಡೀ "ಹೂಗೊಂಚಲು"; ಅಂದರೆ ಹೂವಿನಂತೆ ಕಾಣುವ ಒಂದು "ಹೂವಿ"ನಲ್ಲಿ ಹಲವು ಬಿಡಿಬಿಡಿ ಹೂಗಳು ಒಟ್ಟುಗೂಡಿರುತ್ತವೆ. ಈ ಎಲ್ಲ ಬಿಡಿಬಿಡಿ ಹೂಗಳು ಒಟ್ಟಿಗೇ ಪರಾಗಣಕ್ಕೆ ಒಳಪಟ್ಟು ಕಾಯಿಕಚ್ಚಿದಾಗ, ಅದರಿಂದ ಉಂಟಾಗುವ ಹಣ್ಣಿನಂತಹ "ಹಣ್ಣು", ವಾಸ್ತವವಾಗಿ, ಒಂದು "ಫಲಸಮುಚ್ಚಯ". ಹೀಗಾಗಿ, ಸೀತಾಫಲ ಅಥವಾ ರಾಮಫಲ ಎಂಬ ಹಣ್ಣಿನ ಹಾಗೆ ಕಾಣುವ ಒಂದು "ಹಣ್ಣು", ವಾಸ್ತವವಾಗಿ 50-100 ಬಿಡಿಬಿಡಿ ಹೂಗಳಿಂದ ಒಟ್ಟಿಗೆ ರೂಪುಗೊಂಡ ಒಂದು "ಸಮಗ್ರಫಲ". ಇದನ್ನು ಬಿಡಿಸಿದಾಗ, ಕಾಣುವ ಒಂದೊAದು ಬಿಡಿಬಿಡಿಯಾದ ಹಣ್ಣಿನ ಎಸಳುತೊಳೆಯೂ ಒಂದೊAದು ಸಂಪೂರ್ಣ ಹಣ್ಣು - ಎನ್ನುತ್ತದೆ ವಿಕಾಸ ವಿಜ್ಞಾನ. 


ಗೂಳಿಯ ಗುಂಡಿಗೆಯ ವಿಚಾರಕ್ಕೆ ಈಗ ವಾಪಸು ಬರೋಣ: ಆರೋಗ್ಯಕರವಾಗಿ ಬೆಳೆದ ಗೂಳಿಯ ಗುಂಡಿಗೆ ಮರ ಸುಮಾರು 5-8 ಮೀ ಎತ್ತರಕ್ಕಿರುತ್ತದೆ. ಆರೋಗ್ಯಕರವಾಗಿ ಬೆಳೆದ ಗೂಳಿಯ ಗುಂಡಿಗೆ ಮರ ಸುಮಾರು 5-8 ಮೀ ಎತ್ತರಕ್ಕಿರುತ್ತದೆ. ಅನಾಕರ್ಷಕ ರೂಪ, ನಿರ್ದಿಷ್ಟ ಆಕಾರವಿಲ್ಲ, ಎಲ್ಲ ದಿಕ್ಕಿನಲ್ಲೂ ಹರಡಿಕೊಂಡು ಜೋತು ಬಿದ್ದ ಕೊಂಬೆಗಳು. ಇಂಥ ಕೊಂಬೆಗಳ ಎರಡೂ ಪಕ್ಕದಲ್ಲಿ ದಟ್ಟ ಹಸಿರು ಬಣ್ಣದ ಮಾವಿನಎಲೆಯನ್ನು ಹೋಲುವ ನೀಳ ಎಲೆಗಳು, ಸ್ವಲ್ಪ ಮಟ್ಟಿಗೆ ಒಳಮುಖವಾಗಿ ಮಡಿಚಿಕೊಂಡು, ಒಂದರ ನಂತರ ಮತ್ತೊಂದು ಜೋಡಿಸಿದ ಹಾಗೆ ಕಾಣುತ್ತವೆ. ಕೊಂಬೆಗಳ ತುದಿಯು ನಿರಂತರವಾಗಿ ಬೆಳೆಯುತ್ತಾ ಹೋಗುವುದರಿಂದ, ಒಂದು ಕೋನದಿಂದ ನೋಡಿದರೆ, ಒಂದೊAದು ಕೊಂಬೆಯೂ ಗಜಗಾತ್ರದ ಸಂಯುಕ್ತಪತ್ರದ ಹಾಗೆ ಭಾಸವಾಗುತ್ತದೆ. ಕೊಂಬೆಗಳ ಮೇಲೆ ಬಿಡಿಕವಲುಗಳು ಹೆಚ್ಚಾಗಿ ಕಂಡುಬರುವುದಿಲ್ಲ. ಚೆನ್ನಾಗಿ ಬೆಳೆದ ಕೊಂಬೆಗಳ ಮುಂತುದಿಯ ಭಾಗದ ಎಲೆಗಳ ಕಂಕುಳಿನಲ್ಲಿ ಆಗಸ್ಟ್-ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡಿಬಿಡಿ ಮೊಗ್ಗುಗಳು ಕಾಣಿಸಿಕೊಳ್ಳುತ್ತವೆ. ತಿಳಿಹಳದಿ-ಹಳದಿಹಸಿರು ಬಣ್ಣದ ಒಂದAಗುಲ ಉದ್ದದ ಈ ಹೂಗಳು ಕೆಳಮುಖವಾಗಿ ಜೋತುಬಿದ್ದಿರುತ್ತವೆ. ಪೂರ್ಣವಾಗಿ ತೆರೆದುಕೊಳ್ಳುವುದಿಲ್ಲ, ಒಂದೊAದರಲ್ಲೂ ಮಂದವಾದ ಮೂರು ದಳಗಳು, ಅವಕ್ಕೂ ಮೂರು ಏಣುಗಳು. ಹೂದಳಗಳ ಬುಡದಲ್ಲಿ ಬಟಾಣಿ ಕಾಳಿನಷ್ಟು ದಪ್ಪಗಿನ ಗರ್ಭಾಶಯ ಗುಚ್ಚವಿರುತ್ತದೆ, ಪರಾಗಣವಾಗಿ ಕಾಯಿ ಕಚ್ಚಿದ ಮೇಲೆ ಹಣ್ಣಾಗಿ ಬೆಳೆಯುವ ಭಾಗವೇ ಇದು.  


ಚೆನ್ನಾಗಿ ಬಲಿತ ಹಣ್ಣು ಬಿಗಿಹಿಡಿದ ಮುಷ್ಟಿ ಗಾತ್ರದಷ್ಟಿರುತ್ತದೆ. ಕಿರು ಬೆರಳು ದಪ್ಪದ ತೊಟ್ಟು, ಉರುಟು ಉರುಟಾದ ಹೊರಮೈ- ಬೂದಿ ಹಸಿರು ಬಣ್ಣದಿಂದ- ತೆಳುಗೆಂಪು ಬಣ್ಣದವರೆಗೆ ಬೇರೆ ಬೇರೆ ರಂಗು. ಬಲಿತ ಕಾಯಿ ಮಾಗಿದ ಹಾಗೆ ಅದರ ತೆಳುಗೆಂಪು ಬಣ್ಣ ಇನ್ನಷ್ಟು ಗಾಢವಾಗಿ ಮಾಂಸಗೆAಪು ಬಣ್ಣಕ್ಕೆ ತಿರುಗುತ್ತದೆ. ಎದೆಗೂಡಿನಿಂದ ಬೇರ್ಪಡಿಸಿಟ್ಟ ಗುಂಡಿಗೆಯ ಹಾಗೆ ಈ ಹಣ್ಣುಗಳು ಕಾಣುತ್ತವೆ. ಈ ಹಣ್ಣುಗಳಿಗೆ “ಬುಲಕ್ಸ್ ಹಾರ್ಟ್” ಎಂಬ ಹೆಸರಿನ ಹಿನ್ನೆಲೆ ಈಗ ನಿಚ್ಚಳವಾಗಿ ಅರಿವಾಗುತ್ತದೆ. 


ಮಾಗಿದ ಹಣ್ಣು ರಸಭರಿತ ಸಂಪೂರ್ಣ ಸಿಹಿಯ ಜೊತೆ ಅಲ್ಪ ಪ್ರಮಾಣದ ಹುಳಿಅಂಶ ಬೆರೆತು ಅದೊಂದು ವಿಶಿಷ್ಟ ರುಚಿ ಬಂದಿರುತ್ತದೆ ಜೊತೆಗೆ ಮಧುರವಾದ ಗಮಲು. ಮಾಗಿದ ಗೂಳಿಯ ಗುಂಡಿಗೆ ಹಣ್ಣನ್ನು ತಿನ್ನಲು ಒಂದು ವಿಶೇಷ ವಿಧಾನವಿದೆ. ಹಣ್ಣನ್ನು ಅಡ್ಡಡ್ಡ ಅಥವಾ ಉದ್ದುದ್ದ ಸೀಳಿದರೆ ಎರಡು ಬಟ್ಟಲು ಹೋಳುಗಳಾಗುತ್ತದೆ, ಅಂಗೈಯಲ್ಲಿ ಕೂರುವಷ್ಟು ಗಾತ್ರದ ಬಟ್ಟಲಿನಲ್ಲಿ ಗರಣೆ ಗರಣೆಯಂಥ ರಸಭರಿತ ಹಣ್ಣಿನ ಖಂಡ- ಸಂಡೇ ಐಸ್‌ಕ್ರೀಮ್‌ನಲ್ಲಿ ಕಾಣುವಂಥ ಬೆಳ್ಳಗಿನ ಕೆನೆ ಗರಣೆ, ಅದರ ಜೊತೆ ಸೇರಿಸಿದ ಕಪ್ಪಗಿನ ಒಣದ್ರಾಕ್ಷಿಯನ್ನು ನೆನಪಿಸುವ ಹಾಗೆ ಹೊಳಪಿನ ಸಣ್ಣ ಬೀಜಗಳು ಕಾಣುತ್ತವೆ. ರಾಮಫಲವನ್ನು ಸವಿಯುವುದು ಎಂದರೆ, ಅದು ಐಸ್‌ಕ್ರೀಮ್ ಅನ್ನು ತಿಂದ ಹಾಗೆಯೇ. ಐಸ್‌ಕ್ರೀಮ್ ಕಪ್‌ನಿಂದ ಸ್ವಲ್ಪ ಸ್ವಲ್ಪವೇ ಐಸ್‌ಕ್ರೀಮ್ ಅನ್ನು ತೆಗೆಯುವ ರೀತಿಯಲ್ಲೇ, ಕೈಯಲ್ಲಿ ಹಿಡಿದ ಹಣ್ಣಿನ ಹೋಳಿನಿಂದ ಹಣ್ಣಿನ ಖಂಡವನ್ನು ಚಮಚೆಯಿಂದ ಸ್ವಲ್ಪ ಸ್ವಲ್ಪವೇ ಕೆರೆದುಕೊಂಡು ತಿನ್ನಬೇಕು. ಸೀತಾಫಲಕ್ಕೆ ಹೋಲಿಸಿದರೆ, ಇದರ ಹಣ್ಣಿನ ಗಾತ್ರವೂ ಸ್ವಲ್ಪ ದೊಡ್ಡದು, ತಿನ್ನಲು ದೊರೆಯುವ ಖಂಡವೂ ಸ್ವಲ್ಪ ಹೆಚ್ಚು, ಹಣ್ಣಿನಲ್ಲಿ ಬೆರೆತ ಬೀಜಗಳು ಕೂಡ ಕೆಲವೇ ಕೆಲವು, ತಿನ್ನುವಾಗ ಬಾಯಿಗೆ ಅಡ್ಡಡ್ಡ ಬಂದು ಹಣ್ಣಿನ ಆಸ್ವಾದದ ಅನುಭವವನ್ನು ಕೆಡಿಸುವುದಿಲ್ಲ. ಅಧಿಕ ಪ್ರಮಾಣದ ಹಣ್ಣಿನ ಖಂಡದ ಹಿಂದೆ ಒಂದು ನಿರ್ದಿಷ್ಟ ಜೀನ್‌ನ ಕೈವಾಡವಿದೆ ಎಂದು ಕಂಡುಬAದಿದೆ. ಒಂದೊAದು ತೊಳೆ ಯನ್ನು ಈ ಜೀನ್ ನಿರ್ಬೀಜಗೊಳಿಸುತ್ತದೆ. ಹಣ್ಣಿನಲ್ಲಿ ಬೀಜಗಳು ಇಲ್ಲವಾಗಿ, ಖಂಡದ ಪ್ರಮಾಣ ಹೆಚ್ಚುತ್ತದೆ. ವಿಶಿಷ್ಟ ತಾಕತ್ತಿನ ಗುಣಗಳನ್ನು ಪ್ರತಿಪಾದಿಸುವ ಹಲವು ಜೀನ್‌ಗಳನ್ನು ಈ ಹಣ್ಣಿನ ತವರಿನ (ಮೆಕ್ಸಿಕೋ, ಈಕ್ವೆಡಾರ್, ಗ್ವಾಟೆಮಾಲಾ ಪ್ರಾಂತ) ವನ್ಯ ಸಂದಣಿಗಳಲ್ಲಿ ಪತ್ತೆಹಚ್ಚಲಾಗಿದೆ.


ಹಣ್ಣಿನಲ್ಲಿ ಹಲವು ಪ್ರಮುಖ ರಸಾಯನಿಕ ಅಂಶಗಳಿವೆ. ಹಣ್ಣಿನ ಖಂಡದಲ್ಲಿ ಪೈನೀನ್, ಮಿರ್ಸೀನ್, ಲೈಮೋನೀನ್ ಅಂಶಗಳು ಧಾರಾಳವಾಗಿವೆ, ಮಧ್ಯೆ ಹುದುಗಿರುವ ಬೀಜಗಳು ಮತ್ತೊಂದು ಬಗೆಯ ರಸಾಯನಿಕ ಸಾಮಗ್ರಿಯ ಕಣಜ. ಅನೋರೆಟಿಕುಯಿನ್, ಅನೋಮೋನಿಸಿನ್, ಅನೋರೆಟಿಸಿನ್, ಸ್ಕ್ವಾಮೋಸಿನ್ ರಸಾಯನಿಕಗಳು ಪ್ರಮುಖವಾದವು. ಜೊತೆಗೆ ಎಲೆ ಮತ್ತು ಕಾಂಡದ ತೊಗಟೆಯಲ್ಲಿ ಡೋಪಮಿನ್ ಅಂಶವು ಕಂಡುಬAದಿರುವುದು ವಿಶೇಷ. ಎಲೆ, ಬೀಜ ಮತ್ತು ತೊಗಟೆಯಲ್ಲಿ ಹಲವು ಔಷಧೀಯ ಗುಣಗಳಿರುವುದು ಕೂಡ ಪತ್ತೆಯಾಗಿದೆ. ಅದರಲ್ಲೂ, ಎಲೆಗಳಿಗೆ ಕರುಳಿನ ಹುಣ್ಣು ನಿವಾರಕ, ಮಧುಮೇಹ ನಿವಾರಕ, ಜ್ವರಹಾರಕ, ನೋವುನಿವಾರಕ ಮತ್ತು ಶಾಮಕ ಗುಣಗಳಿರುವುದು ಇದರ ಔಷಧೀಯ ಮಹತ್ವವನ್ನು ಹೆಚ್ಚಿಸಿದೆ. 


ನಮ್ಮ ದೇಶದ ಉಷ್ಣವಲಯ ಮತ್ತು ಸಮಶೀತೋಷ್ಣ ವಲಯದಲ್ಲಿ ಸುಲಭವಾಗಿ ಬೆಳೆಯಬಲ್ಲ ಹಣ್ಣಿನ ಮರವಿದು. ದಕ್ಷಿಣ ಭಾರತದಲ್ಲಿ ಇತರ ಹಣ್ಣಿನ ತೋಟಗಳ ನಡುವೆ, ಹಿತ್ತಲುಗಳಲ್ಲಿ, ಕೃಷಿ ಜಮೀನುಗಳ ಬದುಗಳ ಮೇಲೆ, ಇದನ್ನು ಒಂಟಿಯಾಗಿ ನೆಟ್ಟಿರುವ ಉದಾಹರಣೆಗಳೇ ಹೆಚ್ಚು. 


ಉಷ್ಣವಲಯದ ಎಲ್ಲ ಹಣ್ಣಿನ ಮರಗಳಿಗಿರುವ ಶಾಪ ಇದಕ್ಕೂ ತಟ್ಟಿದೆ. ಹೂಗಳಲ್ಲಿ ಪರ ಪರಾಗಣÀ ಜರುಗಿ ಅದರಿಂದ ಉಂಟಾಗುವ ಬೀಜಗಳ ಮೂಲಕ ಇದರ ಸಂತತಿ ಮುಂದುವರಿಯುತ್ತದೆ. ಒಂದೇ ತಾಯಿಮರವೇ ಆದರೂ ಬೀಜದಿಂದ ಹುಟ್ಟಿದ ಒಂದೊAದು ಸಸಿಯ ಗುಣಸಮುಚ್ಚಯವೂ ಮತ್ತೊಂದು ಸಸಿಗಿಂತ ವಿಭಿನ್ನ. ಒಂದೊAದು ಸಸಿಯನ್ನೂ ಒಂದು ಪ್ರತ್ಯೇಕ ತಳಿ ಎಂದೇ ಪರಿಗಣಿಸಲಾಗುತ್ತದೆ. ಇಂಥ ಬೀಜಸಸಿಗಳ ಮೂಲಕ ಬೆಳೆದ ಮರಗಳಲ್ಲಿ, ಹಣ್ಣಿನ ರುಚಿ ಮತ್ತು ಸ್ವಾದವು ಏಕಪ್ರಕಾರವಾಗಿರುವುದಿಲ್ಲ. ಸ್ಥಿರವಾದ ಗುಣಗಳನ್ನು (ಇಂತಿಷ್ಟೇ ಪ್ರಮಾಣದ ಸಿಹಿಅಂಶ, ಮೆದುತನ, ತಾಳಿಕೆ, ಬಾಳಿಕೆ ಮೊದಲಾದ ಗ್ರಾಹಕ ಗುಣಗಳು) ನಿಗದಿಪಡಿಸಿ ಉತ್ತಮ ಮಟ್ಟದ ಒಂದು ತಳಿಯನ್ನು ರೂಪಿಸಲು ಅದನ್ನು ವ್ಯಾಪಕ ಪ್ರಮಾಣದ ಕೃಷಿಗೆ ತರಲು ಸಾಧ್ಯವಾಗಿಲ್ಲ.


ಗೂಳಿಯ ಗುಂಡಿಗೆಯನ್ನು ಬೆಳೆಸುವುದು ಸುಲಭ. ಮನೆಯ ಹಿತ್ತಲಿನಲ್ಲೋ, ಅಥವಾ ತೋಟದ ಸಾಲಿನಲ್ಲಿ ಬಿಸಿಉಲು ಬೀಳುವ ಎಡೆಯಲ್ಲಿ ಇದನ್ನು ಬೆಳೆಸಬಹುದು. ಗೂಟಿ ಕಟ್ಟಿದ ಸಸಿಗಳು ಕೆಲವು ಹಣ್ಣಿನ ನರ್ಸರಿಗಳಲ್ಲಿ ದೊರೆಯುತ್ತವೆ. ರಾಜ್ಯದ ಕೃಷಿ ವಿವಿಗಳ ಕೃಷಿ ವಿಜ್ಞಾನ ಕೇಂದ್ರಗಳು, ಹಣ್ಣಿನ ಬೆಳೆಗಳ ಸಂಶೋಧನಾ ಕೇಂದ್ರ, ತೋಟಗಾರಿಕೆ ಇಲಾಖೆಯ ನರ್ಸರಿಗಳಲ್ಲೂ, ಖಾಸಗಿ ನರ್ಸರಿಗಳಲ್ಲೂ ಇದರ ಸಸಿಗಳು ದೊರೆಯುತ್ತವೆ. ನಿಮ್ಮ ಮನೆಯಂಗಳದ ಸಸ್ಯಗಳ ಸಾಲಿಗೆ ಸುಲಭವಾಗಿ ಸೇರಬಲ್ಲ ವಿಶಿಷ್ಟ ಹಣ್ಣಿನ ಗಿಡವಿದು- ಗೂಳಿಯ ಗುಂಡಿಗೆ ಅಥವಾ ರಾಮಫಲ. ಇಂದೇ ಒಂದು ಸಸಿಯನ್ನು ತಂದು ನೆಡಿ.