“ಕೆಎನ್‌ಆರ್‌ ವಿರುದ್ಧ ಟೀಕೆ ನಿಲ್ಲಿಸಿ” ಜಿಲ್ಲೆಯ ‘ಅಹಿಂದ’ ಸಮುದಾಯಗಳ ಮುಖಂಡರು 

“ಕೆಎನ್‌ಆರ್‌ ವಿರುದ್ಧ ಟೀಕೆ ನಿಲ್ಲಿಸಿ” ಜಿಲ್ಲೆಯ ‘ಅಹಿಂದ’ ಸಮುದಾಯಗಳ ಮುಖಂಡರು 

“ಕೆಎನ್‌ಆರ್‌ ವಿರುದ್ಧ ಟೀಕೆ ನಿಲ್ಲಿಸಿ”   ಜಿಲ್ಲೆಯ ‘ಅಹಿಂದ’ ಸಮುದಾಯಗಳ ಮುಖಂಡರು 

“ಕೆಎನ್‌ಆರ್‌ ವಿರುದ್ಧ ಟೀಕೆ ನಿಲ್ಲಿಸಿ”


ಜಿಲ್ಲೆಯ ‘ಅಹಿಂದ’ ಸಮುದಾಯಗಳ ಮುಖಂಡರು 


ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕಿನ ಗ್ರಾಮವೊಂದರ ಸಭೆಯಲ್ಲಿ ಜುಲೈ ಒಂದರಂದು ದೇವೇಗೌಡರ ಕುರಿತು ಆಡಿರುವ ಮಾತುಗಳಿಗೆ ಮಾಜಿ ಶಾಸಕ ಕೆ.ಎನ್.ರಾಜಣ್ಣನವರು ವಿಷಾದ ವ್ಯಕ್ತಪಡಿಸಿದ್ದಲ್ಲದೇ, ಕ್ಷಮೆಯನ್ನೂ ಯಾಚಿಸಿದ್ದಾರೆ, ಅಲ್ಲದೇ ಖುದ್ದಾಗಿ ದೇವೇಗೌಡರನ್ನೂ ಭೇಟಿ ಮಾಡಿ ಅವರಿಗೆ ಮನವರಿಕೆ ಮಾಡಿಕೊಡುವುದಾಗಿ ಹೇಳಿದ ನಂತರವೂ ರಾಜಕೀಯ ಹಾಗೂ ವೈಯಕ್ತಿಕ ಉದ್ದೇಶಗಳಿಗಾಗಿ ಅವರನ್ನು ವಿನಾ ಸರ‍್ವಜನಿಕ ಟೀಕೆ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ವಿಕೃತ ಟೀಕೆಗೆ ಗುರಿ ಮಾಡುವುದನ್ನು ತಕ್ಷಣ ಸ್ಥಗಿತಗೊಳಿಸಬೇಕೆಂದು ಜಿಲ್ಲೆಯ ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಮುಖಂಡರು ಆಗ್ರಹ ಪಡಿಸಿದ್ದಾರೆ.


ಭಾನುವಾರ ನಗರದಲ್ಲಿ ಅಹಿಂದ ಮುಖಂಡರು ರಾಜಣ್ಣನವರ ಪರವಾಗಿ ಸ್ವಯಂ ಸುದ್ದಿಗೋಷ್ಟಿ ನಡೆಸಿ, ರಾಜಣ್ಣನವರು ಜಿಲ್ಲೆಯ ಎಲ್ಲ ಶೋಷಣೆಗೊಳಗಾಗಿರು ಸಮುದಾಯಗಳ ನಾಯಕರಾಗಿದ್ದು, ಅವರ ವ್ಯಕ್ತಿ ಘನತೆಗೆ ಧಕ್ಕೆ ತರುವಂತೆ ಯಾರೂ ರ‍್ತಿಸಬಾರದು, ಸಂರ‍್ಷ ಬೇಡ, ಸೌಹರ‍್ದ ಇರಲಿ ಎಂದು ಮನವಿ ಮಾಡಿದರು.


ಜಾತ್ಯತೀತ ಮಾನವ ವೇದಿಕೆಯ ಅಧ್ಯಕ್ಷರಾದ ಹಿರಿಯ ಲೆಕ್ಕಪರಿಶೋಧಕ ಟಿ.ಆರ್.ಆಂಜನಪ್ಪ, ಹಿಂದುಳಿದ ರ‍್ಗಗಳ ಒಕ್ಕೂಟ ಹಾಗೂ ಕನ್ನಡ ಸೇನೆ ಅಧ್ಯಕ್ಷ ಧನಿಯಾಕುಮಾರ್, ದಲಿತ ಮುಖಂಡರಾದ ಸಿಂಗದಹಳ್ಳಿ ರಾಜಕುಮಾರ್, ಕೊಟ್ಟ ಶಂಕರ್, ಪಿ.ಎನ್.ರಾಮಯ್ಯ, ಅಲ್ಪ ಸಂಖ್ಯಾತರ ಪರವಾಗಿ ರಫೀಕ್, ಹಿಂದುಳಿದ ರ‍್ಗಗಳ ಮುಖಂಡರಾದ ಎನ್.ಗಂಗಣ್ಣ . ರೇವಣಸಿದ್ಧಯ್ಯ ಮೊದಲಾದವರು ಪ್ರಾತಿನಿಧಿಕವಾಗಿ ಮಾತನಾಡಿ ರಾಜಣ್ಣನವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. 


ಟಿ.ಆರ್.ಆಂಜನಪ್ಪನವರು ಮಾತನಾಡಿ, ಹಿಂದುಳಿದ ಸಮುದಾಯಗಳು ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳ ಎಲ್ಲ ರ‍್ಗಗಳನ್ನೂ ಬೆಂಬಲಿಸಿ ಮತ ಚಲಾಯಿಸುತ್ತಿದ್ದಾರೆ. ಯಾರಾದರೂ ಹಿಂದುಳಿದ ರ‍್ಗಗಳಿಗೆ ರ‍್ಕಾರದ ಯೋಜನೆಗಳ ಮುಖಾಂತರ ನೆರವಾಗಿದ್ದರೆ ಅದು ಸಂವಿಧಾನ ಬದ್ಧ ಸೌಲಭ್ಯಗಳೇ ಹೊರತು ಯಾರ ವೈಯಕ್ತಿಕ ಕೊಡುಗೆಗಳೇನಲ್ಲ. ಜಿಲ್ಲಾ ಮಟ್ಟದಲ್ಲಿ ಕೆ.ಎನ್.ರಾಜಣ್ಣನವರು ಪರಿಶಿಷ್ಟ ಪಂಗಡದಿಂದ ಬಂದಿರುವ ಎಲ್ಲ ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತರ ಕಷ್ಟ ಸುಖಗಳಿಗೆ ಒದಗುವ ಮಾನವೀಯ ಕಳಕಳಿಯ ಪ್ರತಿನಿಧಿಯಾಗಿರುವುದರಿಂದ ಅವರು ಹೇಳದೇ ಸ್ವಯಂ ಬೆಂಬಲ ನೀಡುತ್ತಿದ್ದೇವೆ. ಸಾಕು ಇಲ್ಲಿಗೆ ಟೀಕೆ ನಿಲ್ಲಿಸಿ ಎಂದರು.


ಧನಿಯಾ ಕುಮಾರ್ ಮಾತನಾಡಿ, ದೇವೇಗೌಡರ ಬಗ್ಗೆ ನಮಗೂ ಗೌರವವಿದೆ, ಕೆ.ಎನ್.ಆರ್.ಗೂ ಗೌರವವಿದೆ. ಆಕಸ್ಮಿಕವಾಗಿ ಆದ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೂ ಸಹ ಕೆಲವರು ಕೆಎನ್ರಾಜಣ್ಣ ಅವರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಇಲ್ಲಿಗೆ ನಿಲ್ಲಬೇಕು. ನಿಲ್ಲಿಸದೆ ಅಪಪ್ರಚಾರವನ್ನು ಮುಂದುವರಿಸಿದ್ದೇ ಆದಲ್ಲಿ ನಾವು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲಎಂದು ಎಚ್ಚರಿಸಿದರು. 


ಸಿಂಗದಹಳ್ಳಿ ರಾಜಕುಮರ‍್ಮಾತನಾಡಿ, ಕೆ.ಎಸ್.ಆರ್. ಅವರ ಮಾತುಗಳನ್ನೇ ಮುಂದಿಟ್ಟುಕೊಂಡು ರಾಜಕೀಯ ಮಾಡಲಾಗುತ್ತಿದೆ. ರಾಜ್ಯ ಮಟ್ಟದಲ್ಲಿ ಸಿದ್ದರಾಮಯ್ಯ ಅಹಿಂದ ನಾಯಕರಾಗಿರುವಂತೆ ಜಿಲ್ಲೆಯಲ್ಲಿ ಕೆ.ಎನ್. ರಾಜಣ್ಣ, ಅಹಿಂದ ನಾಯಕರು. ಇವರನ್ನು ರಾಜಕೀಯವಾಗಿ ಮುಗಿಸುವಷ್ಟರ ಮಟ್ಟಿಗೆ ಮಾತನಾಡುವಂತಹ ಕುಲ್ಲಕ ಹೇಳಿಕೆ ನೀಡುವುದು ತರವಲ್ಲ, ಇಂತಹ ಹೇಳಿಕೆಗಳು ಮುಂದುವರಿದರೆ ಪ್ರತಿಯಾಗಿ ನಾವೂ ಸಹ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಇಂತಹ ನಡವಳಿಕೆಗೆ ಅವಕಾಶ ನೀಡಬಾರದು. ಇದನ್ನು ರಾಜಕೀಕರಣ ಗೊಳಿಸಬಾರದು ಎಂದರು. 


ಕೊಟ್ಟ ಶಂಕರ್ ಮಾತನಾಡಿ, ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಬರಹಗಳ ಮೂಲಕ ವಿಕೃತಿ ಮೆರೆ ಯುತ್ತಿದ್ದಾರೆ. ನಮ್ಮ ಸಮಾಜದಲ್ಲಿ ಸಾಮರಸ್ಯ ಇರಬೇಕೆ ಹೊರತು ಸಂರ‍್ಷ ಅಲ್ಲ. ನಾವು ಸಾಮರಸ್ಯಕ್ಕೆ ಮನವಿ ಮಾಡುತ್ತಿದ್ದೇವೆ. ಎಲ್ಲ ಜಾತಿ ರ‍್ಗಗಳು ಸೌಹರ‍್ದಯುತವಾಗಿ ಬದುಕಬೇಕು ಎಂಬ ಹಂಬಲ ನಮ್ಮದು. ಇದನ್ನು ರ‍್ಥ ಮಾಡಿಕೊಂಡು ಸಂರ‍್ಷಕ್ಕೆ ಇಳಿಯದೆ ಸೌಹರ‍್ದತೆಗೆ ಮುಂದಾಗಲಿ ಎಂದರು.
ರೇವಣ್ಣಸಿದ್ದಯ್ಯ ಮಾತನಾಡಿ ರಾಜಣ್ಣ ಅವರು ಆಡಿರುವ ಮಾತುಗಳನ್ನು ಮಿಷವಾಗಿ ತಿರುಗಿಸುವುದು ಬೇಡ. ಈಗಾಗಲೇ ಅವರು ಆದಕ್ಕೆ ಸಷ್ಟನೆ ನೀಡಿದ್ದಾರೆ. ದೇವೇಗೌಡರ ಬಳಿಯೂ ಹೋಗಿ ಆಗಿರುವ ವಿಷಯವನ್ನು ಅವರ ಮುಂದಿಡುವುದಾಗಿ ಹೇಳಿಕೊಂಡಿದ್ದಾರೆ. ಇಷ್ಟಾದರೂ ಕೆಲವರು ಅನಗತ್ಯ ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದುಳಿದ ರ‍್ಗಗಳು ಕಳೆದ 40 ರ‍್ಷ ನಾಡಿನ ಎರಡು ಪ್ರಮುಖ ಜಾತಿಗಳನ್ನು ರಾಜಕೀಯವಾಗಿ ಪಲ್ಲಕ್ಕಿಯಲ್ಲಿಟ್ಟು ಹೊತ್ತಿದ್ದೇವೆ. ಕೆಳರ‍್ಗದವರು ಅಧಿಕಾರ ನಡೆಸಲು ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು.


ಎನ್. ಗಂಗಣ್ಣ ಮಾತನಾಡಿ ನಾವು ಈವರೆಗೂ ಎಲ್ಲವನ್ನೂ ಸಹಿಸಿಕೊಂಡಿದ್ದೇವೆ. ಯಾವುದೇ ಕೆಟ್ಟ ಪದ ಬಳಸಿಲ್ಲ. ಆದರೆ ಕೆಲವರು ರಾಜಣ್ಣ ವಿರುದ್ಧ ಅವಹೇಳನಕಾರಿ ಪದಗಳನ್ನು ಪ್ರಯೋಗಿಸುತ್ತಿದ್ದಾರೆ. ಇದು ಹೀಗೆಯೇ ಮುಂದುವದಲ್ಲಿ ಅಹಿಂದ ಸಂಘಟನೆಗಳು ಒಂದುಗೂಡಲು ಕರೆ ಕೊಡಬೇಕಾಗುತ್ತದೆ ಎಂದರು.


ದೇವೇಗೌಡರೆ ಮುಂದಾಗಿ ಈ ಪ್ರಕರಣಕ್ಕೆ ತೆರೆ ಎಳೆಯಬೇಕು. ರಾಜಣ್ಣ ಅವರು ವಿಷಾದ ವ್ಯಕ್ತಪಡಿಸಿರುವುದರಿಂದ ಇದನ್ನು ಇಲ್ಲಿಗೆ ಬಿಟ್ಟುಬಿಡಿ. ಗೌಡರೆ ದೊಡ್ಡತನ ಪ್ರರ‍್ಶಿಸಬೇಕು ಎಂದರು ಪಿ.ಎನ್.ರಾಮಯ್ಯ.


ವಿವಿಧ ಹಿಂದುಳಿದ ಸಮುದಾಯಗಳ ಮುಖಂಡರಾದ ಮಂಜಣ್ಣ, ಅಜಯ್ ಕುಮಾರ್, ಡಿ.ವೈ. ಗೋಪಾಲ್,ಲಕ್ಷ್ಮೀನಾರಾಯಣ್, ಪಿ.ಮರ‍್ತಿ, ಬಿ.ಹೆಚ್.ನಂಜುಂಡಯ್ಯ, ಕಾಂತರಾಜು, ತಾ.ಪಂ ಮಾಜಿ ಅಧ್ಯಕ್ಷ ಶಿವಲಿಂಗಯ್ಯ, ಎಂ.ಕೆ. ನಂಜುಂಡಯ್ಯ, ಈರಣ್ಣ ಸಿದ್ದಾಪುರ, ಗುರುಪ್ರಸಾದ್, ರಾಘವೇಂದ್ರಸ್ವಾಮಿ, ರೂಪೇಶ್ಕೃಷ್ಣಯ್ಯ ಸೇರಿ ನೂರಕ್ಕೂ ಹೆಚ್ಚು ಜನರಿದ್ದರು. ಅದಾದ ಬಳಿಕ ಒಕ್ಕಲಿಗ ಮುಖಂಡರೂ ಸುದ್ದಿ ಗೋಷ್ಟಿ ನಡೆಸಿ ಕೆ.ಎನ್.ರ‍್ರವರಿಗೆ ಬೆಂಬಲ ಪ್ರರ‍್ಶಿಸಿದರು.a